ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಂದು ಕಟ್ಟಡದಿಂದ ಏನೆಲ್ಲಾ ಸಾಧಿಸುವಿರಿ?

 

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನಸೌಧವನ್ನೇ ಹೋಲುವ ಸುವರ್ಣ ವಿಧಾನಸೌಧ ಬೆಳಗಾವಿಯಲ್ಲಿ ಉದ್ಘಾಟನೆಯಾಗಿದೆ. 400 ಕೋಟಿ ರೂಗಳ ವೆಚ್ಚದ ಈ ಕಟ್ಟಡದ ವಿನ್ಯಾಸ ವಿಧಾನಸೌಧದ ಮಾದರಿಯಲ್ಲೇ ಇದ್ದು 16,138 ಚದರ ಮೀಟರ್ ವ್ಯಾಪಿಸಿದೆ. 300 ಜನರು ಕೂಡಬಹುದಾದ ಶಾಸಕಾಂಗ ಸಭಾಂಗಣವನ್ನು ಹೊಂದಿರುವ ಭವ್ಯ ಸೌಧದಲ್ಲಿ 100 ಜನರು ಕೂಡಬಹುದಾದ ಕೌನ್ಸಿಲ್ ಸಭಾಂಗಣವನ್ನೂ ನಿರ್ಮಿಸಲಾಗಿದೆ. ಇದಲ್ಲದೆ 450 ಆಸನಗಳ ಸಭಾಂಗಣ, 38 ಸಚಿವರ ಕೊಠಡಿಗಳು ಮತ್ತು 14 ಇತರ ಸಭಾಂಗಣಗಳನ್ನು ನಿರ್ಮಿಸಲಾಗಿದೆ.

ಮೂರು ಅಂತಸ್ತಿನ ಈ ಕಟ್ಟಡ ರಾಷ್ಟ್ರಪತಿಗಳಿಂದ ಉದ್ಘಾಟನೆಯಾಗಿದ್ದು ಉತ್ತರ ಕರ್ನಾಟಕದ ಜನತೆಯ ಬಹು ವರ್ಷಗಳ ಕನಸನ್ನು ಸಾಕಾರಗೊಳಿಸಿದೆ. ಶಿವಸೇನೆ ಮತ್ತು ಮಹಾರಾಷ್ಟ್ರದ ಇತರ ಪಕ್ಷಗಳ ಕ್ಷುಲ್ಲಕ ರಾಜಕಾರಣದ ನಡವೆಯೇ ಸುವರ್ಣ ಸೌಧ ಉದ್ಘಾಟನೆಯಾಗಿದ್ದು ರಾಜ್ಯ ರಾಜಕೀಯದಲ್ಲಿ ಮಹತ್ತರ ಹೆಜ್ಜೆ ಎಂದೇ ಪರಿಗಣಿಸಲಾಗುತ್ತಿದೆ. ಸುವರ್ಣ ಸೌಧದ ಮಹತ್ವ, ಉಪಯುಕ್ತತೆ ಏನೇ ಇರಲಿ ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ಬೆನ್ನು ತಟ್ಟಿಕೊಳ್ಳುತ್ತಿದ್ದು ಆತ್ಮರತಿಯಲ್ಲಿ ತೊಡಗಿವೆ.

ಮಹಾರಾಷ್ಟ್ರ ಬೆಳಗಾವಿ ತನಗೆ ಸೇರಬೇಕೆಂದು ಹಲವಾರು ದಶಕಗಳಿಂದ ಆಗ್ರಹಿಸುತ್ತಿದ್ದು ಈ ರಾಜಕೀಯ ವಿವಾದಕ್ಕೆ ಸವಾಲಾಗಿಯೇ ಬೆಳಗಾವಿಯಲ್ಲಿ ಶಾಸಕಾಂಗ ಭವನವನ್ನು ನಿಮರ್ಿಸುವ ನಿಧರ್ಾರ ಕೈಗೊಳ್ಳಲಾಗಿತ್ತು. ಸೆಪ್ಟಂಬರ್ 2006ರಲ್ಲಿ ಪ್ರಪ್ರಥಮ ಬಾರಿ ವಿಧಾನಸಭೆ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗಿತ್ತು. ಈ ಸಂದರ್ಭದಲ್ಲೇ ಅಧಿಕಾರರೂಢ ಜೆಡಿಎಸ್-ಬಿಜೆಪಿ ಸರ್ಕಾರ ಸುವರ್ಣಸೌಧದ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಿತ್ತು. ಐದು ವರ್ಷಗಳ ನಂತರ ಉತ್ತರ ಕನರ್ಾಟಕದ ಜನತೆಯ ಒಂದು ಕನಸು ಸಾಕಾರಗೊಂಡಿದೆ. ಇದು ಸ್ವಾಗತಾರ್ಹವೇ.

ರಾಜ್ಯದ ಒಂದು ಪ್ರಾಂತ್ಯದ ಮೇಲೆ ತನ್ನ ಅಸ್ತಿತ್ವ ಸಾಧಿಸಲು ಸರ್ಕಾರಕ್ಕೆ ವಿಧಾನಸಭೆ ಅಧಿವೇಶನವನ್ನು ನಡೆಸುವ ಮತ್ತು ಮತ್ತೊಂದು ಶಾಸಕಾಂಗ ಭವನವನ್ನು ನಿಮರ್ಿಸುವ ಅವಶ್ಯಕತೆ ಇತ್ತೇ ಎಂಬ ಪ್ರಶ್ನೆ ಕಾಡದಿರುವುದಿಲ್ಲ. ಇದು ಅಸ್ತಿತ್ವದ ಪ್ರಶ್ನೆಯೇ ಇರಬಹುದು ಅಥವಾ ಭಾವನೆಗಳ ಪ್ರಶ್ನೆಯೇ ಇರಬಹುದು.,ಕರ್ನಾಟಕದ ಮತ್ತು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯೇ ಇರಬಹುದು ಆದರೆ ಸುವರ್ಣ ಸೌಧದ ನಿಮರ್ಾಣದಿಂದ ಅಥವಾ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳುವುದು ಬಹುಶಃ ಅಪ್ರಬುದ್ಧ ಅಭಿಪ್ರಾಯ ಎನಿಸುತ್ತದೆ.

ಈ ಸೌಧದಲ್ಲಿ ಕೇವಲ ಅಧಿವೇಶನ ನಡೆಸಿದರೆ ಸಾಲದು, ಸರ್ಕಾರದ ಕೆಲವು ಇಲಾಖೆಗಳು ಶಾಶ್ವತವಾಗಿ ಇಲ್ಲಿಯೇ ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಮಾಡಬೇಕಿದೆ. ಅಂದರೆ ರಾಜ್ಯದ ಆಡಳಿತ ಯಂತ್ರದ ಕೆಲವು ಭಾಗಗಳನ್ನು ಬೆಳಗಾವಿಗೆ ವರ್ಗಾಯಿಸಬೇಕಾಗುತ್ತದೆ. ಉತ್ತರ ಕರ್ನಾಟಕದ ಆರ್ಥಿಕ ಹಿಂದುಳಿಯುವಿಕೆ ಮತ್ತು ಅಸಮತೋಲನ ಬೆಳವಣಿಗೆಯನ್ನು ನಿವಾರಿಸಲು ಸುವರ್ಣ ಸೌಧ ಕ್ರಿಯಾಶೀಲವಾಗಿ ಬಳಸಲ್ಪಡುವುದು ಅತ್ಯಗತ್ಯ. ಆರಕ್ಕೂ ಹೆಚ್ಚು ಇಲಾಖೆಗಳನ್ನು ಬೆಳಗಾವಿಗೆ ವರ್ಗಾಯಿಸಲು ಸರ್ಕಾರ ಯೋಚಿಸುತ್ತಿದ್ದರೂ ಇದು ಸಾಕಾರಗೊಳ್ಳುವ ಅನುಮಾನಗಳೂ ಇವೆ. ಅಧಿಕಾರಶಾಹಿಯ ಲಾಬಿ ಈ ಪ್ರಕ್ರಿಯೆಗೆ ಅಡ್ಡಿಯಾಗುವ ಸಾಧ್ಯತೆಗಳೂ ಇವೆ.

ಏನೇ ಆಗಲಿ ಒಂದು ಹಿಂದುಳಿದ ಪ್ರದೇಶದಲ್ಲಿ ವಿಧಾನಸಭೆಯ ಅಧಿವೇಶನ ನಡೆಸಿದ ಮಾತ್ರಕ್ಕೆ ಅಥವಾ ಕೆಲವು ಸರ್ಕಾರಿ ಇಲಾಖೆಗಳನ್ನು ಸ್ಥಾಪಿಸಿದ ಮಾತ್ರಕ್ಕೆ ಅಲ್ಲಿನ ಆರ್ಥಿಕತೆ ವೃದ್ಧಿಸುತ್ತದೆ, ಅಸಮಾನತೆ ಕಡಿಮೆಯಾಗುತ್ತದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಮಹಾರಾಷ್ಟ್ರದಲ್ಲೂ ಇದೇ ರೀತಿ ಭಾವಿಸಿ ವಿದರ್ಭ ಪ್ರಾಂತ್ಯದ ಅಭಿವೃದ್ಧಿಗೆ ಪೂರಕವಾಗಲೆಂದು ನಾಗಪುರದಲ್ಲಿ ವರ್ಷಕ್ಕೊಮ್ಮೆ ಚಳಿಗಾಲದ ಅಧಿವೇಶನ ನಡೆಸಲಾಗುತ್ತದೆ. ಆದರೆ ವಿದರ್ಭ ಪ್ರಾಂತ್ಯ ರೈತರ ಆತ್ಮಹತ್ಯೆಯಲ್ಲಿ ಗಿನ್ನೆಸ್ ದಾಖಲೆ ಸ್ಥಾಪಿಸಿದೆ.

ಉತ್ತರ ಕರ್ನಾಟಕದ ಹಿಂದುಳಿಯುವಿಕೆಗೆ ಐತಿಹಾಸಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರಣಗಳಿವೆ. ರಾಜ್ಯದ ಮಾನವ ಅಭಿವೃದ್ಧಿ ಪ್ರಕ್ರಿಯೆಯನ್ನು ಅಳೆಯಲು ಬಳಸುವ 11 ಮಾನದಂಡಗಳ ಪೈಕಿ ಎಲ್ಲದರಲ್ಲೂ ಉತ್ತರ ಕನರ್ಾಟಕ ಹಿಂದುಳಿದಿರುವುದು ಒಂದು ದುರಂತವಾದರೆ, ಅತಿ ಹಿಂದುಳಿದ 39 ತಾಲ್ಲೂಕುಗಳ ಪೈಕಿ 26 ತಾಲ್ಲೂಕುಗಳು ಈ ಪ್ರದೇಶದಲ್ಲೇ ಇರುವುದು ಮತ್ತೊಂದು ಘೋರ ದುರಂತ. ಈ ಹಿಂದುಳಿಯುವಿಕೆಗೆ ರಾಜ್ಯವನ್ನು ಆಳುತ್ತಿರುವ ಸಕರ್ಾರಗಳ ನಿರ್ಲಕ್ಷ್ಯ ಮತ್ತು ಅಸಡ್ಡೆ ಒಂದು ಕಾರಣವಾದರೆ, ನೈಸಗರ್ಿಕ ಸಂಪನ್ಮೂಲಗಳ ಸಮಾನ ಹಂಚಿಕೆಯಲ್ಲಿನ ಲೋಪಗಳು ಮತ್ತು ಔದ್ಯಮಿಕ ಕ್ಷೇತ್ರದ ಬೆಳವಣಿಗೆಯಲ್ಲಿನ ತಾರತಮ್ಯಗಳು ಮತ್ತೊಂದು ಕಾರಣವಾಗಿದೆ. ಕನರ್ಾಟಕ ಎಂದರೆ ಬೆಂಗಳೂರು ಮತ್ತು ದಕ್ಷಿಣ ಕನರ್ಾಟಕ ಮಾತ್ರ ಎನ್ನುವ ರೀತಿಯಲ್ಲಿ ಅಭಿವೃದ್ಧಿ ನೀತಿಗಳನ್ನು ಅನುಸರಿಸಲಾಗುತ್ತಿರುವುದೂ ಅಸಮಾನತೆಯ ಕಾರಣವಾಗಿದೆ. ಕಾವೇರಿ ವಿವಾದದಲ್ಲೇ ಈ ಅಂಶ ಸ್ಪಷ್ಟವಾಗುತ್ತಿದೆ. ಕೃಷ್ಣಾ ನದಿಯಿಂದ ಆಂಧ್ರ ಪ್ರದೇಶಕ್ಕೆ ಹರಿಯುವ ಹೆಚ್ಚುವರಿ ನೀರಿನ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಕನ್ನಡಿಗರ ಮನಸ್ಸು ಕಾವೇರಿ ಎಂದಾಕ್ಷಣ ಕಾವೇರಲು ಕಾರಣವೇನು ಎಂದು ಯೋಚಿಸಿದಾಗ ಉತ್ತರ-ದಕ್ಷಿಣ ಧ್ರುವಗಳ ನಡುವಿನ ಸೂಕ್ಷ್ಮತೆಗಳೂ ಅರಿವಾಗುತ್ತದೆ.

ಉತ್ತರ ಕನರ್ಾಟಕ ಎದುರಿಸುತ್ತಿರುವ ಅಸಮಾನತೆ, ಅಸಮತೋಲನ ಬೆಳವಣಿಗೆ ಮತ್ತು ತಾರತಮ್ಯಗಳನ್ನು ಹೋಗಲಾಡಿಸಲು ರಾಜಕೀಯ ಇಚ್ಚಾಶಕ್ತಿ ಅಗತ್ಯವೇ ಹೊರತು ಸುವರ್ಣ ಸೌಧಗಳಲ್ಲ. ಭಾವಚಿತ್ರ, ಕಟ್ಟಡ, ಪ್ರತಿಮೆ, ಸ್ಮಾರಕ ಭವನಗಳಲ್ಲೇ ನಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಪರಿಪಾಠ ಬೆಳೆಸಿಕೊಂಡಿರುವ ಭಾರತೀಯ ಸಮಾಜದ ವಿಶಿಷ್ಟ ಲಕ್ಷಣವನ್ನು ಇಲ್ಲಿಯೂ ಕಾಣಬಹುದಾಗಿದೆ. ಬೆಳಗಾವಿಯಲ್ಲಿ ನಡೆವ ಅಧಿವೇಶನದಿಂದ ಆ ಪ್ರದೇಶ ಮುಂದುವರೆಯುವುದಿಲ್ಲ. ಅಥವಾ ಮುಂದುವರೆಯುವಂತಹ ನೀತಿಗಳನ್ನು ಜಾರಿಗೊಳಿಸಲು ಅಲ್ಲಿಯೇ ಅಧಿವೇಶನ ನಡೆಯಬೇಕಿಲ್ಲ. ಏಕೆಂದರೆ ರಾಜ್ಯದ ಖಜಾನೆ ಇರುವುದು ಬೆಂಗಳೂರಿನಲ್ಲಿ, ಖಜಾನೆಯ ಕೀಲಿ ಕೈ ಇರುವುದು ಆಳ್ವಿಕರ ಬಳಿ, ಅಭಿವೃದ್ಧಿಯ ಪರಿಕಲ್ಪನೆ ಇರುವುದು ಆಳ್ವಿಕರ ಮನದಾಳದಲ್ಲಿ. ಇವುಗಳ ಸದುಪಯೋಗವಾಗದೆ ಎಷ್ಟೇ ಭವ್ಯ ಸೌಧಗಳನ್ನು ಕಟ್ಟಿದರೂ ಅದು ಕೇವಲ ಸಾಂಕೇತಿಕವಾಗುತ್ತದೆ. ಸುವರ್ಣ ಸೌಧವೂ ಇಂತಹ ಸಂಕೇತಗಳಲ್ಲೊಂದಾಗುತ್ತದೆ.

‍ಲೇಖಕರು G

16 October, 2012

2 Comments

  1. s.g.shivashankar

    ಎಲ್ಲದರಲ್ಲೂ ತಪ್ಪು ಕಂಡುಹಿಡಿಯುವ ನಮ್ಮ ಪ್ರವೃತ್ತಿಯನ್ನು ನಾವು ಬದಲಿಸಿಕ್ಕೊಳ್ಳಬಾರದೇಕೆ..? ಇಂತ ಒಂದು ಪ್ರಯತ್ನವನ್ನು ಹೊಗಳದಿದ್ದರೂ ಉತ್ತರ ಕನ್ನಡ ಜಿಲ್ಲೆಗಳ ಅಸಮಾನತೆಯನ್ನು ಸರಿಪಡಿಸುವಲ್ಲಿ ಒಂದು ಪುಟ್ಟ ಹೆಜ್ಜೆಯೆಂದು ಅಂದುಕ್ಕೊಳ್ಳಬಾರದೇಕೆ..? ನಾನೇನು ಹಾಲಿ ಸರ್ಕಾರದ ವಕಾಲತ್ತು ವಹಿಸುತ್ತಿಲ್ಲ! ನಮ್ಮ ಮೂಲಭೂತ ಪ್ರವೃತ್ತಿಯನ್ನು ಬದಲಾಯಿಸಿ ಎಲ್ಲದರಲ್ಲಿಯೂ ಒಂದು ಒಳ್ಳೆಯ ಗುಣ ಹುಡುಕೋಣ ಎಂಬ ಮನೋಭಾವ ಬೆಳೆಸಿಕ್ಕೊಳ್ಳೋಣ ಎಂಬುದು ನನ್ನ ಮತ.

    • ನಾ ದಿವಾಕರ

      ಕ್ಷಮಿಸಿ ತಪ್ಪು ಕಂಡುಹಿಡಿದಿಲ್ಲ. ಆದರೆ ಒಂದು ಪ್ರದೇಶದ ಅಭಿವೃದ್ಧಿಗೆ ಬೇಕಾದ ಆರ್ಥಿಕ ನೀತಿಗಳೇ ಇಲ್ಲದ ಆಳುವ ವರ್ಗಗಳು ಸುವರ್ಣ ಸೌಧದಿಂದ ಉದ್ಧಾರ ಮಾಡಲು ಸಾಧ್ಯವೇ ಯೋಚಿಸಿ. ಸಂಕೇತಗಳಿಗೆ, ಪ್ರತಿಮೆಗಳಿಗೆ, ಸ್ಥಾವರಗಳಿಗೆ ಜೋತು ಬೀಳುವ ನಮ್ಮ ಪ್ರವೃತ್ತಿ ಬದಲಾಗಬೇಕೆಂದೇ ನನ್ನ ಆಶಯ. ಇದು ಮಹಾನ್ ವ್ಯಕ್ತಿಗಳ ಪ್ರತಿಮೆಗಳಿಗೆ ಅನ್ವಯಿಸಿದಷ್ಟೇ ಸುವರ್ಣ ಸೌಧಕ್ಕೂ ಅನ್ವಯಿಸುತ್ತದೆ.
      ನಾ ದಿವಾಕರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading