ಎಲ್ ಎಸ್ ಶೇಷಗಿರಿ ರಾವ್ ಇನ್ನಿಲ್ಲ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಪ್ರೊ ಎಲ್ ಎಸ್  ಶೇಷಗಿರಿ ರಾವ್ ಅವರು ಇಂದು ನಿಧನ ಹೊಂದಿದರು.

ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್  ಎಸ್  ಎಸ್  ಕೆಲವು ದಿನಗಳ ಹಿಂದೆ ಅಷ್ಟೇ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು.

ಎಲ್ ಎಸ್ಎಸ್ ಅವರ ನಿಧನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತೆ ಡಾ ವಿಜಯಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

‘ವಿಕಿಪೀಡಿಯಾ’ದಿಂದ-

ಎಲ್.ಎಸ್.ಶೇಷಗಿರಿರಾವ್ ಅವರು ೧೯೨೫ ಫೆಬ್ರುವರಿ ೧೬ ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಃ ದೇಶಪಾಂಡೆ ಮನೆತನದವರಾದ ಇವರ ತಂದೆ, ಲಕ್ಷ್ಮೇಶ್ವರ ಸ್ವಾಮಿರಾಯರು. ಶೇಷಗಿರಿರಾಯರು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ.(ಗೌರವ) ಪದವಿ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾದರು. ಎಚ್.ವಿ. ನಂಜುಂಡಯ್ಯ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿ ಇವರು. ತನ್ನಂತರ ಬೆಂಗಳೂರು ಇಂಟರಮೀಡಿಯೆಟ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು. ೧೯೪೮ರಲ್ಲಿ ಶೇಷಗಿರಿರಾವ್ ಅವರ ಮೊದಲ ಕಥಾಸಂಕಲನ “ ಇದು ಜೀವನ ” ಪ್ರಕಟವಾಯಿತು. ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೆ ಒಂದು ಛಾಪನ್ನು ಸ್ಥಾಪಿಸಿರುವ ಎಲ್. ಎಸ್. ಎಸ್, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ನೂರಾರು ಚಿಕ್ಕ-ಪುಟ್ಟ ಹೊತ್ತಿಗೆಗಳನ್ನು ಅವರ ರಾಷ್ಟ್ರೀಯ ಉತ್ಥಾನ ಪರಿಷತ್, ವತಿಯಿಂದ ಪ್ರಕಟಿಸಿದ್ದಾರೆ. ಇದು ಮಕ್ಕಳ ಜ್ಞಾನವರ್ಧನೆಗೆಂದು ಹಮ್ಮಿಕೊಂಡ ಕೆಲಸವಾಗಿತ್ತು. ಅದರ ಬೆಲೆ ಕೇವಲ, ೭೫ ಪೈಸೆಗಳು. ಈ ಪುಸ್ತಕಗಳು ಹಿರಿಯರಿಗೂ, ಅತ್ಯಂತ ಉಪಯುಕ್ತಮಾಹಿತಿಗಳನ್ನು ಕೊಟ್ಟಿವೆ. ತುಂಬಾ ಚೆನ್ನಾಗಿವೆ. ರಾಯರ ಸಂಪಾದನೆಯ ಚಟುವಟಿಕೆಯಲ್ಲಿ, ಬೆಂಗಳೂರು ದರ್ಶನ ಸಂಪುಟಗಳು, ಅತ್ಯಂತ ಉಪಯುಕ್ತಮಾಹಿತಿಗಳನ್ನು ಬೆಂಗಳೂರಿನ ಜನರಿಗೆ ಕೊಟ್ಟಿವೆ. ವಿಶ್ವಕೋಶದತರಹವೇ ಸಂಯೋಜಿಸಿರುವ ಈ ಬೃಹದ್ ಸಂಪುಟಗಳು, ಅತ್ಯಂತ ಶ್ರಮವಹಿಸಿ, ವಿದ್ವಾಂಸರಿಂದ ತಯಾರಿಸಲ್ಪಟ್ಟ ಮಾಹಿತಿಗಳು. ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನ ಮನೆಯಲ್ಲೂ, ಪಡಸಾಲೆಯ ಕಪಾಟಿನ ಶೋಭೆ ಯನ್ನು ವಿಜೃಂಭಿಸುವ ಕೃತಿಗಳಿವು

ಸಣ್ಣಕಥೆಗಳ ಸಂಕಲನಗಳು

ಅ) ಇದು ಜೀವನ. ಆ) ಜಂಗಮಜಾತ್ರೆಯಲ್ಲಿ. ಇ) ಮುಟ್ಟಿದ ಗುರಿ ಮತ್ತು ಇತರ ಕಥೆಗಳು. ಈ) ಮುಯ್ಯಿ.

ಸಾಹಿತ್ಯವಿಮರ್ಶೆ

ಅ. ಕಾದಂಬರಿ-ಸಾಮಾನ್ಯಮನುಷ್ಯ. ಆ. ಆಲಿವರ್ ಗೋಲ್ಡ್ ಸ್ಮಿತ್, ಇ. ಮಾಸ್ತಿ ವೆಂಕಟೇಶ ಐಯ್ಯಂಗಾರ್. ಈ. ಇಂಗ್ಲೀಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ.

ವಿಮರ್ಶೆ

  • ಅ) ಪಾಶ್ಚಾತ್ಯಸಾಹಿತ್ಯ ವಿಹಾರ.
  • ಆ) ಸಾಹಿತ್ಯ ವಿಶ್ಲೇಷಣೆ.
  • ಇ) ಹೊಸಗನ್ನಡ ಸಾಹಿತ್ಯ .
  • ಈ) ಫ್ರಾನ್ಸ್ ಕಾಫ್ಕಾ,
  • ಉ) ಗ್ರೀಕ್ ರಂಗಭೂಮಿ ಮತ್ತು ನಾಟಕ.
  • ಊ) ವಿಲಿಯಮ್ ಶೇಕ್ಸ್ ಪಿಯರ್,
  • ಋ) ಸಾಹಿತ್ಯ-ಬದುಕು,
  • ೠ) ಟಿ. ಪಿ. ಕೈಲಾಸಂ,
  • ಏ). ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ,
  • ಏ). ಮಾಸ್ತಿ : ಜೀವನ ಮತ್ತು ಸಾಹಿತ್ಯ,
  • ಐ). ಇಂಗ್ಲೀಷ್ ಸಾಹಿತ್ಯ ಚರಿತ್ರೆ,
  • ಒ). ಸಾಹಿತ್ಯದ ಕನ್ನಡಿಯಲ್ಲಿ,
  • ಓ). ಪಾಶ್ಚಾತ್ಯಸಾಹಿತ್ಯಲೋಕದಲ್ಲಿ,
  • ಔ). ಎಲ್. ಎಸ್. ಎಸ್. ಕಂಡ ತ. ರಾ. ಸು.
  • ಅಂ.) ಮಹಾಭಾರತ( ನಾಲ್ಕು ಸಂಪುಟಗಳು).
  • ನಾಟಕಗಳು

    ಅ) ಆಕಾಂಕ್ಷೆ ಮತ್ತು ಆಸ್ತಿ. ಆ) ಜೀವನ ಚರಿತ್ರೆ ಇ) ಸಾರ್ಥಕ ಸುಬೋಧ, ಈ) ಎಂ. ವಿಶ್ವೇಶ್ವರಯ್ಯ,

ನಿಘಂಟುಗಳು

  • ಅ) ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲೀಷ್ ನಿಘಂಟು,
  • ಆ). ಐ.ಬಿ.ಎಚ್ ಇಂಗ್ಲೀಷ್-ಕನ್ನಡ ನಿಘಂಟು,
  • ಇ). ಐ. ಬಿ. ಎಚ್ ಕನ್ನಡ -ಕನ್ನಡ ನಿಘಂಟು,
  • ಈ) ಸುಭಾಸ್ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು,
  • ಉ) ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್-ಕನ್ನಡ್ ನಿಘಂಟು,
  • ಊ) ಸುಲಭ ಇಂಗ್ಲೀಷ್ ( ಏನ್ಗ್ಲಿಶ್ ಮದೆ ಎಅಸ್ಯ್.)

ಇತರೆ

  • ಅ) ಮಕ್ಕಳ ಸಾಹಿತ್ಯ- ೯ ಕೃತಿಗಳು,
  • ಆ) ಮಕ್ಕಳಿಗಾಗಿ-೪ ಕೃತಿಗಳು.
  • ಇ) ಇತರ-೯
  • ಈ) ಅನುವಾದಿತ-೪,
  • ಉ) ಸಂಪಾದಿತ-೯ ಕೃತಿಗಳು ಹಾಗೂ
  • ಊ) ಇಂಗ್ಲೀಷ್ ನಲ್ಲಿ -ಮೂಲ ಅನುವಾದಿತ-ಸಂಪಾದಿತ- ೩೧ ಕೃತಿಗಳು.[

ಪ್ರಶಸ್ತಿ, ಪುರಸ್ಕಾರಗಳು

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ.
  • ವರ್ಧಮಾನ ಪ್ರಶಸ್ತಿ.
  • ಡಾ. ಅ.ನ.ಕೃ. ಪ್ರಶಸ್ತಿ.
  • ಬಿ.ಎಮ್.ಶ್ರೀ ಪ್ರಶಸ್ತಿ.
  • ಬಿ.ಎಮ್.ಇನಾಮದಾರ ಪ್ರಶಸ್ತಿ.
  • ಕಾವ್ಯಾನಂದ ಪ್ರಶಸ್ತಿ.
  • ದೇವರಾಜ ಬಹಾದ್ದೂರ ಪ್ರಶಸ್ತಿ.
  • ಮಾಸ್ತಿ ಪ್ರಶಸ್ತಿ.
  • ೨೦೦೭ ರ ಕರ್ನಾಟಕ ಸಾಹಿತ್ಯ ಸಮ್ಮೆಲನದ ಅದ್ಯಕ್ಶರಾಗಿದ್ದರು (ಉಡುಪಿ)

 

‍ಲೇಖಕರು avadhi

December 20, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kum. Veerabhadrappa

    ಒಂದೆರಡು ದಿವಸಗಳಲ್ಲಿ ಈ ಮುವ್ವರೂ ಒಬ್ಬರ ಹಿಂದೆ ಇನ್ನೊಬ್ಬರಂತೆ ಸ್ಪರ್ಧಾಳುಗಳಂತೆ ಕಣ್ಮರೆಯಾಗಬಹುದೆಂದು ನಾವ್ಯಾರೂ ಊಹಿಸಿರಲಿಲ್ಲ. ನಿನ್ನೆ ದಿವಸ ಸಡನ್ನಾಗಿ ಹೊರಟು ಹೋದ ಚಂದ್ರಕಾಂತ ಕರದಳ್ಳಿ ಅತ್ಯುತ್ಸಾಹಿ ಶಹಪುರದ ಸಮವಯಸ್ಕ, ನನ್ನ ಸಂಗಡ ಅವರೂ ನಾಡಿದ್ದು ಯಡ್ರಾಮಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು, ಇನ್ನು ಎಂ. ರಾಮಚಂದ್ರ ಕಾರ್ಕಳ ಶಹರದಲ್ಲಿ ಒಂದಲ್ಲಾ ಒಂದು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿದ್ದರು. ಪ್ರಶಸ್ತಿ ಪುರಸ್ಕೃತರನ್ನು ಇಮ್ಮೀಡಿಯಟ್ಟಾಗಿ ಪತ್ತೆ ಹಚ್ಚಿ ಕಾರ್ಕಳಕ್ಕೆ ಕರೆದೊಯ್ದು ಮಾತುಗಳನ್ನು ಕೇಳಿ ಗೌರವಿಸುತ್ತಿದ್ದರು, ನಾನೂ ಅವರ ಪ್ರೀತಿಯ ಫಲಾನುಭವಿ, ಶೇಷಗಿರಿರಾವ್ ಅವರಂತೂ ಸರಳತೆ ಸಜ್ಜನಿಕೆಯ ಪ್ರತಿರೂಪ, ಕೃತಿ ಕತೃವಿನ ಮನಸ್ಸಿಗೆ ಕಿಂಚಿತ್ತು ನೋವಾಗದ ರೀತಿಯಲ್ಲಿ ಕೃತಿನಿಷ್ಠ ಮೌಲ್ಯಮಾಪನ ಮಾಡುತ್ತಿದ್ದರು, ಮಾತಾಡುವ ಪೂರ್ವದಲ್ಲಿ ಉದ್ದೇಶಿತ ಕೃತಿಯನ್ನು ಓದಿ ಟಿಪ್ಪಣಿ ಮಾಡಿಕೊಳ್ಳುವುದನ್ನು ಮಾಗಿದ ವಯಸ್ಸಿನಲ್ಲಿ ಮರೆಯುತ್ತಿರಲಿಲ್ಲ. ಲೇಖಕರ ಪೂರ್ವಾಪರದ ಬಗ್ಗೆ ಪ್ರಭಾವಿತರಾಗುತ್ತಿರಲಿಲ್ಲ, ಇಂಗ್ಲೀಷ್ ನ ಅತ್ಯುತ್ತಮ ಕೃತಿಗಳನ್ನು ಪ್ರಾಂಜಲ ಮನಸ್ಸಿನಿಂದ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಯಿಸುತ್ತಿದ್ದರು, ಎಪ್ಪತ್ತರ ದಶಕದಲ್ಲಿ ನನ್ನಂಥ ಗ್ರಾಮೀಣ ಮೂಲಿಗರ ಬರಹಗಳನ್ನು ಓದಿ ಮೆಚ್ಚಿ ಬರೆದು ಆತ್ಮವಿಶ್ವಾಸ ತುಂಬುತ್ತಿದ್ದರು, ಕೀಟಲೆ ಮಾತುಗಳಿಗೆ ಮುಗುಳ್ನಗುತ್ತಿದ್ದರು. ಇವರು ಕನ್ನಡ ಸಾರಸ್ವತ ಮೈದಾನದ ಆಲ್ ರೌಂಡರ್,
    ಇವರೆಲ್ಲರ ನಿರ್ಗಮನದಿಂದ ಮನಸ್ಸು ಭಾರವಾಗಿದೆ.
    – ಕುಂವೀ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: