'ಒಂದು ಭ್ರೂಣದ ಸ್ವಗತ'

ನಾ ದಿವಾಕರ್

ಕಗ್ಗತ್ತಲೆಯ ಜಗತ್ತಿನಲ್ಲೂ
ಪ್ರಣತಿಯೊಂದು ಪ್ರಜ್ವಲಿಸುತಿದೆ
ಅಮ್ಮನ ವಾತ್ಸಲ್ಯವೇ ಇರಬೇಕು ;
ಮಗೂ….. ಮಾರ್ದನಿಸುತಿದೆ
ಆರ್ತತೆಯಿಂದ ತಾಯ
ಹೃದಯಬಡಿತವೇ ಇರಬೇಕು
ಬೆಳಕು ಕಾಣುವುದೆಂದು
ಯಕ್ಷ ಪ್ರಶ್ನೆ !
ಕಾಣಲೇಬೇಕೇ ಮತ್ತೊಂದು
ಪ್ರಶ್ನೆ ;
 
ಚಿವುಟಿಬಿಡು !
ಅಟ್ಟಹಾಸದ ದನಿಯೊಂದು
ಝೇಂಕರಿಸುತಿದೆ
ಮಾತೃ ಹೃದಯವ ಭೇಧಿಸಿ ;
ನನ್ನೊಡಲಿನ ಕುಡಿ
ಕಳಚಲಾರೆ ಜೀವ ಕೊಡಿ
ಆರ್ತನಾದ ಆವರಿಸುತಿದೆ ;
ಕಣ್ಣಾವೆಗಳ ಹನಿಗಳು
ಅವ್ಯಕ್ತ ಹೃದಯಕೆ
ಹಾಲುಣಿಸುತಿವೆ !
 
ಭುವಿ ಸ್ಪರ್ಷವದೇಕೆ
ನಿಗೂಢ ?
ಮಾನದಂಡಗಳಿವೆಯೇ
ಹೊಂಗಿರಣಗಳ ಕಾಣಲು ;
ನನ್ನದಲ್ಲದ ಆಯ್ಕೆ
ವರವೋ ಶಾಪವೋ
ಎಲ್ಲವೂ ಸಂದಿಗ್ಧ ;
ಸವರಿದ ಕೈಗಳ ಚಿತ್ತಸ್ಪರ್ಷ
ಹೊರಜಿಗಿಯುವ
ಬಯಕೆ ; ನನಗೇಕೆ
ಮುಕ್ತಿ ಇಲ್ಲ !

ಬಂಧನವೇನಲ್ಲ
ಈ ಸುಂದರ ಪಂಜರದ ಬಾಳು
ವಾತ್ಸಲ್ಯದ ಕಡಲಲಿ
ಮಿಂದ ದಿವ್ಯಾನುಭವ ;
ಹಂಗಿಲ್ಲದ ಬದುಕು
ಪಂಜರವ ಭೇಧಿಸಿದಾಗ
ಅಳುವಿನ ಸ್ವೀಕೃತಿಯಂತೆ
ಸೃಷ್ಟಿ ನಿಯಮ ಎಂದಾರು ; ಅಲ್ಲ
ನಿಷ್ಕಲ್ಮಶ ಕಡಲೊಳಗಿನ
ಸ್ವರ್ಗದ ನೆನಪು !
 
ಕಾರ್ಗತ್ತಲಿನಲೂ
ಕಾಣುವ ಮಮತೆಯ ಕಿಂಡಿಗೆ
ನೂರೆಂಟು ಸರಳುಗಳು
ಮುಕ್ತ ಬಾನಿನ ಕೆಳಗೆ ;
ಮಾತೆಯ ಒಡಲೊಳಗಿನ
ಭಾರ ಭುವಿಗೆ
ಹೊರೆಯೆಂದಾರು ;
ನಿಗೂಢವಲ್ಲವೇ ಮನುಕುಲ !
 
ಹೆಜ್ಜೆಯೂರುವ ಮುನ್ನವೇ
ಸರಳುಗಳ ಸರಪಳಿ
ತೊದಲು ನುಡಿಯುವ
ಮೊದಲೇ ಸಂಸ್ಕೃತಿಯ ಹಳಹಳಿ ;
ಇಂತಿಪ್ಪ ಬಂಧನಕೆ
ಇಂತಿಷ್ಟು ಸಾಂತ್ವನ
ಪುರಾಣದ ಸಂಕಥನ
ಗೌರವಾದರಗಳ ಸಮ್ಮಾನ
ಎಲ್ಲವೂ ಮಿಥ್ಯೆ !
 
ನಿರ್ಭಯದಿಂದಿರಲಹುದೇ
ಸೌಜನ್ಯವಿಲ್ಲದೆಡೆ ;
ಒಡಲೊಳಗಿನ ಸುಖವೇ
ಲೇಸು ; ನನಗೆ ಮುಕ್ತಿ
ಬೇಡಮ್ಮ ನಿನ್ನೊಡಲು ಸಾಕು !

‍ಲೇಖಕರು avadhi

March 29, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: