ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಮ್ಯೂನಿಕೇಷನ್ ಇದ್ದಿದ್ದು ಟೆಕ್ಸ್ಟ್ ಬುಕ್ಸ್ ಮತ್ತೆ ನಮ್ಮ ನಡುವೆ ಮಾತ್ರ

ಹರೀಶ್ ಕುಮಾರ್ ಎಸ್


ಫಸ್ಟ್ ಬೆಂಚ್ ಗಾದಿ ನಮ್ಮದು. ಅದಕ್ಕೇ ಫಸ್ಟ್ ಬೆಂಚ್ ಗಾಂಧಿಗಳು ಅಂತ ಫೇಮಸ್ ಆಗಿದ್ವಿ.
ನಿಜಾನೇ ಬಿಡಿ, ಕಷ್ಟಬಿದ್ದು ಪಿ.ಯು.ಸಿ. ಮುಗಿಸಿ ಒಂದು ಇಂಜಿನಿಯರಿಂಗ್ ಸೀಟ್ ಗಿಟ್ಟಿಸಿಕೊಳೋಷ್ಟರಲ್ಲಿ ನಾವು ಮಾಡಿದ ಹೋರಾಟಕ್ಕೆ ನಾವಲ್ಲ, ನಮ್ಮ ಅಪ್ಪ ಅಮ್ಮ ಸುಸ್ತಾಗಿದ್ದರು.
ಇನ್ನು ಇಂಜಿನಿಯರಿಂಗ್ ಅನ್ನೋದು ನಮ್ಮುಂದೆ ಹಿಮಾಲಯ ಪರ್ವತದ ಥರಾ ನಿಂತಿತ್ತು. ಅದಕ್ಕೆ ಫಸ್ಟ್ ಅಟ್ಟೆಂಪ್ಟಲ್ಲಿ ಫಸ್ಟ್ ಲೈನ್ ಅಲ್ಲೇ ಹತ್ತಿಬಿಟ್ಟರೆ ಜೀವನ ಸಲೀಸು ಅಂದ್ಕೊಂಡ್ವಿ.
ಈ ಕಾಲೇಜ್ ಫೆಸ್ಟ್, ಸ್ಪೋರ್ಟ್ಸ್, ಕಲ್ಚರಲ್ ಕಮಿಟಿ ಅಂತ ಲಾಸ್ಟ್ ಬೆಂಚ್ ಮತ್ತೆ ನಮ್ಮ ಹಿಂದಿನ ಬೆಂಚ್ ನವರಿದ್ದರಲ್ವಾ, ಅದಕ್ಕೆ ಅಂತಹ ವಿಷಯಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳೋಕೇ ಹೋಗಲಿಲ್ಲ. ಪ್ರತಿ ಇಂಟರ್ನಲ್ ಟೆಸ್ಟ್ ಗೂ ಹಿಗ್ಗಾಮುಗ್ಗಾ ಓದಿ ಫೈನಲ್ ಎಗ್ಸಾಮಲ್ಲಿ 60% ಮೇಲೆ ಮಾರ್ಕ್ಸ್ ತೆಗೆಯೋಷ್ಟರಲ್ಲಿ ನಮ್ಮ ಇಂಜಿನಿಯರಿಂಗ್ ಲೈಫ್ ಮುಗಿದುಹೋಯಿತು. ಫೈನಲ್ ಸೆಮಿಸ್ಟರ್ ರಿಸಲ್ಟ್ ದಿನ, ನಮ್ಮ ಮಾರ್ಕ್ಸ್ ಗೂ ಬೇರೆ ಬೆಂಚ್ ಸ್ಟೂಡೆಂಟ್ಸ್ ಮಾರ್ಕ್ಸ್ ಗೂ ಜಾಸ್ತಿ ವ್ಯತ್ಯಾಸ ಕಾಣಿಸಲಿಲ್ಲ. ಕೂದಲೆಳೆಯಷ್ಟು ಮೇಲಿದ್ವಿ ಅಷ್ಟೇ.
ಪ್ಲೇಸ್ಮೆಂಟ್ಸ್ ಸರದಿ ಬಂತು. ನಮ್ಮ ಫಸ್ಟ್ ಬೆಂಚ್ ನ ಆಲ್ಮೋಸ್ಟ್ ಎಲ್ಲಾ ಹುಡುಗರೂ ಕೂಡ ಲೈನಾಗಿ ರಿಟ್ಟನ್ ಟೆಸ್ಟ್, ಗ್ರೂಪ್ ಡಿಸ್ಕಷನ್, ಟೆಕ್ನಿಕಲ್ ಇಂಟರ್ವ್ಯೂ, ಹೆಚ್.ಆರ್.ಇಂಟರ್ವ್ಯೂಗಳಲ್ಲಿ ಫಿಲ್ಟರ್ ಆಗಿದ್ವಿ. ಆದರೆ ಈ ಬೇರೆ ಬೆಂಚ್ ನ ತುಂಬಾ ಜನ ಹುಡುಗರು ಎಲ್ಲಾ ರೌಂಡ್ಗಳನ್ನ ಕ್ಲಿಯರ್ ಮಾಡಿ ಪ್ಲೇಸ್ ಆಗಿದ್ರು.
ಕೊನೇಲಿ ಪ್ಲೇಸ್ಮೆಂಟ್ ಆಫೀಸರ್ ಕೊಟ್ಟಿದ ರೀಸನ್, ನಮಗೆ ಕಮ್ಯೂನಿಕೇಷನ್ ಸ್ಕಿಲ್ ಇಲ್ಲಾ ಅಂತ. ಅದು ನಿಜ ಅನ್ನಿಸಿತು. ಯಾಕೆಂದರೆ ನಮ್ಮ ಕಮ್ಯೂನಿಕೇಷನ್ ಇದ್ದಿದ್ದು ಟೆಕ್ಸ್ಟ್ ಬುಕ್ಸ್ ಮತ್ತೆ ನಮ್ಮ ಮಧ್ಯೆ ಮಾತ್ರ. ಹೊರ ಜಗತ್ತಿನ ಜೊತೆ ಅಲ್ಲ. ನಾವು ಈಗ್ಲೂ ಫಸ್ಟ್ ಬೆಂಚಲ್ಲೇ ಕೂತ್ಕೊಂಡು ಪ್ಲೇಸ್ಮೆಂಟ್ ಆಫೀಸರ್ ಹೊರ ಹೋದ ಬಾಗಿಲ ಕಡೆಗೇ ನೋಡ್ತಾ ಇದ್ವಿ.
ಹೊರಗಡೆ ಜಗತ್ತು ಯಾರನ್ನೋ ಕಾಯ್ತಾ ಇದೆ ಅನ್ನಿಸ್ತು.
 

‍ಲೇಖಕರು G

18 November, 2014

1 Comment

  1. lalithasiddabasavaiah

    ಹರೀಶ್, ಈಗೇನು ನಿಮಗೆ ಪ್ಲೇಸ್ಮೆಂಟ್ ಆಯ್ತೊ ಹೇಗೆ? ನಿಮ್ಮ ಈ ಬರಹವನ್ನು ನಿಮ್ಮಂಥದ್ದೆ ಮನ:ಸ್ಥಿತಿಯ ಅಂದರೆ ‘ಫಸ್ಟ್ ಬೆಂಚ್’ ಮಕ್ಕಳ ತಾಯಾಗಿ ನಾನು ಬೇಗ ಗ್ರಹಿಸಬಲ್ಲೆ. ಆದರೆ ಒಂದು ಮಾತು, ಮುಂದಿನ ಬೆಂಚಿನ ಮಕ್ಕಳ ಸಂವಹನ ಅವರು ಮುಂದಿನಬೆಂಚಿನವರಾದದ್ದಕ್ಕೆ ಕಡಿಮೆಯಿರೊಲ್ಲ. ಮತ್ತೆ ಅಪ್ಪಅಮ್ಮನ ಪಾತ್ರ ಕೂಡ ಫಸ್ಟ್ ಬೆಂಚ್ ಮಕ್ಕಳು ಫಸ್ಟಬೆಂಚ್ ನವರಾಗೊಕ್ಕೆ ಪೂರ್ತಿ ಕಾರಣ ಅಲ್ಲ.ಎಲ್ಲೊ ರವೆಯಷ್ಟು ಅದೂ ಕಾಣಿಕೆ ಸಲ್ಲಿಸಬಹುದು ಅಷ್ಟೆ. ಇದು ಅವರ ಸ್ವಭಾವದಲ್ಲೆ ಅಡಕ ಆಗಿರೊ ಗುಣ ಅನ್ನುವುದು ಸ್ವಾನುಭವ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading