ಪ್ರೀತಿಯ ಮಿತ್ರರೇ…
ನಾನು ಆರು ತಿಂಗಳಿಂದ ಮಾಧ್ಯಮ ಪ್ರಪಂಚದಿಂದ ದೂರವಿದ್ದೆ. ವಿಜಯ ಕರ್ನಾಟಕ ನಂತರ ಎಲ್ಲಿ ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಅದಕ್ಕೆ ಈಗ ಉತ್ತರ ಕೊಡುವ ಕಾಲ ಬಂದಿದೆ. ನನ್ನ ಸಂಪಾದಕತ್ವದಲ್ಲಿ ಒಂದು ಮ್ಯಾಗಜಿನ್ ಹೊರಬರುತ್ತಿದೆ. ಅದರ ಹೆಸರು ಸಿನಿಗಂಧ.
ಇದೊಂದು ಸಿನಿಮಾ ಪತ್ರಿಕೆ. ಹಾಗಂತ ರೆಗ್ಯುಲರ್ ಸುದ್ದಿಗಳ ಲೋಕವಲ್ಲ. ಇಲ್ಲಿ ಒಂದಷ್ಟು ಅಚ್ಚರಿಯ ಕಾಲಂ ಗಳಿವೆ. ಮತ್ತು ಇನ್ನೋವೇಟಿವ್ ಕಾನ್ಸೆಪ್ಟ್ ಗಳಿವೆ. ಉದಾಹರಣೆಗೆ- ಮೊಟ್ಟಮೊದಲ ಬಾರಿಗೆ ಸಿನಿಮಾ ಸಂಬಂಧೀ ಘಟನೆಯನ್ನು ಕಾಮಿಕ್ಸ್ ರೂಪದಲ್ಲಿ ಹೇಳಿದ್ದೇನೆ. ನಮ್ಮ ಹೆಮ್ಮೆಯ ಬಿ. ಸುರೇಶ ಅವರು ತಮ್ಮ ಹಳೇ ದಿನಗಳಲ್ಲಿ ಪ್ರಕಾಶ್ ರಾಜ್ ಹೇಗಿದ್ದರು? ಅವರ ತರಲೆಯ ಆಟಗಳೇನು ಎನ್ನುವುದನ್ನು ಕಾಲಂ ರೂಪದಲ್ಲಿ ಹೇಳಿದ್ದಾರೆ. ಜೊತೆಗೆ ನಟ ಗಣೇಶ್ ಬದುಕಿನಲ್ಲಿ ಬಂದುಹೋದ ಗೆಳೆಯರಿಬ್ಬರ ವಿಶೇಷ ಸಂದರ್ಶನವಿದೆ.
ಜೊತೆಗೆ ಇನ್ನೊಂದಿಷ್ಟು ಹೊಸ ಮಾದರಿಯ ಕಾಲಂಗಳಿವೆ. ಕ್ಯಾರಿಕೇಚರ್ ಗಳಿವೆ. ಇಂದು ಇದು ನಾವಿಕ ಅಮೆರಿಕನ್ನಡೋತ್ಸವದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅಲ್ಲಿ ಲಿಮಿಟೆಡ್ ಗೆಸ್ಟ್ ಗಳಿಗಸ್ಟೇ ಪಾಸ್ ಅಲೋ ಇದೆ. ಹಾಗಾಗಿ ದಯವಿಟ್ಟು ನನ್ನನ್ನು ಆಶಿರ್ವದಿಸಿ, ಇನ್ನು ಕೆಲವೇ ದಿನಗಳಲ್ಲಿ ಇನ್ನೊಂದು ದೊಡ್ಡ ಸಮಾರಂಭ ಮಾಡಲಿದ್ದೇವೆ. ಅದಕ್ಕೆ ನೀವೆಲ್ಲಾ ಬರಬೇಕು. ನಾವಿಕದಲ್ಲಿ ಇದನ್ನು ಬಿಡುಗಡೆ ಮಾಡುತ್ತಿರುವ ಉದ್ದೇಶ ಅದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ವೆಬ್ ಸೈಟ್ ಕೂಡ ಹೊರಬರುತ್ತಿದೆ. ಇದು ನನ್ನ ಕನಸಿನ ಕಾಣಿಕೆ. ಕಷ್ಟಪಟ್ಟು ಹೊರತಂದಿದ್ದೇನೆ. ಓದಿ, ಇಷ್ಟವಾದರೆ ಖಂಡಿತ ತಿಳಿಸಿ…
ಪ್ರೀತಿಯಿರಲಿ…..
ವಿನಾಯಕರಾಮ್ ಕಲಗಾರು
ವ್ಯವಸ್ಥಾಪಕ ಸಂಪಾದಕ
ಸಿನಿಗಂಧ





SIR GOOD IDEA IDRALI SWALPA STUDENT,IAS/KAS AND ITHER EXAM GE HELP AGO HAGE COAVRGE MADIDRE BEGA POPULER AAG BAHUDU SIR
ಶುಭವಾಗಲಿ,….
olleyadaagali