ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎನ್ ಆರ್ ವಿಶುಕುಮಾರ್ ಅವರನ್ನು ಕಾಡುವ ಸಿನಿಮಾ

ವಾರ್ತಾ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್ ಅವರನ್ನು ’ಅವಧಿ’ಯ ಪ್ರತಿನಿಧಿ ಅಲ್ಲಾಬಕ್ಷಿ ಅವರು ನಿಮ್ಮನ್ನು ಕಾಡುವ ಸಿನಿಮಾ ಯಾವುದು ಎಂದು ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ.

ಎನ್ ಆರ್ ವಿಶುಕುಮಾರ್

ರೋಶಮನ್ ನನ್ನನ್ನು ಕಾಡುವ ಚಿತ್ರ.


ಈ ಚಿತ್ರದಲ್ಲಿ ಕೊಲೆಯಾಗಿರುವದು ಒಬ್ಬ, ಆದರೆ ಆ ಕೊಲೆಯನ್ನು ಒಬ್ಬೊಬ್ಬರು ಒಂದೊಂದು ದೃಷ್ಟಿಕೋನದಿಂದ ಬಣ್ಣಿಸುತ್ತಾರೆ, ಬೇರೆ ಬೇರೆ, ಪರಸ್ಪರ ವಿರುದ್ಧದ ಕಾರಣ ಕೊಡುತ್ತಾರೆ.  ನೋಡುವವನ ದೃಷ್ಟಿ ಕೋನದ ಮೇಲೆ ಕಥೆ ನಿಲ್ಲುತ್ತದೆ ಎನ್ನುವುದನ್ನು ಅಕಿರೋ ಕುರಾಸೋವ ಅದ್ಭುತವಾಗಿ ಚಿತ್ರಿಸಿದ್ದಾರೆ. ಆ ಚಿತ್ರದಲ್ಲಿ ಕಲೆಯ ಮೌಲ್ಯ ತುಂಬಾ ಅಡಗಿದೆ. ಹಾಗಾಗಿ ನನಗದು ಕಾಡುವ ಚಿತ್ರ. ಯಾವುದೆ ಒಂದು ಚಿತ್ರ  ಮಾನವೀಯ ಸಮಸ್ಯೆಗಳಿಗೆ ಹೇಗೆ ಧನಾತ್ಮಕವಾಗಿ ಪರಿಹಾರ  ಕಂಡು ಕೊಳ್ಳಬಹುದು ಎನ್ನುವುದನ್ನು ತೋರಿಸಿದರೆ ಅದು ಪ್ರಶಂಸನೀಯ. ಅದು ಈ ಚಿತ್ರದಲ್ಲಿದೆ.
ಇನ್ನು ಕನ್ನಡದಲ್ಲಿ ನನ್ನನ್ನು ಕಾಡುವ ಚಿತ್ರ ಬಂಗಾರದ ಮನುಷ್ಯ.


ಒಬ್ಬ ಯುವಕ ಒಂದು ಹಳ್ಳಿಯನ್ನು ಹೇಗೆ ಬದಲಾವಣೆ ಮಾಡಬಹುದು ಎಂಬುದು ಆ ಚಿತ್ರದಲ್ಲಿ ಬಹಳ ಅರ್ಥಗರ್ಭಿತವಾಗಿ, ಮನಮುಟ್ಟುವಂತೆ ಚಿತ್ರೀಕರಣಗೊಂಡಿದೆ.

‍ಲೇಖಕರು G

2 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading