ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಕಮಲ್ ಹಾಸನ್" ಅಥವಾ "ಕಮಾಲ್ ಹಸನ್"..?

c s dwarakanath ಸಿ ಎಸ್ ದ್ವಾರಕಾನಾಥ್

ನನ್ನ ನೆಚ್ಚಿನ ನಟ ಕಮಲ್ ಹಾಸನ್ ಹೆಸರು ಮುಸ್ಲಿಂ ಹೆಸರಾಗಿರಲು ಸಾಧ್ಯವೇ..? ಅಪ್ಪಟ ಫಾಲ್ಘಾಟ್ ಅಯ್ಯರ್ ಕುಟುಂಬದಲ್ಲಿ ಹುಟ್ಟಿದ ಕಮಲ್ ಗೆ ಮುಸ್ಲಿಂ ಹೆಸರು ಇಟ್ಟಿರಲು ಸಾಧ್ಯವೇ..?
“ಹೌದು” ಎನ್ನುತ್ತಾರೆ ಕಮಲ್..!!
ಭೀಕರ ಚಳಿ, ಶೀತಲ ಗಾಳಿ, ದಾರಾಕಾರ ಸುರಿವ ಮಳೆಯಲ್ಲಿ ಹೊರಹೋಗಲಾರದೆ ಗೃಹಬಂದನದಲ್ಲಿರುವ ನಾನು ನಿನ್ನೆ ಯುಟ್ಯೂಬ್ ನಲ್ಲಿ “ಆರ್ಕೆ ವಿಥ್ ಕಮಲ್” ಎಂಬ ತೆಲುಗು ಕಾರ್ಯಕ್ರಮ ನೋಡ್ತಿದ್ದೆ.. ಕಮಲ್ ಮನಬಿಚ್ಚಿ ಮಾತಾಡುತಿದ್ದರು.. ಅವರದು ವಿದ್ಯಾವಂತರ ಲಿಬರಲ್ ಕುಟುಂಬ, ಅವರ ಮನೆಯಲ್ಲಿ ಕಡಿಮೆ ಎಂದರೂ ಒಂದು ಡಜನ್ ವಕೀಲರಿದ್ದಾರೆ.
kamala hassan1ಸುಪ್ರೀಂ ಕೋರ್ಟಿನ ಹಿರಿಯ ವಕೀಲ ಪರಾಸರನ್ ಕಮಲ್ ರ ಸಂಬಂಧಿ, ಚಾರು ಹಾಸನ್, ಸುಹಾಸಿನಿ, ಮಣಿರತ್ನಂ ನಂತಹವರೆಲ್ಲಾ ಕಮಲ್ ಕುಟುಂಬದವರು. ಇವರ ಕುಟುಂಬದಲ್ಲಿ ಎಲ್ಲಾ ಜಾತಿಮತದವರು, ವಿಭಿನ್ನ ಸಿದ್ಧಾಂತದವರೂ ಇದ್ದಾರಂತೆ! ಆದರೆ ಇದು ಇಂದಿನದಾಯಿತು.. ಸುಮಾರು ಆರು ದಶಕಗಳ ಹಿಂದೆ ಇವರಿಗೆ ಮುಸ್ಲಿಂ ಹೆಸರು ಇಟ್ಟಿರಬೇಕೆಂದರೆ ಅದು ಹೇಗೆ ಸಾಧ್ಯವಾಯಿತು..!?
ಕಮಲ್ ರ ತಂದೆ ವಕೀಲರು ಮತ್ತು ಅಪ್ಪಟ ಕಾಂಗ್ರೆಸ್ ಬೆಂಬಲಿಗರು ಈ ಕಾರಣಕ್ಕೆ ಕಾಂಗ್ರೆಸಿನ ಆಗಿನ ‘ಸೆಕ್ಯುಲರ್’ ಮೌಲ್ಯಗಳಿಂದ ಪ್ರಭಾವಿತರಾಗಿ, ಹಿಂದು ಮುಸ್ಲಿಂ ಐಕ್ಯತೆಯ ಸಂಕೇತವಾಗಿ ಮಗನಿಗೆ ಮುಸ್ಲಿಂ ಹೆಸರು ಇಟ್ಟರಂತೆ! ಸಿನಿರಂಗದಲ್ಲಿ ಎ.ನಾಗೇಶ್ವರ ರಾವ್ ಸೇರಿದಂತೆ ಅನೇಕರು ಕಮಲ್ ರನ್ನು ಮೊದಮೊದಲಿಗೆ ಮುಸ್ಲಿಂರೆಂದೇ ಭಾವಿಸಿದ್ದರಂತೆ.
ಒಮ್ಮೆ ಕಮಲ್ ಅಮೆರಿಕೆಗೆ ಹೋದಾಗ ಈ ಹೆಸರಿನಿಂದ ಏರ್ಪೋರ್ಟ್ ನಲ್ಲಿ ಅನೇಕ ಸಮಸ್ಯೆಗಳು ಎದುರಾದವಂತೆ.. ಯಾಕೆಂದರೆ ಸದ್ದಾಂ ಹುಸೇನ್ ತಮ್ಮನ ಹೆಸರೂ ಇದಕ್ಕೆ ಹೋಲುವಂತಿದೆಯಂತೆ..!(ಕಮಾಲ್ ಹಸನ್ ಎಂದಿರಬಹುದೇ?)
ಅತ್ಯಂತ ಸೆನ್ಸಿಬಲ್ ಆಗಿರುವ ಕಮಲ್ ಕೇವಲ ಹೆಸರಿನಿಂದಾಗಿ ಮಾತ್ರ ಸೆಕ್ಯುಲರ್ ಆಗಿಲ್ಲ.. ಈತ ಅಪ್ಪಟ ಪೆರಿಯಾರ್ ಅನುಯಾಯಿ ಎಂಬುದನ್ನು ಅನೇಕ ಸಲ ಹೇಳಿದ್ದಾರೆ.. ಅಷ್ಟೇ ಅಲ್ಲ ತಾನೊಬ್ಬ rationalist ಎಂದು ನೇರವಾಗಿ ಹೇಳುತ್ತಾರೆ.. ತೆಲುಗಿನ ಎ.ನಾಗೇಶ್ವರರಾವ್ ಕೂಡ rationalist ಆಗಿದ್ದು ಈ ಕಾರಣಕ್ಕೆ ಇಬ್ಬರೂ ಆಪ್ತರಾಗಿದ್ದರಂತೆ.
ಕಮಲ್ ರ ಪೊಲಿಟಿಕಲ್ ಸ್ಟ್ಯಾಂಡ್ ಬಗ್ಗೆ ಕೇಳಿದಾಗ “ನಾನು rationalist ಎಂಬುದೇ ನನ್ನ ರಾಜಕೀಯ ನಿಲುವು ಏನೆಂಬುದನ್ನು ಸ್ಪಷ್ಟಪಡಿಸುತ್ತದೆ.. ನಾನಂತೂ extreme right ಆಗಿರಲಾರೆ..ಎಂಬುದು ಸ್ಪಷ್ಟ..” ಎಂದು ನಗುತ್ತಾರೆ. ಹೀಗಾಗಿ ಈತ ಸಹಜವಾಗಿಯೇ ಮಹಾ ಮಾನವತಾವಾದಿಯಾಗಿ ತನ್ನ ಅಭಿಮಾನಿ ಸಂಘಗಳಿಂದ ಸಾವಿರಾರು ಜನಕ್ಕೆ ಕಣ್ಣು.. ಲಕ್ಷಾಂತರ ಜನಕ್ಕೆ ರಕ್ತ ಕೊಡಲು ಸಾಧ್ಯವಾಗಿದೆ..!
ನಮ್ಮ ಸೆಲೆಬ್ರಿಟಿಗಳು ಕೊಂಚ ಸೆನ್ಸಿಬಲ್ ಆಗಿದ್ದರೆ ಏನೆಲ್ಲಾ ಬದಲಾವಣೆಗಳು ಸಾಧ್ಯವಾಗುತ್ತದಲ್ಲವೆ..? ಈಚೆಗೆ ನಮ್ಮ ಪ್ರೀತಿಯ ನಟ ಚೇತನ್, ಕಮಲ್ ಹಾದಿಯಲ್ಲಿ ಹೊರಟಂತಿದ್ದಾರೆ.. ಈತ ಕಮಲ್ ರ ಸಿದ್ಧಾಂತದೊಂದಿಗೆ ನಟರಾಗಿ ಕಮಲ್ ಏರಿದ ಎತ್ತರಕ್ಕೇರಲಿ ಎಂದು ಹಾರೈಸೋಣ..

‍ಲೇಖಕರು Avadhi

6 July, 2016

3 Comments

  1. NS Shankar

    ನಾನು ಕೇಳಿದ ಪ್ರಕಾರ, ಕಮಲ್ ಹಸನ್ ರ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾಗ ಅವರ ಒಡನಾಡಿಯಾಗಿ ಒಬ್ಬ ಮುಸ್ಲಿಂ ಇದ್ದರು. ಆತ ಅಕಾಲ ಮರಣಕ್ಕೆ ತುತ್ತಾದರು. ಅವರು ಹೋರಾಟದಲ್ಲಿ ತೀರಿಕೊಂಡರಾ? ಇಲ್ಲವಾದರೆ ಯಾವ ಕಾರಣಕ್ಕೆ, ಈ ವಿವರಗಳು ನನಗೆ ಗೊತ್ತಿಲ್ಲ. ಆದರೆ ಕಮಲ್ ತಂದೆ ಮಾತ್ರ ಅಗಲಿದ ತಮ್ಮ ಮಿತ್ರನ ನೆನಪಿಗಾಗಿ ಮಗನಿಗೆ ಹಸನ್ ಎಂಬ ಹೆಸರು ಜೋಡಿಸಿ ನಾಮಕರಣ ಮಾಡಿದರು

  2. Shrinivas. Huddar

    ಕರ್ನಾಟಕದ ಟಾಪ್ ಟೆನ್ ಮೂ.ಶಿ. ಮತ್ತು ವಿ.ವಾ ಗಳಲ್ಲಿ ಒಬ್ಬರಾದ ದ್ವಾರಕನಾಥ ಹೇಳಿದ್ದಾರೆಂದರೆ ಒಪ್ಪಲೇಬೇಕು.

  3. shama nandibetta

    “ನಮ್ಮ ಸೆಲೆಬ್ರಿಟಿಗಳು ಕೊಂಚ ಸೆನ್ಸಿಬಲ್ ಆಗಿದ್ದರೆ ಏನೆಲ್ಲಾ ಬದಲಾವಣೆಗಳು ಸಾಧ್ಯವಾಗುತ್ತದಲ್ಲವೆ..? ”
    Sensibility, social responsibility hasn’t got any meaning in our celebrities dictionary !!
    They can, but they won’t.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading