ಒಬ್ಬ ರಂಗಕರ್ಮಿಯಾದ ನನಗೆ ನಿಮ್ಮ ಮಾತುಗಳಿಂದ ನೋವಾಗಿದೆ

 

 

 

 

ಪ್ರಸನ್ನ, ರಂಗಕರ್ಮಿ, ಹೆಗ್ಗೋಡು

 

 

 

 

 

ನಟ ಪ್ರಕಾಶ್ ರೈ ಅವರಿಗೆ ಈ ಬಾರಿಯ ಶಿವರಾಮ ಕಾರಂತ ಪ್ರಶಸ್ತಿ ಲಭಿಸಿದೆ. ಪತ್ರಕರ್ತೆ ಗೌರಿ ಲಂಕೇಶ‌ರ ಹತ್ಯೆಯ ಬಗ್ಗೆ ದೇಶದ ಪ್ರಧಾನಿಯವರು ಖಂಡನೆಯ ಮಾತನ್ನಾಡದೆ ದಿವ್ಯ ಮೌನ ವಹಿಸಿದ್ದಾರೆ ಎಂದು ಟೀಕಿಸುತ್ತ ಪ್ರಕಾಶ್ ರೈ ಅವರು, ‘ನರೇಂದ್ರ ಮೋದಿಯವರು ನನಗಿಂತಲೂ ಉತ್ತಮ ನಟರು’ ಎಂಬ ಹೇಳಿಕೆ ನೀಡಿದ್ದರು.

ದೇಶದ ಪ್ರಧಾನಿಯನ್ನು ನಟನೆಂದು ಕರೆದಿದ್ದಕ್ಕೆ ಸಿಟ್ಟಾದ ಕೆಲವು ಹಿಂದೂಗಳು, ಪ್ರಕಾಶ್ ರೈ ಅವರನ್ನು ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಲಿಕ್ಕೆ ಬಿಡುವುದಿಲ್ಲ ಎಂಬ ಬೆದರಿಕೆ ಹಾಕಿದ್ದಾರೆ. ಪ್ರಕಾಶ್‌ ರೈ ಅವರಿಗೆ ಪ್ರಧಾನಿಯವರನ್ನು ಟೀಕಿಸಲಿಕ್ಕಿರುವಷ್ಟೇ ಹಕ್ಕು ಹಿಂದುತ್ವವಾದಿಗಳಿಗೆ ಪ್ರಕಾಶ್ ರೈ ಅವರನ್ನು ಟೀಕಿಸಲಿಕ್ಕಿದೆ. ಆದರೆ ಪ್ರಶಸ್ತಿ ಸ್ವೀಕರಿಸಲಿಕ್ಕೆ ಬಿಡುವುದಿಲ್ಲ ಎಂಬ ಹಟವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆ ತರುವಂತಹದ್ದಲ್ಲ ಎನ್ನದೆ ಬೇರೆ ದಾರಿಯಿಲ್ಲವಾಗಿದೆ. ಒಬ್ಬ ರಂಗಕರ್ಮಿಯಾದ ನನಗೆ ನಿಮ್ಮ ಮಾತುಗಳಿಂದ ನೋವಾಗಿದೆ.

ನಟನಾಗುವುದು ಕೀಳೇ? ಪ್ರಧಾನಿಯಾಗುವುದು ಮೇಲೇ? ನನಗಿನ್ನೂ ನೆನಪಿದೆ. ನಾವು ರಂಗಕರ್ಮಿಗಳು ಹಾಗೂ ನಟರು, ಇಂದಿರಾ ಗಾಂಧಿಯವರನ್ನು ‘ತುರ್ತು ಪರಿಸ್ಥಿತಿಯ ಕರಾಳ ರಾಣಿ’ ಎಂದು ಕರೆದು ಟೀಕಿಸಿದ್ದೆವು. ಆಗ ಹಿಂದುತ್ವವಾದಿಗಳೂ ಸಹಿತ ನಮ್ಮೊಟ್ಟಿಗೆ ಸೇರಿ ನಾಟಕವಾಡಿದ್ದಿರಿ.

ಆಗ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವಾಗಲೀ ಅಥವಾ ಇಂದಿರಾ ಗಾಂಧಿಯವರ ಹಿಂಬಾಲ
ಕರಾಗಲೀ ನಮ್ಮನ್ನು ನಟರೆಂದು ಜರಿದಿರಲಿಲ್ಲ ಅಥವಾ ನಮ್ಮ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿರಲಿಲ್ಲ.

ನೀವು ಹಿಂದುತ್ವವಾದಿಗಳು ಇಂದು ದೇಶವನ್ನು ಆಳುತ್ತಿದ್ದೀರಿ, ಆನೆಬಲದಿಂದ ಆಳುತ್ತಿದ್ದೀರಿ. ನೀವು, ಇಷ್ಟೊಂದು ಅಸಹಿಷ್ಣುಗಳಾದರೆ ಹೇಗೆ? ನಟರು ರಾಜಕೀಯ ಮಾತನಾಡಲೇಬಾರದು ಎಂಬ ಹಟ ಹಿಡಿದರೆ ಹೇಗೆ? ತುರ್ತು ಪರಿಸ್ಥಿತಿಯನ್ನು ಮರೆತುಬಿಟ್ಟಿರೇ, ಹೇಗೆ?

ಹೋಗಲಿ ಬಿಡಿ, ನಿಮ್ಮ ನಡೆ ಶಿವರಾಮ ಕಾರಂತರಿಗೆ ಶೋಭೆ ತರುತ್ತದೆಯೇ? ಶಿವರಾಮ ಕಾರಂತರೂ ರಾಜಕೀಯ ಟೀಕೆಗಳನ್ನು ಮಾಡಿದ್ದರಲ್ಲವೇ? ಒಂದೊಮ್ಮೆ ಅವರು ಬದುಕಿದ್ದಿದ್ದರೆ, ಇಂದಿನ ಪ್ರಧಾನಿಯವರ ಯಾವುದೇ ಒಂದು ನಡೆಯನ್ನು ಟೀಕಿಸಿದ್ದಿದ್ದರೆ, ಕಡಲ ತೀರದ ಭಾರ್ಗವನ ಮೇಲೆ ಹೀಗೆ ಹರಿಹಾಯುತ್ತಿದ್ದೀರೇನು? ಅಸಹಿಷ್ಣು ಜಗಳಗಳು ನನಗೂ ಶೋಭೆ ತರುವುದಿಲ್ಲ ನಿಮಗೂ ತರುವುದಿಲ್ಲ. ತಾಳ್ಮೆ ವಹಿಸಿರಿ ಎಂದು ಎಲ್ಲ ಕನ್ನಡಿಗರ ಪರವಾಗಿ ಕಳಕಳಿಯಿಂದ ಮನವಿ ಮಾಡುತ್ತೇನೆ.

‍ಲೇಖಕರು avadhi

October 10, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: