ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ಆರ್ ವಿಶುಕುಮಾರ್ ಗೆ ರಾಷ್ಟ್ರೀಯ ಮನ್ನಣೆ

whatsapp-image-2016-12-10-at-5-52-04-pmರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್ ಆರ್ ವಿಶುಕುಮಾರ್ ಅವರಿಗೆ ರಾಷ್ಟ್ರೀಯ ಮನ್ನಣೆ ದೊರೆತಿದೆ. ದೇಶದ ಎಲ್ಲಾ ರಾಜ್ಯಗಳ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಒಳಗೊಂಡ ಸಂಸ್ಥೆಗೆ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಹೊಸ ಮಾಧ್ಯಮಗಳು ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿರುವ ವೇಳೆ ಸಂವಹನದ ರೀತಿಯೇ ಬದಲಾಗಿದೆ. ಈ ಹೊಸ ಮಾಧ್ಯಮದ ಗುಣಾವಗುಣಗಳನ್ನು ಪರಾಮರ್ಶಿಸಿ, ಅದೇ ಸಂದರ್ಭದಲ್ಲಿ ಈ ಮಾಧ್ಯಮವನ್ನು ರಚನಾತ್ಮಕ ಕಾರ್ಯಕ್ಕೆ ಸಜ್ಜುಗೊಳಿಸಲು, ಬದಲಾದ ಸನ್ನಿವೇಶದಲ್ಲಿ ಹೊಸ ರೀತಿಯ ಸಂವಹನ ವ್ಯವಸ್ಥೆಯನ್ನು ರೂಪಿಸಲು, ಜಾಗತೀಕರಣದ ಸಂದರ್ಭದಲ್ಲಿ ಹೆಚ್ಚುತ್ತಿರುವ ಸಂವಹನ ಸಾಧ್ಯತೆಯನ್ನು ಗುರುತಿಸಿ ಹೊಸ ದಿಕ್ಕಿನಲ್ಲಿ ಹೆಜ್ಜೆ ಹಾಕಲು ಈ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ.

ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ ದಲ್ಲಿ ಎರಡು ದಿನಗಳ ಕಾಲ ಜರುಗಿದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ಸಮಾವೇಶ ಎನ್ ಆರ್ ವಿಶುಕುಮಾರ್ ಅವರನ್ನು ಮೊದಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅವರ ಸಂವಹನ ಕೌಶಲತೆಗೆ ಮೆಚ್ಚುಗೆ ವ್ಯಕ್ತಪಡಿಸಿತು.

ವಾರ್ತಾ ಇಲಾಖೆಯ ನಿವೃತ್ತ ನಿರ್ದೇಶಕರಾದ ಚಿರಂಜೀವಿ ಸಿಂಗ್ ಅವರು ಆ ಸಂಸ್ಥೆಯ ಸ್ಥಾಪನೆಗೆ ಚಾಲನೆ ನೀಡಿದರಲ್ಲದೆ ಸಂಸ್ಥೆಯ ಲೋಗೋ ಅನಾವರಣ ಮಾಡಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂವಹನ ಸ್ನಾತಕೋತ್ತರ ಪದವೀಧರರಾದ ಎನ್ ಆರ್ ವಿಶುಕುಮಾರ್ ಅವರು ‘ಪ್ರಜಾವಾಣಿ’ ಬಳಗದ ಪತ್ರಿಕೆಗಳಿಗೆ ಹವ್ಯಾಸಿ ಪತ್ರಕರ್ತರಾಗಿ ಪತ್ರಿಕೋದ್ಯಮ ಜೀವನಕ್ಕೆ ತೆರೆದುಕೊಂಡರು. ನಂತರ ‘ಲಂಕೇಶ್ ಪತ್ರಿಕೆ’ಯಲ್ಲಿ ರಾಜಕೀಯ ವರದಿಗಾರರಾಗಿದ್ದು ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರೊ ಎಂ ಡಿ ನಂಜುಂಡ ಸ್ವಾಮಿ ಅವರ ಪ್ರಶಂಸೆಗೆ ಪಾತ್ರರಾಗಿದ್ದರು.. ತದನಂತರ ಮಂಡ್ಯ ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ‘ಕನ್ನಂಬಾಡಿ’ ಪತ್ರಿಕೆ ಆರಂಭಿಸಿದರು.

ತದನಂತರ ವಾರ್ತಾ ಇಲಾಖೆಯಲ್ಲಿ ವೃತ್ತಿ ಆರಂಭಿಸಿದ ವಿಶುಕುಮಾರ್ ಅವರು ಅನೇಖ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಜನಪರ ಕಣ್ಣೋಟ ಇವರ ಪ್ರತೀ ಕೆಲಸದಲ್ಲೂ ಕಾಣುವ ಅಂಶ.

whatsapp-image-2016-12-10-at-5-52-04-pm-1

‍ಲೇಖಕರು Admin

12 December, 2016

1 Comment

  1. H S Eswara

    Congratulations to Shri Vishukumar. He has been a silent worker, and his unanimous election as Chairman of AIPCS is a testimony to the excellent work he has been doing over last several years. I wish him a successful and satisfying tenure. HS Eswara

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading