ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏನಿದು ತೇಜಸ್ವಿ ಅಂದ್ರೆ?..

ಬಸವ ಚಂದ್ರಗಿರಿ 
೨೦೦೦ನೇ ಇಸವಿ…ಆ ವರ್ಷ ಜಿ ಹೆಚ್ ನಾಯಕರು ಪಂಪ ಪ್ರಶಸ್ತಿ ಆಯ್ಕೆ ಸಮಿತಿಗೆ ಅಧ್ಯಕ್ಷರಾಗಿದ್ದರು. ಆಗ ಯಾರಿಗೆ ಪ್ರಶಸ್ತಿ ಕೊಡಬೇಕು ಎನ್ನುವ ಚರ್ಚೆ ಬಂದಾಗ ಸರ್ವಾನುಮತದಿಂದ ’ತೇಜಸ್ವಿಗೆ’ ಅಂತ ನಿರ್ಧಾರ ಆಯ್ತು. ಅದರಲ್ಲಿ ನಾಯಕರ ವೈಯುಕ್ತಿಕ ಹಿತಾಸಕ್ತಿಗಳಾಗಲೀ, ತೇಜಸ್ವಿಯವರ ಗೆಳೆಯ ಎನ್ನುವ ಪೂರ್ವಾಗ್ರಹಗಳಾಗಲೀ t-card3-2ಯಾವುದೂ ಇರಲಿಲ್ಲ. ಆ ಕಮಿಟಿಯಲ್ಲಿದ್ದ ಎಲ್ಲರಿಗೂ ಗೊತ್ತಿದೆ ಯಾವ ಮೆಥಡ್ ಅನುಸರಿಸಿ ಆಯ್ಕೆ ಮಾಡಿದ್ದು ಅಂತ. ತುಂಬಾ Transparent ಪ್ರಕ್ರಿಯೆ ಆಗಿತ್ತು ಅದು. ಆ ಕಮಿಟಿಯಲ್ಲಿ ಕಾ.ತ.ಚಿಕ್ಕಣ್ಣ ಮುಂತಾದವರೆಲ್ಲ ಇದ್ದರು. ಕೊನೆಗೆ ಸರ್ವಾನುಮತದಿಂದ ತೇಜಸ್ವಿಗೆ ಈ ಸಾಲಿನ ‘ಪಂಪ ಪ್ರಶಸ್ತಿ’ ಅಂತ ತೀರ್ಮಾನ ಆಯಿತು.

ಆಗ ರಾಮಮೂರ್ತಿ ಅಂತ ಒಬ್ರಿದ್ರು. ಅವರಿಗೆ ತುಂಬಾ ಖುಷಿ ಆಗ್ಬಿಡ್ತು ತೇಜಸ್ವಿಗೆ ಪ್ರಶಸ್ತಿ ಬಂದಿದ್ದು. ಅವರು ನಾಯಕರಿಗೆ ಗೊತ್ತಿಲ್ಲದೆ ತಕ್ಷಣ ತೇಜಸ್ವಿಗೆ ಫೋನ್ ಮಾಡಿ ವಿಷಯ ತಿಳಿಸಿದ್ರು. ನೀವು ನಂಬೊಲ್ಲ, ತೇಜಸ್ವಿ ಹೇಳಿದ್ದು ಒಂದೇ ಮಾತು “ನನಗೆ ಬೇಡ ಕಾಣ್ರಿ….ಬೇರೆ ಯಾರಿಗಾದ್ರು ಕೊಡಿ!!!” ಅಂತ. ಆಮೇಲೆ ನಾಯಕರು ಹೊರಗೆ ಬಂದಾಗ… ರಾಮಮೂರ್ತಿ ’ತಡೀರಿ, ನಾಯಕರ ಕೈಗೆ ಕೊಡ್ತೀನಿ” ಅಂತ ಹೇಳಿ ಫೋನ್ ನಾಯಕರಿಗೆ ಕೊಟ್ರು…..

ನಾಯಕರು… “ನಾನೇನ್ ಮಾತಾಡ್ಲಿ? ನೀವು ಹೇಳಿದ್ದು ಆಗಿದ್ಯಲ್ಲ?”…. ಅಂದ್ರು…. ಬಿಡದೇ “ಮಾತಾಡಿ ಮಾತಾಡಿ” …..ಅಂತ ಫೋನ್ ಕೊಟ್ಟೇ ಬಿಟ್ರು. ನಾಯಕರು ತೇಜಸ್ವಿಗೆ……. “ತೇಜಸ್ವಿ, ನೋಡಿ ಯಾವುದೇ ಪೂರ್ವಾಗ್ರಹಗಳಿಲ್ಲದೆ, ತುಂಬಾ ನೇರವಾಗಿ, ಮುಕ್ತವಾಗಿ ನಿಮ್ಮ ಹೆಸರು ಆಯ್ಕೆ ಆಗಿದೆ ” ಅಂದರು. ಅವರು ಅಷ್ಟೇ ನೇರವಾಗಿ…. “ಬೇಡ ಕಾಣ್ರಿ ನಾಯಕರೆ., ಬೇರೆ ಯಾರಿಗಾದ್ರು ಕೊಡ್ರಿ. ನನಗೆ ಬಿಲ್ ಕುಲ್ ಬೇಡ್ವೇ ಬೇಡ!!!” ಅಂದ್ರು. ನಾಯಕರಿಗೆ ಏನು ಹೇಳ್ಬೇಕು ಗೊತ್ತಾಗಲಿಲ್ಲ………
ರಾಮಮೂರ್ತಿಗೆ ಫೋನ್ ವಾಪಸ್ ಕೊಟ್ಬಿಟ್ರು..

“ಆಮೇಲೆ ತೇಜಸ್ವಿಯವರು ಆ ಪ್ರಶಸ್ತಿ ತಗೊಳ್ಳೋದಿಕ್ಕೂ ಹೋಗ್ಲಿಲ್ಲ. ಯಾರೊ ಮನೆಗೆ ತಂದಿಟ್ಟು ಹೋದ್ರು ಅಂತ ವಿಷಯ ಗೊತ್ತಾಯಿತು.

ಏನಿದು ತೇಜಸ್ವಿ ಅಂದ್ರೆ? ಅಲ್ಲ..
ಇದೆಂಥ ತೇಜಸ್ವಿ ಇದು? ನಂಬೋಕ್ಕೆ ಆಗೋದಿಲ್ಲ. ಅಲ್ಲ….. ಹುಡುಕ್ಕೊಂಡು ಬಂದ ಗೌರವಾನ ಬೇಡ ಅನ್ನೋದು….

ತೇಜಸ್ವಿಗೆ ಮಾತ್ರ ಸಾಧ್ಯ !! ಆ ವ್ಯಕ್ತಿತ್ವಕ್ಕೆ ಮಾತ್ರ ಸಾಧ್ಯ!!!

(ಸಂಗ್ರಹ)

‍ಲೇಖಕರು admin

5 March, 2016

4 Comments

  1. ರೇಣುಕಾ

    ಅದಕ್ಕೇ ಅವರು ಎಲ್ಲರಿಗೂ ನಮ್ಮ ತೇಜಸ್ವಿ ♡♡

  2. Sangeeta Kalmane

    “ತುಂಬಿದ ಕೊಡ ತುಳುಕೋದಿಲ್ಲ” ಹಾಗೆ ಕಂಡ್ರೀ ನಮ್ಮ ತೇಜಸ್ವಿಯವರು!

    ನಮಸ್ಕಾರ ಸರ್.

  3. ಸಿದ್ದ

    ಅದಕ್ಕೆ ಅವರು ತೇಜಸ್ವಿ

  4. ದ್ಯಾವನೂರು ಮಂಜುನಾಥ್

    ಕರ್ನಾಟಕದಲ್ಲಿ ಗೊರೂರು ಅಜ್ಜನ ಬಿಟ್ಟು ಅತಿ ಸರಳ ಜೀವನ ನಡೆಸಿದವರಲ್ಲಿ ಕಾಣ ಸಿಗುವುದು ತೇಜಸ್ವಿ, ದೇವನೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading