ಮೊನ್ನೆ ಶನಿವಾರ ಎಡಿಎ ರಂಗಮಂದಿರದಲ್ಲಿ ವಿಜಯನಗರ ’ಬಿಂಬ’ದ ಮಕ್ಕಳಿಂದ ರಂಗ ಸಂಭ್ರಮ. ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಂದ ಮೂರು ಸುಂದರ ನಾಟಕಗಳು ಪ್ರದರ್ಶನಗೊಂಡವು. ಡಾ ಎಸ್ ವಿ ಕಶ್ಯಪ್ ನಿರ್ದೇಶನದ ’ಕುಮಾರವ್ಯಾಸ.ಕಾಮ್’ ಮಹಾಭಾರತದ ಯುದ್ಧ ಸಾಮಾನ್ಯರ ಜನ ಜೀವನದಲ್ಲಿ ಎಬ್ಬಿಸುವ ಅಲ್ಲೋಲ ಕಲ್ಲೋಲಗಳ ಕಥೆ ಹೇಳಿದರೆ, ಶೈಲೇಶ್ ಕುಮಾರ್ ನಿರ್ದೇಶನದ ’ಇಳ್ಯಾಡಣ್ಣ’ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿತು. ಇನ್ನು ಎಸ್ ವಿ ಸುಷ್ಮಾ ನಿರ್ದೇಶನದ ’ಇಳೆ-ಮಳೆ’ ನೃತ್ಯ ರೂಪಕ ತನ್ನ ಮನಮೋಹಕ ದೃಶ್ಯಗಳಿಂದ, ಸಂಗೀತ ನೃತ್ಯದಿಂದ ನೋಡುಗರನ್ನು ಮರುಳು ಮಾಡಿತು. ಮಕ್ಕಳ ಪ್ರತಿಭೆಗೆ ಒಂದು ಸಲಾಂ, ಮತ್ತು ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸಿದ, ಅದನ್ನು ತಿದ್ದಿ ತೀಡಿ ನೇರ್ಪು ಗೊಳಿಸಿದ ವಿಜಯನಗರ ’ಬಿಂಬ’ಕ್ಕೆ ಅಭಿನಂದನೆಗಳು.
ಇದೇ ಸಂದರ್ಭದಲ್ಲಿ ಈ ಟೀವಿ ನ್ಯೂಸ್ ಸಂಪಾದಕರಾದ ಜಿ ಎನ್ ಮೋಹನ್ ರವರಿಗೆ ರಂಗಗೌರವ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಎನ್ ಮಲ್ಲಿಕಾರ್ಜುನ ಮತ್ತು ರಂಗಕರ್ಮಿ ಗಿರಿಜಾ ಲೋಕೇಶ್ ಅವರು ಸಹ ಭಾಗವಹಿಸಿದ್ದರು. ಮಕ್ಕಳ, ಪ್ರೇಕ್ಷಕರ ಒತ್ತಾಯಕ್ಕೆ ಮಣಿದ ಗಿರಿಜಾ ಲೋಕೇಶ್ ಹಾಡಿಗೆ ಎರಡು ಹೆಜ್ಜೆ ಹಾಕಿ ಎಲ್ಲರ ಸಂತಸ ಹೆಚ್ಚಿಸಿದ್ದು ಕಾರ್ಯಕ್ರಮದ ಮರೆಯಲಾಗದ ಕ್ಷಣಗಳಲ್ಲಿ ಒಂದು.
ಸಮಾರಂಭದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರ ಕೃಪೆ : ಬೃಂದಾ ಕಶ್ಯಪ್






makkala rangabhoomiya bagge nimma kaalaji,hagu prakatisiddakke avadhi ge dhanyavadagalu.
Thumbaa Thumbaa Thanks for the Coverage .Inspires us to do more ……………….
Great Feeling…… Thanks G.N. Mohan Sir for the coverage