ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓ ಮರವೇ.. ಮರ್ಮರವೇ..

vini nayak

ವಿನಿ ನಾಯಕ್ 

treeಮನೆಯ ಮುಂದೊಂದು ಮರ.

ಮನೆ ಮುಂದೊಂದು ದೊಡ್ದ ಮಾವಿನ ಮರ. ಪ್ರತಿದಿನವೂ, ಹಬ್ಬದ ಮನೆಯಂತೆ ಮಾವಿನ ಮರದ ತುಂಬೆಲ್ಲಾ ಸಡಗರ. ಅದರ ತುಂಬ ಬಣ್ಣ ಬಣ್ಣದ ಹಕ್ಕಿಗಳು. ಅವುಗಳ ಚಿಲಿಪಿಲಿ, ಗೂಡುಗಳು, ಗದ್ದಲ ನೋಡೋದೆ ಒಂದು ಸಂಭ್ರಮ.

ಕೆಲವೊಮ್ಮೆ ಮರದ ತುಂಬಾ ಜೋಕಾಲಿ ಆಡೋ ಮಂಗಗಳು. ಅಳಿಲ0ತೂ ಮರದ ತು0ಬಾ ಸುತ್ತಾಡ್ತಾನೆ ಇರುತ್ತೆ. ಎನಿಲ್ಲಾ ಅಂದ್ರೂ ಒ0ದು ಇನ್ನೂರು ತರದ ಚಿತ್ರ ವಿಚಿತ್ರ ಹುಳು ಹುಪ್ಪಡಿಗಳಿಗಳಿವೆ ಅದರಲ್ಲಿ.

ಬೇಸಿಗೆಯ ಬಿಸಿಲಲ್ಲಿ ತಣ್ಣನೆಯ ನೆರಳು ಕೊಡೋವಾಗ ಮರ ನಗುತ್ತಿದೆಯೇನೋ ಅನ್ನಿಸುತ್ತೆ. ಇನ್ನೂ ಮಳೆಗಾಲದಲ್ಲ0ತೂ ಅದರ ಮೈತುಂಬಾ ಮಳೆ ಹನಿಗಳ ಶೃಂಗಾರ.

ಮಾವಿನ ಹಣ್ಣಿನ ಕಾಲದಲ್ಲ0ತೂ ತಿ0ದಷ್ಟೂ ಮುಗಿಯದ ಸಿಹಿ ಸಿಹಿ ಹಣ್ಣುಗಳು. ಜೊತೆಗೆ ಉಪ್ಪಿನಕಾಯಿ, ಮಾವಿನ ಸಾಸಿವೆ, ರಸಾಯನಗಳು. ಮಾವಿನ ತೋರಣವಿಲ್ಲದೆ ಹಬ್ಬ ಪೂಜೆಗಳೆ ನಡೆಯದು…

ಒ0ದಿಷ್ಟೂ  ಅಸಹನೆ ತೋರದೆ ಸದಾ ಹಸಿರಾಗಿ ಕ0ಗೊಳಿಸುವ ಅದರ ಸಹನೆ ಅದ್ಭುತವಾದುದು. ಮನೆ ಪಕ್ಕ ಮರ ಇದ್ರೆ ಎಲೆಗಳು ಬಿದ್ದು ಕಸವಾಗುತ್ತೆ ಅ0ತ ಒಬ್ಬರು ಮರ ಕಡೀಸ್ತಿದ್ರು.. ಅದೇನೊ ಹೇಳ್ತಾರಲ್ಲ; ತಾವು ತೋಡಿದ ಹಳ್ಳದಲ್ಲಿ ತಾವೇ ಬೀಳೋದು ಅ0ತ….!

‍ಲೇಖಕರು Admin

5 June, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading