ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರೆನ್ಸಿ ನಂಬುಗೆಯನ್ನು ಒಡೆದುಹಾಕಲಾಗಿದೆ..

s c dinesh kumar

ಎಸ್ ಸಿ ದಿನೇಶ್ ಕುಮಾರ್ 

ಬೆಲೆಯಳಿಕೆ (demonetization) ಕುರಿತು ವಿದೇಶಿ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಹೊಗಳಲಾಗುತ್ತಿದೆ ಎಂದು ಯಾರೋ ಹೇಳುತ್ತಿದ್ದರು. ಇಲ್ಲಿ ಕೆಲವು ವಿದೇಶಿ ಮಾಧ್ಯಮಗಳು ಬರೆದಿರೋದು ಮಾತ್ರ ಬೇರೆಯದೇ ಕಥೆ ಹೇಳುತ್ತಿವೆ..

ಶ್ರೀಮಂತರು ಸಮಸ್ಯೆ ಎದುರಿಸುತ್ತಿಲ್ಲ. ಭ್ರಷ್ಟರು ತಮ್ಮ ಹಣನ್ನೆಲ್ಲ ಶೇರು, ಚಿನ್ನ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿದ್ದಾರೆ. ಆದರೆ 1.3 ಬಿಲಿಯನ್ ಬಡಜನರೇ ಸಂತ್ರಸ್ಥರಾಗಿದ್ದಾರೆ. ಬಹುತೇಕರಿಗೆ ಬ್ಯಾಂಕ್ ಅಕೌಂಟುಗಳಿಲ್ಲ. ಅವರ ವ್ಯವಹಾರಗಳೆಲ್ಲವೂ ಕ್ಯಾಶ್ ನಲ್ಲೇ ಆಗುತ್ತದೆ. ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುವದರಿಂದ ೀ ಬಡಜನರು ಹಣ ಮತ್ತು ಸಮಯ ಎರಡನ್ನೂ ಕಳೆದುಕೊಳ್ಳುತ್ತಿದ್ದಾರೆ.
-ದಿ ಗಾರ್ಡಿಯನ್

note_exchangeಇಂಡಿಯಾದಲ್ಲಿ ಕ್ಯಾಶ್ ಎಂಬುದೇ ರಾಜ. ಶೇ.78ರಷ್ಟು ಮಂದಿ ಕ್ಯಾಶ್ ಮೂಲಕವೇ ವ್ಯವಹರಿಸುತ್ತಾರೆ. ಬ್ರಿಟನ್, ಅಮೇರಿಕದಲ್ಲಿ ಇದು ಕೇವಲ 20ರಿಂದ 25 ಶೇ. ಇಂಡಿಯಾದಲ್ಲಿ ಬಹುತೇಕರಿಗೆ ಬ್ಯಾಂಕ್ ಅಕೌಂಟು, ಕ್ರೆಡಿಟ್ ಕಾರ್ಡು ಇಲ್ಲ. ಕಾರ್ಡು ಇದ್ದವರೂ ಬಹಳಷ್ಟು ವ್ಯವಹಾರಗಳಿಗೆ ಅದನ್ನು ಬಳಸಲು ಬರುವುದಿಲ್ಲ. ಹೀಗಾಗಿ ದೇಶದ ಆರ್ಥಿಕತೆ ಗೊಂದಲದ ಗೂಡಾಗಿಹೋಗಿದೆ. ಕೋಟಿಗಟ್ಟಲೆ ಜನರು ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲುವ ಅನಿವಾರ್ಯತೆಗೆ ಒಳಗಾಗಿದ್ದಾರೆ.
-ದಿ ನ್ಯೂಯಾರ್ಕ್ ಟೈಮ್ಸ್

ಮೊದಲ ನೋಟಕ್ಕೆ ಇದು ಪ್ರಧಾನಿ ನರೇಂದ್ರ ಮೋದಿಯವರ ಮಾಸ್ಟರ್ ಸ್ಟ್ರೋಕ್ ಎಂದೇ ಪರಿಗಣಿಸಲಾಗಿತ್ತು. ಆದರೆ ಈಗ ಅದು ಅತಿದೊಡ್ಡ ತಪ್ಪುಲೆಕ್ಕಾಚಾರದಂತೆ ಕಾಣುತ್ತಿದೆ. 86 ಶೇ ಕರೆನ್ಸಿ ಮೌಲ್ಯ ಕಳೆದುಕೊಂಡಿದ್ದರೆ, ರಿಜರ್ವ್ ಬ್ಯಾಂಕ್ ಹೊಸ ಕರೆನ್ಸಿ ಮುದ್ರಿಸಲು ಹರಸಾಹಸ ಪಡುತ್ತಿದೆ. ಮೋದಿಯವರೇನೂ ಐವತ್ತು ದಿನಗಳ ವಾಯಿದೆ ಕೇಳಿದ್ದಾರೆ, ಆದರೆ ಇದೆಲ್ಲ ಒಂದು ಹಂತಕ್ಕೆ ಸರಿಹೋಗಲು ನಾಲ್ಕು ತಿಂಗಳಾದರೂ ಬೇಕು.
-ಬ್ಲೂಮ್ ಬರ್ಗ್

ಕರೆನ್ಸಿ ನೋಟೆಂದರೆ ಕಾಪಾಡಲೇಬೇಕಾದ ವಿಶ್ವಾಸ, ಎಂಥಾ ಸಂದರ್ಭದಲ್ಲೂ ಈ ವಿಶ್ವಾಸ ಅಲುಗಾಡಬಾರದು. ಆದರೆ ಭಾರತದಲ್ಲಿ ಈ ನಂಬುಗೆಯನ್ನು ಒಡೆದುಹಾಕಲಾಗಿದೆ. ಬ್ಯಾಂಕು, ಎಟಿಎಂಗಳ ಮುಂದೆ ಜನರ ಸಾಲು ಸಾಲು, ಮಧ್ಯದಲ್ಲೇ ಹಣ ಇಲ್ಲವೆಂದು ಬಾಗಿಲು ಮುಚ್ಚಿಕೊಳ್ಳಲಾಗುತ್ತಿದೆ.
-ಹೆರಾಲ್ಡ್

‍ಲೇಖಕರು Admin

20 November, 2016

2 Comments

  1. Anonymous

    ಕರೆನ್ಸಿ ನೋಟೆಂದರೆ ಕಾಪಾಡಲೇಬೇಕಾದ ವಿಶ್ವಾಸ, ಎಂಥಾ ಸಂದರ್ಭದಲ್ಲೂ ಈ ವಿಶ್ವಾಸ ಅಲುಗಾಡಬಾರದು. ಆದರೆ ಭಾರತದಲ್ಲಿ ಈ ನಂಬುಗೆಯನ್ನು ಒಡೆದುಹಾಕಲಾಗಿದೆ.
    .
    -ಹೆರಾಲ್ಡ್ This happened long back. Not now. For heavens sake stop shedding this kind of crocodile tears

  2. C. N. Ramachandran

    ತುಂಬಾ ಸಮಯೋಚಿತ ಹಾಗೂ ಉಪಯುಕ್ತ ಲೇಖನ; ಇಂದಿನ ಪರಿಸ್ಥಿತಿಯನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿರುವ ಸಂಪಾದಕೀಯ ವಿಚಾರಗಳು. ಧನ್ಯವಾದಗಳು. ರಾಮಚಂದ್ರನ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading