ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಎಲ್ಲೋ ಜೋಗಪ್ಪ ನಿನ್ನರಮನೆ…’ – ’ಅವಿರತ’ದ ಜೋಗಿ ಸಂಭ್ರಮ

 

– ರವಿ ಕುಲಕರ್ಣಿ

’ಎಲ್ಲೋ ಜೋಗಪ್ಪ ನಿನ್ನರಮನೆ…’
ನಿನ್ನ ಮನದಲ್ಲೇ ನನ್ನರಮನೆ ಎಂದು ಸಾರಿ ಹೋದ ಜೋಗಿ…!!
ಹೌದು..ಮೊನ್ನೆ ನಡೆದ ಜೋಗಿ ಆಟ ಪ್ರೇಕ್ಷಕರ ಮನಸೂರೆಗೊಂಡಿತು! ಮಲೆನಾಡಿನ ಈ ವಿಶಿಷ್ಟ ಕಲೆ ಬೆಂಗಳೂರಿಗರನ್ನು ಆಕರ್ಷಿಸಿತು. ಶ್ರೀ ಕಾಲಭೈರವ ಜೋಗಿ ಕಲಾ ಸ೦ಘ, ಹೊಸೂರು, ಸಾಗರ ತಾ, ಶಿವಮೊಗ್ಗ ಜಿಲ್ಲೆಯ ಕೆ. ಗುಡ್ಡಪ್ಪ ಜೋಗಿ, ನಾಗರಾಜ ಜೋಗಿ ಮತ್ತು ತಂಡದವರು “ವೀರಸೇನ ಕೋಕಿಲೆ” ಅರ್ಥಾತ್ “ವಸನಶೀಲ ಕುಸುಮಮ೦ಜರಿ” ಎ೦ಬ ಕಥಾಭಾಗವನ್ನು ಜೋಗಿ ಪದದ ಶೈಲಿಯಲ್ಲಿ ನಿರೂಪಿಸಿ ಉತ್ತಮವಾಗಿ ಹಾಡಿದರು.
ರಸವತ್ತಾದ ಲಾವಣಿಗಳು, ಪದ್ಯಗಳು, ಹಾಡುಗಳ ಕಟ್ಟಿ; ಮುಖ್ಯ ಕಥಾಭಾಗದ ನಡುವೆ ಸಣ್ಣ ಸಣ್ಣ ಉಪಕಥೆಗಳ ಪೋಣಿಸಿ ಹೇಳುವ ಪರಿ ಅತ್ಯುತ್ತಮವಾಗಿತ್ತು. ಅತ್ತೆ-ಸೊಸೆಯಂದಿರ ಬಾಂಧವ್ಯ, ಹಿಂದಿನ ದಿನಗಳು & ಇಂದಿನ ದಿನಗಳ ಬದಲಾವಣೆ, ವರದಕ್ಷಿಣೆಯ ಬಗ್ಗೆ, ತಾಯಿಯ ಬಗ್ಗೆ, ತಾಯಿ-ಮಗಳ ಮಮತೆಯ ತುಡಿತದ ಬಗೆಗಿನ ಸುಂದರವಾದ & ಹಾಸ್ಯಪೂರ್ವಕ ಲಾವಣಿಗಳನ್ನು ಪ್ರಸ್ತುತಪಡಿಸಿದರು.
ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್ ಹಾಜರಿದ್ದು, ಕಾರ್ಯಕ್ರಮದ ಕೊನೆತನಕ ಜೋಗಿ ಸಂಭ್ರಮದಲ್ಲಿ ಭಾಗಿಯಾಗಿ & ಅವಿರತದ ಕಾರ್ಯಗಳಿಗೆ ಬೆನ್ನು ತಟ್ಟಿದರು.
ಅವಿರತದ ಈ ವಿಶೇಷ ಪ್ರಯೋಗ ಜನರ ಮೆಚ್ಚುಗೆಗೆ ಭಾಜನವಾಯಿತು. ಕಾರ್ಯಕ್ರಮಕ್ಕೆ ಸಹಕಾರಿಯಾದ ಎಲ್ಲ ಮಿತ್ರರಿಗೂ ಹಾಗು ತಾಳ್ಮೆಯಿಂದ ಕಥೆಯನ್ನು ಸವಿದ ಪ್ರೇಕ್ಷಕರಿಗೂ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.
ಜೋಗಿ ಸಂಭ್ರಮದ ಕೆಲವು ದೃಶ್ಯಗಳು ನಿಮಗಾಗಿ :

‍ಲೇಖಕರು G

29 May, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading