
ವನಿತಾ ಯಾಜಿ
‘ಎಲ್ಲರ ಪುಸ್ತಕ’ದಿಂದ ಈವರೆಗೆ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ, ವ್ಯಕ್ತವಾದ ಅಭಿಪ್ರಾಯ ಮತ್ತು ಪ್ರಶಂಸೆಗಳಿಂದ ನಾವು ಅತ್ಯುತ್ಸಾಹದಿಂದ ಇನ್ನೂ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇವೆ. ನಮ್ಮ ಮೊದಲ ಎರಡು ಪುಸ್ತಕಗಳಿಂದಲೂ ಈವರೆಗೆ ಹೊಸತನ, ಗುಣಮಟ್ಟವನ್ನು ಹೆಚ್ಚಿಸಲು ಪರಿಶ್ರಮ ಪಡುತ್ತಿದ್ದೇವೆ.
ನಮ್ಮ ಪುಸ್ತಕಗಳ ಪುಟವಿನ್ಯಾಸ ಮಾಡುತ್ತಿರುವ ಮನೋಜ್ ಹಾಗೂ ಎಲ್ಲಾ ಮುದ್ರಕರ ಶ್ರಮವನ್ನು ನಾವು ಇಲ್ಲಿ ನೆನೆಯಬಯಸುತ್ತೇವೆ. ಪ್ರಕಾಶನ ಪ್ರಾರಂಭವಾದ, ಮೇಲೆ ನಮ್ಮ ಕಪಾಟಿನಲ್ಲಿ ಪುಸ್ತಕಗಳು ದ್ವಿಗುಣಗೊಂಡಿದೆ. ಹಲವು ಪ್ರಕಾಶಕರ ಅದ್ಭುತ ಪುಸ್ತಕಗಳು ನಮ್ಮನ್ನು ಬೆರಗುಗೊಳಿಸಿವೆ.

ಕನ್ನಡದಲ್ಲಿ ಇಂಥ ಹತ್ತಾರು ಪುಸ್ತಕಗಳನ್ನು ರೂಪಿಸಬೇಕು ಎಂಬ ಉತ್ಸಾಹಕ್ಕೆ ಸ್ಫೂರ್ತಿ ನೀಡಿವೆ. ಇದರ ಫಲವಾಗಿ ಈ ಸಲದ ನಮ್ಮ ಪುಸ್ತಕಗಳು ಇನ್ನೂ ಸುಂದರವಾಗಿ ಮೂಡಿಬಂದಿವೆ. ‘ಏಕೆ ಬೇಕು ಕನ್ನಡ!?’ ಪುಸ್ತಕವು ಕನ್ನಡ ಭಾಷೆಯ ಬೆಡಗು, ಕರ್ನಾಟಕದ ವೈವಿಧ್ಯತೆಯನ್ನು ಸರಳವಾಗಿ ಮಕ್ಕಳಿಗೆ ಪರಿಚಯಿಸುವ ಪುಸ್ತಕವಾಗಿದೆ.
‘ಟೊಮಾಟೊ ಫಿಶ್’ ನಮ್ಮ ಮೊದಲ ಕತೆ-ಚಿತ್ರ ಪುಸ್ತಕ. ‘ಚಿಟ್ಟೆ’ ಮಕ್ಕಳಲ್ಲಿ ಕಥೆಕಟ್ಟುವ ಚಿತ್ರ ಬರೆಯುವ ಕೌಶಲ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಮೂರನೇ ತರಗತಿಯ ವಿದ್ಯಾರ್ಥಿ ರೂಪಿಸಿರುವ ಈ ಪುಸ್ತಕವನ್ನು ಪ್ರಕಟ ಮಾಡಿದ್ದೇವೆ. ನಿಮ್ಮ ಪ್ರತಿಗಳನ್ನು ಪಡೆಯಬಹುದು.
ತಮ್ಮ ಮಕ್ಕಳಿಗೆ, ಹಾಗೂ ಎಲ್ಲಾ ಮಕ್ಕಳಿಗೆ ಉಡುಗೊರೆ ಕೊಡಲು ಇಂದಿನಿಂದಲೇ ಸಂಪರ್ಕ ಮಾಡಿ.
9141184535
yellarapustaka@gmail.com








0 Comments