ಕನ್ನಡ ಪರಿಚಾರಕ ಎಂ ರಾಮಚಂದ್ರ ಇನ್ನಿಲ್ಲ

ಕನ್ನಡದ ಹಿರಿಯ ಸಾಹಿತಿ‌, ಸಂಘಟಕ‌, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ. ರಾಮಚಂದ್ರ ಅವರು‌

ಇಂದು ಮುಂಜಾನೆ ಕಾರ್ಕಳದಲ್ಲಿ ತಮ್ಮ ಮನೆಯಲ್ಲಿ ನಿಧನರಾದರು.

ನಿನ್ನೆ ತಾನೇ ಕನ್ನಡ ಪುಸ್ತಕ ಪ್ರಾಧಿಕಾರ ರಾಮಚಂದ್ರ ಅವರ ಕನ್ನಡ ಪರಿಚಾರಿಕೆಯನ್ನು ಗೌರವಿಸಿ ಪ್ರಶಸ್ತಿ ಘೋಷಿಸಿತ್ತು.

ಪ್ರೊ ಬಿ ಎ ವಿವೇಕ ರೈ  ಅವರ ಇತ್ತೀಚಿನ ಕೃತಿ ‘ಕಲಿತದ್ದು ಕಲಿಸಿದ್ದು’ನಲ್ಲಿ ಕಾರ್ಕಳದ ಎಂ ರಾಮಚಂದ್ರರು ಕರಾವಳಿಯಲ್ಲಿ ಕನ್ನಡವನ್ನು ಕಟ್ಟಿದ ಬಗೆ, ಮಂಗಳೂರು ವಿಶ್ವವಿದ್ಯಾಲಯ ರೂಪುಗೊಳ್ಳಲು ಸಲ್ಲಿಸಿದ ಅಳಿಲು ಸೇವೆಯನ್ನು ಕುರಿತು ಬರೆದಿದ್ದಾರೆ.

ವಿಕಿಪೀಡಿಯಾ ಕಂಡಂತೆ-

ಮೂಲತಃ ಕೇರಳ ಕರ್ನಾಟಕ ಗಡಿನಾಡಿನವರಾದರೂ ಕಾರ್ಕಳದಲ್ಲಿ ನೆಲೆಸಿದ ಪ್ರೊ.ಎಂ. ರಾಮಚಂದ್ರ (ಜನನ 1939) ಅವರು ತಮ್ಮ ಸಾಹಿತ್ಯಸಂಘಟನೆಯ ಕಾರ್ಯಗಳಿಂದ ನಾಡಿನಲ್ಲಿ ಪರಿಚಿತರು. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸದ ಅನಂತರ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ ಅಧ್ಯಯನ ಮಾಡಿ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ ಉದ್ಯೋಗವಿಶ್ರಾಂತಿ ಪಡೆದರು.

ಸೇಡಿಯಾಪು ಅವರ ಪ್ರಿಯಶಿಷ್ಯರಾದ ಇವರು ‘ಸೇಡಿಯಾಪು ಕೃಷ್ಣ ಭಟ್ಟರು’ ಎಂಬ ಕಿರುಹೊತ್ತಗೆಯನ್ನೂಸಾಹಿತ್ಯ ಅಕಾಡೆಮಿಗಾಗಿ ಅದೇ ಹೆಸರಿನ ವಿವರವಾದ ಕೃತಿಯನ್ನೂ ‘ಪತ್ರಾವಳಿ’ ಎಂಬ ಹೆಸರಿನಲ್ಲಿ ಸೇಡಿಯಾಪು ಅವರ ಪತ್ರಸಂಗ್ರಹವನ್ನೂ ಪ್ರಕಟಿಸಿದ್ದಾರೆ.

‘ಬಾಡದ ಹೂಗಳು’ ಎಂಬ ಪುಸ್ತಕದಲ್ಲಿ ಕನ್ನಡದ ವಿಶಿಷ್ಟ ಸಾಹಿತ್ಯಕೃತಿಗಳನ್ನು ಪರಿಚಯಿಸಿಕೊಟ್ಟಿದ್ದಾರೆ. ರಸಾಯನ ಎಂಬುದು ಇವರ ಸಾಹಿತ್ಯ ವಿಮರ್ಶೆಯ ಪ್ರಬಂಧ ಸಂಕಲನ. ಇದು ಪದವಿ ತರಗತಿಗೆ ಪಠ್ಯವೂ ಆಗಿತ್ತು. ‘ನೆನಪಿನ ಬುತ್ತಿ’ ಎಂಬುದು ಸಂದರ್ಭವಿಶೇಷಗಳನ್ನು ದಾಖಲಿಸುವ ಲೇಖನ ಸಂಚಯ. ಜಿ. ಪಿ. ರಾಜರತ್ನಂ ಅವರ ಕುರಿತು ಬರೆದ ಪುಸ್ತಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಅಲ್ಲದೆ ಬಾಸಿಗ, ನಂದಾದೀವಿಗೆ, ತುರಾಯಿ ಮೊದಲಾದ ಹಲವು ಲೇಖನಸಂಕಲನಗಳನ್ನು ಇವರು ಸಂಪಾದಿಸಿಕೊಟ್ಟಿದ್ದಾರೆ.

ಜಿ. ಪಿ. ರಾಜರತ್ನಂ ಅವರ ಅಧ್ಯ್ಷಕತೆಯಲ್ಲಿ ಕಾರ್ಕಳದಲ್ಲಿ ನಡೆಸಲಾದ ಜಿಲ್ಲಾ ಸಾಹಿತ್ಯ ಸಮ್ಮೇಳನವು ಕರಾವಳಿ ಪ್ರದೇಶದಲ್ಲಿ ಅನೇಕ ಸಾಹಿತ್ಯ ಸಮ್ಮೇಳನಗಳಿಗೆ ಮಾದರಿಯಾದುದೆಂದು ಈಗಲೂ ನೆನಪಿಸಲ್ಪಡುತ್ತದೆ. ಈ ಸಮ್ಮೇಳನದ ಮುಖ್ಯ ಸಂಘಟಕರು ಪ್ರೊ. ಎಂ. ರಾಮಚಂದ್ರ ಅವರೇ ಆಗಿದ್ದರು.

ಉತ್ತಮ ವಾಗ್ಮಿಗಳೂ, ಸಂಘಟಕರೂ ಆದ ಇವರು ಕಾರ್ಕಳದಲ್ಲಿ ಸಾಹಿತ್ಯಸಂಘವನ್ನು ಕಟ್ಟಿ ಅದರ ಸಂಚಾಲಕರಾಗಿದ್ದುಕೊಂಡು ಒಂದು ಉತ್ತಮ ಮಟ್ಟದ ಸಾಹಿತ್ಯಕ ವಾತಾವರಣವನ್ನು ನಿರ್ಮಿಸಿದ್ದಾರೆ. ತಾವು ಸಾಹಿತ್ಯ ಪರಿಚಾರಕರೆಂಬ ವಿನಯ ಅವರದು. ಕನ್ನಡದ ಎಲ್ಲ ಹಿರಿಯ ವಿದ್ವಾಂಸರ ನಿಕಟ ಪರಿಚಯ ಇವರಿಗಿದೆ. ಕನ್ನಡದ ಸೇವೆಗಾಗಿಯೇ ನೀಡಲ್ಪಡುವ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟರ ಹೆಸರಿನ ಪ್ರಶಸ್ತಿ ಇವರಿಗೆ ಸಂದಿದೆ.

 

‍ಲೇಖಕರು avadhi

December 20, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: