ಓದುತ್ತೇನೆ..

ಹೊಸ ವರ್ಷಕ್ಕೊಂದು ಹೊಸ ಯೋಜನೆ

ಸಂಗಮೇಶ ಸಜ್ಜನ್ 

ನಾ ಕಂಡ ಸಾಹಿತ್ಯದ ಪರಿಯೇ ಬೇರೆ, ಒಂದಾನೊಂದು ಕಾಲದಲ್ಲಿ ಇದೇನು ತಲೆದಿಂಬಿನಂತಿರುವ ಪುಸ್ತಕವನ್ನು ಕೈಯಲ್ಲಿಡಿದು ಓದುವುದೇ, ಛೆ ಅಂತ ಕಪಾಟಿನಲ್ಲಿಯೇ ವಾಪಾಸ್ ಇಡ್ತಿದ್ದೆ.

ಆದರೆ ಬೇಂದ್ರೆಯ ನಾಕುತಂತಿಯಿಂದ ನನಗೂ ಸಾಹಿತ್ಯದ ಬಗ್ಗೆ ಒಲವಾಯಿತು.

ಸಾಹಿತ್ಯ ಅಂದ್ರೆ ಬರಿ ಓದು ಅಂತ ಅಷ್ಟೇ ಅಂದುಕೊಂಡ ನನಗೆ, ಈಗೀಗ ಅರಿತದ್ದಿಷ್ಟೇ, ಸಾಹಿತ್ಯವೆಂದರೆ ಭಾವನೆ, ಸಾಹಿತ್ಯವೆಂದರೆ ಬಂಧನ, ಸಾಹಿತ್ಯವೆಂದರೆ ಪ್ರೀತಿ, ಸಾಹಿತ್ಯವೆಂದರೆ ಬದುಕು ಅಂತ ಅರಿತದ್ದು ಅನೇಕ ಪುಸ್ತಕಗಳನ್ನೋದಿದಾಗಲೇ.

ನಾಕುತಂತಿಯಿಂದ ಶುರುವಾದ ನನ್ನ ಓದು ಇವತ್ತು ಬರಿ ಬೇಂದ್ರೆಗಷ್ಟೇ ಸೀಮಿತವಾಗಲಿಲ್ಲ, ಕಾರಂತರ ಮೂಕಜ್ಜಿಯ ಕನಸನ್ನು ಸೆಳೆಯಿತು, ಚಿತ್ತಾಲರ ಕತೆಯಾದಳು ಹುಡುಗಿಯನ್ನು ಸೆಳೆಯಿತು, ಇನ್ನು ಅನೇಕಾನೇಕ ಚಂದದ ಪುಸ್ತಕಗಳನ್ನೋದಿದ ಹೆಮ್ಮೆ ನನಗೆ.

ಒಮ್ಮೊಮ್ಮೆ ಪುಸ್ತಕಗಳನ್ನೋದುತ್ತಾ ಅಲ್ಲಿ ಬರುವ ಯಾವದೋ ಸನ್ನಿವೇಶ ನನಗೂ ಹತ್ತಿರವಾದಾಗ ನಾನು ಕೆಲವೊಮ್ಮೆ ಖುಷಿ ಪಟ್ಟಿದ್ದೆ, ಕೆಲವೊಮ್ಮೆ ತಲೆಗುಂಬಿಗೆ ಮುಖಕೊಟ್ಟು ಅತ್ತಿದ್ದೆ.

ನಾನ್ಯಾಕೆ ಈ ಪುಸ್ತಕಕ್ಕೆ ಇಷ್ಟು ಹತ್ತಿರವಾದೆನೋ ಅಂತ ಯೋಚಿಸಿದಾಗ, ಬರಹಗಾರ ಬರಿ ತನ್ನ ಭಾವನೆಯನ್ನೋ ಅಥವಾ ತನ್ನ ಬವಣೆಯನ್ನೋ ಬರೆದಿಲ್ಲ, ಓದುಗನನ್ನು ಹತ್ತಿರವಾಗಿಟ್ಟುಕೊಂಡು ಬರೆದುದಕ್ಕೋ ಏನೋ ನಮ್ಮನ್ನು ಸಹ ಅದೇ ಲೋಕಕ್ಕೆ ಕರೆದುಕೊಂಡು ಹೋಗುತ್ತೆ, ಕನ್ನಡದಲ್ಲಿರುವಂತಹ ಕೃತಿಗಳು ಬೇರೆ ಯಾವ ಭಾಷೆಯಲ್ಲಿಯೂ ಇರಲಿಕ್ಕಿಲ್ಲ ಅಂತ ಅನಿಸುತ್ತೆ.

ಒಬ್ಬಬ್ಬರ ಕೃತಿಯಲ್ಲೂ ಒಂದೊಂದು ಛಾಪಿದೆ, ಜೋಗಿಯವರದ್ದೇ ಒಂದು ಛಾಪಿದ್ದರೆ, ವಸುಧೇಂದ್ರರದ್ದೇ ಒಂದು ಛಾಪಿದೆ, ಇಷ್ಟು ದಿನಾ ನಾನು ಓದಿದ್ದು ಒಂದು ರೀತಿಯಾದರೆ ಇನ್ನು ಮುಂದೆಯೂ ಓದುವುದೇ ಇನ್ನೊಂದು ರೀತೀತಿಯಾಗಿರುತ್ತೆ.

ಹೊಸ ವರ್ಷದ ಸಂಕಲ್ಪ ಇಷ್ಟೇ ಇನ್ನು ಅನೇಕಾನೇಕ ಒಳ್ಳೊಳ್ಳೆ ಕೃತಿಗಳನ್ನೋದೋ ಆಸೆ.

‍ಲೇಖಕರು avadhi

January 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kumar Vantamure

    ಓದಿನ ಬಗ್ಗೆ ಇರುವ ಪರಿಕಲ್ಪನೆ ತುಂಬಾ ಚೆನ್ನಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: