ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಲೇಬೇಕಾದ 'ಸ್ವರ್ಗ'

geromy brook cover
ಅಂತಃಕರಣವೇ ಮನುಷ್ಯನ ರೂಪ ಪಡೆದ, ಅದು, ತಿರುಗುವ ಭೂಮಿಯು ಕಣ್ಣಿಗೆ ಕಾಣುವ ಸ್ಥಳದಲ್ಲಿ ನಿಂತು, ವೇಗವಾಗಿ ಚಲಿಸುತ್ತಿರುವ ಈ ಭೂಮಿ ಮೇಲೆ, ಅಷ್ಟೇ ವೇಗವಾಗಿ ಜರುಗುತ್ತಿರುವ ಈ ಕಾಲದ ಮನುಷ್ಯನ ದುರಾಸೆಗಳಿಗೆ ಸಿಕ್ಕಿ ತತ್ತರಿಸುತ್ತಾ ನಿಯಂತ್ರಣ ಕಳೆದುಕೊಂಡು ಅಡ್ಡಾದಿಡ್ಡಿ ಓಡುತ್ತಿರುವ ಕಾಲಗತಿ ಮತ್ತು ಪ್ರಪಂಚ ವ್ಯಾಪಾರಗಳನ್ನು ಕಣ್ಣಿಗೆ ಕಟ್ಟುವಂತೆ ಕಾಣಿಸುತ್ತವೆ ಇಲ್ಲಿನ ಜೆರೆಮಿ ಸೀಬ್ರೂಕ್ ಅವರ ಬರಹಗಳು.
ಜೊತೆಗೆ, ಜೆರೆಮಿ ಸೀಬ್ರೂಕ್ ಅವರು ಯಾವ ಪ್ರದೇಶದ ಬಗ್ಗೆ ಬರೆಯುತ್ತಾರೊ ಅದು ಭಾರತ ಇರಬಹುದು, ಬಾಂಗ್ಲಾ ಇರಬಹುದು, ಅಥವಾ ಇನ್ನೆಲ್ಲಿಯದೋ ಆಗಿರಬಹುದು. ಅಲ್ಲಿನವರಾಗಿ ಅಲ್ಲೇ ಹುಟ್ಟಿ ಬೆಳೆದವರು ಎಂಬಂತೆ ಆ ಕಷ್ಟಸುಖಗಳ ಸ್ಪರ್ಶಕ್ಕೆ ಅಕ್ಷರಗಳ ರೂಪ ಕೊಡುತ್ತಾರೆ.
ಮನುಷ್ಯನ ಸ್ವಾವಲಂಬನೆ, ಘನತೆ, ಸಮಾನತೆಗಳ ಹೃದಯ ಬಡಿತದಂತೆ ಇರುವ ಈ ಪುಟ್ಟ ಪುಟ್ಟ ಲೇಖನಗಳ ಪುಸ್ತಿಕೆಯು ನಮ್ಮೊಡನೆ ಇದ್ದರೆ ನಾವೊಂದು ಒಳಗಣ್ಣು ಪಡೆದಂತೆ.
– ದೇವನೂರು ಮಹಾದೇವ
ಇವು ಸುಗತ ಶ್ರೀನಿವಾಸರಾಜು ಮತ್ತು ರೋಸಿ ಡಿಸೋಜಾ ಅವರು ಜೆರೆಮಿ ಸೀಬ್ರೂಕ್ ಅವರ ಬರಹಗಳನ್ನು ಅನುವಾದಿಸಿ, ಸಂಪಾದಿಸಿರುವ “ಸ್ವರ್ಗಕ್ಕೆ ಮೂರೇ ಮೈಲಿ” ಕೃತಿಗೆ ಬರೆದ ಬೆನ್ನುಡಿಯ ಸಾಲುಗಳು.
ಜೆರೆಮಿ ಸೀಬ್ರೂಕ್ ಸಾಮಾಜಿಕ, ಪರಿಸರ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ ಪತ್ರಕರ್ತ ಮತ್ತು ಲೇಖಕ. ಕಳೆದ ವರ್ಷ ನವಯಾನ ಪ್ರಕಟಿಸಿದ “ದಿ ಸಾಂಗ್ ಆಫ್ ದಿ ಶರ್ಟ್’ ಗಾರ್ಮೆಂಟ್ ಕಾರ್ಮಿಕರ ಬದುಕು ಮತ್ತು ಬವಣೆಯನ್ನು ಕಟ್ಟಿಕೊಟ್ಟಿತು.
ಏಷ್ಯಾದ ವಿವಿಧ ದೇಶಗಳಲ್ಲಿ ಗಾರ್ಮೆಂಟ್ ಕಾರ್ಮಿಕರು ಎದುರಿಸುತ್ತಿರುವ ಸಂಕಟ, ಸಂಘರ್ಷಗಳನ್ನು ವಿವರಿಸಿದ್ದಾರೆ. ನಾವು ತೊಡುವ ಅಗ್ಗದ ಬಟ್ಟೆಗಳ ಹಿಂದೆ ಸುಡುತ್ತಿರುವ ಬದುಕಗಳ ಚಿತ್ರಣವನ್ನು ನೀಡಿದ್ದಾರೆ.
ನಲವತ್ತು ಹೆಚ್ಚು ಕೃತಿಗಳನ್ನು ಬರೆದಿರುವ ಜೆರೆಮಿ ಸೀಬ್ರೂಕ್ ಅವರು ಇದೇ ಮೊದಲ ಬಾರಿಗೆ ಕನ್ನಡದ ಓದುಗರಿಗೆ ಲಭ್ಯವಾಗಲಿದ್ದಾರೆ. ಇದು ನಮ್ಮ ಆಲೋಚನಾ ಕ್ರಮದ ಮೇಲೆ ಪ್ರಭಾವಿಸುವ ಕೃತಿಗಳಲ್ಲಿ ಒಂದಾಗುವಂಥದ್ದು. ಈ ಕೃತಿಯನ್ನು ಅಕ್ಷತಾ ಹುಂಚದಕಟ್ಟೆ ಪ್ರಕಟಿಸಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ.
-ಅಲೆಮಾರಿ ಕುಮಾರ್ 
puvyashree
The first copies of the book (Jeremy Seabrook’s essays in translation) arrived yesterday.
Here in the picture is US Srinivasan, a legendary bookseller in Karnataka, to whom it is dedicated. Srinivasan alias Puvyasri aka Pustaka Vyapari Srinivasa, also a friend of my father, gave me books to read ever since I was a year old. For the books he gave me, I have never squared off his debt, will never da.
-Sugata Raju

‍ಲೇಖಕರು Avadhi

21 July, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading