ಹೇಮಾ ಸದಾನಂದ ಅಮೀನ್
ಆಶ್ರಯ ಕೊಡುವ ಸೂರೆ ನೆರಳಗಳೂ ಒಪ್ಪದಿದ್ದಾಗ, ಹಸಿವ ನೀಗಿಸುವ ಅನ್ನವೇ ಮುನಿಸಿ ಕೊಂಡಾಗ, ಪ್ರೀತಿಸುವ ಸಂಬಂಧ ಮುಳ್ಳು ಕಂಟಿಯಾದಾಗ…? ಅಂತಹ ಬಾಳು ಖಂಡಿತ ಬಾಳಾಗದು. ಅದು ಬರೇ ಗೋಳು. ಜನ್ಮಕ್ಕೆ ಬಂದ ಪ್ರತಿಯೊಂದು ಜೀವಿಗೂ ನೆಮ್ಮದಿಯ ಬದುಕು ಬಾಳುವ ಆಸೆ ಇದ್ದೇ ಇದೆ. ಅದರಲ್ಲಿ ದೇವರ ದಯೇವೋ, ಹಿಂದಿನ ಜನ್ಮದ ಕರ್ಮವೋ? ಪ್ರತಿಯೊಬ್ಬರ ಬಾಳಲ್ಲಿ ಸುಖ-ದುಃಖ ಒಂದು ನಾಣ್ಯದ ಎರಡು ಮುಖದಂತೆ. ಇಲ್ಲಿ ಬದುಕಿನ ಬಗ್ಗೆ ವ್ಯಾಖ್ಯಾನ ಬರೆಯುವುದು ನನ್ನ ಉದ್ದೇಶವಲ್ಲ. ಆದರೆ ತಮ್ಮವರೇ ಬದುಕಿಗೆ ಕಂಟಕವಾದರೇ ಮತ್ತೆ ಆ ಸಂಬಂಧದ ಅರ್ಥವೆಲ್ಲಿದೇ? ಈ ಬಾರಿ ನನ್ನ ಪ್ರವಾಸ ತೀರ್ಥ ಕ್ಷೇತ್ರ ಅಲ್ಲ. ರಮಣೀಯ ತಾಣಕ್ಕೂ ಅಲ್ಲ. ಈ ಎರಡೂ ಸ್ಥಳದ ಅಸ್ತಿತ್ವವಿರುವ ಒಂದು ಹೊಸ ಸ್ಥಳಕ್ಕೆ ಅಥವಾ ಬದುಕನ್ನು ಕಟ್ಟುವಂತಹ ಪವಿತ್ರ ಸ್ಥಳವೆಂದೂ ಹೇಳಬಹುದು.

ಹೌದು ಶಿರಡಿ ಕ್ಷೇತ್ರಕ್ಕೆ ಹೋಗುವಾಗಲೇ 60 ಕಿ.ಮೀ. ಮೊದಲೇ ಹೈವೇಯಲ್ಲಿ ಸಿಗುವಂತಹ ಸ್ಥಳ. ರಸ್ತೆಯ ಬದಿಯಲ್ಲಿ ವಿಶಾಲವಾದ ಹುಣಸೇ ಮರದ ತಂಪು ನೆರಳು. ಗೇಟಿನ ಒಳಗೆ ಮೂರು ಅಂತಸ್ತಿನ ಕಟ್ಟಡ. ನಾವು ಪರಿವಾರ ಸಮೇತ ಹೋಗಿದ್ದೆವು. ಆ ಪವಿತ್ರ ಸ್ಥಳವೇ “ಮಾವುಲಿ ಸೇವಾ ಪ್ರತಿಷ್ಠಾನ”. ಮೊದಲು ಕಚೇರಿಯಲ್ಲಿ ಹೋಗಿ ಕುಳಿತೆವು. ಒಂದು ಹತ್ತು ನಿಮಿಷದಲ್ಲಿ ಬಂದ ದಂಪತಿಯನ್ನು ನನ್ನಣ್ಣ, ಇವರು ಡಾಕ್ಟರ್ ರಾಜೇಂದ್ರ ದಾಮಣೆ ಹಾಗೂ ಸುಚೇತಾ ದಾಮಣೆ ಎಂದು ನನಗೆ ಪರಿಚಯಿಸಿದರು. ಯಾವುದೇ ರೀತಿಯ ಅಡಂಬರವಿರದ ಸಾಮಾನ್ಯ ಉಡುಪು, ಸರಳ ವ್ಯವಹಾರ ಅವರನ್ನು ನೋಡಿ ನನಗೆ ಸೋಜಿಗವಾಯಿತು. ಅವರ ಜೊತೆಗಿದ್ದ ನಾಲ್ಕು ವರ್ಷದ ಮಗುವೊಂದನ್ನು ನೋಡಿ ನಾವು ಕೊಂಡೊಯ್ದ ತಿಂಡಿಯನ್ನು ಅವನಿಗೆ ಕೊಟ್ಟು ಹೆಸರು ಕೇಳಿದಾಗ ಸಾಯಿ ಎಂದೂ, “ಸಾಯಿ” ಇವರ ಮಗನಲ್ಲವೆಂದೂ ತಿಳಿಯಿತು. ಅವನ ತಾಯಿಗೆ ತನ್ನ ಪ್ರಜ್ಞೆತೇ ತನಗಿಲ್ಲದ ಸ್ಥಿತಿಯಲ್ಲಿದ್ದಾಳೆ. ಅವಳನ್ನು ನೋಡಲೆಂದು ಆ ಮೂರು ಅಂತಸ್ತಿನ ಕಟ್ಟಡದ ಒಳಹೊಕ್ಕೆವು. ಒಳಬದಿಗೆ ಒಂದು ಕಪಾಟು. ಅದರೊಳಗೆ ಪ್ರಶಸ್ತಿ ಫಲಕಗಳು ರಾರಾಜಿಸುತ್ತಿದ್ದವು. ಎಡಬದಿಗಿದ್ದ ಅಡುಗೆ ಕೋಣೆ. ಅಲ್ಲಿಯ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ ನಿರ್ಮಲಾಳನ್ನು ಡಾಕ್ಟರ್ ನಮಗೆ ಪರಿಚಯಸಿದರು.
ಆಕೆ ನಮ್ಮನ್ನು ಕಿರು ನಗೆಯಿಂದ ಸ್ವಾಗತಿಸಿದಳು. ಮುಂದೆ ಎಡಭಾಗದಲ್ಲಿ ಮೊದಲ ಕೋಣೆ ಸುರಕ್ಷಿತವಾಗಿ ಸರಳಿನ ಬಾಗಿಲು. ಆಬಾಗಿಲಿ ನಾಚೆಷ್ಟು ನೋವುಗಳು ತಮ್ಮ ಕಥೆಯನ್ನು ಹೇಳುತ್ತಿದ್ದವು. ನೋವಿನ ಕಥೆಯಲ್ಲಿ: ಅಸ್ಥಿರ ಮನದ ತುಮುಳಗಳನ್ನು ಹೊತ್ತುಕೊಂಡು ಅಲೆದಾಡುವ ಅಸಂಖ್ಯ ಜೀವಿ. ಅವರ ಅಲೆದಾಟದ ಬದುಕನ್ನು ಬದುಕುವ ರೀತಿ ನಮ್ಮ ಅಲೋಚನೆಯ ಪರಿಧಿಗೂ ಮೀರಿದ್ದು. “ತಾವು ಯಾರಿಗೂಬೇಡ” ಎಂಬ ಅರಿವು ಈ ಜೀವಕ್ಕೆ ಇಲ್ಲ. ತನ್ನ ತನದ ಗುರು ತನ್ನೇ ಅಳಿಸಿ ಹಾಕಿರುವ ನಮ್ಮವರು. ಇನ್ನು ನಾವು ಯಾರು? ನಮಗೆಲ್ಲಿ ಹೋಗಲಿದೆ? ಎಂಬ ಪ್ರಶ್ನೆ ಕ್ಷಿತಿಜದಾಚಿನದು. ಹಳಸು ಅನ್ನ, ಕೊಳಚೆ ವಾಸ್ತವ್ಯ ಕಾಣೆಯಾದ ಶುಷ್ಕತೆಯನ್ನು ಮೈ ಮೇಲಿನ ಕೀವು ಸೋರುವ ಗಾಯ, ಕಂಪಿಸು ವಂತಹ ವೇದನೆ, ವಾರಸುದಾರರಿಲ್ಲದ ಜನ್ಮ, ಮರಣ ಬರಲಿಲ್ಲವೆಂದು ಜೀವಿಸುವ ಸಂವೇದನೆಯಿಲ್ಲದ ಕಾಯವನ್ನು ಹೊತ್ತು ತಿರುಗಾಡುವ ಪರಿಸ್ಥಿತಿ ನಿಜಕ್ಕೂ ಅರ್ಥಹೀನ. ಹೀಗ್ಯಾಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲದಿದ್ದರೂ ಎಲ್ಲಿಯೋ ಒಂದು ಆಶಾಕಿರಣದಂತೆ ಈ “ಮಾವುಲಿ ಸೇವಾ ಪ್ರತಿಷ್ಠಾನ”. ಈ ಸಮಾಜದಲ್ಲಿ ತಮಗೆ ಬೇಡವಾದ ವಸ್ತುಗಳನ್ನು ಕಸದ ತೊಟ್ಟಿಗೋ, ಗುಜರಿ ಯವನಿಗೆ ಮಾರಿ ಬಿಡುತ್ತಾರೆ. ಅವುಗಳಲ್ಲಿ ನಿಜರ್ೀವ ವಸ್ತುಗಳು. ಸಜೀವಿಗಳಾದ ನಾಯಿ, ಬೆಕ್ಕುಗಳನ್ನು ಎಲ್ಲಿಯೋ ದೂರ ಬಿಟ್ಟು ಬಿಡುತ್ತಾರೆ. ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಿಬಿಡುತ್ತಾರೆ. ಆದರೆ ತನ್ನಂತೆಯೇ ಜೀವಪಡೆದವರನ್ನು, ಸಂಬಂಧದವರನ್ನು…? ವಿಷಾದವೆಂದರೆ ಇಲ್ಲಿಯೂ ಯಾವುದೇ ಪ್ರಕಾರ ಸಂಧಾನ ಮಾಡದೇ ರಸ್ತೆಯ ಬದಿಯಲ್ಲಿ ಬಿಟ್ಟು ಬಿಡುತ್ತಾರೆ. ಅದರಲ್ಲಿ ಕೆಲವರು ಮನೋ ರೋಗಿಯಾಗಿ ಅಥವಾ ಮನೆಯ ಜಂಜಾಟಕ್ಕೆ ಬೇಸತ್ತು ತಾವಾಗಿಯೇ ಮನೆಬಿಟ್ಟು ಬಂದವರೂ ಇರುತ್ತಾರೆ. ಆದರೆ ಸ್ತ್ರೀಯ ಬಗ್ಗೆ ಹೇಳುವುದೇ ಬೇಡ.
ಮನೋ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ. ಸರಕಾರಿ ಆಸ್ಪತ್ರೆಗಳ ಶುಶ್ರೂಷೆ ಕಡಿಮೆಯಾಗುತ್ತಾ ಬಂದಿದೆ. ಮಹಾರಾಷ್ಟ್ರದಲ್ಲಿ ಪುಣೆ, ನಾಸಿಕ್, ರತ್ನಗಿರಿ ಹಾಗೂ ಥಾಣೆ ಹೀಗೆ ನಾಲ್ಕು ಸರಕಾರಿ ಆಸ್ಪತ್ರೆ ಗಳಿವೆ. ಇವುಗಳಲ್ಲಿ ಕ್ರಮೇಣ 3,500 ರಿಂದ 4,000 ಮನೋರೋಗಿಗಳಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚು ಜನ ರಸ್ತೆಯಲ್ಲಿ ಅಲೆದಾಡುವುದು ನಾವು ಕಾಣುತ್ತೇವೆ. ಜನನಿ ಬಿಡದ ಹಾಗೂ ಒತ್ತಡ ಭರಿತ ಜೀವನದಲ್ಲಿ ಅವರಿಗಾಗಿ ನಿಲ್ಲುವ, ಮಾತನಾಡಿಸುವ, ಪುರುಸೊತ್ತಾದರೂ ಇಲ್ಲಿ ಯಾರಿಗಿದೆ? ಅವರ ಕಥೆ ಕೇಳುವ ತಾಳ್ಮೆಯಾದರೂ ಇದೆಯೇ? ಕೇಳಿ. ಲಕ್ಷ್ಮೀಯಿಂದಲೇ ಪ್ರಾರಂಭಿಸುವೆ.
ಲಕ್ಷ್ಮೀ… ಊರು ಹೈದರಾಬಾದ್, ಅವಳಾಡುವ ಭಾಷೆಯಿಂದ ತಿಳಿಯಿತು. ನಮ್ಮನ್ನು ನೋಡಿದಂತೆಯೇ ತನ್ನ ಎರಡು ಮಾತು… ಮಾತು… ಪ್ರತಿ ಮಾತಿಗೂ ಒಂದು ನಮಸ್ತೆ. ಒಮ್ಮೆ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜಯಲಲಿತಾರನ್ನು ಹೊಗಳಿ ಉತ್ತಮ ವಾಗ್ಮಿಯಂತೆ, ಮತ್ತೊಮ್ಮೆ ನಮ್ಮ ಸೀರೆ, ಆಭರಣವನ್ನು ಹಣೆಯ ಕುಂಕುಮವನ್ನು ಮೆಚ್ಚಿದ ಕವಯತ್ರಿ ಕವಿತೆ ರಚಿಸಿದಂತೆ. ತಡೆಯೇ ಇಲ್ಲದ ಮಾತು. ಲಕ್ಷ್ಮೀ ಕಲ್ಯಾಣ್ನ ಬಳಿ ನಿರ್ಜನ ಪ್ರದೇಶದಲ್ಲಿ ಒಬ್ಬಳೇ ಬಿದ್ದುಕೊಂಡಿದ್ದಳಂತೆ. ಶಿಡರ್ಿಗೆ ಹೋಗುತ್ತಿರುವ ದಾರಿ ಹೋಕರು ಈಕೆ ಜೀವಂತಳಾಗಿದ್ದಾಳೆಂದು ತಿಳಿದ ಬಳಿಕ ಮಾವುಲಿಗೆ ಈ ಬಗ್ಗೆ ತಿಳಿಸಿದರು.
ಡಾಕ್ಟರ್ ತನ್ನ ಇಬ್ಬರು ಸಹಯಾತ್ರಿಗಳ ಜೊತೆಗೂಡಿ ಆ ಸ್ಥಳಕ್ಕೆ ಹೊರಟರು. ಅಲ್ಲಿ ಕಂಡ ದೃಶ್ಯ ನಿರ್ವಸ್ತ್ರಳಾಗಿರುವ ಅವಳನ್ನು ಡಾಕ್ಟರ್ ತನ್ನ ಶಟರ್್ ತೊಡಿಸಿ ಕರವಸ್ತ್ರದಿಂದ ಅವಳ ಮೈಮೇಲಿನ ರಕ್ತವನ್ನು ಒರೆಸಿ, ಅಂಬ್ಯುಲೆನ್ಸ್ನಲ್ಲಿ ಹಾಕಿ ಮಾವುಲಿ (ರಿ) ಸಂಸ್ಥೆಗೆ ತಂದು ಅವಳ ಶುಶ್ರೂಷೆ ಮಾಡಲಾರಂಭಿಸಿದರು. ಅವಳ ಬಗ್ಗೆ ಇಷ್ಟೇ ಗೊತ್ತು. ಹೆಸರು ಇಲ್ಲಿಯೇ ಕೊಟ್ಟಿದ್ದು. ತನ್ನ ಬಗ್ಗೆ ಹೇಳುವ ಪರಿಸ್ಥಿತಿಯಲ್ಲಿ ಅವಳಿಲ್ಲ. ದಕ್ಷಿಣದ ನೈಜ ಸೌಂದರ್ಯ ರೂಪ ಪಡೆದ ಎತ್ತರ ನಿಲುವಿನ ಲಕ್ಷ್ಮೀಗೆ ಅವಳ ರೂಪವೇ ಮಾರಕವಾಯಿತೆ?
ಹಾಸಿಗೆಯಲ್ಲಿ ಕಾಲು ಮಡಚಿ ಕುಳಿತ ಅಲಕಾ ಮೂರು ದಿನದ ಹಿಂದೆ ಇಲ್ಲಿ ಬಂದಿದ್ದಳು. ಬಂದಾಗಿನಿಂದ ಊಟ ಮಾಡೆನೆಂಬ ಹಠ ಮಾಡಿ ಕೋಣೆಯನ್ನೇ ತಲೆಮೇಲೇರಿಸಿದ್ದಾಳೆ. ಹೀಗಿದ್ದರೆ ಅವಳಿಗೂ ತೊಂದರೆ ಅವಳ ಹೊಟ್ಟೆಯಲ್ಲಿರುವ ಆರು ತಿಂಗಳ ಆ ಮಗುವಿಗೂ ಕಷ್ಟ. ಆಗ ಡಾಕ್ಟರ್ ಊಟದ ಬಟ್ಟಿಲನ್ನು ಮತ್ತೋರ್ವ ರೋಗಿಯ ಕೈಯಲ್ಲಿ ಕೊಟ್ಟು ಅವಳಿಗೆ ಉಣಿಸಲು ಹೇಳಿದರು. ಶಂಕೆಯ ದೃಷ್ಟಿಯಿಂದ ಅವಳನ್ನು ನೋಡಲು ತಾನು ಎರಡು ತುತ್ತು ತಿಂದು ತದನಂತರ ಅವಳಿಗೆ ಉಣಿಸಲು ಏನೋ ನಂಬಿಕೆ ಮೂಡಿ ಹಸಿವು ತಡೆಯಲಾರದೆ ಉಣಲಾರಂಭಿಸಿದಳು. ಅಲಕಾಳಿಗೆ ಅವಳ ಮನೆಯವರೇ ಊಟದಲ್ಲಿ ವಿಷ ಬೆರೆಸಿ ಕೊಟ್ಟಿರುವುದಾಗಿ ಈಗ ಅನ್ನದ ಪ್ರತಿಯೊಂದು ತುತ್ತಿನಲ್ಲೂ ಆ ಭಯ ಕಾಡಿದೆ. ಮನೆ ಮಂದಿಯಿಂದಲೇ ಕಾಮದಾಹಕ್ಕೆ ಬಲಿ ಯಾದಾಗ, ಸಮಾಜದಲ್ಲಿ ತನ್ನ ಹೆಸರಿಗೆ ಬಾಧೆಯಾಗಬಾರದೆಂದು ತಾನು ಮಾಡಿದ ತಪ್ಪಿಗಾಗಿ ಈಗ ಅಲಕಾ ಹಾಗೂ ಅವಳ ಮಗು ಶಿಕ್ಷೆ ಅನುಭವಿಸುತ್ತಿದೆ. ಆ ಕೋಣೆಯಲ್ಲಿಯ ಪ್ರತಿಯೊಬ್ಬರ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿತ್ತು. ನಾಲ್ಕು ಬಸುರಿ ಹೆಂಗಸರು ಅಲ್ಲಿದ್ದರು. ತನ್ನದೇ ಶುದ್ಧಿಯಿಲ್ಲ ಮಾನಸಿಕವಾಗಿ ದೈಹಿಕವಾಗಿ ಬೆಂದ ಜೀವಕ್ಕೆ ಈಗ ಹೆರಿಗೆ ನೋವಿನ ಅರಿವಿನ ಪ್ರಜ್ಞೆಯೂ ಇಲ್ಲ. ಇಂತಹ ಸ್ಥಿತಿಯಲ್ಲಿ ಡಾಕ್ಟರ್ ಕೂಡಾ ಸೋತು ಸುಣ್ಣವಾಗಿ ಬಿಡುತ್ತಾರೆ. ಎದುರುಗಡೆ ತೆರೆದ ಬಾಗಿಲಿನ ಕೋಣೆ, ನೆಲದಲ್ಲಿ ಹಾಸಿಗೆ ಹಾಕಿ ಕೆಲವು ರೋಗಿಗಳು ನಾಲ್ಕೈ ಹಸುಳೆಗಳನ್ನು ಹಾಲು ಕುಡಿಸಿ, ರಮಿಸಿ ಮಲಗಿಸುವುದನ್ನು ನೋಡಿ ಮನಸ್ಸಿಗೆ ನೆಮ್ಮದಿಯಾಯಿತು.

ಆದರೆ, ಅಷ್ಟೇ ಬೇಗ ಮನ ಕದಲಿತು. ಕಾರಣ ಅಲ್ಲಿದ್ದ ಐದು ವರ್ಷದ ಮಗು ಶಿವ ಬಿಸ್ಕಿಟು ತಿನ್ನುತ್ತಾ ಕುಳಿತಿದ್ದ. ಅವನ ಪಕ್ಕದಲ್ಲೇ ಇನ್ನೊಂದು ಹಾಲು ಕುಡಿಯುವ ಮಗು, ತಾಯಿ ಮಾತ್ರ ಬೇರೆ ಕೋಣೆಯಲ್ಲಿದ್ದಳು. ನಾವು ಮಗುವಿನೊಂದಿಗೆ ಮಾತನಾಡುತ್ತಿದ್ದಂತೆ ಓಡುತ್ತಾ ಬಂದಳು. ಮೈಯಲ್ಲಿಯ ಬಟ್ಟೆಯ ಪರಿವೆಯು ಅವಳಿಗಿಲ್ಲ. ಬಾಣಂತಿ ಬೇರೆ. ತನಗೆ ಎರಡು ಮಕ್ಕಳಿದ್ದಾರೆಂಬ ಅರಿವು ಅವಳಿಗಿಲ್ಲ. ಡಾಕ್ಟರ್ ಪತ್ನಿ ಸುಚೇತರವರು ಅವಳನ್ನು ಪುಸಲಾಯಿಸಿ ಒಳಗೆ ಕರೊದೊಯ್ದರು. ಅಳುತ್ತಾ ಹಠ ಮಾಡುತ್ತಾ ಒಳಗೆ ಹೋದರೂ, ಪುನಃ ಐದು ನಿಮಿಷದಲ್ಲೇ ಹಾಜರು. ಆ ಕೋಣೆಯಲ್ಲೂ ದುರ್ಗಂಧ. ಯಥಾ ಸ್ಥಿತಿಯಲ್ಲಿ ಬಿದ್ದುಕೊಂಡಿರುವ ಸಜೀವವೆಂಬ ಮೂತರ್ಿಗಳು. “ಸ್ತ್ರೀ” ಜನನಕ್ಕೆ ಮೂಲ. ಬೆಳವಣಿಗೆಗೆ ಆಧಾರ, ನಿಸರ್ಗಕ್ಕೆ ಪೂರಕ ರೂಪವಾಗಿದ್ದರೂ ಅವಳ ದುದರ್ೆಸೆ ನೋಡಲು ಮಾತು ಮೌನವಾಗಿತ್ತು. ಮನಸ್ಸಿನ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿರಲಿಲ್ಲ.
ಅಷ್ಟರಲ್ಲೇ ಡಾಕ್ಟರ್ ದಂಪತಿ ನಮ್ಮನ್ನು ಮೊದಲನೇ ಮಹಡಿಗೆ ಕರಕೊಂಡು ಹೋದರು. ಅಲ್ಲಿ ವಿಶಾಲವಾದ ಹಾಲ್ 50 ಬೆಡ್ಗಳು ಎಲ್ಲರೂ ತಿಳಿ ಗುಲಾಬಿ ಬಣ್ಣದ ಮೊಣಕಾಲಿಗಿಂತ ಸ್ವಲ್ಪ ಉದ್ದವಾದ ಅಂಗಿ ಹಾಕಿಕೊಂಡಿದ್ದರೂ ನೀಟಾಗಿ ತಮ್ಮ ತಮ್ಮಲ್ಲಿ ಮಾತು, ಹಾಸ್ಯ, ಶಿಸ್ತು ಕಂಡು ಬಂದಿತು. ಕೋಣೆಯಲ್ಲಿ ಬೀಸುತ್ತಿರುವ ಗಾಳಿಯೋ, ನುಸುಳುತ್ತಿರುವ ಸೂರ್ಯ ಬೆಳಕಿನ ಪ್ರಭೆಯೋ ಗೊತ್ತಿಲ್ಲ.
ಇಲ್ಲಿರುವವರ ಮುಖದಲ್ಲಿ ಬದುಕಿನ ಬಗ್ಗೆ ಆಸೆ ಕಂಡೆ. ಕಣ್ಣಲ್ಲಿ ಹೊಸ ಒನಪು ಕಂಡೆ. ಎಲ್ಲಕ್ಕಿಂತಲೂ ಮಿಗಿಲಾಗಿ ಮಾವುಲಿ ಸಂಸ್ಥೆಯ ಬಗ್ಗೆ ನಿರ್ವಹಣೆ ಮಾಡುವ ಉಸ್ತುವಾರಿ ಹೊತ್ತ ಮೋನಳನ್ನು ಕಂಡು ನಮಗೆ ಅತೀ ಆನಂದವಾಯಿತು.
ಮೋನ ಸಹ ಅದೇ ರೀತಿಯ ಸಮವಸ್ತ್ರದಲ್ಲಿ ಅಪ್ಪಟ ಇಂಗ್ಲಿಷ್ ಭಾಷೆಯಲ್ಲಿ ನಮ್ಮನ್ನು ಸ್ವಾಗತಿಸಿದಳು. ಅವಳು ಮಾವುಲಿ ಸೇವಾ ಪ್ರತಿಷ್ಠಾನದ ಬಗ್ಗೆ ನೀಡಿದ ವಿವರದಂತೆ ಡಾಕ್ಟರ್ ನಾಲ್ಕು ವರ್ಷ ಮುಂಚೆ ಪ್ರವಾಸಕ್ಕೆಂದು ಹೋದಾಗ ಒಬ್ಬ ಮನೋ ರೋಗಿ ಹಳಸಿದ ಅನ್ನ ತಿನ್ನುತ್ತಿದ್ದದ್ದನ್ನು ಕಂಡರು. ಅಷ್ಟಕ್ಕೇ ಸಾಲದೆನ್ನುವಂತೆ ಆತ ಬದಿಯಲ್ಲಿಯ ಗಟಾರಿನಿಂದ ನೀರು ಕುಡಿದ. ಆಗ ಡಾಕ್ಟರ್ ಮನಸ್ಸಿನಲ್ಲಿಯೇ ಒಂದೆಡೆ ನಾವು ಹೊಟೇಲಿಗೆ ಹೋಗಿ ಮೆನುಕಾಡರ್್ ನೋಡಿ ಊಟ ಮಾಡುವಂತಹ ಜನರು, ಅದೇ ಮತ್ತೊಂದು ಬದಿ ಈ ಸಮಾಜ ಘಟಕ, ತಾನು ಏನನ್ನು ತಿನ್ನುತ್ತಿರುವೆನೆಂಬ ಜ್ಞಾನವೂ ಇರುವುದಿಲ್ಲ. ಅಥವಾ ಹಸಿದ ಹೊಟ್ಟೆಗೆ ಎದುರಿಗೆ ಸಿಕ್ಕಿದ್ದನ್ನು ತಿನ್ನುವಂತಹ ಪರಿಸ್ಥಿತಿ. ಅದಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಪ್ರಾಮಾಣಿಕತೆಯಿಂದ ಹೆದ್ದಾರಿಯಲ್ಲಿ ದಿನಾಲು ಸಿಗುವಂತಹ ಮನೋ ರೋಗಿಗಳಿಗೆ ಊಟ ಕೊಡುವಂತಹ ಉಪಹಾರ ಎಂದು ಉಪಕ್ರಮವನ್ನು ಕೈಗೊಂಡರು. ಆದರೆ ಅಲ್ಲೂ ಉಂಡು ತೃಪ್ತರಾದವರೂ ಮತ್ತೆ ಅಲ್ಲಿ ಸಿಗುತ್ತಿರಲಿಲ್ಲ. ಒಂದೆರಡು ವರ್ಷ ಈ ಕಾರ್ಯ ನಡೆಯಿತು. ಸಮಾಜದಲ್ಲಿ ಕಣ್ಣೆದುರಿಗೆ ಸಿಕ್ಕಂತಹ ಸ್ತ್ರೀ-ಪುರುಷರನ್ನು ಹುಡುಕಿ ಮನೆಯಿಂದಲೇ ತಯಾರಿಸಿದ ಅನ್ನದ ಪ್ಯಾಕೆಟ್ಗಳನ್ನು ನೀಡಿ ಮುಂದಿನ ಕೆಲಸಕ್ಕೆ ಹೋಗುತ್ತಿದ್ದರು. ಹೀಗೆಯೇ ಒಮ್ಮೆ ಒಂದು ಸುಂದರ ತರುಣಿ ರಸ್ತೆಯಲ್ಲಿ ಸಿಕ್ಕಳು. ಜಾಣೆಯಂತೆ ಮಾತನಾಡಿ ಊಟ ಮಾಡಿ, ಅವಳ ಬಗ್ಗೆ ಇನ್ನೇನಾದರೂ ತಿಳಿಯುವ ಮುಂಚೆಯೇ ಹೊರಟು ಹೋದಳು. ಪುರೋಗಾಮಿ ತತ್ವದ ಗರಿಮೆ ಸಾರುವ ನಮ್ಮ ಸಮಾಜದಲ್ಲಿ ಮನೆಯಲ್ಲಿರುವ ಸ್ತ್ರೀಯೇ ಸುರಕ್ಷಿತಳಾಗಿಲ್ಲ. ದಿಕ್ಕು ದೆಶೆಯಿಲ್ಲದೆ ಎಲ್ಲೋ ಮಲಗುವ, ಅಷ್ಟೇ ಅಲ್ಲ ಮನೋರೋಗಿಯಾಗಿರುವ ಈ ಸ್ತ್ರೀಗೆ ಎಂತಹ ಕಷ್ಟಗಳನ್ನು ಎದುರಿಸಬೇಕಾಗಬೇಕೆಂಬ ಕಲ್ಪನೆ ಕಾಡಿದಾಗ ಇವರಿಗಾಗಿ ಹಕ್ಕಿನ ಮನೆಯಿರಬೇಕೆಂಬ ಪ್ರಬಲ ಆಸೆ ಮೂಡಿತು.
ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿ “ಮಾವುಲಿ ಸೇವಾ ಪ್ರತಿಷ್ಠಾನ” 1998ರಲ್ಲಿ ಪ್ರಾರಂಭಗೊಂಡಿತು. ಹಲವಾರು ವೃತ್ತ ಪತ್ರಿಕೆಗಳು ಈ ಕೆಲಸದ ಬಗ್ಗೆ ತಿಳಿದು ಇದರ ಬಗ್ಗೆ ತಮ್ಮ ಪತ್ರಿಕೆಗಳಲ್ಲಿ ಪ್ರಕಟನೆಗಳನ್ನು ಹಾಕಿದಾಗ ಮಹಾರಾಷ್ಟ್ರ ದಾದ್ಯಂತದಿಂದಲೂ ಅಭಯಹಸ್ತ ನೀಡಲು ಜನರು ಮುಂದಾದರು. ಡಾಕ್ಟರರ ತಂದೆ ತಮ್ಮ ಸ್ವಂತ ಜಾಗವನ್ನು ದಾನ ಮಾಡಿದರು. 75 ಮನೋರೋಗಿಗಳ ಅಶ್ರಯ ನಿಲಯವಾಗಿದ್ದ ಈ ಸಂಸ್ಥೆಯಲ್ಲಿ ಈಗ ಸುಮಾರು 150ಕ್ಕೂ ಹೆಚ್ಚು ರೋಗಿಗಳಿದ್ದಾರೆ. ದುಃಖದ ವಿಷಯ ವೇನೆಂದರೆ ಸರಕಾರದಿಂದ ಈ ಸಂಸ್ಥೆಗೆ ಯಾವುದೇ ರೀತಿಯ ಆಧಾರ ಸಿಕ್ಕಿಲ್ಲ.
ಮಾತಿನ ತೊರೆ ಹರಿಯುತ್ತಾ ಮೋನ್ ಅಲ್ಲಿಯೇ ತೂಗು ಹಾಕಿದ್ದ ಫೋಟೋವನ್ನು ತೋರಿಸುತ್ತಾ, ನಮ್ಮೆಲ್ಲರ ಅಕ್ಕ. ಮಾವುಲಿಯಲ್ಲಿ ಬಂದವರಲ್ಲಿ ಈಕೆ ಮೊದಲನೆಯವಳು. ಸ್ವಂತ ಅಣ್ಣನೇ “ಚಹಾ ಕುಡಿದು ಬರುತ್ತೇನೆ, ಇಲ್ಲಿಯೇ ಕುಳಿತಿರು” ಎಂದು ನಗರದ ಪಾಕರ್ೊಂದರಲ್ಲಿ ಅನೇಕ ವರ್ಷದ ಮುಂಚೆ ಹೇಳಿ ಹೋಗಿದ್ದ ತನ್ನ ಅಣ್ಣ, ಎಂದಾದರೂ ಚಹಾ ಕುಡಿದು ಬರುವನು, ತನ್ನನ್ನು ಕರೆದೊಯ್ಯುವೆನೆಂಬ ಹುಚ್ಚು ಆಸೆಯಲ್ಲಿ ಆರು ವರ್ಷ ಕಾಯುತ್ತಿದ್ದ ಈ ಹುಚ್ಚು ತಂಗಿ, ಆತಮಾತ್ರ ಮತ್ತೆ ಬರಲೇ ಇಲ್ಲ. ಇಲ್ಲಿ ನಾಲ್ಕು ವರ್ಷ ವಿದ್ದು ಈಗ ಅನಂತದ ಯಾತ್ರೆ ಸಾಗಿದ್ದಾಳೆ. ಆಕೆ ಹೃದಯ ವಿಕಾರದ ರೋಗಿಯಾಗಿದ್ದಳು. ಡಾಕ್ಟರ್ ದಂಪತಿಯನ್ನು ತನ್ನ ಅಣ್ಣ-ಅತ್ತಿಗೆಯೆಂದು ನಂಬಿಕೊಂಡಿದ್ದಳು.
ಜೀವನ ಪೂತರ್ಿ ವೇದನೆಯನ್ನೇ ಉಂಡ ಅವಳಿಗೆ ಕೊನೆ ಕಾಲಕ್ಕೆ ಬದುಕಬೇಕೆಂಬ ಅದಮ್ಯ ಆಸೆ. ಇದುವೇ ಮಾನವನ ಜೀವನದ ದುದರ್ೈವ. ಆಶಾವಾದಿ ವೃತ್ತಿ. ಅವಳ ಶೋಚನೀಯ ಸ್ಥಿತಿಯನ್ನು ಕಂಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಯಿಸಲು ಹೋದಾಗ, ಅಲ್ಲಿ ನಿರಾಕರಿಸಿದರು. ಬೇರೆ ಕಡೆ ಕೊಂಡೊಯ್ಯುವಾಗಲೇ ರಸ್ತೆಯಲ್ಲಿ ಜೀವ ಕಳಕೊಂಡಳು. ಯಾವ ರಸ್ತೆಯಲ್ಲಿ ತನ್ನ ಬದುಕನ್ನು ಬದುಕಿದ್ದಳೋ ಕೊನೆ ಗಳಿಗೆಯಲ್ಲಿ ಜೀವವು ರಸ್ತೆಯಲ್ಲೇ ಹೋಯಿತು. ಇದು ಯಾವ ದೈವ ದುವರ್ಿಲಾಸವೇ? ಯೋಗಾ ಯೋಗವೋ ತಿಳಿಯದು. ಅಕ್ಕ ಹೋದದ್ದು ನಮ್ಮೆಲ್ಲರ ದೃಷ್ಟಿಯಲ್ಲಿ ದೊಡ್ಡ ದುರಂತವೇ ಹೌದು. ಅವಳು ನಮ್ಮವಳೇ ಆಗಿದ್ದಳು. ಆಕೆಯ ಊರು, ಹೆಸರು ಒಂದೂ ಗೊತ್ತಿಲ್ಲ. ಅವಳ ಜಾತಿ, ಧರ್ಮ ಗೊತ್ತು ಗುರಿಯಿಲ್ಲದ ಅಕ್ಕ ನಮ್ಮವಳು ಎಂಬ ಆಳವಾದ ಭಾವನೆಯ ಹೊರತು ಬೇರೇನೂ ಇಲ್ಲ”
ಮೋನ ಸ್ಪಷ್ಟ ನುಡಿ, ನಿಲ್ಲುವ ಠೀವಿ, ಹೇಳುವ ರೀತಿ ನಮ್ಮೆಲ್ಲರನ್ನು ಮಂತ್ರಮುಗ್ಧರನ್ನಾಗಿಸಿತು. ಅವಳನ್ನು ನೋಡುವಾಗ ಆಕೆ ರೋಗಿಯೋ ವೈದ್ಯಳೋ ಎನ್ನುವ ಕುತೂಹಲ ನಮ್ಮೆಲ್ಲರಲ್ಲಿ ಜಾಗೃತವಾಗಿತ್ತು. ನಾನು ಕೇಳಿಯೇ ಬಿಟ್ಟೆ. ಸಾಂದ್ರಗೊಂಡು ಹೃದಯದ ನೋವು ಕಣ್ಣೀರಾಗಿ ಹರಿಯಲಾರಂಭಿಸಿತು. “ಒಂದೇ ರಕ್ತವನ್ನು ಹಂಚಿಕೊಂಡ ಇನ್ನೊಂದು ಜೀವ ತನ್ನದೇ ಸ್ವಾರ್ತಕ್ಕೆ ಬಾಲಿಪಸುವಾಗಿ ತಂಗಿಯನ್ನು, ತಾಯಿಯನ್ನು ಮನೆಯಿಂದ ಹೊರಹಾಕಿದ. ಆದರೂ ಕುಗ್ಗದೇ ಛಲದಿಂದ ಪುಣೆಯ ಕಾನ್ವೆಂಟ್ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ದುಡಿದೆ. ವಿದ್ಯೆಯು ಅನ್ನ ನೀಡಿತು, ಆಸರೆ ನೀಡಿತು. ಮದುವೆಯಾದೆ ಅಲ್ಲಿಯೂ ಹಣಕ್ಕಾಗಿ ನನಗೆ ಕಿರುಕುಳ ಕೊಡಲಾರಂಭಿಸಿದ ಪತಿಗೆ ನಾನು, ನನ್ನ ಹಣ ಬೇಕಿತ್ತೇ ಹೊರತು ನನ್ನ ಆಸೆ, ನನ್ನ ಅಮ್ಮನ ಜವಾಬ್ದಾರಿ ಬೇಡವಾಗಿತ್ತು. ಚಿಂತೆಯ ಸಸಿ ಬೆಳೆಯುತ್ತಾ ಹೋದಂತೆ ನೆರಳು ಚಿತೆಯತ್ತಾ ಸಾಗಿಸಲಾರಂಭಿಸಿತು. ಮುಂದೆ ಏನು ಹೇಗೆ ಒಂದೂಗೊತ್ತಿಲ್ಲ. “ಗಾಡ್ ಈಸ್ ಗ್ರೇಟ್” ನನಗೆ ಬುದ್ಧಿಯ ಪ್ರಜ್ಞೆ ಬಂದಾಗ ಇಲ್ಲಿದ್ದೆ. ಈಗ ಸುಧಾರಿಸುತ್ತಿದ್ದೇನೆ. ಇವರುಗಳ ಸೇವೆಯು ನನ್ನಲ್ಲಿ ಬದುಕುಳಿಯುವ ಪ್ರೇರಣಾ ಶಕ್ತಿಯಾಗಿದೆ. ನಮ್ಮವರಿಗಾಗಿ ಬಹಳ ದುಡಿದೆ. ಇನ್ನು ಇತರರಿಗಾಗಿ ಬದುಕುವೆ” ಎಂದಾಗ ಅವಳ ಕಣ್ಣಲ್ಲಿರುವ ಚೈತನ್ಯವು ನಮ್ಮಲ್ಲಿಯು ಸಂಚರಿಸಿದಂತಾಯಿತು.
ರೇಖಾ… ಕಳೆದ ಎರಡು ವರ್ಷಗಳಿಂದ ಇಲ್ಲಿಯೇ ಇದ್ದು ಈಗ ಪೂರ್ಣ ಗುಣಮುಖಳಾಗಿದ್ದಾಳೆ. ಬೊರಿವಲಿಯಲ್ಲಿ ಕಾಣೆಯಾಗಿ ತಿರುಗುತ್ತಾ, ಅಲೆಯುತ್ತಾ, ಕೈಕಾಲುಗಳು ಬಲಹೀನವಾಗಿ ಇಲ್ಲಿ ಬಂದಿದ್ದಳು. ಡಾಕ್ಟರ್ರ ಸತತ ಪ್ರಯತ್ನದಿಂದ ಈಗ ಪೂರ್ಣ ಗುಣಮುಖಳಾಗಿದ್ದಾಳೆ. ಅವಳಲ್ಲಿಯೇ ವಿಳಾಸ ಕೇಳಿ ಮನೆಯವರಿಗೆ ತಿಳಿಸಿದಾಗ ಮನೆಯವರಂತೂ ಬಂದರು. ಆದರೆಜ ಮಗಳನ್ನು ಕಂಡೂ ಅಷ್ಟು ಖುಷಿಯಿಲ್ಲ. ಒತ್ತಾಯಕ್ಕೆ ಕರಕೊಂಡು ಹೋದರು. ಅದೇ ಒಂದೂವರೆ ತಿಂಗಳಲ್ಲಿ ಪುನಃ ಬಿಟ್ಟು ಹೋದರು. ಡಾಕ್ಟರ್ರ ಪ್ರಕಾರ ಮನುಷ್ಯನಿಗೆ ತನ್ನದೇ ಆದ ಪರಿಸರದಲ್ಲಿ ಬದುಕುವ ಅಭ್ಯಾಸವಾಗಿರುತ್ತದೆ. ಹೊಸ ಜಾಗ, ಹೊಸ ಜನರೊಂದಿಗೆ ಅಷ್ಟು ಬೇಗನೆ ಹೊಂದಿಕೊಳ್ಳಲು ಅಸಾಧ್ಯ. ಇದರಲ್ಲಿ ರೇಖಾಳದ್ದು ತಪ್ಪೋ? ಅವರ ಮನೆಯವರದ್ದೂ ತಪ್ಪು ಇರಬಹುದು. ಕೇವಲ ತಾಳ್ಮೆ ಹಾಗೂ ಅರ್ಥ ಮಾಡಿಕೊಳ್ಳುವ ಮನಕೆ ಮಾತ್ರ ಹೊಂದಾಣಿಕೆ ಸಾಧ್ಯ.
ಗಂಗಾ ಇನ್ನೂ 20 ವರುಷದ ತರುಣಿ. ನೋಡಲು ಒಳ್ಳೆಯ ಲಕ್ಷಣವಾಗಿದ್ದಾಳೆ. ಆದರೆ ಈ ಬಾಯಿಯಲ್ಲಿ ಬರೆ ಬೈಗುಳ. ಅದಕ್ಕೇ ಕಾರಣ ಅವಳು ಉಂಡ ನೋವು. ಅವಳ ದೇಹದಿಂದ ತನ್ನ ಕಾಮ ಪಿಪಾಶೆಯನ್ನು ತೀರಿಸಿಕೊಳ್ಳುವ ದಾಹದ ಆಟ ನಗ್ನ ಸತ್ಯದ ಪ್ರದರ್ಶನ ನೀಡುತ್ತಿತ್ತು. ಮೈಯೆಲ್ಲಾ ಸಿಗರೇಟಿನ ಸುಟ್ಟ ಗಾಯದ ಅಚ್ಚು. ಈ ಭೀಕರ ಕೃತ್ಯಕ್ಕೆ ಕತ್ತಲೆಯೂ ದಹದಹಿಸುತ್ತಾ ಮೌನವಾಗುತ್ತಿತ್ತು. ಬೆಳಕಿನಲ್ಲಿ ಈಕೆ ಬಾಯಿ ಬಿಟ್ಟಾಳು ಎಂದು ಬೆಳಿಗ್ಗೆಯೇ ಕಂಠಪೂತರ್ಿ ಸಾರಾಯಿ ಕುಡಿಸಿ ಅಮಲಿನಲ್ಲಿ ಜೀವನ ಕಳೆಯಲು ಒತ್ತಹೀಸುತ್ತಿದ್ದರು. ಈ ರೀತಿ ಇಲ್ಲಿನ ಪ್ರತಿಯೊಂದೂ ಬೆಡ್ನ ಕಥೆ ಅದು ವ್ಯಥೆಯಲ್ಲಿ ಅದ್ದಿತ್ತು.
ಮನುಷ್ಯನೊಬ್ಬ ಯಾವ ರೀತಿಯಲ್ಲಿ ಬದುಕುವನೆಂಬ ವಿಷಯಕ್ಕಿಂತಲೂ ಯಾವ ರೀತಿಯಲ್ಲಿ ಮರಣ ಹೊಂದಿದ ನಿಗೂಢತೆಯನ್ನು ಹುಡುಕುತ್ತಿರುವ ಆಸೆ ಹೆಚ್ಚು. ಅದಕ್ಕಾಗಿ ಸತ್ತ ಕೂಡಲೇ ಪೋಸ್ಟ್ ಮಾರ್ಟಮ್ ಮಾಡಿ ಆಕೆ ಯಾಕೆ ಸತ್ತಳು? ಹೇಗೆ ಸತ್ತಳು? ಯಾವ ರೋಗದಿಂದ ಸತ್ತಳು? ಅಥವಾ ತೊಂದರೆ, ಉಪವಾಸದಿಂದ ಸತ್ತಳೇ? ಹೊಟ್ಟೆ ತುಂಬ ಉಂಡು ಸತ್ತಳೇ? ಆಕೆಯ ಜಾತಿ, ಧರ್ಮ, ಆ ದೇಹಕ್ಕೆ ಆಪ್ತರೆಂಬವರಿದ್ದಾರೆಯೇ? ಆಕೆಯ ಊರು, ಗುರುತು, ರೇಷನ್ ಕಾಡರ್್… ಇತ್ಯಾದಿ ಇತ್ಯಾದಿ. ಅದೇ ಅವಳು ಬದುಕಿರುವಾಗ ಆ ಭಯನಕ ದಾರಿಯಲ್ಲಿ ಸಾಗಿರುವ ಅವಳ ಗುರುತು ಏನಿರಬೇಕು? ಒಬ್ಬರಿಗೆ ಪಂಚತಾರಾ, ಸಪ್ತ ತಾರಾ ಆಸ್ಪತ್ರೆಯಲ್ಲಿ ಉಪಚರಿಸುವಂತಹ ವ್ಯವಸ್ಥೆ ಗಳಿದ್ದರೆ, ನಿಜವಾಗಿಯೂ ಅಗತ್ಯವಿದ್ದ ಮನುಷ್ಯನಿಗೆ ತುತ್ತು ಅನ್ನ, ಭೋಗಸೆ ನೀರಿಗಾಗಿ ಆಶ್ರಿತಳಾಗಬೇಕಾಗುತ್ತದೆ.
ಈ ಜಗದ ನಿಯಮವೇ ಅಷ್ಟೇ. ಇದ್ದವರಿಗೆ ಕೊಡುವ ಪೈಪೋಟಿ, ಸೋಲುಂಡವರಿಗೆ ಬೆನ್ನು ತೋರಿಸುವಂತಹದ್ದು. ಇಂದು ಸ್ತ್ರೀ ಶೋಷಣೆಯ ರೋಧನೆ ಕೇಳಿಸದ ಸ್ಥಳವಿಲ್ಲ. ಆಕೆ ಭರವಸೆ ಎಂಬ ಮಾತಿನಲ್ಲೂ ಭರವಸೆ ಇಲ್ಲದಂತಹ ಪರಿಸ್ಥಿತಿಯಾಗಿದೆ. ಇದಕ್ಕೆಲ್ಲ ಯಾರು ಹೊಣೆ? ಜಾಗತೀಕರಣದ ಹಾದಿಯತ್ತ ಸಾಗುತ್ತಿರುವ ನಮ್ಮ ದೇಶ ಮೀಸಲಾತಿಯ ಹೋರಾಟವನ್ನು ಗೆದ್ದಿಲ್ಲ. ಸಮಾನ ಹಕ್ಕು ಒಪ್ಪಿಕೊಂಡರೂ ಇಂದಿಗೂ ಮಾನಸಿಕವಾಗಿ ಒಪ್ಪಿಕೊಂಡಿಲ್ಲ. ಶ್ರೀಮತಿಕೆಯಲ್ಲಿ ರಾರಾಜಿಸುತ್ತಿರುವ ಮನೆಯಲ್ಲೂ ಮೌಢ್ಯತನ ಇದ್ದೇ ಇದೆ. ಕೆಲವೊಮ್ಮೆ ಮೆದುಳಿನ ಅಸ್ತವ್ಯಸ್ತದಿಂದಲೋ ಇಲ್ಲವೇ, ಕೆಲವೊಮ್ಮೆ ಅತೀ ಹತ್ತಿರವೆಂಬ ನಮ್ಮವರೇ ಕೊಟ್ಟ ವೇದನೆ ಸಹಿಸಲಾಗದೇ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಮತ್ತದೇ ರಸ್ತೆಯೋ, ಆಶ್ರಮಗಳೇ ಗತಿ. ನಿಜವೆಂದರೆ ಇಂದು ಪರಿಪೂರ್ಣವಾಗಿ ಕಾಣುತ್ತಿರುವ ಪ್ರತಿ ಮಹಿಳೆಯ ಅಂತರ್ಯದೊಳಗೆ ಅದೆಷ್ಟೋ ಹೇಳಲಾಗದ ನೋವುಗಳನ್ನು ನುಂಗಿ ಬದುಕಬೇಕೆಂಬ ಕಡಲಲ್ಲಿ ತನ್ನವರಿಗಾಗಿ, ಬದುಕುತ್ತಿದ್ದಾಳೆ. ಮಹಿಳಾ ಸಶಕ್ತೀಕರಣ, ಮಹಿಳಾ ದಿನಾಚರಣೆ ಎಂಬ ಹೆಸರಿಗೆ ಮಾತ್ರ ಸೀಮಿತವಾಗಿರುವ ದಿನಗಳನ್ನು ಆಚರಿಸುತ್ತಿರುವುದರಲ್ಲಿ ಸಂಭ್ರಮ ಪಡೆದುಕೊಳ್ಳುತ್ತೇವೆ.
ಗಂಧವಿಲ್ಲದ ಜೀವನದಲ್ಲೂ ಸುಗಂಧ ಪಸರಿಸುವ ಕೈಗಳು
“ಮಾವುಲಿ ಸೇವಾ ಪ್ರತಿಷ್ಠಾನ” ಕೇವಲ ವ್ಯಕ್ತಿಯೊಬ್ಬಳಿಗೆ ಆಶ್ರಯದಾತವಾಗದೇ, ಸ್ವಾವಲಂಬನೆಯ ಪಾಠ ಕಲಿಸುವುದರಲ್ಲಿಯೂ ಸಕ್ಷಮವಾಗಿದೆ. ಗುಜರಾತ್ನಿಂದ ತರಬೇತಿ ಪಡೆದ ತರಬೇತಿದಾರರಿಂದ ಇದೀಗ ಊದುಬತ್ತಿ ನಿಮರ್ಾಣ ಕೆಲಸವು ನಡೆಯುತಿದೆ. ಇಲ್ಲಿ ಪ್ರತಿದಿನ ಹತ್ತು ಕಿಲೋ ಊದುಬತ್ತಿ ತಯಾರಾಗುತ್ತದೆ. ಸಿಕ್ಕ ಹಣದಿಂದ ಮಹಿಳೆಯರ ದೈನಂದಿನ ಖಚರ್ಿಗೂ ಉಪಯೋಗವಾಗುವುದು. ಕೆಲವು ಮಹಿಳೆಯರ ಪ್ರಸವ ಇಲ್ಲೇ ಆಗಿದ್ದು ಆ ಮಕ್ಕಳನ್ನು ಈಗ ಶಾಲೆಗೆ ದಾಖಲಿಸಿ ಉತ್ತಮ ಶಿಕ್ಷಣವನ್ನು ನೀಡುವ ಉದ್ದೇಶ “ಮಾವುಲಿ”ಯದ್ದಾಗಿದೆ. ಈ ಸಂಸ್ಥೆಯ ಪಕ್ಕದಲ್ಲಿಯೇ ತೋಟಗಾರಿಕೆ ಮಾಡಿ ಈ ಮಹಿಳೆಯರನ್ನು ಆದಷ್ಟು ಸಮಯ ಯಾವುದಾದರೂ ಕೆಲಸದಲ್ಲಿ ತೊಡಗಿಸಿ, ಅವರು ತಮ್ಮ ಗತದ ವ್ಯಥೆಯನ್ನು ಮರೆಯುವಂತಹ ಕಾರ್ಯವನ್ನು ಹಮ್ಮಿಕೊಂಡಿದೆ.
ಮನೋರಂಜನೆ ಕಾರ್ಯಕ್ರಮ :
ಮನುಷ್ಯ ಭಾವನೆಯೇ ಅವರ ಉನ್ನತಿ-ಅವನತಿಗೆ ಕಾರಣ. ಧನಾತ್ಮಕ ಭಾವನೆಗಳಿಂದ ಕೂಡಿದ ವಾತಾವರಣ ಅವಳನ್ನು ಆದಷ್ಟು ಬೇಗನೆ ಗುಣಮುಖವನ್ನಾಗಿಸುತ್ತದೆ. ಅದಕ್ಕಾಗಿ ಡಾಕ್ಟರ್ ದಂಪತಿ ಈ ಸಂಸ್ಥೆಯನ್ನು ಸಂಸ್ಥೆಯಂತೆ ನೋಡಿಕೊಳ್ಳದೇ ಒಂದು ಮನೆಯ ವಾತಾವರಣವನ್ನು ನಿಮರ್ಿಸಿದ್ದಾರೆ. ಸಂಜೆ ಹೊತ್ತಲ್ಲಿ ಸಂಧ್ಯಾವಂದನೆ, ಪೂಜೆ, ಭಜನೆ ಹಾಗೂ ದೀಪಾವಳಿ, ದಸರಾ, ಹೊಸ ವರ್ಷದಲ್ಲಿ ಎಲ್ಲರೊಂದಿಗೆ ಈ ಹಬ್ಬಗಳನ್ನು ಆಚರಿಸುತ್ತಾರೆ.
ಸಾಧನೆಗೆ ಪುರಸ್ಕಾರ :
ಈ ಸಂಸ್ಥೆಯ ಬಗ್ಗೆ ಅಹಮದ್ ನಗರದಲ್ಲಿ ಬಹಳಷ್ಟು ಹೆಸರಿದೆ. ಅದಲ್ಲದೆ ಇವರ ಹಿರಿಯ ಸಾಧನೆಯನ್ನು ಮೆಚ್ಚಿ ಹಲವಾರು ಸಂಘ-ಸಂಸ್ಥೆಗಳು ಇವರಿಗೆ ಪ್ರಶಸ್ತಿ ಹಾಗೂ ಅಭಯ ಹಸ್ತವನ್ನು ನೀಡಿರುವುದು ದೃಶ್ಯ ಮಾಧ್ಯಮಗಳಲ್ಲೂ ಇವರ ಸಂದರ್ಶನಗಳನ್ನು ಪ್ರದಶರ್ಿಸಲಾಗಿದೆ.
ಈಗಿನ ಒತ್ತಡದ ಜೀವನದಲ್ಲಿ ಅದು ಇಷ್ಟು ಚಿಕ್ಕ ಪ್ರಾಯದಲ್ಲಿ ಮಾನವೀಯ ಸಂವೇದನೆಯಿಂದ ಮೊದಲಿಗೆ ಯಾರ ಸಹಾಯವೂ ಇಲ್ಲದೇ, ನೊಂದ ಮನಕೆ ಆಸರೆ ಯಾಗುವ ನಿಧರ್ಾರ ಮಾಡುವುದೆಂದರೇ, ಅದು ಪ್ರಶಂಸಯೋಗ್ಯವೇ. ಅದಕ್ಕೆ ಹೆಜ್ಜೆ ಹೆಜ್ಜೆಗೂ ಅವರ ಪತ್ನಿ ಸುಚೇತಾ ದಾಮಣೆಯು ಸಹಕರಿಸುವುದು ಅವರ ನಿಧರ್ಾರವನ್ನು ಇನ್ನಷ್ಟು ದೃಢೀಕರಿಸಿತು.
“ಕೇವಲ ಜಾಗೃತಿಗಾಗಿ ವಿಚಾರ ಮಂಥನದ ಕಡಗೋಲನ್ನು ತಿರುಗಿಸದೇ ನೇರವಾಗಿ ಸಮಸ್ಯೆಗೆ ಕೈಹಾಕಿ ಪರಿಹಾರವನ್ನು ಹುಡುಕುವುದರಲ್ಲಿ ನಿಜವಾದ ಅರ್ಥವಿದೆ. ಈ ಹೋರಾಟಕ್ಕೆ ಅಂತ್ಯವಿಲ್ಲದಿದ್ದರೂ ಪೂರ್ಣ ಧೈರ್ಯ, ಶಕ್ತಿಯಿಂದ ಹೋರಾಡಲೇ ಬೇಕಾಗುತ್ತದೆ. ಕತ್ತಲೆಯ ಮಡಿಲಲ್ಲಿ ಬೆಳಕಿನ ಕೂಸನ್ನು ಹುಟ್ಟಿಸಿ ಬೆಳೆಸಲೇಬೇಕು” ಎನ್ನುತ್ತಾರೆ ಡಾ| ರಾಜೇಂದ್ರ ದಾಮಣೆ.
ಒಟ್ಟಿನಲ್ಲಿ ಈ ಭೇಟಿ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡಿಸಿತು. ಇಂದಿಗೂ ಅಲ್ಲಿ ಭೇಟಿಯಾದ ಮಹಿಳೆಯರ ಮುಖ, ನೋವು, ಕಣ್ಣೆದುರಿಗೆ ಬರುತ್ತದೆ. ಅದರೊಂದಿಗೆ ಆ ದಂಪತಿಯ ತ್ಯಾಗ, ಮನೋಭಾವ, ತಾಳ್ಮೆ, ಸೇವೆಯ ಇಚ್ಛಾಶಕ್ತಿಯನ್ನು ನೆನೆದು ನನ್ನಲ್ಲಿ ನಾನು ಕುಬ್ಜಳಾಗುತ್ತೇನೆ. ವ್ಯಕ್ತಿಯೊಬ್ಬ ಸಂತನಾಗಬೇಕಾದರೆ ಕಾವಿವಸ್ತ್ರ ಹಾಕಲೇಬೇಕೆಂದಿಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಂತ ಮನೋವೃತ್ತಿ ಜನ್ಮತಃ ಇದ್ದೇ ಇರುತ್ತದೆ. ಅದನ್ನು ಜಾಗೃತಗೊಳಿಸಬೇಕಷ್ಟೇ. ದಾನವ ಮನೋವೃತ್ತಿಗೆ ಪ್ರೇರಕವಾದ ಮಾದಕ ಪದಾರ್ಥಗಳಿಗಾಗಿ ನಾವು ನೀರಿನಂತೆ ಹಣ ಸುರಿಸಲು ತಯಾರಿರುತ್ತೇವೆ. ಆ ವಸ್ತುಗಳೇ ಮಹಿಳೆಯ ಬಾಳು ದುದರ್ೈವ ಗೊಳಿಸಲು ಪ್ರೋತ್ಸಾಹಿಸುವಂತಹದ್ದು. ಆಲೋಚನೆಯನ್ನು ಹರವು ಗೊಳಿಸಿದರೇ ಇದು ಸೂಕ್ತವೇ? ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರ ನಾವೇ ಆಗಬೇಕು. ಸಮಾಜದಲ್ಲಿದ್ದು ಸಮಾಜದ ಕಸವನ್ನು ರಸ ಮಾಡುವ ಕೆಲಸ ನಮ್ಮಿಂದಲೇ ಆಗಬೇಕು.






samajadalli ondhede paisachika kukrutyagalu nadedare, innondhede inthaha manaviya hrudaya galiruvudarindale ee jagattu nadeyutte. thumba chenaagide.
ಮಾವುಲಿ ಸೇವಾ ಪ್ರತಿಷ್ಠಾನದಲ್ಲಿ ಆಶ್ರಯ ಪಡೆದಿರುವವರ ಪರಿಸ್ಥಿತಿಯನ್ನು ಚೆನ್ನಾಗಿ ಅಥೈಸಿಕೊಂಡು ಅವರ ಮನಸ್ಸಿನ ವೇದನೆಯನ್ನು ಆಲಿಸಿಕೊಂಡು ಬರೆದಿ ರುವ ನಿಮ್ಮ ಈ ಲೇಖನ ಹೃದಯ ತಟ್ಟಿದೆ….
knnadada prthibhavantha leakhaki hema sadananda ameen mumbai avra “kathaleya thottilalli belakina kuusu” leakhana odi nijku achriyaithu. ondu hosa bgeya pravsa kthannavagide. leakhanadalli lekhakiya anubhvgalu ondondu sthardlli sagutha pravsada aneka mukhagalanu odugrige parichaisuva majalugalu thumba bhinnavgide. vasthavdalli edondu pravasa kathanakkintha ondu bhavanathmaka athava bhauktheya brahavagi thanu-mana spandisuthade. vandanegalu. awadhi sada sudhi maduthalirli!- vittalagatty uliya, managalore
bahala channagide
very good story and great elaboration
People should come and help such ngo…..hats off to Damne family…….also good writing by the writer