ದೀಪಾ ಜಿ.ಎಸ್
ಎಲ್ಲಿದೆ ಹೆಣ್ಣಿಗೆ ಬೆಲೆ
ಹೆಣ್ಣಿನ ಭಾವನೆಗಳೊಂದಿಗೆ
ದುಷ್ಟ ಜನರ ಅಟ್ಟಹಾಸ
ನರಳುತ್ತಿದೆ ಭಾವನೆಗಳು
ಮಣ್ಣಾಗುತಿದೆ ಕನಸುಗಳು
ಎಲ್ಲಿದೆಯೋ ನ್ಯಾಯ…..?
ಕೆಟ್ಟ ಹುಳುಗಳು ಒಂದು ಹೆಣ್ಣಿನ ಮೇಲೆ
ಅತ್ಯಾಚಾರ ಮಾಡಿ ಪೌರುಷವ ಮೆರೆಯುತಿಹರು.
ಈ ಸಮಾಜದಲ್ಲಿ ಎಲ್ಲಿದೆ ಹೆಣ್ಣಿಗೆ ನ್ಯಾಯ…..?
ಕತ್ತಲಲ್ಲಿ ಮಣ್ಣಾಗುತ್ತಿದೆ ದೇಹ
ಈ ದೇಹ ಮಣ್ಣಾಗಿ ಹೆಣ್ಣಾಗುವವರೆಗು ಮಾತ್ರ,
ಏ ಕೆಟ್ಟ ಕ್ರಿಮಿಯೆ ನಿನ್ನ ಕೊಡ ತುಂಬುವ ತನಕ ನಿ ಮೆರೆದಾಡು
ಒಂದು ಹೆಣ್ಣು ಸಮಾಜದಲ್ಲಿ ತನ್ನ ದಿಟ್ಟ ಹೆಜ್ಜೆ ಇಟ್ಟರೆ
ಕೆಟ್ಟ ಹುಳುಗಳು ಮಣ್ಣಾಗುವುದು ಮಾತ್ರ ದಿಟ.
ಅವಳು ಎದ್ದು ಬರುವ ತನಕ ಉಳಿಗಾಲ ನಿಂಗಿಲ್ಲ ತಿಳಿದುಕೋ ದುಷ್ಟ.
ಚೆನ್ನಾಗಿ ಬರೆದಿದ್ದೀರ