ಎದೆಗಾನಿಸಿಕೊಂಡು ವಿರಮಿಸೆಂದ..

ಸಂದೀಪ್ ಈಶಾನ್ಯ ಅವರ ಕವಿತೆ ‘ಎರಡು ದೇಹಗಳ ನಿರಂತರ ಹೊರಳಾಟದಿಂದ‘ ಅವಧಿಯಲ್ಲಿ ಪ್ರಕಟವಾಗಿತ್ತು .

ಆ ಕವಿತೆ ಇನ್ನೊಬ್ಬಕವಿಯಲ್ಲೂ ಕಿಚ್ಚು ಹಚ್ಚಿತು. ‘ಮಹೀ’ ಅನ್ನುವ ಹೆಸರಿನಲ್ಲಿ ಬರೆಯುವ ಪಶುವೈದ್ಯ ಡಾ ಮಹೇಂದ್ರ ‘ನುಣುಪಾದ ಕಾಲಿನ ಮೇಲೆ ಜಾರೋ ಬಂಡಿಯಾಟ..’ ಬರೆದರು.

ಇದನ್ನು ಓದಿದ ಗೀತಾ ಹೆಗ್ಡೆ ಕಲ್ಮನೆಯವರು ಅದಕ್ಕೆ ಹೌದು ನನಗೂ ಕೋಪ ಬರುತ್ತಿದೆ.. ಎಂದು ಪ್ರತಿಕ್ರಿಯಿಸಿದರು.  

ಮೈಸೂರಿನಿಂದ ನಾಗೇಶ ಮೈಸೂರು ಬರೆದರು – ಪಿಸುಗುಟ್ಟಿದ ಕತ್ತಲ ಮಾತು..

ಈ ಎಲ್ಲಾ ಕವನಗಳಿಗೆ ಕಿಚ್ಚು ಹಚ್ಚುವಂತೆ ಉತ್ತರ ಬಂದಿದ್ದು ಶಮ ನಂದಿಬೆಟ್ಟ ಅವರಿಂದ  

ನಿನ್ನ ಬೆನ್ನ ತಿರುವಿನ ಕಂದು ಮಚ್ಚೆಗೆ.. ಕವಿತೆ ಬರೆದರು

ಕಿರಣ್ ಕಂಗೊಕರ್ ಕಿತ್ತೆಸೆದ ಬಟ್ಟೆಗಳು ಮೈಯಡಿಯಲ್ಲಿ ಸಿಲುಕಿ.. ಬರೆದರು 

ವಿನಿ ನಾಯಕ್ ಬೆಳಕಲ್ಲಿ ಕೆನ್ನೆಯ ರಂಗಾಗಿ.. ಬರೆದರು.

ಆನಂದ ಋಗ್ವೇದಿ ಎಲ್ಲಾ ಬಿಚ್ಚಿ.. ಹೇಳಲಾಗುವುದಿಲ್ಲ!! ಎಂದು ಅದಕ್ಕೆ ತಮ್ಮ ದನಿ ಸೇರಿಸಿದರು  

ಕುಸುಮಾ ಪಟೇಲ್ ಮಚ್ಚೆ ಎಂದೊಡನೆ ನೆನಪಾಗುತ್ತಾನೆ.. ಎಂದು ನೆನಪಿಸಿಕೊಂಡರು 

ಈಗ ಸ್ಫೂರ್ತಿ ಗಿರೇಶ್ ಕವಿತಾ ಸರಣಿಗೆ ಜೊತೆಯಾಗಿದ್ದಾರೆ 

ಓದಿ 

 

pair in bed

ಅಷ್ಟೇ ಅಲ್ಲ, ಈ ಕವಿತೆಗಳು ನಿಮ್ಮೊಳಗೆ ಕಿಚ್ಚು ಹಚ್ಚಿದ್ದಲ್ಲಿ

ನೀವೂ ಕವಿತೆ ಮುಂದುವರೆಸಿ  

ಮಳೆ ಕೊಚ್ಚಿದ ಹೊಳೆ…

sphoorti girish

ಸ್ಪೂರ್ತಿ ಗಿರೀಶ್

pair in rain

ಸಂಜೆಗೂ ಮುನ್ನ ದಟ್ಟವಾಗಿ
ಮಬ್ಬು
ಕವಿದ ಆಕಾಶ
ನಿಲ್ಲದ ಸೆಳೆತಕ್ಕೆ ನಿಲ್ದಾಣದಂತವನು
ಎದೆಗಾನಿಸಿಕೊಂಡು ವಿರಮಿಸೆಂದ

ಮರವ ತಬ್ಬಿದ ನೆರಳು
ನೆರಳನಾಡಿಸುವ ಬೆರಳು
ಕಣ್ಕಲೆತು ಮೂಗರಳಿ
ಹಸಿಮಣ್ಣಿನ ವಾಸನೆ
ನೆಲದ ತುಂಬಾ

ಬಿಡದೆ ಸುರಿವ ಮಳೆಗೆ
ಹೊಳೆ
ಮೈದುಂಬಿ
ಮನದುಂಬಿ ಕೊಚ್ಚಿ
ಹುಚ್ಚು ಹರಿದಾಡಿ ಹೆಚ್ಚುಗಾರಿಕೆಯೇನು
ಕೂಡಿಪಡೆದ ಮೋಹ
ತೀರಲೊಲ್ಲದ ದಾಹ

ನಿಲ್ಲದ ಸೆಳೆತಕ್ಕೆ ನಿಲ್ದಾಣದಂತವನು
ಎದೆಗಾನಿಸಿಕೊಂಡು  ರಮಿಸು ಎಂದ

‍ಲೇಖಕರು Admin

May 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಆನಂದ್ ಋಗ್ವೇದಿ

    ಹೆಚ್ಚುಗಾರಿಕೆಯೇನು
    ಕೂಡಿಪಡೆದ ಮೋಹ
    ತೀರಲೊಲ್ಲದ ದಾಹ!

    ವಾಹ್. . ಬಲು ಚೆಂದ

    ಪ್ರತಿಕ್ರಿಯೆ
    • ಸ್ಪೂರ್ತಿ ಗಿರೀಶ್

      ಧನ್ಯವಾದಗಳು ಆನಂದ್ ಋಗ್ವೇದಿ, ಧನ್ಯವಾದಗಳು ಅವಧಿ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: