ಒಂದು ಮಾತು.೧೦ ವರ್ಷಗಳ ನಂತರ ನನಗರಿವಿಲ್ಲದಂತೆ ಹೊರಬಂದು ಆತನ ಗಂಡಸ್ತನಕ್ಕೆ ಆಘಾತ ನೀಡಿತ್ತು. ಬೆವರಿಬಿಟ್ಟಿದ್ದೆ. ಇಷ್ಟೊಂದು ಶಕ್ತಿ ನನಗೆಲ್ಲಿಂದ ಬಂತು..ಎಲ್ಲಿಂದಲೋ ಒಟ್ಟಾರೆ ಬಂದು ಬಿಟ್ಟಿದೆ. ಬಿಡಬಾರದು…ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕು. ಆದದ್ದಾಗಲಿ ಎಂದು ಮುಖ ತಿರುಗಿಸಿ ನಡೆದವಳ ಬೆನ್ನಿಗೆ ಬಿದ್ದಿತ್ತು ಬಲವಾದ ಏಟು.ಮುಂದೆ ತಲೆಗೆ ಎದೆಗೆ ಮೈ ಮೇಲೆ ಬಾಸುಂಡೆಗಳ ಮೆರವಣಿಗೆ.ಮಾತು ಹೊರಡಲಿಲ್ಲ.ಕಣ್ಣೀರಿಗೆ ಹೊರಬರದೆ ತಪ್ಪಿಸಿಕೊಳ್ಳಲಾಗಲಿಲ್ಲ.ಕೇಳಬೇಕೆಂದಿದ್ದ ಪ್ರಶ್ನೆ ಮನದಲ್ಲೇ ಉಳಿದುಬಿಡ್ತು..
ನಾಳೆನೆ ಡೈವೋರ್ಸ್ ಮಾಡ್ತೀನಿ. ಅದು ಯಾರ್ಯಾರನ್ನು ಕರೆಸ್ತಿಯೋ ಕರ್ಸು ಎಂದು ೮ ವರ್ಷದಲ್ಲಿ ೧೦ ಸಾವಿರ ಸಲ ಹೇಳಿದವರಿಗೆ ನನ್ನ ಒಂದು ಹೇಳಿಕೆ ಅಷ್ಟೊಂದು ತೊಂದ್ರೆ ಕೊಡ್ತಾ….
ನವೋಮಿ ನಿನಗ್ಯಾಕೆ ಇಂಥದ್ದೆಲ್ಲ.ನಿಂಗೇನು ಕಡಿಮೆ. ಎಲ್ಲ ಇದೆ ಅಲ್ಲ. ಆದರು ಏಕೆ ಹೀಗೆಲ್ಲ… ನನ್ನತ್ತಿಗೆಸುಮಾ ಕೇಳುತ್ತಲೇ ಇದ್ದಾಳೆ.
ನಿನಗೆ ಇದೆಲ್ಲ ಅರ್ಥ ಆಗಲ್ಲ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ದುಡಿದು ರಾತ್ರಿ ಮನಸ್ಸಿಲ್ಲದ ಮನಸ್ಸಿನಿಂದ ಗಂಡನ ಸೇವೆ ಮಾಡೋ ನಿಂಗು ನಂಗೂ ತುಂಬ ವ್ಯತ್ಯಾಸ ಇದೆ ಆಯ್ತಾ

ಸುಮ ನೀನ್ನ ಪುರಾಣ ಸ್ವಲ್ಪ ನಿಲ್ಸು.ಈ ಹೊಟ್ಟೆಗೆ ಹಾಕ್ಕೋಳ್ಳೋದು ಅಂದೆಯಲ್ಲಾ ಅದೇ ನಂಗಾಗಲ್ಲ..ನಿನು ನೋಡ್ತಾ ಇರು ಒಂದಲ್ಲ ಒಂದು ದಿನ ಓಡಿ ಹೋಗ್ತೀನಿ…
ಇದೇನಿದು ನಿಂಗೇನು ಹುಚ್ಚಾ..ಸುಮಾ ಬೆಚ್ಚಿಬಿದ್ದಳು..
ಯಾರಾದ್ರೂ ಕೇಳಿಸ್ಕೊಂಡು ಬಿಡ್ತಾರೆ ಕಣೆ.ಸ್ವಲ್ಪ ಕುಲ್ ಆಗಿ ವಿಚಾರ ಮಾಡು. ನಿನ್ನ ಮಕ್ಕಳ ಗತಿ ಏನಾಗಬೇಕು..ಕಾಲಿಗಿ ಬಿಳ್ತಿನಿ ಬಿಡ್ತು ಅನ್ನು…
ಸುಮಾ ನೀನು ಪಾಪದವಳು.ನೀನಂತೂ ಸತ್ತೆ ಹೋಗಿದ್ದಿಯ ನನಗಾದ್ರೂ ಬದುಕೋಕೆ ಬಿಡು..
ಹಾ ನಾನಂತೂ ಸತ್ತೆ ಹೋಗಿದ್ದೀನಿ ನೀನಾದ್ರೂ ಬದುಕಬೇಕು ಅಂತಲೇ ಹೇಳ್ತಾ ಇದ್ದೀನಿ.ನೋಡ್ದೆಯಲ್ವಾ ಅವಳ ಪಾಡೇನಾಯ್ತು..ಅಂಥವಳಿಗೇನೇ ಈ ಸಮಾಜ ಬದುಕೋಕೆ ಬಿಡಲಿಲ್ಲ.ಅಂಥದ್ರಲ್ಲಿ ನಮ್ಮಂಥೋರ ಪಾಡೇನು..ಬುದ್ದಿ ಇಲ್ಲ ನಿಂಗೆ..
ಸುಮಳ ಕೊನೆಯ ಮಾತು ಕೇಳಿ ತಳಮಳಗೊಂಡೆ.ನಿಜ ಅವಳು ಸತ್ತೇ ಹೋದ್ಲು ಅಲ್ವ.ಅಸ್ತಿತ್ವದ ಹುಡುಕಾಟದಲ್ಲಿ ಹೆಣವಾಗಿ ಹೋದಳಲ್ಲ..ಅಲ್ಲಲ್ಲಿ ಒಂದಿಬ್ಬರು ಬಿಟ್ಟರೆ ಆ ಸಾವಿನ ವಿರುದ್ಧ ಒಂದು ಗಟ್ಟಿಧ್ವನಿಯೂ ಏಳಲಿಲ್ವಲ್ಲ….
ಜನ ಮಾತಾಡಿದ್ದೇನು…
ಅವಳಿಗೇನು ಬಂದಿತ್ತು…ಎಲ್ಲ ಇರೋಳು ತೆಪ್ಪಗೆ ಇರಲಾರದೆ ಮತ್ತೊಬ್ಬ ಬೇಕಾದ…ಇದನ್ನೇ ಅಲ್ವ
ನಾನು ಗಂಡು ಏನು ಬೇಕಾದರೂ ಮಾಡಬಹುದು.ನೀನು ಹೆಣ್ಣು ಎಷ್ಟು ಬೇಕೋ ಅಷ್ಟು ಇದ್ರೆ ಸರಿ ಎಂಬ ಹೇಳಿಕೆಗಳು ನನ್ನನ್ನಂತೂ ಕಂಗೆಡಿಸಿವೆ. ಬೇರೆಯವರಿಗೆ ಇವು ಯಾವ ರೀತಿ ಪರಿಣಾಮ ಬೀರುತ್ತೋ ಅರ್ಥವಾಗುತ್ತಿಲ್ಲ.
ನನ್ನ ಗಂಡ ನೂರು ಮಂದಿ ಸೂಳೆಯರನ್ನು ಇಟ್ಟುಕೊಂಡಿದ್ದ ಎಂದು ನನ್ನತ್ತೆ ನಗುತ್ತಲೇ ಹೇಳುವಾಗ ಬೆಚ್ಚಿ ಬೀಳುತ್ತೇನೆ.
ನೀನಗ್ಯಾರಾದ್ರೂ ಇದ್ದಾರಾ ಅಂತ ಕೇಳಿದಾಗಲೆಲ್ಲ ಇಲ್ಲ ಎಂದು ಹೇಳಿ ಹೇಳಿ ಸುಸ್ತಾಗುತ್ತೇನೆ. ನನಗೆ ನನ್ನ ಸ್ಪೇಸ್ ಕೊಡಿ ನಾನು ಉಸಿರಾಡಬೇಕು ಎಂದು ಹೇಳಲು ಪ್ರಯತ್ನಿಸಿ ಸೋಲುತ್ತೇನೆ. ನನ್ನ ಇಗೋನ ಕೆಣಕುವ ಅವರ ಮಾತುಗಳಿಗೆ ಪ್ರತಿಭಟಿಸಿದರೆ
ನೀನಗ್ಯಾರೋ ಇದ್ದಾರೆ ಬಿಡೆ ಅದಕ್ಕೆ ಹೀಂಗಾಡ್ತೀಯಾ ಎಂದು ಕಟಕಿಯಾಡುವ ಅವರ ಬಗ್ಗೆ ನನ್ನಲ್ಲಿ ವಿಚಿತ್ರ ಕೋಪ ಬರುತ್ತೆ.ನನಗೂ ಎಷ್ಟೋ ಸಾರಿ ಒಬ್ಬಳೇ ದೂರ ಎಲ್ಲಿಯಾದರೂ ಓಡಿ ಹೋಗೋಣ ಎನ್ನಿಸಿ ಬಿಡುತ್ತದೆ. ಇವೆಲ್ಲ ನಿಂಗೆ ಹೇಗೆ ಅರ್ಥ ಆಗ್ಬೇಕು ಸುಮಾ….






ನವೋಮಿ, ನಿನ್ನ ತಳಮಳಗಳು ನಿನ್ನವು ಮಾತ್ರವಲ್ಲ, ಈ ದೇಶದ ಲಕ್ಷಾಂತರ ಹೆಣ್ಣುಗಳ ತಳಮಳವು ಹೌದು. ಕೋರ್ಟುಗಳಿಗೆ ಈಗ ತಲೆಬಿಸಿಯಾಗಿದೆಯಂತೆ! ದಿನವು ನೂರಾರು ಕೇಸುಗಳು ಈ ತಳಮಳಗಳಿಗೊಂದು ಅಂತ್ಯ ಹಾಡೋಕೆ. ಅಂದ್ರೆ ಅವಳಂತ ಅದೆಷ್ಟು ಮನಸ್ಸುಗಳು ಆ ಸ್ಥಿತಿ ತಲುಪಿವೆ. ಅದಕ್ಕೆ ಈ ವ್ಯವಸ್ಥೆಯ ನ್ಯಾಯದ ಮನಸ್ಸುಗಳು ಕಾನೂನನ್ನು ಪುನಃ ಪರಿಶೀಲಿಸುವ ಹುನ್ನಾರ ಹೂಡ್ತಿವೆಯೇ ಹೊರತು ಪರಿಸ್ಥಿತಿಯನ್ನು ವಿಶ್ಲೇಷಿಸುವ ಪ್ರೌಢಿಮೆ ತೋರಿಸ್ತಿಲ್ಲ.Leela Sampige
ನವೋಮಿಯವರೆ, ಚೆನ್ನಾಗಿದೆ ಬರ್ದಿದ್ದು ; ಲೀಲಾಸಂಪಿಗೆಯವರು ಪ್ರತಿಕ್ರಿಯೆಯಲ್ಲಿ
ಹೇಳಿರುವುದೂ ಕಟುಸತ್ಯವೇ. ಸುತ್ತಲಿನ ಪರಿಸರವೇ ಹಾಗಿರುವಾಗ ಎಲ್ಲೋ ನಮ್ಮಂ
ಥವರು ಅದಕ್ಕೆ ವಿರುದ್ಧವಾಗಿ ವರ್ತಿಸಿದರೆ, ಆಲೋಚಿಸಿದರೆ ದೊಡ್ಡ ಅಪರಾಧವೆಂಬಂತೆ
ಪರಿಗಣಿಸುತ್ತಾರೆ;ಎಷ್ಟೋ ಸಲ ಸ್ತ್ರೀ ಸಮುದಾಯದಿಂದಲೂ ನಮ್ಮ ಅಭಿಪ್ರಾಯಕ್ಕೆ
ಸಹಮತ ಸಿಗುವುದಿಲ್ಲ ; ಎಲ್ಲ ನಿರೀಕ್ಷಿಸುವುದೂ ಹೆಣ್ಣೇ ಹೊಂದಿಕೊಂಡು ಹೋಗಬೇ
ಕೆಂದು !! ಇದ್ಯಾವ ನ್ಯಾಯ ಅಲ್ವಾ ?
ಕೂಲ್ ಹುಡುಗಿ ಮತ್ತೊಮ್ಮೆ ಮಾತನಾಡಿರುವುದು ನನಗಂತೂ ಖುಷಿಯಾಗಿದೆ.
ittechege navomi baraha kanade kangaalagidde. thanks navomi. olle barahadondige bandiddeeri
-rajesh arkula
vesha badalayisidare gottagolla andukondira
chetana ?
– manasi bhat
This has distinct chaap of Chets.:-)
Hot topic under a ‘cool’head. but oDi hOgodu yaake? One can walk out coolly alwaa?? With dignity? Enanteeraa??
🙂
Malathi S
really good one. taking a same subject in a different ferent angle is the splity of this write up. baduko hambala idre yaara hangoo beda. ella bandhagalinda vimuktharaagabekashte. keep it up.
yes hennu thaggi baggi nedeyabeku /naya/vinaya
/sahaNE/preethi/hriyarabagge gourava/swarthavannu thejisi/nannademba bavaneyannu bittu/nammadembaa bhavaneyinda jeevana sagisabeku /hennu iththtecheganthu gandasinanthe varthisi/ nanu yarigukadimeyillav
anthendu thilidu/ thanu hennu hembudannu
marethu/hennina nija arthavannu avare hennagi
thamma kayyara thave chitege4 benky hachchikol
luthiddare…..urs.. siddesh/hennau nijavagi preethisuvavanu
this article should be made as copulsory chapter in text books at graduate level.It will open every husband’s eyes.