ದಿನೇಶ್ ಹೊಳ್ಳ ಎಂಬ 'ವಾಚಾ'ಳಿ

dinesh hollaಸಾಲಿಗ್ರಾಮ ಗಡಿಯಾರಗಳು
watch3ಶುಭಕಾರ್ಯಗಳ ಸಮಯದಲ್ಲಿ ಸ್ನೇಹಿತರಿಗೆ (ಹತ್ತಿರದವರಿಗೆ ) ಆತ್ಮೀಯವಾದ ಕಾಣಿಕೆಯನ್ನು ಕೊಡುವುದು ಒಂದು ಪದ್ಧತಿ . ಮಾರ್ಕೆಟಿನಲ್ಲಿ ಬೇಕಾದಷ್ಟು ರೀತಿಯ ಕೊಡುಗೆಗಳು ಸಿಗ್ತಾವೆ . ಆದರೆ ಕೊಡುವ ಉಡುಗೊರೆ ಹೊಸ ರೀತಿಯಾಗಿ ನಮ್ಮ ಜೀವಮಾನವಿಡೀ ಜಾಗ್ರತೆಯಾಗಿ ಗುರುತು ಇರುವಂತಹದ್ದಾಗಿರಬೇಕು .
ಇಂತಹ ಆಸಕ್ತಿವುಳ್ಳವರಿಗೊಸ್ಕರವೇ ಉಡುಪಿ ಜಿಲ್ಲೆಯ ಸಾಲಿಗ್ರಾಮಕ್ಕೆ ಸೇರಿದ ಕಲಾಕಾರರಾದ (ವೆಬ್ ಡಿಸೈನರ್ ಕೂಡ ) ದಿನೇಶ್ ಹೊಳ್ಳರು ಇಂತಹ ಉಡುಗೊರೆಯನ್ನು ತಯಾರಿಸುತ್ತಾರೆ . ಸ್ಥಳೀಯವಾಗಿ ದೊರೆಯುವ ಮರದ ಹಲಗೆಯನ್ನು ವ್ರತ್ತಕಾರದಲ್ಲಿ ಕೊಯ್ದು , ನುಣುಪಾಗಿ ಮಾಡಿ , ಅದರ ಮೇಲೆ ನಾವು ಹೇಳಿರುವಂತಹ ವ್ಯಂಗ್ಯ ಚಿತ್ರವನ್ನು ಕೆತ್ತನೆ ಮಾಡಿ , ಇವುಗಳು ವೈವಿಧ್ಯವಾದ ಉಡುಗೊರೆಗಳಾಗಿ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಿದೆ .
ಕೊಂಡುಕೊಳ್ಳುವವರು ತಮ್ಮ ಭಾವಚಿತ್ರವನ್ನು ಕಳಿಸಿದ್ರೆ ಸಾಕು . ಗಡಿಯಾರದ ಮೇಲೆ ಹಾಗೆಯೇ ಕೆತ್ತನೆ ಕೆತ್ತುತ್ತಾರೆ . ಒಂದೊಂದು ಗಡಿಯಾರದ ತಯಾರಿಗೆ 4-5 ದಿನಗಳ ಸಮಯ ಬೇಕಾಗುತ್ತದೆಯೆಂದು ದಿನೇಶ್ ಹೇಳಿರುತ್ತಾರೆ . ಹುಟ್ಟುಹಬ್ಬ , ಮದುವೆ , ಗೃಹಪ್ರವೇಶ ಇನ್ನಿತರ ಶುಭಕಾರ್ಯಗಳ ಸಂದರ್ಭದಲ್ಲಿ ಬಂಧು ಮಿತ್ರರ ಹೆಸರು , ವ್ಯಂಗ್ಯಚಿತ್ರದೊಡನೆ ಉಡುಗೊರೆಯಾಗಿ ಕೊಡಲಿಕ್ಕೆ ಅನುಕೂಲವಾಗಿರುತ್ತದೆ .
ಇಲ್ಲಿಯತನಕ ಬೆಂಗಳೂರು , ಕಲ್ಬುರ್ಗಿ , ಮಂಗಳೂರು ಇನ್ನಿತರ ನಗರಗಳಿಗೆ ಕಳಿಸಲಾಗಿದೆ . ಉತ್ತರ ಪ್ರದೇಶದಿಂದ ಕೂಡಾ ಬೇಡಿಕೆಗಳು ಬರುತ್ತಿದೆ. ಫೇಸ್ ಬುಕ್ ನಿಂದ ಈ ಗಡಿಯಾರಗಳ ಬಗ್ಗೆ ಗೊತ್ತಾಗಿ ಬ್ರೆಜಿಲ್ , ದಕ್ಷಿಣ ಆಫ್ರಿಕಾ ದೇಶದಿಂದ ಕೂಡಾ ಬೇಡಿಕೆ ಬಂದಿದೆ .
ನಿಮಗೂ ಕೂಡಾ ಇಂತಹ ಉಡುಗೊರೆ ಕೊಡಬೇಕೆಂದು ಆನಿಸುತ್ತಿದ್ದರೆ – ದಿನೇಶ್ ಹೊಳ್ಳ- 88610 39229 ಗೆ ಸಂಪರ್ಕಿಸಿರಿ.
ಈನಾಡು ವರದಿ 

‍ಲೇಖಕರು Avadhi

March 5, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: