ಕಣ್ಣು ಮುಚ್ಚಿದ ನೇತ್ರ…

ಖ್ಯಾತ ಛಾಯಾಗ್ರಾಹಕ ನೇತ್ರ ರಾಜು ಇನ್ನಿಲ್ಲ.

‘ಬಹುರೂಪಿ’ ಪ್ರಕಾಶನ ಹೊರ ತಂದ ‘ಕಾಡುವ ಕಿ ರಂ’ಗೆ ಮುಖಪುಟವಾಗಿದ್ದು ನೇತ್ರ ರಾಜು ಫೋಟೋಗಳು.

ಕ್ಯಾಮೆರಾಗೆ ಕಣ್ಣಾಗಿದ್ದ ಅಪರೂಪದ ವ್ಯಕ್ತಿ ಇವರು ಎಂದು ಅವರನ್ನು ಬಹುಕಾಲದಿಂದ ಹತ್ತಿರದಿಂದ ಕಂಡ ಮೂವರು ಆತ್ಮೀಯರು ಇಲ್ಲಿ ಸ್ಮರಿಸಿದ್ದಾರೆ. ಈ ಮೂರೂ ಬರಹಗಳು ನೇತ್ರ ರಾಜು ಇಂತಹ ಎಂತಹ ಪ್ರೀತಿಯ ಜೀವ ಎನ್ನುವುದನ್ನು ಸಾರುತ್ತದೆ.

ಈ ಮೂರೂ ಸಂತಾಪ ಬರಹಗಳನ್ನು ಫೇಸ್ ಬುಕ್ ನಿಂದ ತೆಗೆದುಕೊಳ್ಳಲಾಗಿದೆ.

ʼನೇತ್ರ ʼವಿಲ್ಲದ ಮೈಸೂರು

೧೯೯೨ ನಾನಾಗ ಮೈಸೂರಿನಲ್ಲಿದ್ದೆ. ಪತ್ರಿಕೋದ್ಯಮ ವಿದ್ಯಾರ್ಥಿ. ‘ಆಂದೋಲನ’ ಪತ್ರಿಕೆಯ ಮುಖಪುಟದಲ್ಲಿ ನಿತ್ಯವೂ ನಾಗರೀಕ ಸಮಸ್ಯೆಗಳ ಬಿಂಬಿಸುವ ಚಿತ್ರಗಳು ಪ್ರಕಟವಾಗುತ್ತಿದ್ದವು. ಕೆಳಗಡೆ ಪೋಟೋ ಹೆಸರು ʼ ನೇತ್ರರಾಜು ʼ ಎಂದು ಇರುತಿತ್ತು. ನಿತ್ಯ ಪತ್ರಿಕೆಯನ್ನು ನೋಡುತ್ತಾ ಇವರ ಅಭಿಮಾನಿಯಾಗಿ ಹೋದೆ.

ಒಂದು ದಿನ ಇವರನ್ನು ಕಾಣಲೇಬೇಕೆಂದು ‘ಸ್ಟರಲಿಂಗ್‌’ ಥಿಯೇಟರ್‌ ಬಳಿ ಇದ್ದ ಇವರ ಸ್ಟುಡಿಯೋಗೆ ಹೋಗಿ ಇವರನ್ನು ಮಾತಾಡಿಸಿಕೊಂಡು ಬಂದೆ. ನಾನು ನಿಮ್ಮ ಅಭಿಮಾನಿ ನಿತ್ಯ ನಿಮ್ಮ ಪೋಟೋಗಳನ್ನು ನೋಡುತ್ತಿರುವೆ. ತುಂಬಾ ಚೆನ್ನಾಗಿ ತೆಗೆಯುತ್ತೀರಿ ಎಂದು ಹೇಳಿಬಂದಿದ್ದೆ. ಆ ನೆನಪು ಇನ್ನೂ ಹಸಿರಾಗಿಯೇ ಇದೆ.

ಕಳೆದ ವರ್ಷವಷ್ಟೆ ಅವರ ಜೊತೆ ಮಾತಾಡಲೆಂದು ಮೈಸೂರಿನ Basavaraju Anurag Basavaraj ಅವರಿಂದ ನಂಬರ್‌ ಪಡೆದು ಮಾತಾಡಿದ್ದೆ. ಛೇ ಎಂತಹ ಅನಾಹುತವಾಯಿತು. ಆತ್ಮೀಯರನ್ನು ಕಳೆದುಕೊಂಡು ಮನಸ್ಸು ಭಾರವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ವಿರೂಪಾಕ್ಷನಲ್ಲಿ ಬೇಡುವೆ.

-ಶಿವಶಂಕರ ಬಣಗಾರ್

ಮೈಸೂರಿನಿಂದ ಅತ್ಯಂತ ಆಘಾತಕಾರಿ ಸುದ್ದಿಯೊಂದು ಬಂದಿದೆ. ಮೈಸೂರಿನ ಪತ್ರಿಕಾ ಲೋಕದಲ್ಲಿ ನೇತ್ರ ಎಂದೇ ಹೆಸರುವಾಸಿಯಾಗಿದ್ದ ನಮ್ಮ ಪ್ರೀತಿಯ ನೇತ್ರರಾಜು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಹೂವಿನಂತ ಮಾತು, ಮಗುವಿನಂತ ಮನಸ್ಸು, ಮಾನವೀಯ ಗುಣ, ದಣಿವರಿಯದ ಶ್ರಮ, ಒಂದಿಂಚೂ ಅಲುಗಾಡದ ವೃತ್ತಿ ನಿಷ್ಠೆ, ಬದ್ಧತೆ ಮತ್ತು ಸಾಮಾಜಿಕ ಕಾಳಜಿ ನೇತ್ರರಾಜು ಅವರ USP.

ಈ ಎಲ್ಲ ವಿಷಯಗಳಲ್ಲಿ ನೇತ್ರರಾಜುಗೆ ನೇತ್ರರಾಜುನೇ ಸಾಟಿ. ಕರ್ನಾಟಕದ ಮಾಧ್ಯಮ ಲೋಕ ಒಬ್ಬ ಪ್ರತಿಭಾವಂತ ಫೋಟೋ ಜರ್ನಲಿಸ್ಟ್ ಕಳೆದುಕೊಂಡು ಇಂದು ನಿಜಕ್ಕೂ ಬಡವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ… Mysore Media World will Miss Him Very Badly..!

-ಸುಭಾಷ್ ಹೂಗಾರ್

ಕಣ್ಣು ಮುಚ್ಚಿದ ನೇತ್ರ…….

ಮೈಸೂರಿನ ಖ್ಯಾತ ಫೋಟೋಗ್ರಾಫರ್… , ಕ್ಯಾಮರಕ್ಕೇ ನೇತ್ರನಂತಿದ್ದ ರಾಜು ಇನ್ನು ಬಾರದ ಲೋಕಕ್ಕೆ ತೆರಳಿದ್ದಾರೆ.

ಮೈಸೂರಿನಲ್ಲಿ ಪತ್ರಿಕೋದ್ಯಮ ಕಲಿಯುತ್ತಿದ್ದ ಸಂದಭ೯ ಆಂದೋಲನಕ್ಕೆ ವೀರಪ್ಪನ್ ಕುರಿತ ವರದಿ ಮಾಡುತ್ತಿದ್ದ ಸಂದಭ೯ ಗೆಳೆಯರಾದ ನೇತ್ರ ತೆಗೆಯುತ್ತಿದ್ದ ಚಿತ್ರಗಳೇ ಎಲ್ಲಾ ಕಥೆ ಹೇಳುವಂತಿದ್ದವು. ವೀರಪ್ಪನ್ ಸಂಬಂಧಿತ ಸರಿಸುಮಾರು 8 ವಷ೯ಗಳ ಕಾಲ ನೇತ್ರ ಫೋಟೋ ತೆಗೆದು ಆಂದೋಲನಕ್ಕೆ ನೀಡುತ್ತಿದ್ದರು

ನೇತ್ರ ಹೊಸ ಬೈಕ್ ತೆಗೆದ ದಿನವೇ ನಾನು ಅವರೊಂದಿಗೆ ಆ ಬೈಕ್ ನಲ್ಲಿ ಮೆಟ್ಟುಪಾಳ್ಯಂಗೆ ವೀರಪ್ಪನ್ ಸ್ಟೋರಿ ಬೆನ್ನತ್ತಿ ಹೋಗಿದ್ದು, ಬರುವಾಗ ಹೊಸ ಬೈಕ್ ನಿಂದ ಬಿದ್ದು ಬೈಕ್ ನಜ್ಜುಗುಜ್ಜಾಗಿದ್ದು, ಸಾವಿರಾರು ರುಪಾಯಿ ಲಾಸ್ ಆಗಿದ್ದು…. ಮತ್ತೊಮ್ಮೆ ಸತ್ಯಮಂಗಲಂಗೆ ಹೋಗಿ ಬರುವಾಗ ಕಾಡಿನ ಮಧ್ಯೆಯೇ ಬೈಕ್ ನ ಪೆಟ್ರೋಲ್ ಮುಗಿದು ಸಾಕಷ್ಟು ಸಮಸ್ಯೆ ಪಟ್ಟದ್ದು.. ಒಂದೇ ಎರಡೇ ನೇತ್ರನೊಂದಿಗಿನ ನೆನಪುಗಳು ನೂರಾರು.

ವಿದ್ಯಾರಣ್ಯ ಪುರಂನಲ್ಲಿದ್ದ ನೇತ್ರ ಸ್ಟುಡಿಯೋ ಹೊಸತನಗಳಿಗೆ ಹೆಸರಾದ ಸ್ಟುಡಿಯೋ… ರಾಜು ನೀಡುತ್ತಿದ್ದ ಜ್ಯೂಸ್ ಸವಿದು ರಾಜುವಿನ ಅನುಭವ ಕೇಳುತ್ತಿದ್ದರೆ ಹೊಸದ್ದೊಂದು ಲೋಕ ತೆರೆದುಕೊಳ್ಳುತ್ತಿತ್ತು.. ಸಾಕಷ್ಟು ಮರೆಗುಳಿಯಾಗಿದ್ದ ರಾಜು.. ಫೋಟೋವನ್ನು ಹೇಳಿದ ಸಮಯಕ್ಕೆ ಕೊಟ್ಟದ್ದು ಕಡಮೆಯೇ…. ಅಯ್ಯೋ ಮರೆತೇ ಬಿಟ್ಟೆ ಮಾರಾಯ್ರೆ.. ಮಿಸ್ಸೇಕ್ ಮಾಡಿಕೊಳ್ಳಬೇಡಿ… ಬೇಸರ ಆಯ್ತಾ ಎಂದೆಲ್ಲಾ ಪುಸಲಾಯಿಸುತ್ತಿದ್ದ ರಾಜು ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದರು.

ಪತ್ರಿಕೆಗಳಿಗೆ ನ್ಯೂಸ್ ಫೋಟೋ ಕ್ಲಿಕ್ಕಿಸುವುದರಲ್ಲಿಯೇ ತೖಪ್ತಿ ಕಂಡುಕೊಂಡಿದ್ದ ನೇತ್ರ ರಾಜು ಕನಾ೯ಟಕದ ಟಾಪ್ 10 ಫೋಟೋ ಜನ೯ಲಿಸ್ಟ್ ಗಳಲ್ಲಿ ಒಬ್ಬರು..ರಾಜಶೇಖರ ಕೋಟಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಜು,, ನಂತರ ಟೈಂಸ್ ಆಫ್ ಇಂಡಿಯಾಕ್ಕೆ ಫೋಟೋಗ್ರಾಫರ್ ಆಗಿ ಕಾಯ೯ನಿವ೯ಹಿಸಿದ್ದರು.

ಮೈಸೂರಿನ ಹೆಸರಾಂತ ಪತ್ರಕತ೯ ಅಂಶಿ ಪ್ರಸನ್ನ ಕುಮಾರ್, ಹರೀಶ್ ಬಂದಗದ್ದೆ, ಕುಂದೂರು ಉಮೇಶ್ ಭಟ್, ರಾಜೀವ್ ನಾಗೇಶ್ ಪಾನತ್ತಲೆ, ಮತ್ತಿತರರಿಗೆ ನೇತ್ರರಾಜು ಆಪ್ತ ಗೆಳೆಯ.. ಫೋಟೋಗ್ರಫಿಯ ಹೊಸ ಕ್ಲಿಕ್ ಗಳಿಗೆ ಬಹಳ ವಷ೯ಗಳ ಹಿಂದೆಯೇ ಕಣ್ಣು ತೆರೆದಿದ್ದ ರಾಜು…. ಅಪರೂಪದಲ್ಲಿ ಅಪರೂಪದ ಫೋಟೋಗ್ರಾಫರ್… ಅಂತೆಯೇ ಬಹಳ ಅಪರೂಪದ ಸರಳ ಮತ್ತು ಮಾನವೀಯತೆಯುಳ್ಳ ಜೀವಿ ಕೂಡ..

ಕ್ಯಾಮರವನ್ನು ಪ್ರೀತಿಸಿದಷ್ಟು,, ಫೋಟೋಗಳನ್ನು ಪ್ರೇಮಿಸಿದಷ್ಟು ಬೇರೆ ಯಾರನ್ನೂ ರಾಜು ಹಚ್ಚಿಕೊಂಡಿರಲಿಲ್ಲ. ಕ್ಯಾಮರವೇ ಅವರ ಜೀವ ಮತ್ತು ಜೀವನವಾಗಿತ್ತು. ಅನೇಕ ಅಂತಾರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿಗಳು ರಾಜುವಿನ ಅಪೂರ್ವ ಚಿತ್ರಗಳಿಗೆ ದೊರಕಿದ್ದವು.

ನೇತ್ರ ರಾಜು( 62)ವಿನಿಂದ ಸಾಕಷ್ಟು ನಿರೀಕ್ಷೆಗಳು ಭವಿಷ್ಯದಲ್ಲಿದ್ದವು..ಈಗ ಕೊನೆಯದ್ದಾಗಿ ತನ್ನ ಪ್ರೀತಿಯ ಕ್ಯಾಮರ ಪ್ಯಾಕ್ ಮಾಡಿ ಮೈಸೂರಿನಲ್ಲಿ ಹೖದಯಾಘಾತದಿಂದ ಮತ್ತೆ ಬಾರದ ಲೋಕಕ್ಕೆ ಸಾಗಿಬಿಟ್ಟಿದ್ದಾರೆ..ಏನು ಹೇಳುವುದು ಗೊತ್ತಾಗುತ್ತಿಲ್ಲ..ಮಿಸ್ ಯು ನೇತ್ರ.. ಮಿಸ್ ಯು.. ಡಿಯರ್ ರಾಜು…

-ಅನಿಲ್ ಎಚ್ ಟಿ

‍ಲೇಖಕರು avadhi

May 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: