ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓ ಗಂಡಸರೇ ನೀವೆಷ್ಟು ಒಳ್ಳೆಯವರು..

ವೀಣಾ ಬಡಿಗೇರ್

ಓ ಗಂಡಸರೇ ನೀವೆಷ್ಟು ಒಳ್ಳೆಯವರು
ಸುಕೋಮಲೆ, ಸುಭಾಷಿಣಿ, ಕ್ಷಮಯಾ ಧರಿತ್ರಿ
ಎಂದೆಲ್ಲಾ ನನ್ನ ಪರಿಪರಿಯಾಗಿ ಬಣ್ಣಿಸುವ
ಓ ಗಂಡಸರೇ ನಿವೇಷ್ಟು ಒಳ್ಳೆಯವರು

ಪಾರ್ಲರಿನ ಹುಡುಗಿಯ ಮುಂದೆ ಬೆತ್ತಲಾಗಿ ನಿಂತು
ಬೆಲ್ಲದ ಪಾಕವ ಮೈಗೆಲ್ಲಾ ಅಂಟಿಸಿಕೊಂಡು
ಜೀವಹೋಗುವ ನೋವಾದರೂ
ರೋಮರಹಿತ ದೇಹವ ಮಟ್ಟಸವಾಗಿಸಿಕೊಳ್ಳುವ ನನ್ನ ಮುಟ್ಟಿ ನೋಡಿ
ಆಹಾ! ಎಷ್ಟು ನುಣುಪು ಎಂದು ಹೊಗಳುವ ನಿವೇಷ್ಟು ಒಳ್ಳೆಯವರು

ಲಕ್ಷಗಟ್ಟಲೇ ದುಡಿದು ನಿಮ್ಮ ಕೈಗಿಟ್ಟು
ಸೀರೆ ಕೊಡಿಸು ಒಡವೆ ಕೊಡಿಸೆಂದು ದುಂಬಾಲು ಬಿದ್ದು
ಆ ಎಲ್ಲವ ಕೊಡಿಸಿಕೊಂಡು ಹಿಗ್ಗಿನಿಂದ ಬೀಗುವ
ನನ್ನಡೆಗೆ ನೋಡಿ ತೃಪ್ತಿಯಿಂದ ಹೃದಯ ತುಂಬಿಕೊಳ್ಳುವ
ಓ ಗಂಡಸರೇ ನಿವೇಷ್ಟು ಒಳ್ಳೆಯವರು

ನಸುಕಿನಲೇ ಎದ್ದು, ನೀನೇ ಇಂದ್ರ ನೀನೇ ಚಂದ್ರ
ನೀನೇ ಪರದೈವ ಎಂದು ಕಾಲುಮುಟ್ಟಿ
ನೀ ಕಟ್ಟಿದ ತಾಳಿಯೇ ದುಷ್ಟ ರಕ್ಷಕ
ಎಂದು ಕಣ್ಣಿಗೊತ್ತಿಕೊಳ್ಳುವಾಗ ಅದ ನೋಡಿ ಕಣ್ಣ ತುಂಬಾ
ಪ್ರೀತಿಯ ಹೊಳಪ ತುಂಬಿಕೊಳ್ಳುವ
ಓ ಗಂಡಸರೇ ನಿವೇಷ್ಟು ಒಳ್ಳೆಯವರು

ನನ್ನ ಮನುಷ್ಯ ಜಾತಿಯ ಹೊಟ್ಟೆ ಕೆಟ್ಟು
ದೇವರು ಕೊಟ್ಟ ಪೀಪಿ ಸದ್ದು ಮಾಡುವಾಗ
ಕೆಲವೊಮ್ಮೆ ಭೂರಿ ಭೋಜನದ ಆನಂದದಿಂದ ಉಬ್ಬಿ
ಅನ್ನನಾಳ ಓಓಓ. . .ಬ್ ಎಂದು ಸದ್ದು ಮಾಡುವಾಗ
ಮತ್ತೊಮ್ಮೆ ನಾ ಸುಕೋಮಲೆ ಎಂದು ಮನವರಿಕೆ ಮಾಡಿಕೊಡುವ
ಓ ಗಂಡಸರೇ ನಿವೇಷ್ಟು ಒಳ್ಳೆಯವರು

‍ಲೇಖಕರು avadhi

8 March, 2018

1 Comment

  1. Basavanneppa

    veena ji ni kattida taliye dusta rakshaka idu tumba ahmkarada maatu anisutte ,bedade iddare kittu ogeyuva libarty nimagide alva..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading