ಮುಂದಿನ ದಿನದಲ್ಲಿ ಕನ್ನಡ ಉಳಿಯುತ್ತಾ?
ಶರಣಪ್ಪ ಬಾಚಲಾಪುರ
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ, ಇಲ್ಲಿಯ ಸಾಹಿತ್ಯ ಶ್ರೀಮಂತವಾಗಿದ್ದು ರಾಷ್ಟ್ರದಲ್ಲಿಯೇ ಅತ್ಯಧಿಕ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಹೊಂದಿದೆ. ಇಲ್ಲಿಯ ಸಾಹಿತ್ಯ, ಸಂಸ್ಕೃತಿ, ಆಡು ಭಾಷೆ, ನುಡಿಗಟ್ಟು, ಗಾದೆಗಳು ಸೇರಿದಂತೆ ಕನ್ನಡಿಗರದ್ದು ದ್ರಾವೀಡ ಭಾಷೆಗಳಲ್ಲಿ ಉತ್ಕೃಷ್ಟ ಭಾಷೆ ಎಂದು ಹೇಳುತ್ತೇವೆ. ಆದರೆ ಇದು ಇತ್ತೀಚಿನ ದಿನಗಳಲ್ಲಿ ಅದು ಪುಸ್ತಕದ ದಾಖಲೆ, ಕನ್ನಡಿಗರ ಭಾಷಣದಲ್ಲಿ ಔಚಿತ್ಯಕ್ಕಾಗಿ ಬಳಸುವ ಶಬ್ದ ಮಾತ್ರವಾಗುತ್ತದೆಯೋ ಎಂಬ ಅನುಮಾನ ಕಾಡುತ್ತಿದೆ.
ಕನ್ನಡ ಭಾಷೆಯು ಪ್ರತಿ 50 ಕಿಮೀ ದೂರಕ್ಕೆ ಆಡುಮಾತುಗಳಲ್ಲಿ ಬದಲಾವಣೆಯನ್ನು ಕಾಣುತ್ತಾ ಹೋಗುತ್ತೆವೆ. ಇಲ್ಲಿ ಸಮೃದ್ದ ಶಬ್ದ ಭಂಡಾರದಿಂದಾಗಿ ಪ್ರತಿ ಪ್ರದೇಶದಲ್ಲಿಯೂ ಆಡುವ ಮಾತು ಧ್ವನಿಯಲ್ಲಿ ಬದಲಾವಣೆಯಿದ್ದರು ಅರ್ಥದಲ್ಲಿ ಒಂದೇ ಆಗಿದೆ. ತಿರುಳ್ಗನ್ನಡ ನಾಡಿನ ಭಾಷೆ, ಉತ್ತರ ಕರ್ನಾಟಕದ ಭಾಷೆ, ಅದರಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಭಾಷೆ, ಮಲೆನಾಡಿನ ಕರಾವಳಿ ಕನ್ನಡಿಗರ ಭಾಷೆ, ಮಧ್ಯೆ ಕರ್ನಾಟಕದ ಕನ್ನಡಿಗರು, ಹಳೆಯ ಮೈಸೂರು ಭಾಗದ ಬೆಂಗಳೂರು, ಮಂಡ್ಯ, ಕೊಡಗು ಜಿಲ್ಲೆಯ ಭಾಷೆ ನುಡಿಯಲ್ಲಿ ಬೇರೆ ಬೇರೆಯಾಗಿದ್ದರು ಎಲ್ಲರದು ಕನ್ನಡ ಭಾಷೆ, ಕನ್ನಡನಾಡಿನ ಭಾಷೆ ಎಂದು ಹೆಮ್ಮೆಯಿಂದ ಹೇಳುತ್ತೇವೆ.
ಇಂತಹ ಕನ್ನಡ ಭಾಷೆ ಈಗ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಕಂಗ್ಲಿಷ್ ಭಾಷೆಯಾಗುವುದರಲ್ಲಿ ಸಂದೇಹವಿಲ್ಲ. ಅದಕ್ಕೆ ಪೂರಕವಾಗುವಂತೆ ಸರ್ಕಾರ ಶಾಲೆಗಳಲ್ಲಿ ಇಂಗ್ಲಿಷ್ ಹೇರಿಕೆ ಮಾಡುತ್ತಿರುವುದು. ಒಂದು ಕಡೆ ಇಂಗ್ಲಿಷ್ ಮಾಧ್ಯಮ ಶಾಲೆ ಅನುಮತಿ ಇಲ್ಲಾ ಎಂದು ಹೇಳುತ್ತಲೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ತರಗತಿಯನ್ನು ಪ್ರಾರಂಭಿಸಲು ಮುಂದಾಗಿದೆ.
ಕನ್ನಡ ಶಾಲೆಯಲ್ಲಿ 6 ರಿಂದ ಮೆಟ್ರಿಕ್ ವರಿಗೆ ವಿದ್ಯಾರ್ಥಿಗಳು ಒಪ್ಪಿದರೆ ಅಲ್ಲಿ ಇಂಗ್ಲಿಷ್ ಮಾಧ್ಯಮದ ತರಗತಿಗಳನ್ನು ಪ್ರತೇಕವಾಗಿ ನಡೆಸುವ ಆದೇಶವನ್ನು ಈ ವರ್ಷದಿಂದ ರಾಜ್ಯದ 74 ಶಾಲೆಗಳಿಗೆ ನೀಡಿದೆ. ಮೇಲ್ನೋಟಕ್ಕೆ ಇದರಲ್ಲಿ ಏನು ತಪ್ಪು ಎಂದುಕೊಂಡವರೆ ಹೆಚ್ಚು ಆದರೆ ಭವಿಷ್ಯದಲ್ಲಿ ಇಂಗ್ಲಿಷ್ ತರಗತಿಗಳಿಂದ ಶಾಲೆಗಳಲ್ಲಿ ಸಂಪೂರ್ಣವಾಗಿ ಕನ್ನಡ ಮಾಯವಾಗುವ ಸಾದ್ಯತೆ ಇದೆ ಎಂಬ ಆತಂಕವಿದೆ.
ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ, ಸಮವಸ್ತ್ರ, ಉಚಿತ ಪಠ್ಯ, ಹಾಲು ಸೇರಿದಂತೆ ಎನೇ ಸೌಲಭ್ಯ ನೀಡಿದರೂ ಅದು ಶಾಲೆಯ ವೇಳೆಯಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳು ಆದರೆ ಭವಿಷ್ಯದ ದೃಷ್ಠಿಯಿಂದ ಈ ಎಲ್ಲಾ ಸೌಲಭ್ಯಕ್ಕಿಂತ ಅನ್ನ ನೀಡುವ ಭಾಷೆಯ ಮಾಧ್ಯಮ ಮುಖ್ಯವೆಂದು ಪಾಲಕರು ಇಂಗ್ಲಿಷ್ ಮಾಧ್ಯಮದತ್ತ ವಾಲಿದ್ದಾರೆ.
ಈಗಾಗಲೆ ಕನ್ನಡ ಸರ್ಕಾರಿ ಶಾಲೆಗಳಲ್ಲಿ ಓದಿದರೆ ತಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಭವಿಷ್ಯವಿಲ್ಲ ಎಂಬ ಉದ್ದೇಶದಿಂದ ನಗರವಷ್ಟೆ ಅಲ್ಲಾ ಗ್ರಾಮೀಣ ಪ್ರದೇಶದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರ ಶಾಲೆಗಿಂತ ಕನ್ನಡ ಭಾಷೆಯ ಶಾಲೆಗಳೆಂದು ಫಲಕ ಹಾಕಿಕೊಂಡು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಕಾನ್ವೆಂಟಗಳಿಗೆ ಮಕ್ಕಳನ್ನು ದಾಖಲಿಸುತ್ತಾರೆ. ಇದರಿಂದಾಗಿ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಈ ಶಾಲೆಗಳನ್ನು ಮುಚ್ಚಿ ಅಲ್ಲಿ ಇದ್ದಿರುವ ಮಕ್ಕಳನ್ನು ಪಕ್ಕದ ಶಾಲೆಗೆ ಸೇರಿಸುವ ಕಾರ್ಯವನ್ನು ಕಳೆದ ವರ್ಷದಿಂದ ರಾಜ್ಯ ಸರ್ಕಾರ ಮಾಡುತ್ತಾ ಬರುತ್ತಿದೆ.
ಕಾನ್ವೆಂಟ ಶಾಲೆಗಳು ಪಾಲಕರಲ್ಲಿ ಪ್ರತಿಷ್ಠೆಯ ಶಿಕ್ಷಣ ಸಂಸ್ಥೆಗಳಾಗಿದ್ದು ಎಷ್ಷೆ ಖರ್ಚಾಗಲಿ ತಮ್ಮ ಮಕ್ಕಳನ್ನು ಕಾನ್ವೆಂಟ ಶಾಲೆಗೆ ಸೇರಿಸಬೇಕೆಂಬ ಉಮೇದು ಎಲ್ಲ ಪಾಲಕರಲ್ಲಿದೆ. ಕನ್ನಡ ಶಾಲೆಯಲ್ಲಿ ಕಲೆತರೆ ಮುಂದಿನ ದಿನಗಳಲ್ಲಿ ತಮ್ಮ ಮಗನಿಗೆ ಉದ್ಯೋಗ ಸಿಗುವುದಿಲ್ಲ. ತಮ್ಮ ಮಗ, ಡಾಕ್ಟರ, ಇಂಜಿನೀಯರಿಂಗ್ ಆಗಬೇಕೆಂಬ ಕನಸು ಈಡೇರುವುದಿಲ್ಲ ಅದಕ್ಕಾಗಿ ಮಕ್ಕಳಿಗೆ ಇಂಗ್ಲಿಷ್ ಭಾಷೆ ಅನಿವಾರ್ಯ ಎಂಬಂತೆ ಪಾಲಕರು ವರ್ತಿಸುತ್ತಿದ್ದಾರೆ. ಅದರಲ್ಲಿ ಅವರದು ತಪ್ಪೇನಿಲ್ಲ ಎನ್ನುವದು ಇಂದಿನ ದಿನಗಳಲ್ಲಿ ಸರ್ಕಾರದ ನೀತಿಗಳು ಸಾಬೀತು ಪಡಿಸುತ್ತಿವೆ.
ಕಾನ್ವೆಂಟಗಳಲ್ಲಿ ಸೇರಿಸಲು ಮಧ್ಯಮ ಮತ್ತು ಬಡವ ವಿದ್ಯಾರ್ಥಿಗಳ ಪಾಲಕರು ದುಡ್ಡಿನ ಹೊರೆಯಿಂದ ಮಕ್ಕಳಿಗೆ ಕಾನ್ವೆಂಟ ಶಿಕ್ಷಣ ನೀಡಿಸಲು ಆಗದೆ ಅನಿವಾರ್ಯತೆ ಕನ್ನಡದ ಸರ್ಕಾರಿ ಶಾಲೆಗೆ ಸೇರಿಸಿದ್ದರು. ಈಗ ಎಲ್ಲರಿಗೂ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣ ಸಿಗುವಂತೆ ಇದ್ದರೆ ಯಾರಿಗೆ ಬೇಡವಾಗುತ್ತದೆ. ಅನಾಯಾಸವಾಗಿ ಇಂಗ್ಲಿಷ್ ಮಾಧ್ಯಮ ಸಿಗುತ್ತಿರುವಾಗ ಎಲ್ಲರು ಇಂಗ್ಲಿಷ್ದತ್ತ ವಾಲಿದರೆ ಮುಂದಿನ ಕನ್ನಡ ಕಲಿಯುವವರು ಇಲ್ಲದಂತಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳು ಇಲ್ಲದೆ ಹೋಗುವ ಆತಂಕವಿದೆ.
ಪ್ರೌಢ ಶಾಲೆಯ ನಂತರ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ತರಗತಿಗೆ ಹೋದರೆ ಅವರಿಗೆ ವಿಜ್ಞಾನ ವಿಷಯವನ್ನು ಓದುವ ಪಠ್ಯಗಳು ಕನ್ನಡದಲ್ಲಿಲ್ಲ. ಆದರೆ ವಿಜ್ಞಾನ ಕಾಲೇಜುಗಳ ಪ್ರವೇಶದಲ್ಲಿ ಕನ್ನಡ ಅಥವಾ ಇಂಗ್ಲಿಷ್ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಲು ಪ್ರವೇಶ ಪತ್ರದಲ್ಲಿ ಕಾಲಂಗಳಿದ್ದು ಅಪ್ಪಿತಪ್ಪಿ ವಿದ್ಯಾರ್ಥಿಗಳು ಕನ್ನಡಾಭಿಮಾನಿಯಾಗಿ ಕನ್ನಡ ಭಾಷೆ ಎಂದು ಬರೆದರೆ ಅವರು ಮುಂದಿನ ದಿನಗಳಲ್ಲಿ ಓದಿಗೆ ಗುಡ್ ಬೈ ಹೇಳಬೇಕು. ಅದಕ್ಕಾಗಿ ಕಾಲೇಜುಗಳು ಕನ್ನಡ ಭಾಷೆ ಎಂದು ಬರೆದಿದ್ದರೂ ಅದನ್ನು ಇಂಗ್ಲಿಷ್ ಭಾಷೆಯೆಂದು ತಿದ್ದಿಕೊಳ್ಳುತ್ತಾರೆ.
ಎಲ್ಲಾ ಪಠ್ಯಗಳು ಕನ್ನಡ ಭಾಷೆಗೆ ತಜರ್ುಮೆ ಇಲ್ಲದ ಕಾರಣದಿಂದಾಗಿ ಮಕ್ಕಳ ಬಗ್ಗೆ ಕನಸು ಹೊತ್ತಿರುವ ಪಾಲಕರು ಅನುವಾರ್ಯವಾಗಿ ಇಂಗ್ಲಿಷ್ ಭಾಷೆಯತ್ತ ವಾಲುತ್ತಿದ್ದಾರೆ. ಅದಕ್ಕೆ ಪೂರಕವಾಗುವಂತೆ ಇಂದಿನ ಶಿಕ್ಷಣ ಪದ್ದತಿಯು ಇದೆ. ಈಗಾಗಲೆ ಆದರ್ಶ ವಿದ್ಯಾಲಯ, ಮುರಾಜರ್ಿ, ಕಿತ್ತೂರ ಚೆನ್ನಮ್ಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ತೆರೆಯಲಾಗಿದ್ದು. ಈ ವರ್ಷದಿಂದ ಕನ್ನಡ ಶಾಲೆಯಲ್ಲಿಯೇ ಇಂಗ್ಲಿಷ್ ಶಾಲೆಗಳು ಪ್ರಾರಂಭವಾಗಲಿವೆ.
ಇಂದಿನ ದಿನಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಅಲ್ಪಸಂಖ್ಯಾತ ಭಾಷೆಯಾಗಿದ್ದು ಇಲ್ಲಿ ಕಾರ್ಪೊರೇಟ್ ವಲಯ, ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಎಲ್ಲವೂ ಇಂಗ್ಲಿಷ್ಮಯವಾಗಿದ್ದು ಎಲ್ಲಾ ಕಡೆ ಕನ್ನಡ ಭಾಷೆಯವರು ನಾವು ಎಂಬುವುದನ್ನು ಅಲ್ಲಿ ಕೆಲಸ ಮಾಡುವ ಕನ್ನಡಿಗರು ಮರೆತ್ತಿದ್ದಾರೆ. ದೇಶದ ವಿವಿಧ ಭಾಗದಿಂದ ಬಂದಂಥ ಸಹಪಾಠಿಗಳು ಮತ್ತು ಮಾಲಿಕರೊಂದಿಗೆ ವ್ಯವಹರಿಸುವ ಎಕಭಾಷೆ ಇಂಗ್ಲಿಷ್ ಆಗಿದ್ದರಿಂದ ಇಲ್ಲಿ ಕನ್ನಡನಾಸ್ಥೆಯಾಗಿದೆ.
ಇಂದಿನ ಮಾಧ್ಯಮಗಳಲ್ಲಿಯೂ ಕನ್ನಡಗಿಂತ ಅಧಿಕವಾಗಿ ಆಂಗ್ಲ ಭಾಷೆ ಬಳಕೆ ಹೆಚ್ಚಾಗಿದ್ದು. ನಾಡಿನ ಪ್ರತಿಷ್ಠಿತರು ತಮ್ಮ ಮಾತಿನ ನಡುವೆ ಅಲ್ಲಲ್ಲಿ ಕನ್ನಡ ಬಳಕೆ ಮಾಡುತ್ತಿದ್ದು ಅದೇ ಕನ್ನಡ ಭಾಷೆ ಎನ್ನುವಂತೆ ವರ್ತಿಸುತ್ತಿದ್ದಾರೆ. ಅದರಲ್ಲಿಯೂ ಸಿನೆಮಾ ತಾರೆಯರು ಮಾಧ್ಯಮಗಳ ಮುಂದೆ ಕುಳಿತಾಗ ಅವರು ಇಡೀ ಮಾತಿನಲ್ಲಿ ಇಂಗ್ಲಿಷ್ ಮಧ್ಯೆ ಕನ್ನಡ ನುಸುಳುತ್ತಿದೆ. ಅವರು ಮಾತನಾಡುವುದೆ ನಿಜವಾದ ಕನ್ನಡ ಎನ್ನುವಂತಾಗಿದೆ. ಸಿನೆಮಾ ತಾರೆಯರ ನಡೆ, ಉಡುಪು, ಅಲಂಕಾರವನ್ನು ಅನುಕರಿಸುವ ನಮ್ಮವರು ಸಹ ಭಾಷೆಯನ್ನು ಅನುಕರಿಸುತ್ತಾರೆ.
ಕನ್ನಡಕ್ಕಾಗಿ ಅನೇಕ ಸಂಘಟನೆಗಳು ಹುಟ್ಟಿಕೊಂಡಿವೆ. ಆದರೂ ಕನರ್ಾಟಕದಲ್ಲಿ ಕನ್ನಡ ಭಾಷೆ ಪರಕೀಯವಾಗುತ್ತಿರುವದು ಈ ಸಂಘಟನೆಗಳ ಗಮನಕ್ಕೆ ಬರುತ್ತಿಲ್ಲವೇನೊ ಎನ್ನುವಂತೆ ಇದೆ. ಇಲ್ಲಿ ಕೇವಲ ನೆಲಕ್ಕಾಗಿ ಹೋರಾಟ ಮಾಡುವುದಕ್ಕಿಂತ ಇಲ್ಲಿಯ ಭಾಷೆಯ ಉಳುವಿಗಾಗಿ ಹೋರಾಡುವಂಥ ಕೆಚ್ಚು ಸಂಘಟನೆಗಳಲ್ಲಿ ಬರಬೇಕಾಗಿದೆ. ಸಂಘಟನೆಗಳು ವ್ಯಕ್ತಿಯ ಪ್ರತಿಷ್ಠೆಗಾಗಿ ಹುಟ್ಟಿಕೊಳ್ಳದೆ ನಾಡಿನ ಭಾಷೆ ಸಂಸ್ಕೃತಿ ಉಳುವಿಗಾಗಿ ಹುಟ್ಟಿಕೊಳ್ಳುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ.
2000 ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಭಾಷೆ ಈಗ ಸಂಕ್ರಮಣ ಸ್ಥಿತಿಯಲ್ಲಿದೆ. ಕನ್ನಡವನ್ನು ಬೆಳೆಸಲು ಸಾಹಿತ್ಯ, ಕಾರ್ಯಕ್ರಮಗಳು, ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಎಂಬ ಕಡ್ಡಾಯ ಮಾಡುವುದರಿಂದ ಉಳಿಯುವುದಿಲ್ಲ. ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾದರೆ ಮಾತ್ರ ಕನ್ನಡ ಉಳಿಯುತ್ತದೆ. ಅದಕ್ಕೆ ಚಿಂತಿಸಬೇಕಾದದ್ದು ನಾಡಿನ ಪ್ರತಿಜ್ಞಾವಂತರು, ಸಕರ್ಾರದ ಕರ್ತವ್ಯವಾಗಿದೆ.







ನಿಮ್ಮ ಕಾಳಜಿ ಸಹಜವಾಗಿಯೇ ಇದೆ.ತುಂಬಾ ಬೇಸರವಾದಾಗ ಹೀಗೆ ಬರೆಯುವುದುಂಟು.ಕನ್ನಡ ಅನ್ನದ ಭಾಷೆಯಾಗಲು ಆಗುತ್ತಿರುವ ತೊಡಕು ಮತ್ತು ಅನುಸರಿಸಬೇಕಾದ ಪರ್ಯಾಯ ಮಾರ್ಗದ ಬಗ್ಗೆ ಒಂಚೊರಾದರೂ ಗಮನ ಸೆಳೆಯಬೇಕಿತ್ತು.
ಕನ್ನಡ ಭಾಷೆ ಅನ್ನ ನೀಡುವ ಭಾಷೆಯಾದರೆ ಮಾತ್ರ ಕನ್ನಡ ಉಳಿಯುತ್ತದೆ. ಅದಕ್ಕೆ ಚಿಂತಿಸಬೇಕಾದದ್ದು ನಾಡಿನ ಪ್ರತಿಜ್ಞಾವಂತರು, ಸರ್ಕಾರದ ಕರ್ತವ್ಯವಾಗಿದೆ – ಅಷ್ಟೇ ಅಲ್ಲ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಲಿಸುವ ಪೋಷಕರದ್ದು ಕೂಡಾ. ಕನ್ನಡ ಎಂ.ಎ. ಮಾಡಿ ಉಪನ್ಯಾಸಕ ಹುದ್ದೆ ಬಿಟ್ಟು , ಪತ್ರಕರ್ತನಾಗಿ ಅನ್ನ ಕಂಡುಕೊಂಡ ನಾನು , ನನ್ನ ಮಗನನ್ನು ಕಾನ್ವೆಂಟಿಗೆ ಕಳುಹಿಸಿದ್ದೆ. ಆ ಶಾಲೆಯವರು ಕೊಡುವ ಹೋಮ್ ವರ್ಕಗೆ ಆತನ ಮನಸ್ಸು ಮುದುಡುತ್ತಿತ್ತು. ಶಾಲಾ ಕೋಣೆಯಲ್ಲಿ 60 ಮಕ್ಕಳು. ಆಟೋದಲ್ಲಿ ಉಸಿರಾಡಲು ಜಾಗವಿಲ್ಲದಂತೆ ತುಂಬುತ್ತಿದುದನ್ನು ನನ್ನ ಮಗ ವಿರೋಧಿಸಿದ. ಇಂಗ್ಲಿಷ್ ಗುರುತಿಸಿದಷ್ಟು ಸುಲಭವಾಗಿ ಕನ್ನಡ ಅಕ್ಷರ ಗುರುತಿಸಲು ಕಷ್ಟ ಪಡುತ್ತಿದ್ದ. ಇದೆಲ್ಲಾ ಅರಿವಿಗೆ ಬರುತ್ತಿದ್ದಂತೆ , ಆತನನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿದೆ. ಕಾರ್ಮಿಕರ ಮಕ್ಕಳೆ ಇರುವ ಕನ್ನಡ ಶಾಲೆಯಲ್ಲಿ ಮಗ ಲವಲವಿಕೆ ಇಂದ ಇದ್ದಾನೆ. ಕನ್ನಡ ಆತನ ಹೃದಯದಲ್ಲಿ ಅರಳುತ್ತಿದೆ. ಬಿಸಿಯೂಟದ ರುಚಿಯೇ ಚೆನ್ನಾಗಿದೆ ಎಂದು ಅಲ್ಲಿಯೇ ಮಕ್ಕಳ ಜೊತೆ ಬೆರೆತು ಊಟ ಮಾಡುತ್ತಿದ್ದಾನೆ. 2 ನೇ ತರಗತಿಯ ನಲಿಕಲಿ ಪುಸ್ತಕ ಆತನಲ್ಲಿ ತೆರೆದುಕೊಳ್ಳುತ್ತಿದೆ. ನಮ್ಮಲ್ಲಿದ್ದ ದುಗುಡವೂ ಕರಗಿದೆ. ಅಪ್ಪಟ ಕನ್ನಡ ಮಣ್ಣಿನ ಗುಣ ಆತನದಾಗುತ್ತಿದೆ.
ಆದರೆ, ಸರ್ಕಾರ ಒಂದು ಕಡೆ ಭಾಷೆ ಉಳಿವಿಗಾಗಿ ಕ್ರಮ ಎಂದು ಹೇಳುತ್ತಲೆ.. ಇನ್ನೊಂದು ಕಡೆ ಕನ್ನಡವನ್ನು ಕೊಲ್ಲುತ್ತಿದೆ. ಇಂದಿನ ಮಾಧ್ಯಮಗಳು ಸಹ ಕನ್ನಡದ ಭಾಷೆಗಿಂತ.. ಕಂಗ್ಲಿಷ್ ಭಾಷೆಯ ಬಗ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ..ನಾಗರಾಝ ನಿಮ್ಮ ಸಲಹೆಗೆ ಧನ್ಯವಾದಗಳು