-ಕಾರ್ತಿಕ್ ಭಟ್ ಬಳಗುಳಿ
ಅಂಗೈಯಲ್ಲಿ ಕಂಡ ಕನಸು.
ಅಂಗ್ಯೆಯಲ್ಲಿ ಕಂಡ ಕನಸಿಗೂ
ಹಾಕುತ್ತಿರುವ ಹೆಜ್ಜೆಗೂ
ಸಂಬಂಧವೇ ಇಲ್ಲ
ಕಂಡ ವರ್ಣಮಯ ಕನಸಿಗೊಂದು
ಕೊನೆಗೂ ವೇದಿಕೆ
ಸಿಗಲೇ ಇಲ್ಲ……
ನಿರೀಕ್ಷೆಯಂತಿಲ್ಲ ಪಯಣವೂ
ಕೆಲವೊಮ್ಮೆ ಹಚ್ಚಹಸುರು
ಕೆಲವೊಮ್ಮೆ ಬರಡು ಭೂಮಿ……
ಕಂಡ ಕನಸೊಂದು ಹೊಳೆಯಲ್ಲಿ ತೇಲಿ
ಹೋಯಿತು ಅಂತ ಅದರ ಹಿಂದೆ ಓಡಲೇ?
ಕಂಡ ಕನಸೊಂದು ಕಮರಿ ಹೋಯಿತು
ಅಂತ ಸುಮ್ಮನೇ ಇರಲೇ?
ಅಥವಾ ಅದರ ಬೆನ್ನಟ್ಟಿ ಹೋಗಲೇ?
ಗೊತ್ತಿಲ್ಲ….
ಉತ್ತರ ಸಿಗದ ಪ್ರಶ್ನೆಗಳು……
ಕಂಡ ಕನಸೊಂದು
ನೀರಿನ ಗುಳ್ಳೆಯಂತೆ
ಮಾಯವಾಗಿ ಬಿಟ್ಟರೇ…….
ಕಂಡ ಕನಸೊಂದು
ಕಣ್ರೆಪ್ಪೆ ಮುಚ್ಚಿದಂತೆ
ಕತ್ತಲಾವರಿಸಿದರೆ
ಏನು ಗತಿ……
ಕಂಡ ಕನಸೊಂದು
ಫಸಲು ಬರುವ ಹೊತ್ತಿಗೆ ಬೆಳೆ ನಾಶವಾದಂತೆ
ನಾಶವಾಗಿ ಬಿಟ್ಟರೇ?
ಕಂಡ ಕನಸು ನೆರಳಿನಂತೆ
ಮರೆಯಾಗಿಬಿಟ್ಟರೇ?
ಕಂಡ ಕನಸು ಕನ್ನಡಿಯಲ್ಲಿ ಕಂಡ
ಬಿಂಬದ ಹಾಗೇ…..
ಇರಬಹುದೇ?
ಅಥವಾ
ದಿಕ್ಕೆಟ್ಟ ಗಾಳಿಯಲಿ
ಆಳ ಸಮುದ್ರದ ದೋಣಿಯಲಿ
ಒಂಟಿ ಪಯಣಿಗನಂತೆ ಇರಬಹುದೇ?
ಗೊತ್ತಿಲ್ಲ…….
ಕೊನೆಗೂ ಅಂಗೈಯಲ್ಲಿ ಕಂಡ ಕನಸಿಗೊಂದು
ವರ್ಣಮಯ ವೇದಿಕೆ ಸಿಗಲೇ ಇಲ್ಲ .






0 Comments