'ಎಲೆ ಎಲೆ ಮೊಬಾಯಿಲೆ ? ನಿನಗೇನೆ ಕಾಯಿಲೆ… ?'

ಸದಾ ಹಾಡು ಗುಂಯ್ ಗುಡುವ ಗೋಪಾಲ ವಾಜಪೇಯಿ ಅವರ ಮನಸ್ಸು ತನ್ನ ಕೆಟ್ಟು ಹೋದ ಮೊಬೈಲ್ ಗೆ ಪ್ರತಿಕ್ರಿಯಿಸಿದ್ದು ಹೇಗೆ ? 

gopala wajapeyi

ಗೋಪಾಲ ವಾಜಪೇಯಿ 

ಗಂಟೆ ಹೊಡೆದು ಮಾತಿಗೆ ಶುರುವಿಟ್ಟುಕೊಳ್ಳುತ್ತಿದ್ದ ನನ್ನ ‘ಜಂಗಮ ವಾಣಿ’ಗೆ ಅದೇನು ಜಂಬವೋ… ವಾರದಿಂದ ಮಾತು ನಿಲ್ಲಿಸಿದೆ.

‘ಏನಂಥ ಮುನಿಸು ಮರಿಯೆ…
ಮಾತನ್ನ ಮರೆತೇ ಸರಿಯೆ?’
– ಅಂತ ಎಷ್ಟೇ ಅನುನಯದಿಂದ ಕೇಳಿದರೂ ಅದರ ಮನಸು ಕರಗಲೊಲ್ಲದು, ನಾನೇ ಮೈದಡವಿ ಮಾತಾಡಿಸಿದರೂ ಮಿಸುಕಲೊಲ್ಲದು… ಅದರ ಕೋಪ ನನ್ನ ಮೇಲೆ ಮಾತ್ರ.

ಅದಕ್ಕೇ, (ನಾನು) ನಿಮ್ಮೊಂದಿಗೆ ಮಾತಾಡಲು ಸಹಕರಿಸುತ್ತಿಲ್ಲ ; ನೀವು ಮಾತಾಡಿದರೆ ಗಂಟೆ ಹೊಡೆದು ಕರೆಯುತ್ತಾಳೆ.

ಇನ್ನೆರಡು ದಿನ ವಾಯಿದೆ ಕೊಡುತ್ತೇನೆ ; ಆಗಲೂ ಮೊಂಡಾಟ ಮುಂದುವರಿದರೆ ಬಲ್ಲವರಿಂದ ‘ಮೆಣಸು ಅರೆಸು’ತ್ತೇನೆ…

ಸದ್ಯ ನಾನಂತೂ ಹೀಗೆ ಹಾಡಿಕೊಳ್ಳುತ್ತಿದ್ದೇನೆ :

 

‍ಲೇಖಕರು Admin

September 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. S.p.vijaya Lakshmi

    ಅವಧಿಗೆಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ….ಗೋಪಾಲ್ ವಾಜಪೇಯಿ ಅವರ ವ್ಯಕ್ತಿತ್ವದ ಪೂರ್ಣಪರಿಚಯ ಖಂಡಿತಾ ನನಗಿರಲಿಲ್ಲ..ಮೊಗೆದಷ್ಟೂ ಸಾಗರದ ನೀರು ಆಳ , ವಿಸ್ತಾರ ಎನ್ನುವಂತೆ ನಿನ್ನೆಯಿಂದ ಅವರ ಬಗೆಗಿನ ಏಲ್ಲ ಲೇಖನಗಳನ್ನೂ ಬಿಟ್ಟೂಬಿಡದೆ ಓದುತ್ತಿರುವೆ. ಕಣ್ಣಿರುಕ್ಕುವುದು, ಖುಶಿಯಾಗುವುದು, ಬೆರಗಾಗುವುದು, ….ಅಯ್ಯೋ, ಒಮ್ಮೆಯು ಈ ಮಹಾತ್ಮನನ್ನು ನೋಡಲೇ ಇಲ್ಲವಲ್ಲ, ಕಾಲ ಜಾರಿಯೇ ಬಿಟ್ಟಿತಲ್ಲ ಎನ್ನೋ ವಿಷಾದ ಉಳಿದುಬಿಡುವುದು…..ಹಿಂದೊಮ್ಮೆ ” ಚಿ.ಶ್ರೀನಿವಾಸರಾಜು” ಅವರ ಅಂತ್ಯದಲ್ಲೂ ಇದೇ ಭಾವ ಕಾಡಿತ್ತು….
    ಗೋಪಾಲ ವಾಜಪೇಯಿಯವರ ಬದುಕನ್ನು ಈಗ ಓದಿ ಕೃತಾರ್ಥಳಾಗುತ್ತಿರುವೆ…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: