ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದಲೇಬೇಕಾದ 'ಸಂಚಯ'

nb
 
 
 
 
 
 
 
 
 
 
 
 
 
 
 
 
ಹೊಸ ಸಂಚಯ ಈಗ ಓದುಗರ ಮುಂದಿದೆ.
ಕನ್ನಡದಲ್ಲಿ ನಿಯತವಾಗಿ ಮಾತು ತಪ್ಪದಂತೆ ಬರುತ್ತಿರುವ ಸಾಹಿತ್ಯ ಪತ್ರಿಕೆಗಳಲ್ಲಿ ‘ಸಂಚಯ’ ಸಹಾ ಒಂದು.
ಸಂಪಾದಕ ಡಿ ವಿ ಪ್ರಹ್ಲಾದ್ ಸಂಚಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಚಿ. ಶ್ರೀನಿವಾಸರಾಜು ಅವರ ಸಹವಾಸ ದೋಷದ ಫಲ ಇದು.
ಈ ಸಲದ ಸಂಚಯದಲ್ಲಿ ಒಂದು ವಿಶೇಷ ಇದೆ. ಕನ್ನಡ ಸಾಹಿತ್ಯ ಪತ್ರಿಕೆ ಇಂತಹ ಒಂದು ಪ್ರಯೋಗ ಇದುವರೆಗೆ ಮಾಡಿದೆಯೇನೋ ನಮಗಂತೂ ಗೊತ್ತಿಲ್ಲ. ಒಂದು ಕವನಕಾಗಿ ೮೨ ಪುಟಗಳನ್ನು ಮೀಸಲಿಟ್ಟಿದೆ. ಗೋಪಾಲ ಕೃಷ್ಣ ಅಡಿಗರ ‘ಕೂಪ ಮಂಡೂಕ ‘ ಕವಿತೆಯನ್ನು ಇಷ್ಟೊಂದು ವಿಸ್ತಾರವಾಗಿ ಚರ್ಚೆ ಮಾಡುವ ಮೂಲಕ ಸಂಚಯ ಹೊಸ ನಾಂದಿ ಹಾಡಿದೆ.
ಈ ಸಂಚಿಕೆಯ ಮತ್ತೂ ವಿಶೇಷವೆಂದರೆ ಈ ಕವಿತೆ ಗೋಪಾಲಕೃಷ್ಣ ಅಡಿಗರ ಹಸ್ತಾಕ್ಷರದಲ್ಲಿಯೂ ಇದೆ. ಅಷ್ಟೇ ಅಲ್ಲ ಗೋಪಾಲಕೃಷ್ಣ ಅಡಿಗರು ಹೇಗೆ ಕವಿತೆ ಕಟ್ಟುತ್ತಿದ್ದರು, ಹೇಗೆ ಅದನ್ನು ಅಂತಿಮಗೊಳಿಸುತ್ತಿದ್ದರು ಎಂಬುದಕ್ಕೆ ಉದಾಹರಣೆಯೂ ಇದೆ. ಅಡಿಗರ ಕವಿತೆಯ ಮೊದಲ ಪ್ರತಿ,ಪರಿಷ್ಕರಿಸಿದ ಪ್ರತಿ ಎರಡೂ ಅಡಿಗರ ಹಸ್ತಾಕ್ಷರದಲ್ಲಿಯೇ ಇಲ್ಲಿದೆ.
ಕವಿತೆಗಳ ಮಹಾ ಓದುಗ ಕಲಾವಿದ ಪ ಸ ಕುಮಾರ್ ಕೂಪ ಮಂಡೂಕವನ್ನು ರೇಖೆಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಎಂದಿನಂತೆ ಎಂ ಆರ್ ಗುರುಪ್ರಸಾದ್ ಚೊಕ್ಕ ವಿನ್ಯಾಸ ಮಾಡಿದ್ದಾರೆ.ಮುಂಬೈನಲ್ಲಿ ಸಿನೆಮೆಟೋಗ್ರಾಫರ್ ಆಗಿರುವ ರಘು ಸೋಫಿನಾ ಐದು ವರ್ಷ ಕಾಲ ಕೂಪ ಮಂಡೂಕವನ್ನು ಧ್ಯಾನಿಸಿದ ಫಲ ಇದು.
ಸಂಚಯಕ್ಕಾಗಿ-
150 ರೂ ಚಂದಾದೊಂದಿಗೆ ಸಂಪರ್ಕಿಸಿ
ಡಿ ವಿ ಪ್ರಹ್ಲಾದ್
100, ಎರಡನೇ ಮುಖ್ಯ ರಸ್ತೆ, ಆರನೇ ಬ್ಲಾಕ್, ಮೂರನೇ ಹಂತ, ಮೂರನೇ ಘಟ್ಟ,
ಬನಶಂಕರಿ, ಬೆಂಗಳೂರು- 560 085

ದೂರವಾಣಿ:
98440 63514

080-26791925
prahlad118@yahoo.com

‍ಲೇಖಕರು avadhi

16 April, 2009

1 Comment

  1. kirankumari.s.

    sir,
    Good and creative – effort with beautiful design. thanks a lot..I wish you all the success..
    kiran

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading