ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಿನ ರುಚಿ ಹಿಡಿಸಿದ್ದು..

ವಿದ್ಯಾರಶ್ಮಿ ಪೆಲತಡ್ಕ

ಚಿತ್ರ: ಬೆಳಕು

ನನಗೆ ಓದಿನ ರುಚಿ ಹಿಡಿಸಿದ್ದು ಅಪ್ಪನೇ ಆದರೂ ಎಳೆಯದರಲ್ಲಿ ಇದ್ದ ಓದಿನ ಹಸಿವೆಗೆ ಆಗಾಗ ಪುಸ್ತಕದೂಟ ಕೊಡುತ್ತಿದ್ದವರು ಮರಕಿಣಿ ನಾರಾಯಣ ಮೂರ್ತಿ ಅಣ್ಣ.

ಮೊದಮೊದಲು ಅಪ್ಪನ ಜತೆಗೆ ಹೋಗಿ ಅವರು ತಂದ ಪುಸ್ತಕ ಓದುತ್ತಿದ್ದವಳು ಕ್ರಮೇಣ ಒಬ್ಬಳೇ ಹೋಗಿ ತಂದೋದುತ್ತಿದ್ದೆ. ಜೊತೆಗೆ ಅವರ ಚೆಂದದ ಮಡದಿ ಗೀತತ್ತಿಗೆ, ಅವರಮ್ಮ-ಅಮ್ಮ ಎಲ್ಲರ ಆತಿಥ್ಯ ಬೇರೆ. ಸಿಕ್ಕರೆ ಮಕ್ಕಳಾದ ಕೋಗಿಲೆ, ಕೃಷ್ಣದೀಪರ ನಗೆಯೂ…

ಕನ್ನಡದ ಕ್ಲಾಸಿಕ್ ಕೃತಿಗಳನ್ನೆಲ್ಲ ಇಟ್ಟಿರುವ ಮೂರ್ತಿ ಅಣ್ಣ ಈಗಲೂ ಸಾಹಿತ್ಯ ಲೋಕದ ಆಗುಹೋಗಿನ ಬಗೆಗೆ ಸದಾ ಅಪ್ ಟು ಡೇಟ್. ವರ್ಷಕ್ಕೊಮ್ಮೆ ಊರಿಗೆ ಹೋದರೆ ಹೋಗಬೇಕಿನಿಸುವ ಮನೆ-ಮನಸ್ಸು ಅವರದು.

ಈ ಬಾರಿ ಮಗಳೊಂದಿಗೆ ಭೇಟಿ. ಆ ಸಂದರ್ಭದ ಚಿತ್ರವಿದು.

‍ಲೇಖಕರು avadhi

28 May, 2019

1 Comment

  1. Vasundhara k m

    ಅರೆ, ಇಷ್ಟೆಯೇ..? ಈ ಕುರಿತು ಮತ್ತಷ್ಟು ಬರೆಯಿರಿ..ಓದಬೇಕೆನಿಸಿದೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading