'ಒಗ್ಗರಣೆ ಘಮ ಘಮ!' – ಅರುಣ್ ಕುಮಾರ್ ಬರೀತಾರೆ

ಅರುಣ್ ಕುಮಾರ್

ಸುಮಾರು ದಿನಗಳ ನಂತರ ಒಂದೊಳ್ಳೆ ಸಿನಿಮಾ ನೋಡಿದ ಆತ್ಮತೃಪ್ತಿ ಮತ್ತು ಮನಸು ಪ್ರೀತಿಯ ಕುಕ್ಕರಿನಲ್ಲಿ ಬೆಂದು, ಅದರ ಆಚೀಚೆಯ ಭಾವಗಳಲ್ಲಿ ಮಿಂದು ಮುದಗೊಂಡಂಥಾ ಆಹ್ಲಾದ… ಬಹುಶಃ ಪ್ರಕಾಶ್ ರೈ ನಿರ್ದೇಶನದ ‘ಒಗ್ಗರಣೆ’ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರಿಗೂ ಇಂಥಾದ್ದೊಂದು ಫೀಲ್ ಆಗೋದು ಖಂಡಿತ.
LOVE IS COOKING
ಇಡೀ ಚಿತ್ರದ ಕೇಂದ್ರಬಿಂದು ಕಾಳಿದಾಸ. ಆತ ನಡುವಯಸ್ಸಿನ ಪುರಾತತ್ವ ವಿಜ್ಞಾನಿ. ಕಾಳಿದಾಸನ ಪಾಲಿಗೆ ಪ್ರೀತಿಯೆಂಬುದು ನಖಶಿಖಾಂತ ಆಸೆ ಹುಟ್ಟಿಸಿ ಹಸಿವು ನೆತ್ತಿಗೇರಿದರೂ ಸಿಗದ ಅಡುಗೆಯಂತೆ! ಆತ ಎಂದೋ ಕಳೆದುಹೋದ ಪ್ರೀತಿಯ ನೆನಪನ್ನೇ ನೆಂಚಿಕೊಂಡು ಬದುಕುವವನು. ಆತನದ್ದು ಕೈತಪ್ಪಿದ ಪ್ರೀತಿಯ ನಿರಾಸೆ, ಭ್ರಮೆಯಂಥಾ ನಿರೀಕ್ಷೆಗಳಿಂದಲೇ ಕಾಲನೂಕುವ ಒಂಟೊಂಟಿ ಬದುಕು. ಮತ್ತೊಂದು ಕಡೆ ಮದುವೆಯ ವಯಸ್ಸು ಮೀರಿದರೂ ತಕ್ಕ ಹುಡುಗ ಸಿಗದೇ ತೊಳಲಾಟದಲ್ಲಿರುವ ಹೆಣ್ಣುಮಗಳು. ಸಿನಿಮಾ-ಸೀರಿಯಲ್ಲುಗಳಿಗೆ ಕಂಠದಾನದ ಕೆಲಸ ನೆಚ್ಚಿಕೊಂಡಿರುವ ಆಕೆ ಗೌರಿ…

ಹೀಗೆ ಮರೆಯಾದ ಪ್ರೀತಿಯ ನಶೆಯಲ್ಲಿ ಒಂಟಿ ಬದುಕು ಸಾಗಿಸುವ ಕಾಳಿದಾಸನತ್ತ ಸ್ನೇಹಿತನೊಬ್ಬನಿಗೆ ಪ್ರೀತಿಪೂರ್ವಕ ಕನಿಕರ. ಏನಾರ ಮಾಡಿ ಕಾಳಿದಾಸನಿಗೊಂದು ಜೋಡಿಯನ್ನು ತಗುಲಿಹಾಕಲು ಆತ ಶತ ಪ್ರಯತ್ನ ನಡೆಸುತ್ತಾನೆ. ಆದರೆ ಹೆಣ್ಣು ನೋಡಲು ಕರೆದೊಯ್ದರೆ ಹೆಣ್ಣಿನ್ನು ಬಿಟ್ಟು ಆ ಮನೆಯ ಅಡುಗೆ ಭಟ್ಟನನ್ನೇ ತನ್ನೊಟ್ಟಿಗೆ ಕರೆತರುವ ಕಾಳಿದಾಸ ಮಹಾನ್ ಭೋ`ಜನ’ಪ್ರಿಯ. ಇಂಥ ಕಾಳಿದಾಸನ ಮನೆಗೆ ದೂರದೂರಿನಿಂದ ಆತನ ಅಕ್ಕನ ಮಗ ಬರುತ್ತಾನೆ. ಜೊತೆಗೆ ಅಪ್ಪ ಕೊಟ್ಟ ಸೆಂಟ್ ಬಾಟಲ್ಲು, ಸೆಲ್ಫೋನನ್ನು ಹೊಸ ವರ್ಷಕ್ಕೆ ಗಿಫ್ಟಾಗಿ ಕೊಡುತ್ತಾನೆ. ಅಲ್ಲಿಗೆ ಕಾಳಿದಾಸನ ಖಾಲಿ ಬದುಕಲ್ಲೂ ಸಹ ಹೊಸ ಅಧ್ಯಾಯವೊಂದು ಶುರುವಾಗುತ್ತದೆ.
ಕಂಠದಾನ ಕಲಾವಿದೆ ಗೌರಿ ಕೆಲಸದೊತ್ತಡದ ನಡುವಿನಲ್ಲೂ ಅಮ್ಮನ ನೆನಪಾಗಿ ಅಮ್ಮ ಮಾಡಿಕೊಡುತ್ತಿದ್ದ ಕುಟ್ಟಿ ದೋಸೆಯನ್ನು ಆರ್ಡರ್ ಮಾಡಲು ಹೋಟೇಲೊಂದಕ್ಕೆ ಕರೆ ಮಾಡುತ್ತಾಳೆ. ಆದರೆ ಆ ಕಾಲು ಮಿಸ್ಸಾಗಿ ಆಕರ್ಿಯಾಲಜಿಸ್ಟ್ ಕಾಳಿದಾಸ್ಗೆ ಬಂದಿರುತ್ತದೆ. ಹಾಗೆ ರಾಂಗ್ ಆಗಿ ಕನೆಕ್ಟ್ ಆದ ಫೋನ್ಕರೆ ಮುಂದೆ ಇವರಿಬ್ಬರ ಮೊಬೈಲ್ ಲವ್ಗೆ ನಾಂದಿಹಾಡುತ್ತದೆ. ಕಾಳಿದಾಸನ ವಿರಹ ಕರಗಿಹೋದಂತಾಗುತ್ತದೆ. ಫೋನಿನಲ್ಲೇ ವಿಧವಿಧದ ಅಡುಗೆ ರೆಸಿಪಿಗಳ ಪ್ರಯೋಗಗಳಾಗುತ್ತವೆ. ಥರಾವರಿ ಕೇಕು ತಯಾರಾಗುತ್ತದೆ. ಆನ್ಲೈನ್ನಲ್ಲಿಯೇ ಪ್ರೇಮ ರಸಾಯನ ಹದಗೊಂಡು ಪಕ್ವವಾಗುತ್ತದೆ.
ಇಷ್ಟೆಲ್ಲಾ ಆದಮೇಲೆ ಇಬ್ಬರಿಗೂ ಪರಸ್ಪರ ಭೇಟಿಯಾಗಬೇಕೆಂಬ ಹಂಬಲ ಶುರುವಾಗುತ್ತದೆ. ಭೇಟಿಯಾಗುವ ದಿನವೂ ಫಿಕ್ಸ್ ಆಗುತ್ತದೆ. ಕಡೆಗೂ ಕಾಳಿದಾಸ ತನ್ನ ಮೊಬೈಲ್ ಗೆಳತಿಯನ್ನು ನೋಡಲು ಸಿದ್ಧನಾಗಿ ಹೊರಡುತ್ತಾನೆ. ಕಾರಿನಲ್ಲಿ ಕುಳಿತು ಇನ್ನೇನು ಸ್ಟಾಟರ್್ ಮಾಡಬೇಕೆನ್ನುವಷ್ಟರಲ್ಲಿ ಮಿರರ್ನಲ್ಲಿ ತನ್ನ ನೆರೆಗೂದಲನ್ನು ಕಂಡ ಕಾಳಿದಾಸನ ಮನಸ್ಸಿನಲ್ಲಿ `ತನ್ನನ್ನು ನೋಡಿ ಆಕೆ ನಿರಾಕರಿಸಿಬಿಟ್ಟರೆ?’ ಎನ್ನುವ ತಳಮಳ. ಕಡೆಗೆ ಭೇಟಿಯನ್ನು ಮೊಟಕುಗೊಳಿಸುತ್ತಾನೆ. ಆದರೆ ಅಕ್ಕನ ಮಗ ಕಾರ್ತಿಕ್ `ಮಾವನ ಹೆಸರಿನಲ್ಲಿ ನಾನೇ ಹೋಗಿ ಆಕೆಯನ್ನು ಭೇಟಿಮಾಡಿಬರುವುದಾಗಿ’ ಹೇಳಿಹೋಗುತ್ತಾನೆ. ಕಾಫಿ ಶಾಪ್ನಲ್ಲಿ ಅವರಿಬ್ಬರ ಭೇಟಿ ಕೂಡಾ ಆಗುತ್ತದೆ. ಆದರೆ ಅಲ್ಲಿ ಗೌರಿಗೂ ಸಹ ಇಂಥಾದ್ದೇ ತಳಮಳ ಕಾಡಿ, ಆಕೆಯ ಬದಲಿಗೆ ತಂಗಿ ಮೇಘನಾ ಬಂದಿರುತ್ತಾಳೆ. ಆದರೆ ಪರಸ್ಪರ ಇಬ್ಬರೂ ಕಾಳಿದಾಸ್ ಮತ್ತು ಗೌರಿ ಎಂದೇ ಪರಿಚಯಿಸಿಕೊಳ್ಳುತ್ತಾರೆ.
ಅಲ್ಲಿಂದ ಕೊನೆಯವರೆಗೂ ಯಡವಟ್ಟುಗಳೇ. ಆದರೆ ಅದರ ಜೊತೆ ಜೊತೆಗೇ ಪ್ರೀತಿಯ ನಿಜವಾದ ಪುಳಕ, ಕಂಪನಗಳು ಕಚಗುಳಿಯಿಡುತ್ತಾ ಸಾಗುತ್ತವೆ. ತನಗಿಂತ ಚಿಕ್ಕ ಹುಡುಗಿಯನ್ನು ಹೇಗೆ ಸಂಗಾತಿಯಾಗಿ ಒಪ್ಪುವುದು ಎಂದು ಕಾಳಿದಾಸನೂ, ತನ್ನ ತಮ್ಮನಂತೆ ಕಾಣುವ ಆತನನ್ನು ಹೇಗೆ ಸ್ವೀಕರಿಸುವುದು ಎಂದು ಈ ಜೋಡಿ ಗೊಂದಲಕ್ಕೆ ಬೀಳುತ್ತದೆ. ಆದರೆ ಕಾಳಿದಾಸ ಮತ್ತು ಗೌರಿ ಹೆಸರಲ್ಲಿ ಕಾತರ್ಿಕ್ ಮತ್ತು ಮೇಘನಾರ ಪ್ರೀತಿಯ ಹೊಸ ಟ್ರ್ಯಾಕು ತೆರೆದುಕೊಳ್ಳುತ್ತದೆ. ಈ ಮಧ್ಯೆ ಆದಿವಾಸಿ ವೃದ್ಧನ ಔಷಧ ವಿದ್ಯೆಯನ್ನು ಹಣ ಮಾಡುವುದಕ್ಕೆ ಬಳಸಿಕೊಳ್ಳುವವರ ವಿರುದ್ಧ ಕಾಳಿದಾಸ್ ಸಂಘರ್ಷದ ಮತ್ತೊಂದು ಎಳೆ ಕಥೆಯ ನಡುವೆಯೇ ಬೆಸೆದುಕೊಂಡಿದೆ.
ಹೀಗೆ ಕಗ್ಗಂಟಿನಲ್ಲಿ ಸಿಲುಕಿದ ಕಾಳಿದಾಸ್ ಮತ್ತು ಗೌರಿಗೆ ನಿಜ ಗೊತ್ತಾಗುತ್ತಾ? ಈ ಅಂಕಲ್ ಮತ್ತು ಆಂಟಿ ರೇಂಜಿನ ಈ ಜೋಡಿ ಒಂದಾಗುತ್ತಾ? ಎಂಬಿತ್ಯಾದಿ ಕುತೂಹಲಕರ ಸಂಗತಿಗಳನ್ನು ನೋಡಬೇಕಾದರೆ ಒಂದೇ ಒಂದುಸಲ ಒಗ್ಗರಣೆ ನೋಡಿಬಂದರೆ ಸಾಕು.
ಇಡೀ ಚಿತ್ರದಲ್ಲಿ ಎಲ್ಲೂ ಕಳಪೆ ಹಾಸ್ಯವಿಲ್ಲ. ಸಿನಿಮಾದಲ್ಲಿ ಬರುವ ಸಹಜವಾದ ಸಂಭಾಷಣೆಯೇ ಸುಳಿನಾಭಿಯಿಂದ ನಗುವುಕ್ಕುವಂತೆ ಮಾಡುತ್ತದೆ. ಇಡೀ ಸಿನಿಮಾದ ಒಂದೊಂದು ಫ್ರೇಮ್ ಕೂಡಾ ಕಮಷರ್ಿಯಲ್ ಜಾಹೀರಾತುಗಳಂತೆ ಸುಂದರ ಮತ್ತು ಶ್ರೀಮಂತವಾಗಿ ಚಿತ್ರೀಕರಿಸಿದ್ದಾರೆ ಛಾಯಾಗ್ರಾಹಕಿ ಪ್ರೀತಾ. ಇಳಯರಾಜಾರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೂಪಬರ್್. ಇನ್ನು ಪ್ರಕಾಶ್ ರೈ, ಸ್ನೇಹಾ ಯುವ ಪ್ರೇಮಿಗಳಾಗಿ ತೇಜಸ್ ಮತ್ತು ಸಂಯುಕ್ತಾರ ನಟನೆಯೂ ಅದ್ಭುತವೆಂಬಂತಿದೆ. ಒಟ್ಟಾರೆಯಾಗಿ ಪ್ರೀತಿಯ ಪುಳಕಗಳೆಲ್ಲವೂ ಹದಗೊಂಡಂತೆ ಈ ಚಿತ್ರ ಚೆಂದಗೆ ಸಿದ್ಧಗೊಂಡಿದೆ.
ಪ್ರಕಾಶ್ ರೈ ನಟರಾಗಿ ಎಂದೋ ಗೆದ್ದಿದ್ದಾರೆ. ಭಾಷೆಯ ಮೇರೆ ಮೀರಿ ಜನಪ್ರೀತಿ ಗಳಿಸಿದ್ದಾರೆ. ನಿದರ್ೇಶಕರಾಗಿಯೂ ಅವರೀಗ ಆ ಗೆಲುವಿನ ಪರ್ವವನ್ನ ಯಶಸ್ವಿಯಾಗಿ ಮುಂದುವರೆಸುವ ವಾಸನೆ ‘ಒಗ್ಗರಣೆ’ ಘಮದೊಂದಿಗೆ ಬೆರೆತು ಪಸರಿಸಿದಂತಿದೆ.

‍ಲೇಖಕರು G

June 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Pavanaja U B

    ಪ್ರಕಾಶ ರೈ ಅಂತಹ ಅದ್ಭುತ ಪ್ರತಿಭಾವಂತರಿಗೆ ಮಲಯಾಳಂನಿಂದ ರಿಮೇಕ್ ಮಾಡುವ ಅವಶ್ಯಕತೆ ಏನಿತ್ತು? ಅದನ್ನು ಹಾಗೆಯೇ ಕನ್ನಡಕ್ಕೆ ಡಬ್ ಮಾಡಬಹುದಿತ್ತು. ಅಂತೆಯೇ ಪ್ರಕಾಶ್ ರೈ ತಮ್ಮ ಅದ್ಭುತ ಪ್ರತಿಭೆ ಬಳಸಿ ಸಂಪೂರ್ಣ ಹೊಸ ಸಿನಿಮಾವನ್ನೇ ಮಾಡಬಹುದಿತ್ತು. ಹೀಗೆ ಕನ್ನಡಕ್ಕೆ ರಿಮೇಕ್ ಮಾಡುವುದಕ್ಕಾ ಕನ್ನಡಕ್ಕೆ ಡಬ್ಬಿಂಗ್ ಮಾಡಬಾರದು ಎಂದು ಗಲಾಟೆ ಮಾಡುತ್ತಿರುವುದು?
    ಅಂದ ಹಾಗೆ ಮೂಲ ಮಲಯಾಳಂ ಸಿನಿಮಾದ ವಿವರ ಇಲ್ಲಿದೆ

    ಪ್ರತಿಕ್ರಿಯೆ
  2. Rangaswamy mookanahalli

    ನಾನು ಚಿತ್ರ ವಿಕ್ಷಿಸಿದೆ , ಚನ್ನಾಗಿದೆ . ಮೇಲೊಬ್ಬರು ಮಹನೀಯರು ಕಾಮೆಂಟ್ ಹಾಕಿದರೆ , ರಿಮೇಕ್ ಬಗ್ಗೆ , ಇವರು ಬರಯುವ ಮಾಹಿತಿ ಇವರಿಗೆ ಕನ್ನಡದಲ್ಲಿ ಸಿಕ್ಕಿತ್ತೇ ? ಅಲ್ಲಿ ಇಲ್ಲಿ ಓದಿ ಕನ್ನಡಕ್ಕೆ ಬರೆದುದು ಏನು ?ಯಾವ ಲೆಕ್ಕಕ್ಕೆ ಸೇರಿಸಬಹುದು. ? ಪುಸ್ತಕ ಅನುವಾದ ಓಕೆ. ಚಲನಚಿತ್ರ ಬೇಡ ಏಕೆ. ? ಇಷ್ಟಕ್ಕೂ ಯಾವುದು ಒರಿಜಿನಲ್. ?

    ಪ್ರತಿಕ್ರಿಯೆ
  3. siraj bisaralli

    ರುಚಿ ‘ಕಟ್ಟಾ’ದ ಒಗ್ಗರಣೆ!
    ಒಗ್ಗರಣೆ ಸಿನಿಮಾ ವಿಮರ್ಶೆ
    ಒಗ್ಗರಣೆಯಲ್ಲಿ ಮನಸಿಗೆ ರುಚಿಸುವ ಸೂಪರ್ ಮಸಾಲಾ ಇದೆ. ಖಾರಾ, ಉಪ್ಪು, ಹುಳಿ, ಸಿಹಿ ಎಲ್ಲವೂ ಇಲ್ಲಿದೆ. ಪ್ರಕಾಶ್ ರೈ ಸೇರಿದಂತೆ ಮಾಗಿದ ಕಲಾವಿದರೆಲ್ಲರೂ ಸೇರಿ ಮಾಡಿರುವ ಒಗ್ಗರಣೆಯ ರುಚಿಯನ್ನು ಇಡೀ ಮನೆ ಮಂದಿ ಒಟ್ಟಾಗಿ ಕುಳಿತು ಸವಿಯಬಹುದು. ಒಂದೆರಡು ಕಡೆ ರುಚಿ ಕಟ್ ಆದ ಒಗ್ಗರಣೆ ಎನಿಸಿದರೂ ಫೈನಲೀ ಟೇಸ್ಟ್ ಮಾತ್ರ ಅದ್ಭುತ!

    ಪ್ರತಿಕ್ರಿಯೆ
  4. D.Ravivarma

    ಇಡೀ ಚಿತ್ರದಲ್ಲಿ ಎಲ್ಲೂ ಕಳಪೆ ಹಾಸ್ಯವಿಲ್ಲ. ಸಿನಿಮಾದಲ್ಲಿ ಬರುವ ಸಹಜವಾದ ಸಂಭಾಷಣೆಯೇ ಸುಳಿನಾಭಿಯಿಂದ ನಗುವುಕ್ಕುವಂತೆ ಮಾಡುತ್ತದೆ. ಇಡೀ ಸಿನಿಮಾದ ಒಂದೊಂದು ಫ್ರೇಮ್ ಕೂಡಾ ಕಮಷರ್ಿಯಲ್ ಜಾಹೀರಾತುಗಳಂತೆ ಸುಂದರ ಮತ್ತು ಶ್ರೀಮಂತವಾಗಿ ಚಿತ್ರೀಕರಿಸಿದ್ದಾರೆ ಛಾಯಾಗ್ರಾಹಕಿ ಪ್ರೀತಾ. ಇಳಯರಾಜಾರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೂಪಬರ್್. ಇನ್ನು ಪ್ರಕಾಶ್ ರೈ, ಸ್ನೇಹಾ ಯುವ ಪ್ರೇಮಿಗಳಾಗಿ ತೇಜಸ್ ಮತ್ತು ಸಂಯುಕ್ತಾರ ನಟನೆಯೂ ಅದ್ಭುತವೆಂಬಂತಿದೆ. ಒಟ್ಟಾರೆಯಾಗಿ ಪ್ರೀತಿಯ ಪುಳಕಗಳೆಲ್ಲವೂ ಹದಗೊಂಡಂತೆ ಈ ಚಿತ್ರ ಚೆಂದಗೆ ಸಿದ್ಧಗೊಂಡಿದೆ.
    ಪ್ರಕಾಶ್ ರೈ ನಟರಾಗಿ ಎಂದೋ ಗೆದ್ದಿದ್ದಾರೆ. ಭಾಷೆಯ ಮೇರೆ ಮೀರಿ ಜನಪ್ರೀತಿ ಗಳಿಸಿದ್ದಾರೆ. ನಿದರ್ೇಶಕರಾಗಿಯೂ ಅವರೀಗ ಆ ಗೆಲುವಿನ ಪರ್ವವನ್ನ ಯಶಸ್ವಿಯಾಗಿ ಮುಂದುವರೆಸುವ ವಾಸನೆ ‘ಒಗ್ಗರಣೆ’ ಘಮದೊಂದಿಗೆ ಬೆರೆತು ಪಸರಿಸಿದಂತಿದೆ….nimma baraha manamuttuvantide prakaash rai obba dodda nata ..nirdeshakanaagi yasassu padeyali…

    ಪ್ರತಿಕ್ರಿಯೆ
  5. Jagadeesh

    intha film galannu kannadadavaru nodabeku.
    avadhi intha films bagge details kodutthirabeku. plz publish film reviews.

    ಪ್ರತಿಕ್ರಿಯೆ
  6. ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ,ಮೊ.9845500890

    ನಾನೂ ನೋಡಿದೆ,ಒಗ್ಗರಣೆ ತುಂಬಾ ಆಪ್ತವಾಗುವ ಚಿತ್ರ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: