ಮುಕುಂದಾ ಬೃಂದಾ
ಹೇಳುವುದು ಬಹಳವಿದೆ!
ಬತ್ತಿಹೋದ ಕಣ್ಣಾಲೆಗಳು
ಮತ್ತೆ ಧುಮ್ಮಿಕ್ಕಿ ಹರಿದಿವೆ
ಒತ್ತಿಹಿಡಿದಷ್ಟು ಚಿಮ್ಮಿವೆ
ಕಣ್ಣೀರು ಧಾರೆಯಂತೆ
ಅಳಿಸಲಾಗದೆ ಚಿತ್ರಗಳ
ಮರೆಯಲಾಗದೆ ನೋವ
ಶಬ್ದಗಳುಕ್ಕಿ ಹರಿದಿವೆ
ನಿಶಬ್ಧ ಕಾಳರಾತ್ರಿಯಲಿ
ಹತ್ತು ಹಲವು ನೆನಪುಗಳು
ಬಿತ್ತರಿಸಿ ಮರೆಯಾಗೆ
ಕುಕ್ಕಿಕುಕ್ಕಿ ನೂರೆಂಟು ಸಲ
ತತ್ತರಿಸಿ ಕೂಗಿಟ್ಟಿತಲ್ಲೇ
ಗೋಣೆತ್ತಿ ನಕ್ಷತ್ರಗಳೊಳಗೆ
ಹುಡುಕುತಿರುವೆ ನೀನೆಲ್ಲಿ
ಒಂದೊಮ್ಮೆ ಕಂಡುಬಿಡು
ಹೇಳುವುದು ಬಹಳವಿದೆ..!
ಚೆನ್ನಾಗಿದೆ
ತುಂಬಾ ಚೆನ್ನಾಗಿದೆ