ಕರ್ನಾಟಕ ರಾಜ್ಯಕ್ಕೆ ಈ ಬಾರಿ ಬಂಪರ್…

ಸಿ ಕೆ ಗುಂಡಣ್ಣ

ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಗಳು
ಕರ್ನಾಟಕ ರಾಜ್ಯಕ್ಕೆ ಈ ಬಾರಿ ಬಂಪರ್… ಕೇಂದ್ರ ಸಂಗೀತ ನಾಟಕ ಅಕಾಡಮಿಯ ಪ್ರಶಸ್ತಿಗಳ ಸುರಿಮಳೆ….

ರಂಗಭೂಮಿ, ಸಂಗೀತ, ಎಲ್ಲ ಕ್ಷೇತ್ರಗಳಲ್ಲೂ ಪ್ರಶಸ್ತಿಗಳು….
ಕನ್ನಡ ರಂಗಭೂಮಿಯ ಹಿರಿಯ ನಟ, ನಿರ್ದೇಶಕ ರಂಗ ಸಂಘಟಕ, ನಾಟಕ ಅಕಾಡಮಿ ಮತ್ತು ರಂಗಾಯಣ ಮೈಸೂರಿನ‌ ಮಾಜಿ ನಿರ್ದೇಶಕ‌ ಬಿ ವಿ ರಾಜಾರಾಂ ಅವರು ಇತ್ತೀಚಿಗೆ ಅಷ್ಟೇ ಕೇಂದ್ರ ಸಂಗೀತ ನಾಟಕ ಅಕಾಡಮಿ ಸದಸ್ಯರಾಗಿ ನೇಮಕಗೊಂಡರು. ಈ ನೇಮಕಾತಿಯ ಬೆನ್ನಲೇ, ರಂಗಭೂಮಿಯ ಹಿರಿಯರಿಗೆ, ಬಹುಮುಖ ಪ್ರತಿಭೆಯ ವ್ಯಕ್ತಿಗಳಿಗೆ, ಹಾಗು ಯುವ ಚೈತ್ಯನ್ಯದ ಪ್ರತಿಭಾನ್ವಂತರಿಗೆ ಗೌರವ ಸಮ್ಮಾನದ ಭಾಗ್ಯ ದೊರಕಿರುವುದಕ್ಕೆ, ನಾವು ರಾಜಾರಾಂ ಅವರಿಗೆ ಸಮಸ್ತ ರಂಗಭೂಮಿಯ ಪರವಾಗಿ ಧನ್ಯವಾದಗಳನ್ನು ಹೇಳಲೇ ಬೇಕು…..

ಅಬ್ಬೂರು ಜಯತೀಥ…
ಅಂದಾಜು 85 ವರುಷ ಇರಬಹುದು. ಅಕೌಂಟೆಂಟ್ ಜನರಲ್ ಕಛೇರಿಯ ನೌಕರರು…. ರಂಗಭೂಮಿಯಲ್ಲಿ ಪ್ರಸಿದ್ದ ಧ್ವನಿ ಸಂಯೋಜಕರು. ಇದರೊಟ್ಟಿಗೆ ನಾಟಕ ನಿರ್ದೇಶನವೂ ಇತ್ತು… ನಾಟ್ಯ ದರ್ಪಣ ಸಂಸ್ಥೆಯ ರುವಾರಿ. ಶ್ರೀನಿವಾಸ ಪ್ರಭು, ರಿಚರ್ಡ್ ಲೂಯಿಸ್, ನಳಿನಾ ಮೂರ್ತಿ ಮುಂತಾದ ಪ್ರಮುಖ ರಂಗ ನಟರು, ನಿರ್ದೇಶಕರಗಳನ್ನು ಪೋಶಿಸಿ, ಬೆಳಸಿದ ಸಂಸ್ಥೆ ನಾಟ್ಯ ದರ್ಪಣ… ಇದರ ಮೊದಲಿಗ ರಂಗ ನಿರ್ದೇಶಕರು ಅಬ್ಬೂರು.

ಎಪ್ಪತ್ತರ ದಶಕದ ಪ್ರಸಿದ್ದ ನಾಟಕಗಳಿಗೆ ಅಬ್ಬೂರ ರ ಹಿನ್ನಲೆ ಧ್ವನಿ‌ಸಂಯೋಜನೆ ಇರಲೇಬೇಕು. ಅಬ್ಬೂರರ ಮನೆಯಲ್ಲಿ ಒಂದು ಬೃಹತ್ ಧ್ವನಿ‌ಭಂಢಾರವೇ ಇತ್ತು.. ಹಕ್ಕಿ-ಪಕ್ಕಿ, ರೈಲು- ವಿಮಾನ, ಆಲಾಪನೆ- ಬಸ್ಸು- ಗಾಜು ಒಡೆಯುವ ಶಬ್ದ…. ನೀವು ಏನು ಕೇಳಿದರೂ ಅದು ನಿಮ್ಮ ನಾಟಕಕ್ಕೆ ಸಿದ್ದ… ಕೌಂಟರ್ ವ್ಯವಸ್ಥೆ ಇದ್ದ ಒಂದು ಸ್ಪೂಲ್ ಟೇಪ್ ಪ್ಲೇಯರ್, ಒಂದು ಕೈ ಚೀಲದಲ್ಲಿ ಹಲವು ಧ್ವನಿ‌ ಸುರಳಿಗಳು, ಒಂದು ಸಣ್ಣ ಟಾರ್ಚ್..ಹಿಡಿದು ಬಿಳಿ ಬಣ್ಣದ ಅರ್ಧ ತೋಳಿನ ಶರಟು, ಹಣೆಯ ಮೇಲೆ ಅಂಗಾರಾಕ್ಷತೆ, ಬಾಯಲ್ಲಿ ಚೂರು ಗಮಗಮಿಸುವ ಅಡಿಕೆ… ಕಲಾಕ್ಷೇತ್ರದ ಒಂದು ದುಂಡನೆ ಟೀಪಾಯಿ ಮೇಲೆ ಧ್ವನಿ ಸಂಯೋಜನೆಯ ಸಲಕರಣೆಗಳನ್ನು ಜೋಡಿಸಿಕೊಂಡು ಕೂತರೆಂದರೆ, ಅಂದಿನ ನಾಟಕ ಪ್ರದರ್ಶನ ಯಶಸ್ವಿಯಾಗಿ ಆಯಿತು ಎಂದೇ ತಿಳಿಯಬೇಕು… ಆಗ ಇಂದಿನ ರೀತಿಯ ಸುಧಾರಿತ ತಂತ್ರಜ್ಞಾನ‌ ಇರಲಿಲ್ಲ… ನಾಟಕದ ಪ್ರತಿಯ ಮೇಲೆ, ಯಾವ ಯಾವ ಧ್ವನಿಗಳು ಯಾವ ಸಂಭಾಷಣೆಯ ನಂತರ ಬರಬೇಕು ಎಂಬುದನ್ನು ರೆಕಾರ್ಡ್ ಪ್ಲೇಯರ್ ನ‌ ಕೌಂಟರ್ ನಂಬರುಗಳ ಮುಖಾಂತರ ಗುರುತಿಸಿ, ಸರಿಯಾದ ಸಮಯಕ್ಕೆ ಆ ಕೌಂಟರ್ ನಂಬರ್ ಗೆ ಹೋಗಿ‌ ಧ್ವನಿಯನ್ನು‌ ಪೂರ್ಣ ಪ್ರಮಾಣದಲ್ಲಿ ಕೊಡಬೇಕು…ಏರಿಳಿತಗಳನ್ನು ಮಾಡಬೇಕು…. ಕತ್ತಲಿನಲ್ಲಿ ನಾಟಕದ ಪ್ರತಿಯನ್ನು ಮತ್ತು ಕೌಂಟರ್ ಅನ್ನು ನೋಡಲು‌ ಸಣ್ಣ ಪ್ರಮಾಣದಲ್ಲಿ ಬೆಳಕು ಚೆಲ್ಲುವ‌ ಟಾರ್ಚ್…. ತಾಯಿ, ಯಯಾತಿ,ಸದ್ದು ವಿಚಾರಣೆ ನಡೆಯುತ್ತಿದೆ, ನಮ್ಮ ನಿಮ್ಮಂತವರು, ಮ್ಯಾಕ್‌ಬೆತ್, ಗೆಲಿಲಿಯೋ…..ಒಂದೇ ಎರಡೇ…ಪಟ್ಟಿ ಕೊಡಲು ಹೋದರೆ, ನೂರಾರು ನಾಟಕಗಳಿಗೆ ಅಬ್ಬೂರ ರ ಧ್ವನಿ ಸಂಯೋಜನೆಯ ಯಶಸ್ವಿ ನಾಟಕಗಳು… ಜೊತೆಗೆ ನಾಟಕ ನಿರ್ದೇಶನಗಳು ಆಗಾಗ್ಗೆ…. ಇದು ಅಬ್ಬೂರರ ಸಾಧನೆಗಳು ಮತ್ತು ಇಂದು ಅವರಿಗೆ ಸಂದಿರುವ ಕೇಂದ್ರ ಸಂಗೀತ ನಾಟಕ ಅಕಾಡಮಿಯ ಯೋಗ್ಯ ಪುರಸ್ಕಾರ…. ಹಲವು ದಶಕಗಳ ದಣಿವರಿಯದ ರಂಗ ಕಾಯಕಕ್ಕೆ‌ ಕೊನೆಗೂ ಸಂದ ಸೂಕ್ತ ಗೌರವ ಸಮ್ಮಾನ….ಅಭಿನಂದನೆಗಳು ಅಬ್ಬೂರು ಸರ್….
ಹಾಗೆಯೆ, ನಮ್ಮ ಪುರುಶೋತ್ತಮ ತಲವಾಟ….

ಇವರು ರಂಗಭೂಮಿಯಲ್ಲಿ ಸಮಗ್ರ ಕಾಯಕದ ಕಲಾವಿದರು… ನಿರ್ದೇಶನ, ಪ್ರಸಾಧನ, ಮುಖವಾಡಗಳ ತಯಾರಿಕೆ, ವಸ್ತ್ರ ವಿನ್ಯಾಸ, ಬೆಳಕು ವಿನ್ಯಾಸ ಮತ್ತು ನಿರ್ವಹಣೆ, ರಂಗ ವಿನ್ಯಾಸ, ರಂಗ ಪರಿಕರಗಳ ತಯಾರಿಕೆ, ಯಕ್ಷಗಾನದ ಹೆಜ್ಜೆ,‌ ಕೊನೆಗೆ ಅವಶ್ಯಕತೆ ಬಿದ್ದರೆ ನಟನೆ ಕೂಡಾ…. ಕೇವಲ ಸಾಗರ- ಶಿವಮೊಗ್ಗ ಕ್ಕೆ ಮಾತ್ರ ಸೀಮಿತವಾಗದ ಪುರುಶೋತ್ತಮ ಅವರು ರಾಜ್ಯದ ಯಾವ ಮೂಲೆಯಲ್ಲದರೂ ಸರಿ,ಮಕ್ಕಳ ಮತ್ತು ಯುವ ಕಲಾವಿದರ ರಂಗ ತರಬೇತಿ ಶಿಬಿರ ಅಂದರೆ, ತಲವಾಟ ಅಲ್ಲಿರಲೇ ಬೇಕು….. ಅದು ಯಶಸ್ವಿ ಶಿಬಿರವಾಗಬೇಕೆಂದರೆ, ತಲವಾಟ ಅವರ ರಂಗ ಚಟುವಟಿಕೆ ಅಲ್ಲಿರಲೇ ಬೇಕು….ಬಹು ಮುಖಿ ರಂಗ ಚಟುವಟಿಕೆ ಗಳನ್ನು ಗುರುತಿಸಿ ಅವರಿಗೆ ದಕ್ಕಿರುವ ಕೇಂದ್ರ ಸಂಗೀತ ನಾಟಕ‌ ಅಕಾಡಮಿ ಪ್ರಶಸ್ತಿಗೆ ಬಹಶಃ‌ ಇವರಿಗಿಂತ ಸೂಕ್ತ ವ್ಯಕ್ತಿ ಇಲ್ಲವೇನೋ…..

ಅಭಿನಂದನೆಗಳು…ಪುರುಶೋತ್ತಮ ತಲವಾಟ….
ಮೇಕಪ್ ರಾಮಣ್ಣ
ಎನ್ ಕೆ ರಾಮಕೃಷ್ಣ
ಪ್ರಸಾಧನ ತಜ್ಞರು
ಪ್ರಸಾಧನ ಕಲೆಯ ವಿಭಾಗಕ್ಕೆ ಬಹಳ ವಿರಳವಾದ ಪ್ರಶಸ್ತಿ ಶ್ರೀ.ಎನ್.ಕೆ.ರಾಮಕೃಷ್ಣ ಅವರಿಗೆ ದೊರೆತಿರುವುದು ಬಹಳ ಸಂತಸದ ವಿಷಯ…

ರಾಮಣ್ಣ ಅವರು ಮೇಕಪ್ ನಾಣಿ ಅವರ ಅತ್ಯಂತ ಹಿರಿಯ ಶಿಷ್ಯರು. ನಾಣಿ ಅವರ ಹೆಜ್ಜೆ ಜಾಡಿನಲ್ಲಿ ಮುನ್ನಡೆದು, ನೂರಾರು ಶಿಷ್ಯರನ್ನು ಪ್ರಸಾಧನ ಕಲೆಯಲ್ಲಿ ತರಬೇತಿ ನೋಡಿ, ಆ ಕಲಾವಿದರು ಗೌರವಾನ್ವಿತ ಬದುಕನ್ನು ಕಟ್ಟಿಕೊಳ್ಳಲು ಪ್ರೇರಕ ಶಕ್ತಿಯಾದವರು….
ಗುರುಗಳು…‌

ತಾವೂ ಸಹ ಚಲನಚಿತ್ರ ರಂಗದ ದಿಗ್ಗಜರಾದ,ಹಲವು ಭಾಷೆಯ ಪ್ರಮುಖ ಕಲಾವಿದರುಗಳಿಗೆ ನಟರುಗಳಿಗೆ ಖಾಸಗಿ ಪ್ರಸಾಧನ ಕಲಾವಿದರಾಗಿ ಚಿತ್ರ ರಂಗದ ಧೀಮಂತ ಕಲಾವಿದರು ಇವರ ಹೆಸರನ್ನು ಕೊಂಡಾಡುವ ಹಾಗೆ ಕಾರ್ಯ ನಿರ್ವಹಿಸಿ, ವಿಶೇಷ ಸ್ಥಾನ ಗಳಿಸಿಕೊಂಡವರು.

ನಾವು, ಎಪ್ಪತ್ತರ ದಶಕದಿಂದ ಇವರ ರಂಗಭೂಮಿ ಮತ್ತು ಚಿತ್ರರಂಗದ ದುಡಿಮೆ ಮತ್ತು ಸಾಧನೆಗಳನ್ನು ಬಹಳ ಹತ್ತಿರದಿಂದ ಗಮನಿಸುತ್ತಾ ಬಂದಿರುವವರು. ಕೇವಲ ಅವಶ್ಯ ಪ್ರಸಾಧನವಲ್ಲ, ಆ ಪಾತ್ರಕ್ಕೆ ಅತಿ ಅವಶ್ಯಕವಾದ ಪ್ರಸಾಧನವನ್ನು ಕ್ರಿಯಾತ್ಮಕ ಮತ್ತು ಸಹಜವಾಗಿ ಕಾಣುವಂತೆ ಮಾಡುವ ಹಸ್ತಗುಣ ಹೊಂದಿರುವವರು ಎನ್ ಕೆ ರಾಮಕೃಷ್ಣ.

ಅಭಿನಂದನೆಗಳು ರಾಮಣ್ಣ…ನಿಮ್ಮ ನಿರಂತರ ದುಡಿಮೆಗೆ, ಅಹಂಕಾರ, ದಾಷ್ಟಿಕತೆ ಇಲ್ಲದ ಕಾಯಕಕ್ಕೆ,‌ನಿಮ್ಮ ಸರಳ ಬದುಕಿಗೆ ಗೌರವ ತರುವಂತ ರಾಷ್ಟ್ರೀಯ ಗೌರವಕ್ಕೆ ತಾವು ಭಾಜನರಾಗಿದ್ದೀರ….. ಇದು ನಿಜವಾಗಿಯೂ ತಮಗೆ ಸಲ್ಲಬೇಕಾದ ಗೌರವ. ನಿಮ್ಮ ಸ್ನೇಹಿತರು ನಾವು ಎಂದು ಹೆಮ್ಮೆ ಪಡುವ ಕ್ಷಣ ನಮ್ಮದು… ಅಭಿನಂದನೆಗಳು…
ಶುಭಾಶಯಗಳು….

ರಾಜಗುರು ಕಲಾಕ್ಷೇತ್ರದಲ್ಲಿ ಯಾವುದೋ ಒಂದು ನಾಟಕಕ್ಕೆ ಹಾಡುತ್ತಿರುವ ಕಲಾವಿದ‌ನ‌ ಧ್ವನಿ ಟೌನ್ ಹಾಲ್ ಗೂ ಕೇಳಿಸುತ್ತಿದೆ ಎಂದರೆ, ಅದು ರಾಜಗುರುವಿನ‌ ಕಂಠ ಮತ್ತು ರಂಗ ಸಂಗೀತ ಅನ್ನುವುದರಲ್ಲಿ ಅನುಮಾನವೇ ಬೇಡ…

ಅನೇಕ ನಾಟಕಗಳು ಯಶಸ್ವಿ ಪ್ರಯೋಗ ಅನ್ನಿಸಿಕೊಂಡಿರುವು, ಆ ನಾಟಕದ ಸಂಗೀತದಿಂದೇ ಎಂದುಯಾರಾದರು ವಿಮರ್ಶಕರು ಗುರುತಿಸಿದರೆ, ಅದು ರಾಜಗುರು ಅವರ ಸಂಗೀತವೇ ಸರಿ. ಇದರಲ್ಲಿ ಉತ್ಪ್ರೇಕ್ಷೆಯ ಮಾತು ಖಂಡಿತಾ ಇಲ್ಲ…..

ಕನ್ನಡ ರಂಗಭೂಮಿಯ ಸಾಹಸಿ ದಂಪತಿಗಳು ಎಂದರೆ ಅದು ನಯನಾ-ರಾಜಗುರು ಜೋಡಿ…. ನಯನ ನಟನೆ-ರಾಜಗುರು ನಿರ್ದೇಶನ ಹಾಗು ಸಂಗೀತ ಇಂದು ಕನ್ನಡ ರಂಗಭೂಮಿಯಲ್ಲಿ ಯಶಸ್ಸಿನ ಇತಿಹಾಸವನ್ನೇ ಬರೆದುಬಿಟ್ಟಿದೆ…… ಅತಿ ಉತ್ಸಾಹದ ರಾಜಗುರು, ತನ್ನ ತಾರಕದ ಧ್ವನಿಯ ಶಕ್ತಿಯನ್ನೇ, ರಂಗ ಸಂಘಟನೆಯಲ್ಲೂ ತೋರಿಸುತ್ತಾರೆ…. ಪ್ರತಿ ವರುಷ ತಮ್ಮ ತಂಡದ ನಾಟಕದ ಉತ್ಸವಗಳು, ಹಲವು ತಂಡಗಳ ಉತ್ಸವಗಳ ಯಶಸ್ಸಿಗೆ ಬೆನ್ನೆಲಬಾಗಿ ನಿಲ್ಲುವ ರಾಜಗುರು, ತಮ್ಮ ತಂಡದ ಯಶಸ್ಸಿನಷ್ಟೇ ಯಶಸ್ಸನ್ನು ಬೇರೆ ತಂಡಗಳಿಗೂ ಕಟ್ಟಿಕೊಡುತ್ತಾರೆ…..

ಶಂಕರ್ ನಾಗ್ ನಾಟಕೊತ್ಸವ ಹಾಗು ರಂಗ ಪಯಣ ನಾಟಕೋತ್ಸವಗಳು ರಂಗಭೂಮಿಯಲ್ಲಿ ತಮ್ಮ ವಿಶಿಷ್ಠ ಛಾಪನ್ನು ಮೂಡಿಸಿವೆ….

ಇನ್ನಷ್ಟು ಉತ್ತಮ ರಂಗ ಸಂಗೀತ, ರಂಗ ಪ್ರಯೋಗಳ ಯಶಸ್ಸಿಗೆ ಕಾರಣವಾಗಲಿ!‍
ಅಭಿನಂದನೆಗಳು….ರಾಜಗುರು…..

‍ಲೇಖಕರು Admin

November 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: