ಎಲ್ಲ ಹುಡುಗಿಯರು ಒಂದೇ ಅಂದಮೇಲೆ..

hemalatha

ಹೇಮಲತಾ

ಒಳ್ಳೆಯ ಹುಡುಗರೆಂದರೆ…. ನಿಜವಾಗಲು ಒಳ್ಳೆಯವರೆ
ನೋಡಲು ಕೂಡ, ಬಹಳ ಸದ್ಗುಣವಂತರಂತೆ ಪೋಷಾಕು
ನೀಟಾಗಿ ಐರನ್ ಮಾಡಿದ ಶರ್ಟ್
ನಯವಾಗಿ ಮಡಿಸಿ ಸಿಕ್ಕಿಸಿಕೊಂಡು
ಟೈ ಕಟ್ಟದಿದ್ದರು ಬಿಗುಮಾನ ಬಿಗಿದುಕೊಂಡಿರುತ್ತಾರೆ.
ಮುಖದ ಮೇಲೆ ಸ್ನಿಗ್ದ ಭಾವ
ಹುಡುಕಿದರೂ ಏನೊಂದು ಸಿಗದು
ಸುಖವಾಗಲಿ, ನೋವಾಗಲಿ
ಗುರುತು ಬಿಟ್ಟುಳಿಯದು.

heಅವರು ಆ ರೀತಿ ಒಳ್ಳೆಯ ಹುಡುಗರಾಗುವುದಕ್ಕೆ
ಒಂದು ಕಥೆಯೂ ಇದೆ
ಅಪ್ಪನ ಬಿಗಿ ಮುಷ್ಟಿಯಲ್ಲಿ ಅಮ್ಮ ನರಳುವಾಗ
ದೊಡ್ಡವನಾಗಿ ದುಡಿದು ಸಾಕುತ್ತೇನೆಂದು ಮಾಡಿದ
ಪ್ರತಿಜ್ಞೆ ಇದೆ.

ಅದಕ್ಕಿಂತ ಚೂರು ಹಿಂದೆ ಹೋದರೆ
ನಾ ಹೇಳಿದ ಮಾತನ್ನ ನೀ ಕೇಳುತ್ತೀಯ ಅಲ್ಲವಾ?
ಒಳ್ಳೆಯ ಹುಡುಗನಾಗಿ ಹೆಸರು ತಂದು ಕೊಡುತ್ತೀಯ ಅಲ್ವಾ?
ಅಮ್ಮ ತುತ್ತ ತಿನಿಸುವಾಗಲೆಲ್ಲ
ಅಳುತಂದುಕೊಂಡು ಕೇಳಿದಾಗ,
ಸುಟ್ಟ ಅಪ್ಪನ ಕೆಂಡದ ಕಣ್ಣು
ಅಮ್ಮನ ಬೆಣ್ಣೆ ಎದೆಯಲ್ಲಿ ಕರಗುವಾಗ
ಮನೆ ಮರ್ಯಾದೆಗೆ ಪಣತೊಟ್ಟು
ಬಿಕ್ಕುಗಳನ್ನು ಅಮ್ಮ ಸೆರಗಿಗೆ ಜಡಿದಾಗ
ಬದುಕನ್ನ ಅಮ್ಮನ ಮಡಿಲಿಗೆ ಹಾಕಬೇಕೆನ್ನುವ ತ್ಯಾಗವಿದೆ.

ಅವರೆಷ್ಟು ಒಳ್ಳೆಯ ಹುಡುಗರೆಂದರೆ
ಹಟಮಾರಿ, ಸ್ವಾಭಿಮಾನಿ “ಅಮ್ಮ” ಒಪ್ಪಿದ ಮೇಲೆ
ಆ ಹುಡುಗಿಯಾದರು, ಈ ಹುಡುಗಿಯಾದರೂ ವ್ಯತ್ಯಾಸವೇನಿಲ್ಲ.
ಎಲ್ಲ ಹುಡುಗಿಯರು ಒಂದೇ ಅಂದಮೇಲೆ
ಯಾರಾದರೂ ಅಡ್ಡಿ ಇಲ್ಲ
ಎಂದೂ ಕುಡಿಯದ, ಯಾವತ್ತೂ ಬಡಿಯದ
ತನ್ನ ಶಕ್ತಿ ಮೇಲೆ ನಂಬಿಕೆ
ದಪ್ಪ ಕನ್ನಡಕದೊಳಗಿಂದ ಪುಸ್ತಕ ಹೀರಿಕೊಂಡು
ಸಂಪಾದಸಿದ ಗೌರವ ಮರ್ಯಾದೆಗಳನ್ನು
ಪಕ್ಕದ ಬೀದಿಯ ಜನ ಹಾಡಿಹೊಗಳುವಾಗ
ಇದ್ದರೆ ಹಿಂಗಿರಬೇಕು ಮಕ್ಕಳು ಎಂದು
ಬಿರುದನ್ನು ಕೊಟ್ಟಾಗ ಇದನ್ನೆಂದು
ಕಳಕೊಳ್ಳುಬಾರದೆನ್ನುವ ಜಾಗ್ರತೆ ವಹಿಸಿದ್ದಾಗಿದೆ.

ಒಳ್ಳೆಯ ಹುಡುಗರು ಪಾಪದ ಹುಡುಗರು ಹೌದು,
ಆದರೂ ರಾತ್ರಿಗಳಲ್ಲಿ ಕನಸುಗಳಿಗೆ
ಯಾವುದೋ ಹುಡುಗಿಯನ್ನು ಕರೆದುಕೊಂಡು ಬಂದು
ಚೂರು ಕೆಟ್ಟವರಾಗುತ್ತಾರೆ.
ಅಮ್ಮನಂತಹ ಮಮತೆ ತೋರಿ, ಅಸಹಾಯಕತೆಯಲ್ಲಿ ನಲುಗಿದ
ಗೆಳತಿಯನ್ನು ಬೊಗಸೆಯಲ್ಲಿ ಪ್ರೀತಿಸಿ ಹನಿಗಣ್ಣಾಗುತ್ತಾರೆ,
ಕನಸಿನಲ್ಲೇ ಚುಂಬಿಸಿ ಪಾಪಪ್ರಜ್ಞೆಯಲ್ಲೂ
ಹೊರಳಾಡುತ್ತಾರೆ..
ಬೆಳಗಾಗುತ್ತಿದ್ದಂತೆ ಎಲ್ಲ ಮರೆತು
ಭಾವಗಳಿಲ್ಲದ ಮುಖತೊಟ್ಟು
ಮತ್ತಷ್ಟು ಒಳ್ಳೆಯವರಾಗಿ ಬಿಡುತ್ತಾರೆ.

ಸಮುದ್ರದ ಭೋರ್ಗರೆತ,
ಪ್ರಪಾತದ ಅಂಚು, ಆಕಾಶದ ನಕ್ಷತ್ರ
ಮಲ್ಲಿಗೆ ಮೊಗ್ಗು, ಗಾಢ ಬಣ್ಣದ ತುಟಿ,
ನೊರೆಯುಕ್ಕುವ ಬೀರ್-ಗಳಲ್ಲಿ ಇರಬಹುದಾದ
ಉನ್ಮಾದ ಪ್ರೀತಿಯನ್ನ
ನದಿ ದಡದ ಅಂಚಿನಲ್ಲೆ ತಟಸ್ತ ನಿಂತು
ನಿರಾಳ ನೋಡುತ್ತಾ ನಿಟ್ಟುಸಿರು ಕೆಡವುತ್ತಾರೆ.

sheಮನೆಯವರು ನೆಮ್ಮದಿಯಾಗಿರಬೇಕೆಂದು
ಮೂರು ತಿಂಗಳಿಗೊಂದು lic ಪ್ರೀಮಿಯಮ್ಮು, ರಿಟೈರ್ ಮೆಂಟಿನಂಚಿನಲ್ಲಿ
ಕಟ್ಟಿಸಬೇಕಾದ ಮನೆ, ಶುಕ್ರವಾರದ ಸಂಜೆಗೆ
ಹೆಂಡತಿ ಮಕ್ಕಳೊಂದಿಗೆ ಒಂದು ಸಿನಿಮಾ,
ಅತ್ತೆ ಮನೆಯವರಿಗೊಂದು ಯುಗಾದಿ ಉಡುಗೊರೆ, ಪ್ರತಿದಿನ
ಟಪರ್ ವೇರಿನ ಬಾಕ್ಸ್ ನಲ್ಲಿ ಹೆಂಡತಿ ತುಂಬಿಸಿದ ಚಿತ್ರನ್ನ
ಎಲ್ಲದಕ್ಕೂ ಬಹಳ ಬಹಳ
ನಿಯತ್ತಿನವರಾಗಿರುತ್ತಾರೆ.

ಅಮ್ಮನನ್ನು ಹೆಂಡತಿಯನ್ನೂ ಸಮಾಧಾನಿಸುತ್ತ
ಇಬ್ಬರನ್ನೂ ಅಷ್ಟೇ ಪ್ರೀತಿಸುತ್ತಾ
ನಿರ್ಲಿಪ್ತವಾಗಿದ್ದು ಬಿಡುವ ಒಳ್ಳೆಯ ಹುಡುಗರ ಬಗ್ಗೆ
ಅಪಾರ ಗೌರವವಿದೆ.
ಆದರ ಜೊತೆಗೆ ಎಲ್ಲ ಕೂಡಿ ಬಂತು
ಅಮ್ಮ ಒಪ್ಪಿದಳು ಅನ್ನೋ ಒಂದೇ ಕಾರಣಕ್ಕೆ
ಸುಮ್ಮನೆ ನಡೆದು ಬಂದವಳ
ಮೇಲೆ ಅಸೂಯೆಯೂ ಇದೆ.

ಆದರು ಎಂದಾದರು ಒಳ್ಳೆಯ ಹುಡುಗ
ಎದುರು ಸಿಕ್ಕು,
ಏರಿಳಿತಗಳೇ ಇರದ,
ನನ್ನದಲ್ಲದ ಸಮತಟ್ಟ ಬದುಕ ಬದುಕಿಬಿಟ್ಟೆ
ಅಂತ ಅವಲತ್ತುಗೊಂಡು
ಒಳ್ಳೆಯವನಾಗುಳಿಯುವುದರಲ್ಲಿ ಹೈರಾಣಾಗಿ
ಸ್ವತಕ್ಕೊಂದು ಒಳಗುದಿಯನ್ನು
ಉಳಿಸಿಕೊಳ್ಳಲಿಲ್ಲ ಎಂದು ಅತ್ತುಬಿಟ್ಟರೆ
ಸಮುದ್ರದೆದುರು ದರದರನೆ ಎಳೆದುಕೊಂಡು ಹೋಗಿ,
ಅಯೋಗ್ಯ ನೀನು ಎಂದು ನಿವಾಳಿಸಿ,
ತುಟಿ ಹರಿದು ಹೋಗುವಷ್ಟು
ಚುಂಬಿಸಿ, ಒಂದೇ ಒಂದು
ದಿನ ನೀ ಕೆಟ್ಟವನಾಗಿದ್ದಿದ್ದರೆ
ಪ್ರಪಂಚದ ಅತ್ಯದ್ಬುತ ಪ್ರೇಮವನ್ನ
ನಿನ್ನ ಕಾಲಕೆಳಗೆ ತಂದಿಟ್ಟು,
ನೀನ್ಯಾವ ಸೀಮೆಯ ತ್ಯಾಗಿ ಎಂದು ಮೂದಲಿಸಿ
ಪ್ರಾಣವನ್ನೆ ಬಲಿಕೊಟ್ಟುಕೊಳ್ಳುತ್ತಿದ್ದೆ
ಎಂದು ಹೇಳುತ್ತಾಳಂತೆ ಒಬ್ಬ ಕೆಟ್ಟ ಹುಡುಗಿ.

‪#‎ofcourse‬ ನಾನು ಒಳ್ಳೆ ಹುಡುಗಿ
ಆದ್ರೆ ಐ  ಹೇಟ್ ಒಳ್ಳೆ ಹುಡುಗ

‍ಲೇಖಕರು admin

July 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

20 ಪ್ರತಿಕ್ರಿಯೆಗಳು

    • hema

      🙂 vayasanna tumbaa chikkadakke ilisdakke tumbaa dodda namasakaara.. kavithe mecchidakke mattondu dhanyavaada Sangeeta amma

      ಪ್ರತಿಕ್ರಿಯೆ
  1. shama nandibetta

    Hema “‪#‎ofcourse‬ ನಾನು ಒಳ್ಳೆ ಹುಡುಗಿ
    ಆದ್ರೆ ಐ ಹೇಟ್ ಒಳ್ಳೆ ಹುಡುಗ”

    Hugs to you for this

    ಪ್ರತಿಕ್ರಿಯೆ
    • hema

      dhanyavaada kusuma.. hoon namma kaaladde… olle hudugaru ella kaladallu idde irthaare..so saavartrika

      ಪ್ರತಿಕ್ರಿಯೆ
    • hema

      Bhagyarekha, houdu olle hudugaru olle interesting study materials.. badukiddu , nir jeevigala tara irtaaralla adakke… thank u

      ಪ್ರತಿಕ್ರಿಯೆ
  2. Praveen V Savadi

    ತುಂಬಾ ಚೆನ್ನಾಗಿದೆ… ಆದರೆ ನಾನೊಂತು ಮತ ಹಾಕುವುದು, ಇಲ್ಲಿ ಬರುವ ಒಳ್ಳೆಯ ಹುಡುಗಾರಿಗೆ.

    ಪ್ರತಿಕ್ರಿಯೆ
  3. Veeru

    ಗಣಕಯಂತ್ರದಲ್ಲಿ ಕವಿತೆಗಳನ್ನು ಹುಡುಕುತ್ತಿದ್ದ ನನಗೆ ಯಾವುದೋ ಒಂದು ಕೊಂಡಿ ನಿಮ್ಮ ಪದಗಳ ಲೋಕದ/ಗುಂಪಿನ ಮುಂದೆ ತಂದು ನಿಲ್ಲಿಸಿತ್ತು, ಅಂಕಣದ ಮುಖ್ಖ್ಯ ಸಾಲೆ ಗಮನ ಸೆಳೆದಿತ್ತು. ಕೆಲ ಸಾಲುಗಳು ಓದಿದಾಗ ನನ್ನ ಜೀವನದಲ್ಲಿ ಅನುಭವಿಸಿದ ಘಟನೆಗಳೇ ಸಾಲಾಗಿವೆ ಎಂದು ಅನಿಸಿತು. ತುಂಬಾ ಚೆನ್ನಾಗಿದೆ. ಹೀಗೆಯೇ ಇನ್ನಷ್ಟು ಬರಿತಾ ಇರೀ. ಒಳ್ಳೆಯದಾಗಲಿ. ಅಂತೂ ನಮ್ಮಂತವರನ್ನ Hate ಮಾಡ್ತೀರೊದನ್ನಾ ತಿಳಿಸಿದ್ದಕ್ಕೆ ಧನ್ಯವಾದಗಳು.

    ಪ್ರತಿಕ್ರಿಯೆ
    • hema

      thnk u so much veeru 🙂 hate madudru thank u annodakke mattondu thanks ..sweet of u

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: