ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಲ್ಲವೂ ಸಾಕು

ಸುಮಾ ಕಂಚೀಪಾಲ್

ಎಲ್ಲವೂ ಸಾಕು
ಈ ಕೆಂಡದ ಮಳೆ 
ಸುರಿವ ಪ್ರೀತಿಯ
ಗಾಳಿಯಲಿ
ನಾನು, ಅವನ ಸಿಗರೇಟಿನ
ವಾಸನೆ ಇಲ್ಲದ
ಬರಿಯ ಗಾಳಿಗೆ ಜೀವ ಇಲ್ಲ
ಎಂದು ಈಗ ಅರಿತಿದ್ದೇನೆ.

ಸಿಗರೇಟಿನ ಅಂಚಿನ 
ಕೇಸರಿ ಕಿಡಿ,
ಬಿಳಿ ಬಣ್ಣದ ಬೂದಿ 
ದಿನಕ್ಕೆರಡು ಬಾರಿ 
ಆ್ಯಶ್ ಟ್ರೇಗಳನ್ನು 
ಒರೆಸಿ ಒರೆಸಿ ಸೋತಿದ್ದೆ.
ಹಲವಾರು ಬಾರಿ 
ತಿಳಿಸಿ ಹೇಳಿದ್ದೆ‌.

ಬೆಂಗಳೂರು ಇದು 
ನಮ್ಮ ಹಳ್ಳಿಯಂತಲ್ಲ
ನೀನೂ ಒಳಗೆಳೆದುಕೋ
ಎಂದು ಕಣ್ಣು ಹೊಡೆದಿದ್ದ.

ಈಗ ಅವನು ಸಿಗರೇಟು 
ಸೇದುವುದಿಲ್ಲ.
ಆ್ಯಶ್ ಟ್ರೇ ಮೇಲೆ ಬೂದಿ
ಉದುರಿಸುವುದಿಲ್ಲ.

ಆದರೆ ಆ ಬಿಳಿ ಬಣ್ಣದ
ಬೂದಿ
ಟ್ರೇಗಳ ಬದಲು
ಮಣ್ಣಿನ ಮಡಿಕೆಯಲ್ಲಿ 
ಈಗ ನನ್ನ ಕಾರಿನ
ಸೀಟಿನ ಮೇಲೆ ಇದೆ.

ಈಗ ಬುದ್ದಿ ಬಂತು
ನಾನು ಅವನೊಟ್ಟಿಗೆ
ಒಳಗೆಳೆಯ ಬೇಕಿತ್ತು.

‍ಲೇಖಕರು Avadhi

28 November, 2020

1 Comment

  1. ಅಂಜನಾ

    ಸೂಪರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading