ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ಕನ್ನಡತನ ಕನ್ನಡಿಗರು..

-ನಾ ದಿವಾಕರ

ಮತ್ತೊಂದು ರಾಜ್ಯೋತ್ಸವ ಬರುತ್ತಿದೆ. ಮತ್ತದೇ ಮೆರವಣಿಗೆ, ವಿಜೃಂಭಣೆ. ಮತ್ತದೇ ವಾದ ವಿವಾದಗಳು. ಮತ್ತದೇ ಕೂಗು. ಕನ್ನಡ ಭಾಷೆ ನಶಿಸುತ್ತಿದೆ, ಕನ್ನಡಿಗರಿಗೆ ಸ್ವಾಭಿಮಾನ ಇಲ್ಲ ಇತ್ಯಾದಿ. ಹಲವು ದಶಕಗಳಿಂದಲೂ ಈ ಕೂಗು ಕೇಳಿಸುತ್ತಲೇ ಇದೆ. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯ ಮಾಡಬೇಕೆಂಬ ಸಮಸ್ತ ಕನ್ನಡಿಗರ ಕೂಗು ದೊರೆಗಳ ಕಿವಿಗೆ ಬೀಳುತ್ತಲೇ ಇಲ್ಲ. ಈಗ ಒಂದು ರಾಷ್ಟ್ರೀಯವಾದಿ ಪಕ್ಷ ಅಧಿಕಾರದಲ್ಲಿದೆ ಆದರೆ ಉಪರಾಷ್ಟ್ರೀಯತೆಯ ಸಂವೇದನೆಗಳನ್ನು ಗ್ರಹಿಸುವ ಮನೋಭಾವವಾಗಲೀ, ಇಚ್ಚೆಯಾಗಲೀ  ಸಕರ್ಾರಕ್ಕೆ ಇದ್ದಂತಿಲ್ಲ. ಪರಿಣಾಮ ಮುನ್ನೂರಕ್ಕೂ ಹೆಚ್ಚು ಸಕರ್ಾರಿ ಶಾಲೆಗಳನ್ನು ಮುಚ್ಚುವ ನಿಧರ್ಾರ ಕೈಗೊಂಡಿದೆ.. ರಾಷ್ಟ್ರೀಕೃತ ಬ್ಯಾಂಕುಗಳು ಎಲ್ಲರನ್ನೂ ಒಳಗೊಳ್ಳುವ ಹಣಕಾಸು ಇನ್ಕ್ಲೂಷನ್ ಯೋಜನೆಯಡಿಯಲ್ಲಿ ಶೇ. 100ರಷ್ಟು ಜನರನ್ನು ಗ್ರಾಹಕರನ್ನಾಗಿ ಮಾಡಲು ಯೋಜಿಸುತ್ತಿವೆ. ಆದರೆ ಬ್ಯಾಂಕುಗಳ ಅಜರ್ಿಗಳು ಹಿಂದಿ ಮತ್ತು ಇಂಗ್ಲಿಷ್ನಲ್ಲಿರುತ್ತವೆಯೇ ಹೊರತು ಕನ್ನಡದಲ್ಲಿರುವುದು ವಿರಳ. ಮತ್ತೊಂದು ಅಚ್ಚರಿ, ಕನ್ನಡದಲ್ಲಿ ಸಹಿ ಮಾಡಿದರೆ ಆ ಫಾರಂನಲ್ಲಿರುವ ಮಾಹಿತಿಯನ್ನು ಗ್ರಾಹಕನಿಗೆ ಓದಿ ಹೇಳಿದ್ದೇನೆಂದು ಮತ್ತೊಬ್ಬರು ಪ್ರಮಾಣೀಕರಿಸಬೇಕು. ಇನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಳಕೆಯಾಗುವ ಕಂಗ್ಲೀಷ್ ಭಾಷೆಯ ಬಗ್ಗೆ ಕ್ರಮ ಕೈಗೊಳ್ಳುವುದಿರಲಿ, ಯೋಚಿಸುವವರೂ ಗತಿ ಇಲ್ಲ. ಇದು ಸ್ಥೂಲವಾಗಿ ಹೇಳಬಹುದಾದ ಕನ್ನಡ ನಾಡಿನ ಪರಿಸ್ಥಿತಿ. ಇರಲಿ,  ಇವೆಲ್ಲವೂ ಕ್ಲೀಷೆ ಎಂದೇ ಭಾವಿಸೋಣ.

ಇತ್ತೀಚಿನ ಕೆಲವು ಬೆಳವಣಿಗೆಗಳು ಮಾತ್ರ ಗಂಭೀರ ಸ್ವರೂಪದ್ದು. ಕನ್ನಡ ಸೇನೆ, ಕರುನಾಡ ಸೇನೆ, ರಕ್ಷಣಾ ವೇದಿಕೆ ಹೀಗೆ ಹತ್ತು ಹಲವಾರು ಸಂಘಟನೆಗಳು ಕನ್ನಡದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿವೆ. ಈ ಸಂಘಟನೆಗಳ ಮೂಲ ಧ್ಯೇಯ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನರ್ಾಟಕದ ನೆಲ, ಜಲ ಸಂಪತ್ತಿನ ರಕ್ಷಣೆ.  ಆದರೆ ವಾಸ್ತವದಲ್ಲಿ ಭಾಷೆಯ ಬಗ್ಗೆ ಮಾತ್ರ ಸೊಲ್ಲೆತ್ತಲಾಗುತ್ತಿರುವುದೇ ಹೊರತು, ಇತರ ಸಮಸ್ಯೆಗಳು ನೇಪಥ್ಯಕ್ಕೆ ಸರಿದಿವೆ. ಕನ್ನಡ ಪರ ಸಂಘಟನೆಗಳು ಪರೋಕ್ಷವಾಗಿ ರಾಜಕೀಯ ಪಕ್ಷಗಳ ಬಾಲಂಗೋಚಿಗಳಂತೆ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ವವಾಗಿ ಗೋಚರಿಸುತ್ತಿದೆ. ಫ್ಲೆಕ್ಸ್ಬೋಡರ್ುಗಳಲ್ಲಿ ರಾರಾಜಿಸುತ್ತಲೇ ಮುಂದಿನ ರಾಜಕೀಯ ಹೆಜ್ಜೆಗಳನ್ನು ಗುರುತಿಸಿಕೊಳ್ಳುವ ವೇದಿಕೆಯಂತೆ ಗೋಚರಿಸುತ್ತಿದೆ. ಈ ಸಂಘಟನೆಗಳ ಬದ್ಧತೆ, ಶ್ರದ್ಧೆ ಏನೇ ಇರಲಿ, ಕನ್ನಡ-ಕನ್ನಡಿಗ ಮತ್ತು ಕನ್ನಡತನವನ್ನು ಕುರಿತಂತೆ ಒಂದು ಸ್ಪಷ್ಟ ಆಯಾಮ ಇಲ್ಲವೆಂಬುದಂತೂ ಸತ್ಯ. ಈ ನಿಟ್ಟಿನಲ್ಲಿ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಂವಾದವೊಂದರಲ್ಲಿ ವ್ಯಕ್ತವಾದ ಎರಡು ಸ್ಪಷ್ಟ ಅಭಿಪ್ರಾಯಗಳು ಇಲ್ಲಿ ಮಹತ್ವ ಪಡೆಯುತ್ತವೆ. ಮೊದಲನೆಯದು ಕನ್ನಡ ಭಾಷೆ ನಶಿಸುತ್ತಿದೆ ಮತ್ತು ಕನ್ನಡಿಗರಲ್ಲಿ ಸ್ವಾಭಿಮಾನ ಕುಂದುತ್ತಿದೆ ಎಂಬ ಅಳಲು.

ಎರಡನೆಯದು ಕನ್ನಡ ನಾಡಿನ ಸಂಪತ್ತು ಅನ್ಯರ ಪಾಲಾಗುತ್ತಿದೆ ಹಾಗಾಗಿ ನಮ್ಮ ಸಂಪನ್ಮೂಲಗಳನ್ನು ಉಳಿಸಿಕೊಳ್ಳಲು ಅಸ್ಸಾಂ ಮಾದರಿಯ ಹೋರಾಟ ಅಗತ್ಯ ಎಂಬ ಆಗ್ರಹ. ಪ್ರಸ್ತುತ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಎರಡೂ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಶೀಲಿಸುವ ಅವಶ್ಯಕತೆ ಇದೆ. ಭಾಷೆಯ ಅಳಿವು ಉಳಿವುಕನರ್ಾಟಕದ ವೈಶಿಷ್ಟ್ಯವೆಂದರೆ ಕನ್ನಡ ಭಾಷೆ ಅಳಿಯುತ್ತಿದೆ, ಕನ್ನಡಿಗರಲ್ಲಿ ಸ್ವಾಭಿಮಾನವಿಲ್ಲ ಎಂಬ ಕೂಗು ಭಾಷಾವಾರು ರಾಜ್ಯಗಳ ಸ್ಥಾಪನೆಯಾದಂದಿನಿಂದಲೂ ಕೇಳಿಬರುತ್ತಲೇ ಇದೆ. ಇದು ಅರ್ಧಸತ್ಯವೆಂದೇ ನನ್ನ ಸ್ಪಷ್ಟ ಅಭಿಪ್ರಾಯ. ನಿಜ ನಗರ ಪ್ರದೇಶಗಳಲ್ಲಿ, ಮಧ್ಯಮವರ್ಗದ ಸುಶಿಕ್ಷಿತರಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ, ಆಂಗ್ಲ ವ್ಯಾಮೋಹ ಹೆಚ್ಚಾಗುತ್ತಿದೆ. ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಲ್ಲಿ ನಿಷ್ಕ್ರಿಯವಾಗಿರುವ ಸಕರ್ಾರಗಳ ಅಸಡ್ಡೆಯ ರಾಜಕಾರಣ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಲಾಬಿಕೋರತನದಿಂದ ಗ್ರಾಮೀಣ ಮಕ್ಕಳೂ ದೂರದಲ್ಲಿನ ಆಂಗ್ಲಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದಾರೆ. ನಗರ ಪ್ರದೇಶದ ಸಾರ್ವಜನಿಕ ವಲಯಗಳಲ್ಲಿ ಆಂಗ್ಲ ಭಾಷೆಯ ಬಳಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳು ಕನ್ನಡ ಬಳಸುವುದೇ ಅಪಮಾನಕರ ಎನ್ನುವ ಪರಿಸ್ಥಿತಿ ನಿಮರ್ಾಣವಾಗಿದೆ. ಇವೆಲ್ಲವೂ ಕಣ್ಣಿಗೆ ರಾಚುವ ಅಲ್ಲಗಳೆಯಲಾಗದ ಸತ್ಯ. ಆದರೆ ಕನರ್ಾಟಕ ಎಂದರೆ ನಗರ ಪ್ರದೇಶಗಳು ಮಾತ್ರವಲ್ಲ. ಶೇ. 70ರಷ್ಟು ಗ್ರಾಮೀಣ ಪ್ರದೇಶವನ್ನು ಹೊಂದಿರುವ ಕನರ್ಾಟಕದ ಸ್ಥಿತ್ಯಂತರಗಳನ್ನು ನಗರಕೇಂದ್ರಿತ ದೃಷ್ಟಿಕೋನದಿಂದಲೇ ನೋಡಿದರೆ ಹೀಗಾಗುವುದು ಸಹಜ. ಕನರ್ಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕನ್ನಡದ ಭಾಷಾ ಸೊಗಡು ಜೀವಂತವಾಗಿದೆ. ಉತ್ತರ ಕನರ್ಾಟಕದ ಜನ ದಕ್ಷಿಣದವರಷ್ಟು ಆಂಗ್ಲ ವ್ಯಾಮೋಹಿಗಳಲ್ಲ ಎಂಬುದೂ ಸ್ಪಷ್ಟ. ನೆರೆ ರಾಜ್ಯಗಳ ದ್ರಾವಿಡ ಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಕನ್ನಡ ಭಾಷೆಯ ಬಳಕೆಯ ವಿಚಾರದಲ್ಲಿ ಅತಿಯಾಗಿ ಗೋಳಾಡುವ ಪರಿಸ್ಥಿತಿ ಉದ್ಭವಿಸಿಲ್ಲವೆಂದೇ ಹೇಳಬಹುದು.  ಆದರೆ ವ್ಯಾಪಕವಾಗಿ, ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ನಗರ ಸಂಸ್ಕೃತಿ ಮತ್ತು ಜಾಗತೀಕರಣ ಸೃಷ್ಟಿಸಿರುವ ಗ್ರಾಮೀಣ-ಕೃಷಿ ಬಿಕ್ಕಟ್ಟಿನ ಪರಿಣಾಮವಾಗಿ ಹೆಚ್ಚುತ್ತಿರುವ ವಲಸೆ ಸಂಸ್ಕೃತಿ ಭಾಷೆಯ ಮೇಲೂ ಪ್ರಭಾವ ಬೀರಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಾಗಿ ಬೆಂಗಳೂರು ಮುಂತಾದ ನಗರಗಳಲ್ಲಿ ಕನ್ನಡದ ಬಳಕೆ ಮತ್ತು ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಿದೆ. ಇದನ್ನು ಭಾಷಾ ಸಮಸ್ಯೆ ಎಂದು ಹಲುಬುವುದಕ್ಕಿಂತಲೂ ಸಮಾಜೋ-ಆಥರ್ಿಕ ಸಮಸ್ಯೆ ಎಂದು ಪರಿಗಣಿಸಿದಲ್ಲಿ ಪರಿಹಾರ ಮಾರ್ಗಗಳು ಸುಲಭ.

ಕನ್ನಡ ಭéಾಷೆ ತನ್ನದೇ ಆದ ಹೊಸ ಮಾರ್ಗಗಳಲ್ಲಿ ವೃದ್ಧಿಸುತ್ತಿದೆ. ಕನ್ನಡದಲ್ಲಿ ಹೊಸ ಸಾಹಿತ್ಯ ಮೂಡಿಬರುತ್ತಿದೆ. ಲೇಖಕರ ಬಳಗ ಹೆಚ್ಚಾಗುತ್ತಿದೆ. ಬ್ಲಾಗ್ ಸಂಸ್ಕೃತಿಯಿಂದ ಹೆಚ್ಚಿನ ಜನ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಪ್ರಕಟಿತ ಸಾಹಿತ್ಯ, ಸಾಹಿತ್ಯೇತರ ಕೃತಿಗಳ ಸಂಖ್ಯೆ, ಗುಣಮಟ್ಟದ ಪ್ರಶ್ನೆಯನ್ನು ಬದಿಗಿಟ್ಟು ನೋಡಿದಾಗ, ಹೆಚ್ಚಾಗುತ್ತಿದೆ. ಪತ್ರಿಕೆಗಳನ್ನು ಓದುವವರ ಸಂಖ್ಯೆ ಕ್ಷೀಣಿಸುತ್ತಿದ್ದರೂ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ರಕ್ಷಣಾ ವೇದಿಕೆ ಮತ್ತು ಸೇನೆಗಳ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಲೇ ಕನ್ನಡ ಭಾಷೆ ನಶಿಸುತ್ತಿದೆ ಎಂಬ ಅಳಲು ಅನಗತ್ಯ ಎಂಬ ಮಾತನ್ನು ಇಲ್ಲಿ ಹೇಳಲಿಚ್ಚಿಸುತ್ತೇನೆ. ಸಮಾಜೋ ಆಥರ್ಿಕ ಸ್ಥಿತ್ಯಂತರಗಳುಇನ್ನು ಕನರ್ಾಟಕದಲ್ಲಿ ಅಸ್ಸಾಂ ಮಾದರಿಯ ಹೋರಾಟ ಅಗತ್ಯವಿದೆ ಎಂಬ ವಾದ ಸದ್ಯದ ಪರಿಸ್ಥಿತಿಯಲ್ಲಿ ಸ್ವೀಕಾರಾರ್ಹವಲ್ಲ. ಕನರ್ಾಟಕದ ಮಟ್ಟಿಗೆ ಅಥವಾ ಕನ್ನಡಿಗರ ಮಟ್ಟಿಗೆ ಹೇಳುವುದಾದರೆ ಕನರ್ಾಟಕದ ಔದ್ಯಮಿಕ ಕ್ಷೇತ್ರ ತನ್ನದೇ ಆದ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿಲ್ಲ.  ನೆರೆ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡಿಗೆ ಹೋಲಿಸಿದಲ್ಲಿ ಕನರ್ಾಟಕದ ಮಾರುಕಟ್ಟೆ ತನ್ನದೇ ಆದ ಚೌಕಟ್ಟನ್ನು ನಿಮರ್ಿಸಿಕೊಳ್ಳದಿರುವುದು ಸ್ಪಷ್ಟವಾಗಿದೆ. ಉದಾಹರಣೆಗೆ ತಮಿಳುನಾಡಿನ ತಿರುಪ್ಪೂರು-ತಿರುಪತ್ತೂರಿನ ಸಿದ್ಧ ಉಡುಪು ಉದ್ಯಮ, ಕೊಯಂಬತ್ತೂರಿನ ವಿದ್ಯುತ್ ಉಪಕರಣಗಳು, ಶಿವಕಾಶಿಯ ಪಟಾಕಿ, ಕಂಚಿಯ ರೇಷಿಮೆ ಉದ್ಯಮ ಹೀಗೆ ತನ್ನದೇ ಆದ ಮಾರುಕಟ್ಟೆಯನ್ನು ರೂಪಿಸಿಕೊಳ್ಳುವಲ್ಲಿ ಕನರ್ಾಟಕದ ಯಾವುದೇ ಉದ್ಯಮವೂ ಮುಂದುವರೆದಿಲ್ಲ. ಮೊಳಕಾಲ್ಮೂರು, ದೊಡ್ಡಬಳ್ಳಾಪುರ, ಇಳಕಲ್ನ ರೇಷಿಮೆ ಸೀರೆಗಳ ಉದ್ದಿಮೆ ಕೇವಲ ರಾಜ್ಯ ಮಟ್ಟಕ್ಕೆ ಸೀಮಿತವಾಗಿದೆ. ಇದನ್ನು ರಾಷ್ಟ್ರಮಟ್ಟದ ಮಾರುಕಟ್ಟೆಯಾಗಿ ಪರಿವತರ್ಿಸುವ ಪ್ರಯತ್ನ ಸಕರ್ಾರದಿಂದಲೂ ನಡೆದಿಲ್ಲ, ಉದ್ಯಮಿಗಳಿಂದಲೂ ನಡೆದಿಲ್ಲ. ಇದು ಔದ್ಯಮಿಕ ಕ್ಷೇತ್ರದ ವೈಫಲ್ಯ ಮತ್ತು ಆಳ್ವಿಕರ ನಿಷ್ಕ್ರಿಯತೆಯ ದ್ಯೋತಕವಾಗಿಯೇ ಕಾಣುತ್ತದೆ.

ಇಲ್ಲಿ ಹೇಳಲೇಬೇಕಾದ ಸಂಗತಿ ಎಂದರೆ, ಚಿನ್ನದ ಗಣಿಯ ಪಾಡು. ಕೋಲಾರ ಚಿನ್ನದ ಗಣಿಯನ್ನು ಖಾಯಂ ಆಗಿ ಮುಚ್ಚಿಹಾಕಿದಾಗ ಕನ್ನಡ ಪರ ಸಂಘಟನೆಗಳಿಗೆ ಅದು ಪ್ರಮುಖ ಹೋರಾಟದ ವಿಷಯವಾಗಬೇಕಿತ್ತು. ಏಕೆಂದರೆ ಕನ್ನಡನಾಡು ಚಿನ್ನದ ಬೀಡು ಎಂಬ ಹೆಸರು ಬಂದಿದ್ದೇ ಗಣಿಗಳಿಂದ ಮತ್ತು ಸಾವಿರಾರು ಶ್ರಮಜೀವಿಗಳ ಪರಿಶ್ರಮದಿಂದ. ಆದರೆ ಗಣಿಯನ್ನು ಮುಚ್ಚಿಹಾಕಿದಾಗ ಅದು ಯಾವುದೇ ಸಂಚಲನ ಮೂಡಿಸಲಿಲ್ಲ. ಅಲ್ಲಿನ ಶ್ರಮಜೀವಿಗಳು ಮೂಲತಃ ಅನ್ಯಭಾಷಿಕರಾದರೂ ಕನರ್ಾಟಕದ ಅಭ್ಯುದಯಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಕನ್ನಡಿಗರೇ ಆಗಿದ್ದಾರೆ. ಈ ಎರಡು ಲಕ್ಷ ಜನ ಬೀದಿಪಾಲಾದ ಸಂದರ್ಭದಲ್ಲಿ ಅದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆ ಆಗಲೇ ಇಲ್ಲ. ಕಾಮರ್ಿಕ ಸಂಘಟನೆಗಳನ್ನು ಹೊರತುಪಡಿಸಿ ಮತ್ತಾವ ಸಂಘಟನೆಯೂ ಚಿನ್ನದ ಗಣಿಯ ಉಳಿವಿಗಾಗಿ ಹೋರಾಟ ರೂಪಿಸಿಲ್ಲ. ಇಂದಿಗೂ ಸಹ. ಮತ್ತೊಂದೆಡೆ  ಶೇ. 75ಕ್ಕೂ ಹೆಚ್ಚು ದಲಿತರನ್ನು ಹೊಂದಿರುವ ಈ ಪ್ರದೇಶ ನಿರ್ಗತಿಕ ಸ್ಥಿತಿ ತಲುಪಿದಾಗಲೂ ದಲಿತ ಸಂಘಟನೆಗಳೂ ಇಲ್ಲಿ ಸಕ್ರಿಯವಾಗಿ ಪ್ರತಿಭಟಿಸಲಿಲ್ಲ. ಎಲ್ಲೋ ಒಂದೆಡೆ ಭಾವನಾತ್ಮಕ ಭಾಷಾಭಿಮಾನವೇ ಇಲ್ಲಿ ಮೇಲುಗೈ ಸಾಧಿಸಿರುವಂತೆ ಕಾಣುತ್ತದೆ.  ಪರಿಣಾಮ ಕನ್ನಡಿಗರ ಮಹತ್ವದ ಔದ್ಯಮಿಕ ಕ್ಷೇತ್ರವೊಂದರ ಅವಸಾನ.  ಇದು ಅಭಿಮಾನದ ಪ್ರಶ್ನೆಗಿಂತಲೂ ಅಳಿವು ಉಳಿವಿನ ಪ್ರಶ್ನೆಯಾಗಿ ನಿಲ್ಲುತ್ತದೆ. ಆಂಧ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಚಲನಚಿತ್ರ ರಂಗವೇ ಒಂದು ಉದ್ಯಮವಾಗಿದೆ. ಆದರೆ ಕನರ್ಾಟಕದ ಸಿನಿಮಾ ಲೋಕದ ದಿಗ್ಗಜರು ಒಂದು ಅತ್ಯಾಧುನಿಕ ಸ್ಟುಡಿಯೋ ನಿಮರ್ಿಸಲೂ ವಿಫಲರಾದದ್ದು ವಿಪಯರ್ಾಸ.  ರಜತ ಪರದೆಯ ಮೇಲೆ ಆರುಕೋಟಿ ಕನ್ನಡಿಗರ ಕಣ್ಮಣಿಗಳಾಗಿ ಮೆರೆದ ಹೀರೋಗಳು ಸಿನಿಮಾವನ್ನು ಔದ್ಯಮಿಕ ದೃಷ್ಟಿಯಿಂದ ನೋಡಲೇ ಇಲ್ಲ. ಸ್ವಯಂ ಉದ್ಯಮಗಳಾಗಿ ಬೆಳೆದದ್ದಷ್ಟೇ ಭಾಗ್ಯ.ಈ ಹಿನ್ನೆಲೆಯಲ್ಲಿ ನೋಡಿದಾಗ ಕನರ್ಾಟಕದ ಆಳ್ವಿಕರು ಮತ್ತು ಉದ್ಯಮಿಗಳು ಕನ್ನಡಿಗರ ಮಾರುಕಟ್ಟೆಯೊಂದನ್ನು ಸೃಷ್ಟಿಸುವಲ್ಲಿ ವಿಫಲರಾಗಿರುವುದು ಸ್ಪಷ್ಟ. ಹಾಗಾಗಿ ಆಧುನಿಕ ಐಟಿ-ಬಿಟಿ ಕ್ಷೇತ್ರ ಮತ್ತು ಕಾಪರ್ೋರೇಟ್ ಸಂಸ್ಕೃತಿಗೆ ಬಲಿಯಾಗಿರುವ ಗಣಿ ಉದ್ಯಮ ಸೃಷ್ಟಿಸುವ ಬಂಡವಾಳ ಮತ್ತು ಲಾಭ ಎರಡೂ ಸಹ ಕನ್ನಡಿಗರ ಪಾಲಿಗೆ ಮರೀಚಿಕೆಯಾಗುತ್ತಿದೆ

. ಈ ಸಮಸ್ಯೆಗೆ ಪರಿಹಾರ ಅಸ್ಸಾಂ ಮಾದರಿಯ ಹೋರಾಟವಲ್ಲ. ಕೊಡಗು ಪ್ರದೇಶದಲ್ಲಿ ಆಳ್ವಿಕರ ನಿರ್ಲಕ್ಷ್ಯದ ಪರಿಣಾಮವಾಗಿ ಈಗಾಗಲೇ ಅಸ್ಸಾಂ ಮಾದರಿಯ ಹೋರಾಟ ರೂಪುಗೊಳ್ಳುತ್ತಿದ್ದು ಅದನ್ನು ಪರಿಹರಿಸಲು ಕನರ್ಾಟಕದ ಜನತೆ ಪಯರ್ಾಯ ಮಾರ್ಗಗಳನ್ನು ಕುರಿತು ಆಲೋಚಿಸಬೇಕಾಗಿದೆ. ಉಪರಾಷ್ಟ್ರೀಯತೆಯ ಸಮಸ್ಯೆಗಳನ್ನು ಕೇವಲ ಭಾಷೆ-ಸಂಸ್ಕೃತಿಯ ಭಾವನಾತ್ಮಕ ನೆಲೆಗಟ್ಟಿನಲ್ಲೇ ವಿಶ್ಲೇಷಿಸಲಾಗುವುದಿಲ್ಲ. ಆಧುನಿಕ ಜಗತ್ತಿನಲ್ಲಿ ಒಂದು ಭಾಷೆ, ಸಂಸ್ಕೃತಿ ಉಳಿಯಬೇಕಾದಲ್ಲಿ ಜನತೆಯ ಸಮಾಜೋ ಆಥರ್ಿಕ ಸ್ಥಿತ್ಯಂತರಗಳೂ ಅಷ್ಟೇ ಮಹತ್ವ ಗಳಿಸುತ್ತವೆ. ಈ ನಿಟ್ಟಿನಲ್ಲಿ ಗಂಭೀರವಾದ ಆಲೋಚನೆ ಮಾಡುವುದು ಪ್ರಸ್ತುತ ರಾಜ್ಯೋತ್ಸವದ ಸಂದರ್ಭದಲ್ಲಿ ಅತ್ಯವಶ್ಯಕ.

 

‍ಲೇಖಕರು avadhi

1 November, 2011

4 Comments

  1. ಎಂ.ಆರ್. ದತ್ತಾತ್ರಿ

    ಕೋಲಾರ ಚಿನ್ನದ ಗಣಿಗೆ ಆದದ್ದು ಹೀಗೆ – ಗಣಿಯಿಂದ ನೀವು ಒಂದು ಟನ್ ತೂಕದ ಮಣ್ಣು/ಕಲ್ಲುಗಳನ್ನು ಹೊರಗೆ ತಂದಾಗ ಅದರಿಂದ ಬರುವ ಲೋಹದ ಪ್ರಮಾಣವು ಲಾಭದಾಯಕ ಪ್ರಮಾಣದಲ್ಲಿಲ್ಲದಿದ್ದರೆ ಆ ಗಣಿಯನ್ನು ನಡೆಸುವುದು ಅಸಾಧ್ಯವಾಗುತ್ತದೆ. ಪ್ರತಿಯೊಂದು ಗಣಿಗೂ ಮನುಷ್ಯರಿಗಿರುವಂತೆ ಯೌವ್ವನ ಮತ್ತು ಮುಪ್ಪಿನ ದಿನಗಳು ಇರುತ್ತವೆ. ಕಳೆದ ಮೂವತ್ತು ವರ್ಷಗಳಿಂದ ಕೋಲಾರದ ಗಣಿಯಲ್ಲಿ ಸಿಗುವ ಚಿನ್ನದ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿತ್ತು. ಮುಚ್ಚುವ ಮುನ್ನಿನ ಇಪ್ಪತ್ತೈದು ವರ್ಷಗಳಲ್ಲಿ ಗಣಿ ನಷ್ಟದಲ್ಲಿ ಓಡುತ್ತಿತ್ತು. ಮತ್ತೆ ನೋಡಿ, ಬೇರೆ ಕೈಗಾರಿಕೆಗಳ ವಿಷಯದಲ್ಲಿ ಸ್ವಲ್ಪ ಬುದ್ಧಿವಂತಿಕೆಯಿಂದ ದಿಕ್ಕನ್ನು ಬದಲಿಸಬಹುದು, ಆದರೆ ಗಣಿಗಾರಿಕೆಯಲ್ಲಲ್ಲ. ಎಚ್‌ಎಂಟಿ ಅಥವ ಬಿ‍ಇಎಂಲ್‍ ನೋಡಿ. ಕಷ್ಟದ ಸಮಯದಲ್ಲಿ ಉತ್ಪಾದನೆಯನ್ನೇ ಬದಲಿಸಿಕೊಂಡು ಉಳಿದುಕೊಂಡವು. ಆದರೆ ಗಣಿಯ ವಿಚಾರದಲ್ಲಿ ಅದ್ಯಾವುದೂ ನಡೆಯುವುದಿಲ್ಲ. ಗಣಿ ಬರಿದಾಯಿತು ಎಂದರೆ ಬರಿದಾಯಿತು. ಮತ್ತೂ ನಡೆಸುವುದು ಹೇಗೆ? ಗಣಿಗಳು ಬರಿದಾಗಿ ಸಾವನ್ನಪ್ಪುವುದು ಹೊಸದಲ್ಲ.

    ಇದು ನನಗೆ ಭಾಷಾ ಅಲ್ಪಸಂಖ್ಯಾತರ ಅಥವ ದಲಿತರ ಸಮಸ್ಯೆ ಮಾತ್ರವಾಗಿಯೇ ತೋರುವುದಿಲ್ಲ. ಹಾಗೆ ನೋಡಿದರೆ ಕೋಲಾರ ಚಿನ್ನದ ಗಣಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ ಪಬ್ಲಿಕ್ ಸೆಕ್ಟರ್‌ಗೆ ಸೇರಿ ಕೇಂದ್ರ ಸರಕಾರದ ಆಡಳಿತಕ್ಕೆ ಒಳಪಡುತ್ತದೆ. ಕೆಜಿಎಫ್‌ನ ಭಾಷಾ ಅಲ್ಪಸಂಖ್ಯಾತರ ಭಾಷಿಗರು ಕೇಂದ್ರದಲ್ಲಿ ಕನ್ನಡಿಗರಿಗಿಂತಲೂ ರಾಜಕೀಯ ಶಕ್ತಿ ಮತ್ತು ಪ್ರಭಾವಳಿಯನ್ನು ಹೊಂದಿರುವವರು. ಚಿನ್ನದ ಗಣಿಯನ್ನು ಮುಚ್ಚುವಾಗ ಅಲ್ಲಿನ ನೌಕರರಿಗೆ ಉದ್ಯೋಗವನ್ನು ಒದಗಿಸಲೆಂದೇ ಕೆಜಿಎಫ್‌ನಲ್ಲಿ ಬಿಇ‍ಎಂ‍ಎಲ್‌ನ ಶಾಖೆ ಪ್ರಾರಂಭವಾಯಿತೆಂದು ಕೇಳಿದ್ದೇನೆ. ಒಂದು ಕೈಗಾರಿಕೆಯು ಸ್ಥಗಿತವಾದರೆ ಅದನ್ನು ನಂಬಿಕೊಂಡ ಜನರನ್ನು ಬೇರೆ ಉದ್ಯೋಗಗಳಿಗೆ ಸಿದ್ಧಮಾಡುವುದು ಹೇಗೆ, ಯಾವ ರೀತಿಯ ತರಬೇತಿ ಬೇಕು, ಒಂದೇ ತರಹದ ಉದ್ಯೋಗಕ್ಕೆ ಹೊಂದಿಕೊಂಡ ಪ್ರದೇಶಗಳ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಮೇಲೆ ಇಂತಹ ಮುಚ್ಚುವಿಕೆ ಯಾವ ಪರಿಣಾಮವನ್ನು ಬೀರುತ್ತವೆ ಎನ್ನುವ ಪ್ರಶ್ನೆಗಳಿಗೆ ಉತ್ತರಗಳನ್ನು ಒಂದು ಔದ್ಯೋಗಿಕ ರಾಷ್ಟ್ರವಾಗಿ ಭಾರತವು ಕಂಡುಕೊಳ್ಳಬೇಕು. ಇವತ್ತಿನ ಬಳ್ಳಾರಿಯೂ ಈ ಎಲ್ಲಾ ಪ್ರಶ್ನೆಗಳನ್ನು ಎದುರಿಸುತ್ತಿದೆ.

    • Laxminarasimha

      ಒಳ್ಳೆ ಪ್ರತಿಕ್ರಿಯೆ. ನಾವು ಭಾವನಾತ್ಮಕವಾಗಿ ಯೋಚಿಸುತ್ತಿರುವಾಗಲೂ ಕಠೋರ ಸತ್ಯಗಳ ಬಗ್ಗೆ ಕೂಡಾ ಚಿಂತಿಸಲು ಪ್ರೇರೇಪಿಸುವ ಬರಹ, ದತ್ತಾತ್ರಿಯವರದು.

    • ದಿವಾಕರ

      ದತ್ತಾತ್ರಿಯವರೇ,
      ನೀವು ಹೇಳಿರುವುದು ಸರಿ. ಚಿನ್ನದ ಗಣಿಯನ್ನೇ ಪುನರಾರಂಭಿಸುವುದು ಸಾಧ್ಯವಿಲ್ಲ. ಆದರೆ ಅಲ್ಲಿನ ಜನತೆಗೆ ಪರ್ಯಾಯ ಉದ್ಯೋಗ ಒದಗಿಸುವ ಬಗ್ಗೆಯಾದರೂ ಯೋಚಿಸಬಹುದಿತ್ತು. ನೀವು ಹೇಳಿರುವಂತೆ ಬಿಇಎಂಎಲ್ ಸ್ಥಾಪಿಸಿದ್ದು ಮುಚ್ಚಿಹೋಗಬಹುದಾದ ಚಿನ್ನದ ಗಣಿಯ ಕಾರ್ಮಿಕರಿಗೆ ಉದ್ಯೊಗ ಒದಗಿಸುವ ದೃಷ್ಟಿಯಿಂದಲೇ ಆದರೂ ಬಿಇಎಂಎಲ್ ಇತರರ ಪಾಲಾಗಿರುವುದು ಅಷ್ಟೇ ಸತ್ಯ. ನಾನು ಅದೇ ಊರಿನಲ್ಲಿ ಹುಟ್ಟಿ ಬೆಳೆದವನಾದ್ದರಿಂದ ಅಲ್ಲಿನ ಪರಿಸ್ಥಿತಿ ಬಲ್ಲೆ. ನೀವು ಹೇಳಿದಂತಹ ಪ್ರಭಾವಶಾಲಿ ಭಾಷಿಕ ಅಲ್ಪಸಂಖ್ಯಾತರು ಚಿನ್ನದ ಗಣಿ ಪ್ರದೇಶದಲ್ಲಿ ಇದ್ದಿದ್ದರೆ ಅವರ ಬದುಕು ಹಸನಾಗುತ್ತಿತ್ತು. ಅಲ್ಲಿನ ನಾಯಕರನ್ನು ಬದಿಗಿಟ್ಟು ಕಾಲೋನಿಗಳಲ್ಲಿ ಜೀವಿಸುವ ಬಡ ಕಾರ್ಮಿಕರ ಪರಿಸ್ಥಿತಿಯನ್ನು ನೋಡಿದರೆ ವಾಸ್ತವದ ಅರಿವಾಗುತ್ತದೆ. ಚಿನ್ನದ ಗಣಿಯ ಕಾರ್ಮಿಕರ ಮತ್ತು ಕುಟುಂಬವರ್ಗದವರ ಬವಣೆಯನ್ನು ವಿವರಿಸಲು ಪ್ರತ್ಯೇಕ ಲೇಖನವೇ ಬೇಕು. ಆದರೂ ಒಂದಂತೂ ಸತ್ಯ.ಒಂದು ಉದ್ಯಮವಾಗಿ ಚಿನ್ನದ ಗಣಿಯನ್ನು ಮತ್ತು ಅಲ್ಲಿನ ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕದ ಜನತೆ ವಿಫಲರಾಗಿದ್ದಾರೆ. ಆಳ್ವಿಕರೂ ವಿಫಲರಾಗಿದ್ದಾರೆ. ಇದು ಅಸ್ಮಿತೆಗಳ ಪ್ರಶ್ನೆಗಿಂತಲೂ ಜೀವನ್ಮರಣದ ಪ್ರಶ್ನೆ. ಕರ್ನಾಟಕದಲ್ಲಿ ಯಾವುದೇ ಸ್ಥಳೀಯ ಪ್ರಾದೇಶಿಕ ಉದ್ಯಮವೂ ಒಂದು ಜಾಗತಿಕ ಮಾರುಕಟ್ಟೆ ಸೃಷ್ಟಿಸಿಕೊಂಡಿಲ್ಲ ಎನ್ನುವುದಂತೂ ಸತ್ಯ.
      ನಾ ದಿವಾಕರ

  2. Anil

    A thought provoking article on the occassion of Kannada Raajyotsava. There are few thought processes that the articles catalyses

    1. Does kannada raajyotsava (in broader sense ‘the welfare of Karnataka’) belong to only those who speak Kannada ?
    – Kannada is not just a language , its a way of life. People speaking different languages ( Konkani , Maraathi, Tulu, Kodava, Lambaani,Tamil, Telugu …..any language on earth or in universe!! for that matter) who live in karnataka are all ‘ours’. So, there should be a strive towards keeping this ‘essence’ intact. Kannada Raajyotsava should become a platform to introduce ‘kannada essence’ in a humble way to those who are new here, so that ‘our’ family becomes much larger.

    2. How do we need Kannada (in broader sense – ‘the age old and earthly traditions of this land’) to be ‘saved’? (‘saved’ – not exactly a proper word to use )
    – It would be wrong to say that kannada should be ‘saved’. Remember, Kannada ( for that matter any language) is self-sowing. The concern can be better framed as ‘how to do we preserve essence of Kannada in us’ ?
    – There is a sub-concern in the article that cought my attention – some light thrown on the new breed of bloggers and writers who have taken up writing in kannada. Its a good thing to know, but I am of a opinion that there should be some quality addition to the writing they do.
    – The general notion is that ‘politics is dirty’, but a political stewardship is need of the hour for Karnataka , not for ‘saving’ Kannada but for saving the interest of the people who live here (so that inturn they can preserve essence of kannada in them)

    On the occassion of Kannada Raajyotsava let us sow the seed to a conscious thought : KANNADA need not be a turbulent river but an undercurrent in our hearts.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading