
ಶೋಭಾ ದಿನೇಶ್
ಮಾಧ್ಯಮ ಲೋಕದ ದಿಗ್ಗಜ ಪಿ.ಸಾಯಿನಾಥ್ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಪರ್ತಕರ್ತ ಜಿ.ಎನ್.ಮೋಹನ್ ರವರ ಗೆಳೆತನ ಹಾಗೂ ‘ಪರಿ’ ಎರಡೂ ಅತ್ಯದ್ಭುತ ವಿಷಯಗಳು..
ಹೆದ್ದಾರಿಗಳಿಗಿಂತ ಕಾಲ್ದಾರಿಗಳನ್ನೇ ಇಷ್ಟ ಪಡುವ ಇವರು ನಶಿಸುತ್ತಿರುವ ಭಾಷೆ , ಕಸುಬುಗಳು, ಗ್ರಾಮೀಣ ಬದುಕಿನ ಒಳದನಿ, ಬವಣೆಗಳನ್ನು ಲೋಕದ ಮುಂದಿಡುವ, ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿಯನ್ನು ಇಷ್ಟಪಟ್ಟು ಹೇಗಲಿಗೇರಿಸಿಕೊಂಡಿದ್ದಾರೆ.
ಪುಣೆಯ ಗೂಡಂಗಡಿಯಲ್ಲಿ ಚಪ್ಪಲಿ ಹೊಲೆಯುವ ಭಾಮಾಬಾಯಿ, ದೆಹಲಿಯ ಹೊರವಲಯದಲ್ಲಿ ಟ್ರಾಕ್ಟರ್ ಗಳಿಗೆ ಟೈರ್ ಬದಲಿಸಿ ಪಂಕ್ಚರ್ ಹಾಕುವ ಶಾಂತಿ ದೇವಿ, ಶಿವಗಂಗೆಯ ಸಾವಯವ ರೈತ ಮಹಿಳೆ ಚಂದ್ರ, ಸ್ಥಳೀಯ ಬೀಜ ತಳಿಗಳನ್ನು ಸಂರಕ್ಷಿಸುತ್ತಿರುವ ರಾಜಾಸ್ಥಾನದ ಚಮ್ನಿ ಮೀನಾ..
ಇವರೆಲ್ಲರೂ ಸಾಂಪ್ರದಾಯಿಕ ನಂಬಿಕೆಗಳನ್ನು ಅಲ್ಲಾಡಿಸಿದ್ದಾರೆ, ಮೌಲ್ಯ ಗಳೊಂದಿಗೆ ದೃಢವಾಗಿ ನಿಂತಿದ್ದಾರೆ, ಹರಿದ ಬದುಕಿಗೆ ತೇಪೆ ಹಾಕುತ್ತಿದ್ದಾರೆ…





0 Comments