ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ…

ಪ್ರಿಯ ವಸುಧೇಂದ್ರ, ಪತ್ರಿಕೆಯೊಂದರಲ್ಲಿ ಬಂದ ನಿಮ್ಮ ಹೊಸ ಕಥೆ ತುಂಬಾ ಹಿಡಿಸಿತು.pencilphoto.jpg
ಪ್ರಿಯ ಸುನಂದಾ ಕಡಮೆ, ನಿಮ್ಮ “ಪುಟ್ಟ ಪಾದದ ಗುರುತು” ಒಂದು ಸುಂದರ ಬರವಣಿಗೆ.
ಪ್ರಿಯ ವಿಕ್ರಮ್ ವಿಸಾಜಿ, ನಿಮ್ಮ ಹೊಸ ಕವನ ಸಂಕಲನ ಪ್ರಕಟವಾಯಿತಂತೆ?

ಹೊಸ ಪುಸ್ತಕ ತಂದವರ ಸಾಲಲ್ಲಿರುವ ಚಿದಾನಂದ ಸಾಲಿ, ಮಲ್ಲಿಕಾರ್ಜುನ ತೂಲಹಳ್ಳಿ(ಷರೀಫನ ಬೊಗಸೆ), ಕವಿತಾ ರೈ(ಅರಿವಿನ ನಡೆ), ಭಾರತಿದೇವಿ, ನಿಮಗೆ ಅಭಿನಂದನೆಗಳು. “ಆಚೀಚೆಯ ಕಥೆಗಳು” (ನ್ಯೂಜೆರ್ಸಿಯ ಕನ್ನಡ ಸಾಹಿತ್ಯ ರಂಗ ಮತ್ತು ಬೆಂಗಳೂರಿನ ಅಭಿನವ ಪ್ರಕಟಣೆ) ಎಂಬ ಹೆಸರಲ್ಲಿ ಕಡಲಾಚೆಯ ಕನ್ನಡ ಕಥಗಳನ್ನು ಹೆಕ್ಕಿ ಕೊಟ್ಟಿರುವ ಗುರುಪ್ರಸಾದ್ ಕಾಗಿನೆಲೆ ಅವರೆ, ನಿಮಗೂ ವಂದನೆ.

ಈಗೇನು ಮಾಡುತ್ತಿದ್ದೀರಿ? ಅವಧಿ ಬ್ಲಾಗ್ ನೋಡಿದ್ರಾ? ಇಷ್ಟವಾಯಿತಾ? ದಯವಿಟ್ಟು ನೀವೂ ಈ ಅಂಗಳಕ್ಕೆ ಬನ್ನಿ. ಇದು ನಿಮ್ಮದೇ ತಾಣ. ಇಲ್ಲಿ ನಿಮ್ಮ ದನಿಯೂ ಮೂಡಬೇಕು ಎಂಬುದು ನಮ್ಮ ಆಸೆ. ನಿಮ್ಮ ಓದುಗರು ಮತ್ತು ನಮ್ಮ ಬಳಗ ಒಂದೇ ಚಪ್ಪರದಡಿ ಬರುವಂತಾದರೆ ಎಷ್ಟು ಸೊಗಸು, ಅಲ್ಲವೇ? ಅಂಥ ಅವಕಾಶ ಒದಗಲು ನೀವು ಮನಸ್ಸು ಮಾಡಬೇಕು. ಅವಧಿಗೆ ಅಂತಲೇ ಏನಾದ್ರೂ ಬರೆಯೋಕ್ಕೆ ಸಾಧ್ಯವಾ? ನಿಮ್ಮದೂ ಸೇರಿದಂತೆ, ಬರವಣಿಗೆಯ ಕಡಲಲ್ಲಿ ಎಷ್ಟೊಂದು ದೋಣಿಗಳು? ಎಲ್ಲ ದೋಣಿಗಳೂ ದಂಡೆಗೆ ಬಂದು ಸೇರುವಾಗಿನ ಸಡಗರಕ್ಕೆ, ಆ ಹೊಂಬಣ್ಣದ ಹೊತ್ತಿಗೆ “ಅವಧಿ”ಯನ್ನು ಸಾಕ್ಷಿ ಮಾಡಬೇಕು ಅಂದುಕೊಂಡಿದ್ದೇವೆ. ನಮ್ಮ ಜೊತೆಗಿರುತ್ತೀರಾ?

ಹೂಂ ಅನ್ನುತ್ತಿದ್ದೀರಿ. ಓಹ್, ಥ್ಯಾಂಕ್ಸ್! ಹಾಗಾದರೆ ಏಕೆ ತಡ? ಅವಧಿಯನ್ನು ಮನಸ್ಸಲ್ಲಿಟ್ಟುಕೊಂಡು ಮಾತು ಕೊಡಿ. ನಿಮ್ಮ ಅಕ್ಷರಗಳು ನಮ್ಮ ಪ್ರಯಾಣದಲ್ಲಿರಲಿ. ನಿಮಗೆ ಇಷ್ಟವಾಗುವ, ಅವಧಿಯ ಗುಣಕ್ಕೂ ಸರಿಹೋಗುವ ಬರಹವನ್ನು ಕೊಡಿ. ಈ ಅಂಗಳ ನಿಮ್ಮನ್ನು ನಿರೀಕ್ಷಿಸುತ್ತಿದೆ.

‍ಲೇಖಕರು avadhi

20 June, 2007

2 Comments

  1. Raghavendra Gowda

    Avadi press really Nice. it giveing interesting and different information.which is we can’t find it in main stream meadia. it is more use full who interest in litteratur.

  2. sindhu rao

    ತೇರನೆಳೆಯುವವರಿಗೆ..

    ತುಂಬ ಇಷ್ಟವಾಯಿತು.
    ಹೊಸ ತರ, ಹೊಸ ಸಾರ.
    ನಿಂತು ನೋಡಿದರೆ ಹೊಸದೇ ತೀರ..!

    ವಿಶಿಷ್ಟ ಪ್ರಯತ್ನ.

    ತೇರ ಸಿಂಗಾರಕ್ಕೆ ಅಭಿನಂದನೆಗಳು.

    ನಮ್ಮ ಮನದಂಗಳಕ್ಕೆ ಎಳೆದು ತಂದಿರುವುದಕ್ಕೆ ವಂದನೆಗಳು.

    ಪ್ರೀತಿಯಿರಲಿ,
    ಸಿಂಧು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading