ಎಲ್ಲಿದ್ದಾನೋ ಹಾಳಾದವನು ಆ ವಿಳಾಸವಿಲ್ಲದ ಅಲೆಮಾರಿ..

ರೂಪಾ ಹಾಸನ

ಎಲ್ಲಿದ್ದಾನೋ ಹಾಳಾದವನು
ಆ ವಿಳಾಸವಿಲ್ಲದ ಅಲೆಮಾರಿ
ಎಂದಿನಂತೆ ಜನಜಂಗುಳಿಯ
ಮಧ್ಯೆ ಸಿಕ್ಕ.
ಅವನು ಸಿಗುವುದು ಅಲ್ಲೇ
ಆ ಏಕಾಂತದಲ್ಲೇ.

ಅದೇಕೋ ಇಂದು
ನನ್ನ ಕಂಡವನೇ
ತನ್ನ ಜೋಳಿಗೆಗೆ
ಕೈ ಹಾಕಿ ತಡಕಿ
ಲಾಲಿಪಪ್ಪಿನ ಕಡ್ಡಿಯೊಂದನ್ನು
ತೆಗೆದು ಕೈಯಲ್ಲಿ ಹಿಡಿದು
ಮುಂಚಾಚಿ, ನಕ್ಕ.

ಎಂದೂ ಭಿಕ್ಷಕ್ಕೆ ಕೈಯೊಡ್ಡದವಳು
ಮೋಡಿಗೊಳಗಾದವಳಂತೆ ಕಸಿದು
ಬಗಲ ಚೀಲಕ್ಕೆ ಎಸೆದು
ಬಿರಬಿರನೆ ನಡೆದೆ.
ಇನ್ನೂ ಕೊಳ್ಳುವುದಕ್ಕಿತ್ತು
ತೆಂಗು, ತರಕಾರಿ, ಸಂಬಾರ……
ಕೆಲಸ ಬೆಟ್ಟದಷ್ಟಿತ್ತು.
ಆಗಲೇ ತಡವಾಗಿತ್ತು
ಗಂಡ ಮಕ್ಕಳೂ
ಮನೆಯಲ್ಲಿ
ಕಾಯುತ್ತಿರಬಹುದು…..

ಮನೆಗೆ ಬಂದು
ಚೀಲ ಸುರುವಿ
ಎಲ್ಲ ವಿಂಗಡಿಸಿಡುವಾಗ
ಹಸಿಮೆಣಸಿನ ಮರೆಯಲ್ಲಿ
ಮೆಲ್ಲನಿಣುಕುತ್ತಿತ್ತು ಲಾಲಿಪಪ್ಪಿನ ಕಡ್ಡಿ!

ಮೇಲಿನದೆಲ್ಲಾ ಹೇರಿಕೆ
ಸರಸರನೆ ಸರಿಸಿ
ಕಡ್ಡಿಯೆಡೆಗೇ ಕೈ ಹೋಗುವುದೇ?
ತಿರುಗಿಸಿ ಮುರುಗಿಸಿ ನೋಡುತ್ತಾ
ಮುಟ್ಟುತ್ತಾ ಮೂಸುತ್ತಾ
ಒಳಗಿನ ಮಗುವೆದ್ದು
ಬೆರಗಿನಲಿ ಆಟವಾಡುತ್ತಿರಲು
ನವಿಲು ಬಣ್ಣದ ಸಿಪ್ಪೆ ಬಿಡಿಸಿದೆ
ಗಾಢ ಗುಲಾಬಿ ಬಣ್ಣದ ಗೋಲಿಗೆ
ಕಡ್ಡಿಸಿಕ್ಕಿಸಿದ್ದಾರೆ ಯಾರೋ
ನೋಡಿದೊಡನೆ ಚಪ್ಪರಿಸಬೇಕೆನಿಸುವ
ಉಮೇದು ಹುಟ್ಟಿಸುವ
ಸುವಾಸನೆ ಮೆತ್ತಿದ್ದಾರೆ ಯಾರೋ
ತಡೆಯಲಾಗದೇ ಬಾಯಿಗಿಟ್ಟುಕೊಂಡೆ
ಲಾಲಿಪಪ್ಪಿನೊಂದಿಗೇ
ಸದ್ಯವನು ಮರೆಯುತ್ತಾ
ಕರಗುತ್ತಾ ಹೋದೆ.

ಆಗಲೇ ಅವನಿಗೊಂದು
ವಂದನೆ ಹೇಳಲೂ ಮರೆತೆನಲ್ಲಾ!
ಛೆ! ಎಲ್ಲಿದ್ದಾನೋ ಹಾಳಾದವನು.

‍ಲೇಖಕರು Admin

January 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. ಶಮ, ನಂದಿಬೆಟ್ಟ

    ಇನ್ನೊಮ್ಮೆ ಅಂವ ಸಿಕ್ಕಿದರೆ ನನಗೊಂದು ಲಾಲಿಪಪ್ಪಿನ ಕಡ್ಡಿ ಪ್ಲೀಸ್…

    ಪ್ರತಿಕ್ರಿಯೆ
  2. sheshu

    Kannale kattidanthithu kalpane oduvaaga naanu munduvarisa balleneeno kavithegala saalanu anisi haniyastu ruchicisithu manakke

    ಪ್ರತಿಕ್ರಿಯೆ
  3. ಅಕ್ಕಿಮಂಗಲ ಮಂಜುನಾಥ

    ಕವಿತೆ ತುಂಬಾ ಚೆನ್ನಾಗಿದೆ , ಮೇಡಂ.

    ಪ್ರತಿಕ್ರಿಯೆ
  4. ರಾಜು

    ಜನಜಂಗುಳಿya ಮಧ್ಯೆ ಏಕಾಂತ !!!
    ಏಕಾಂತದಲ್ಲಿ ಒಮ್ಮೊಮ್ಮೆ ಸಂತೆಯ ಕಲರವ i

    ಪ್ರತಿಕ್ರಿಯೆ
  5. ವೀರೇಂದ್ರ ರಾವಿಹಾಳ್

    ಅಂಥ ವಿಶೇಷ ಅಂಥ ಅನಿಸಲಿಲ್ಲ

    ಪ್ರತಿಕ್ರಿಯೆ
  6. ಲಕ್ಷ್ಮೀಕಾಂತ ಇಟ್ನಾಳ

    ಹಾಳಾದವನು ಎಲ್ಲಿದ್ದಾನೋ, ಬ್ಯೂಟಿಫುಲ್ ಮೆಚ್ಚುಗೆ, ಜನಪದೀಯ. ಕವನದೊಳಗೊಂದು ಹೃದಯವಿದೆ ನೋಡಿ ಅದು ಬಲು ಆಪ್ತ.

    ಪ್ರತಿಕ್ರಿಯೆ
  7. dr.h.s.m.prakash

    Please note readers: she got lollipop with green chillies. She could have mentioned along with beans or carrot. But it is with chillies. That’s life- amidst pains, sorrows, miseries, sufferings, agonies someone somewhere gives us the sweet pleasure or the sweet smile or the sweet relief or the sweet push or the sweet lift or the sweet thrust or the sweet twinkle in his eyes or the sweet wave of his hand or a sweet comment. It is a good poem.

    ಪ್ರತಿಕ್ರಿಯೆ
  8. ವಿನಯಚಂದ್ರ

    ಒಂದು ಒಳ್ಳೆಯ ಕವನ ಓದಿದ ಅನುಭೂತಿಯುಂಟಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: