ಅಕ್ಕ ನಿಮ್ಮನೇಲಿ ಫಿಗರ್ ರೈಸಾ?!
ಭಾಗ್ಯಶ್ರೀ
ಅಕ್ಕಾ…ನಿಮ್ಮನೆಯಲ್ಲೂ ಫಿಗರ್ ರೈಸಾ ???…ನಮ್ಮನೇಲೂ ಫಿಗರ್ ರೈಸೆ ..ಅಂತ ನನ್ನ ಮನೆ ಕೆಲಸದಮ್ಮ ಹೇಳಿದಾಗ ನಾ..ಆಆ … ಅನ್ನುವಷ್ಟರಲ್ಲಿ ಆಕೆ .., ಅದೇ ಅಕ್ಕಾ ,ಚಿತ್ರಾನ್ನ ..ನನ್ನ ಮಗಳಿಗೆ ಈ ವರ್ಷ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ಹಾಕಿದ ಮೇಲೆ ಅವಳೊಟ್ಟಿಗೆ ನಾನು ಚೂರುಪಾರು ಇಂಗ್ಲಿಷ್ ಕಲಿತ ಇದೀನಿ. ಈಗ ನಮ್ಮನೇಲಿ ರೊಟ್ಟಿ, ಕಡುಬು (ನಮ್ಮ ಮಲೆನಾಡಿನ ತಿಂಡಿಗಳು ) ಇಂತ ಹಾಳ್ ತಿಂಡಿಗಳನ್ನ ನಾ ಮಾಡೋದೇ ಇಲ್ಲಕ್ಕ, ಬೇರೆ ಮಕ್ಕಳ ಎದುರು ನನ್ನ ಮಗಳು ಇಂತವನ್ನು ತಿಂದರೆ ನಮ್ಮನ್ನು ಬೇರೆ ಜನ ಏನ್ ಅನ್ನ್ಕೊಳಲ್ಲ ಹೇಳಿ ? ಈಗೇನಿದ್ರು ನಮ್ಮನೇಲಿ ಫಿಗರ್ ರೈಸು , ಉಪ್ಪಮ್ಮ , ದೋಸ, ಮಾಗಿ ಇವೆ ಅನ್ನುವಷ್ಟರಲ್ಲಿ ನಾ ಸುಸ್ತಾದೆ , ಹಮ್ ಮ್ ಈ ಒಣ ದೊಡ್ಡಸ್ತಿಕೆ ಭಾಷೆ ಇಂಗ್ಲಿಷ್ ಬೆಂಗಳೂರಿನಲ್ಲಿ ಮಾತ್ರ ವಿರಾಜಿಸುತಿತ್ತು, ಆದ್ರೆ ಈಗ ಚಿಕ್ಕ ನಗರಗಳಲ್ಲೂ ಇದರ ಹಾವಳಿ ಜಾಸ್ತಿ ಯಾಗಿದೆ,. ಕಿಟಿ ಪಾರ್ಟಿ, ಕ್ಲಬ್, ಜಿಮ್ , ಏರೋಬಿಕ್ ಸೆಂಟರ್ಸ್ ಎಲ್ಲೆಲ್ಲೂ.., ಅದೆಷ್ಟು ಅಂದ್ರೆ.. ಹೆಚ್ಚು ಕನ್ನಡವನ್ನೇ ಬಳಸೋ ನನಗೆ ಪರಿಚಯದ ಸಖಿ ಯೊಬ್ಬಳು ಕೇಳಿದ ಪ್ರೆಶ್ನೆ “ಭಾಗ್ಯ ನಿಮಗೆ ಕನ್ನಡ ಅಂದ್ರೆ ಅಷ್ಟು ಇಷ್ಟಾನಾ? ” ಅಂತ ಅದು , ವ್ಯಂಗ್ಯವಾಗಿ, ಮೈ ಉರಿದು ಬಿಡ್ತು ನೋಡಿ ..
ಇನ್ನು ಹೀಗೆ ಆದ್ರೆ ನಮ್ಮ ಹಳ್ಳಿಯಲ್ಲೂ , ಅಡಕೆ, ಬತ್ತದ ಕೆಲಸ ಮಾಡುವವರು ನನ್ನ ಇಂಗ್ಲಿಷ್ನಲ್ಲಿ ಮಾತನಾಡಿಸುವ ದಿನ ದೂರ ಇಲ್ಲ ..ಯಾವದಕ್ಕೂ ಒಂದು ಸ್ಪೋಕನ್ ಇಂಗ್ಲಿಷ್ ಬುಕ್ ನ ಜೊತೆನಲ್ಲಿ ಇಟ್ಕೊಂಡಿರೋದು ಒಳ್ಳೇದು.. ಉತ್ತರ ಕೊಡೋದಕ್ಕೆ ಬೇಕಲ್ಲ! (ಹಾಗಂತ ಒಂದು ಬಾಷೆ ಕಲಿಯುವ ಬಗ್ಗೆ ತಾತ್ಸಾರದ ಮಾತಲ್ಲ ಇದು )







chennagide. nimma kaalajige dhayanavadhagalu
Atiyada English huchchininda, tamma abhivyaktiyanne sankuchitagoLisuttide.
nanna geLati, kannada major odi, chikka oorinalli beledu, haaLu bengaluru patna seri, eega avaLa maatugaLannu keLidare uriyutte. Kelavu tuNukugaLu illive.
– Temple ge hogi pray madi bandvi
– Baby na receive maadodikke small blanket beku
– naanu understand maadkotinti
– tumba sad annistu
Nimge idu like ayta?:)