ಸಂಗ್ರಹ: ಗೋಪಾಲ ವಾಜಪೇಯಿ
ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ !
ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ !
– ಸಾಲಿ ರಾಮಚಂದ್ರರಾಯ
-0-0-0-
ಒಂದೇ ಒಂದೇ ಒಂದೇ
ಕರ್ನಾಟಕವೊಂದೇ…
ಜಗದೇಳಿಗೆಯಾಗುವುದಿದೆ
ಕರ್ನಾಟಕದಿಂದೇ…
– ಅಂಬಿಕಾತನಯದತ್ತ
-0-0-0-
ಕನ್ನಡವನುಳಿದೆಮಗೆ ಅನ್ಯಜೀವನವಿಲ್ಲ !
ಕನ್ನಡವೆ ಎನ್ನುಸಿರು, ಪೆತ್ತೆನ್ನ ತಾಯಿ !
– ಬೆನಗಲ್ ರಾಮರಾವ್
-0-0-0-
ಎನಿತು ಇನಿದು ಈ ಕನ್ನಡ ನುಡಿಯು !
ಮನವನು ತಣಿಸುವ ಮೋಹನ ಸುಧೆಯು !
– ಬೆಟಗೇರಿ ಕೃಷ್ಣಶರ್ಮ
-0-0-0-
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು…
– ಕುವೆಂಪು
-0-0-0-
ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ, ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ…
– ಡಿ.ಎಸ್. ಕರ್ಕಿ
-0-0-0-
ನಮ್ಮ ಉಸುರು, ನಮ್ಮ ಕಸುವು ಕನ್ನಡ
ನಮ್ಮ ಹೆಸರು, ನಮ್ಮ ಕಸುಬು ಕನ್ನಡ
– ಎಂ. ಗೋಪಾಲಕೃಷ್ಣ ಅಡಿಗ
-0-0-0-
ಈ ನಾಡ ಮಣ್ಣು ಇಲ್ಲಲ್ಲಿ ಕಪ್ಪು ;
ಚಂದನದ ಕಂಪು, ತಂಪು ;
ಜೇನಿಳಿವ ಹಣ್ಣು, ಮಲ್ಲಿಗೆಯ ಮುಡಿದ
ಚೆಲುವೆಯರ ನುಡಿಗಳಿಂಪು…
– ಕೆ. ಎಸ್. ನರಸಿಂಹಸ್ವಾಮಿ







0 Comments