ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಬೀಸು ಹೆಜ್ಜೆ ಹಾಸಿ..

-ಗೀತಾ ದೊಡ್ಮನೆ

ಗುರುತ್ವಾಕರ್ಷಣ

ಅಸೀಮ ನೀಲ-
ಅನಂತ ಕಾಲ..
ಒಂದು ಬೀಸು ಹೆಜ್ಜೆ ಹಾಸಿ
ಒಳಗೊಳ್ಳುವ ವಿಶ್ವಜಾಲ..

ಇವೆಯೇ ಅಲ್ಲಿ-
ನಿನ್ನೆ-ಇಂದು-
ನಾಳೆಗಳು?
ಮಾರ್ದವತೆಯ, ಮಾನವತೆಯ
ಮಮತೆ ಮಿಡಿವ
ತಂತುಗಳು?

ಅಲ್ಲಿ ಪ್ರೀತಿಗೇನು
ಹೆಸರು?
ಹಳದಿ..ಕೆಂಪು..ಹೂವು
ಹಸಿರು?

ತೇಲಿ ತೇಲಿ ವಿಹರಿಸುವ
ಭಾವ
ಮರಳಿ ಭುವಿಗೆ ಹಾತೊರೆವ
ಜೀವ!

‍ಲೇಖಕರು Admin

16 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading