ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓದದೇ ಇರಬೇಡಿ.. ಪ್ರೊ ಸಿ ಎನ್ ಆರ್ ಅವರ ‘ಇತ್ಯಾದಿ’

‘ಶಾಕುಂತಲ’ದಿಂದ ಹಿಡಿದು ‘ಶಾಕ್ ಡಾಕ್ಟ್ರಿನ್’ವರೆಗೆ ಸಮಚಿತ್ತದ ಚಿಂತನೆಗಳು

• ಪಂಪನ ಕುರುಕ್ಷೇತ್ರದಿಂದ ಹಿಡಿದು ಸದ್ದಾಂನ ಯುದ್ಧಭೂಮಿಯವರೆಗೆ

• ಮನುಸ್ಮೃತಿ ಯಿಂದ ಹಿಡಿದು ಸ್ಮೃತಿ ಇರಾನಿಯವರೆಗೆ,

• ಡಿಎನ್‍ಎ ಯಿಂದ ಹಿಡಿದು ಎನ್‍ಡಿಎವರೆಗೆ
• ಅಭಿಜ್ಞಾನ ಶಾಕುಂತಲದಿಂದ ಹಿಡಿದು ನವೊಮಿ ಕ್ಲೇನ್‍ಳ ಶಾಕ್ ಡಾಕ್ಟ್ರಿನ್‍ವರೆಗೆ

– ಇಲ್ಲಿ ಎಲ್ಲವೂ ಇವೆ. ದಿನದಿನದ ವಿದ್ಯಮಾನಗಳನ್ನು ಚರಿತ್ರೆಯ ಒರೆಗಲ್ಲಿಗೆ ಹಚ್ಚಿ ನಿನ್ನೆ-ನಾಳೆ, ಪೂರ್ವ-ಪಶ್ಚಿಮ, ಆಳ-ವಿಸ್ತಾರ ಎಲ್ಲವುಗಳ ಹದಪಾಕವನ್ನಾಗಿಸಿ ಈ ‘ಇತ್ಯಾದಿ’ಯ ಮೂಲಕ ಓದುಗರಿಗೆ ಒದಗಿಸುತ್ತಾರೆ, ಕನ್ನಡ ನಾಡಿನ ಸಮಕಾಲೀನ ಚಿಂತಕರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಪ್ರೊ. ಸಿ.ಎನ್. ರಾಮಚಂದ್ರನ್.

ಅದು ಟಿಪ್ಪೂವಿನ ರಾಷ್ಟ್ರಪ್ರಜ್ಞೆ ಇರಲಿ, ಡಬ್ಬಿಂಗ್ ವಿವಾದವಿರಲಿ, ಮೌಢ್ಯಾಚರಣೆಗಳ ಮಸೂದೆಯೇ ಇರಲಿ, ಬಿಡಿಮರಗಳನ್ನು ಇಡೀ ಕಾಡಿನ ದಟ್ಟಣೆಯೊಂದಿಗೆ ಹೋಲಿಸಿ ಹೊಸ ಗ್ರಹಿಕೆಗಳನ್ನು ನೀಡುವ ಈ ಕೃತಿ ಸಾಮಾಜಿಕ ಚಲನೆಯ ಸಂಕಥನವೂ ಹೌದು, ಮೌಲಿಕ ಸಂಕಲನವೂ ಹೌದು.

 

ಇಂದಿನ ಎಡ-ಬಲ ಚಿಂತಕರು ಸೈದ್ಧಾಂತಿಕ ಪೂರ್ವಗ್ರಹಗಳ ತಕ್ಕಡಿಯಲ್ಲಿ ಎಲ್ಲರನ್ನೂ/ಎಲ್ಲವನ್ನೂ ಅಳೆಯುತ್ತಿರುವಾಗ ಈ ಸಮಚಿತ್ತದ ವಿಮರ್ಶಕರು ಪುರೋಹಿತರ ಮಂತ್ರಪುಷ್ಪದ ಜೊತೆ ಜನಪದ ಹಾಲುಮತ ಮಹಾಕಾವ್ಯವನ್ನು ತಳುಕು ಹಾಕುತ್ತ ತಮ್ಮ ಆಳವಾದ ಪಾಂಡಿತ್ಯದ ಜೊತೆಗೆ ವಿಶ್ವಶ್ರೇಣಿಯ ಚಿಂತಕರನ್ನೆಲ್ಲ ನಮ್ಮೆದುರು ಮೆರವಣಿಗೆ ಮಾಡಿಸುತ್ತ ಸತ್ಯದ ಹೊಸ ದರ್ಶನ ಮಾಡಿಸುತ್ತಾರೆ.

‘ಚರ್ಚೆಯ ಕ್ಷೇತ್ರವನ್ನು ಇನ್ನಷ್ಟು ಹಿಗ್ಗಿಸುವುದು ನಮ್ಮ ಕೆಲಸವಾಗಬೇಕೆ ಹೊರತೂ ಪ್ರಭುತ್ವದ ಇಚ್ಛೆಗೆ ತಕ್ಕಂತೆ ಅದನ್ನು ಮಿತಗೊಳಿಸುವುದಲ್ಲ ಎಂಬ ಎಡ್ವರ್ಡ್ ಸೈದ್‍ನ ಮಾತುಗಳು ಇಲ್ಲಿ ಪುಟಪುಟಗಳಲ್ಲಿ ಪ್ರತಿಫಲಿಸುತ್ತವೆ.

-ನಾಗೇಶ್ ಹೆಗಡೆ 

ಮುನ್ನುಡಿಯಿಂದ 

‍ಲೇಖಕರು admin

23 March, 2017

2 Comments

  1. swamy

    when is the book getting released..???

    • C. N. Ramachandran

      It is already available in bookshops; thank you. Ramachandran

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading