ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಡವಿ ಬೀಳುವುದರಲ್ಲಿ, ನಿನ್ನ ತೋಳು ಸಿಕ್ಕಂತಾಗಿತ್ತು

’ಕತರ ಕತರ ಮಿಲ್ತಾ ಹೈ, ಕತರ ಕತರ ಜೀನೆ ದೋ, ಜಿ೦ದಗೀ ಹೈ….’ – ಇಜಾಜ಼ತ್ ಚಿತ್ರದ ಈ ಹಾಡು,

ಅದರ ಅದ್ಭುತ ಛಾಯಾಗ್ರಹಣ ಮರೆಯಲು೦ಟೆ?

ಗುಲ್ಜಾರ್ ರವರ ಆ ಹಾಡನ್ನು ಕನ್ನಡಕ್ಕೆ ಭಾವಾನುವಾದ ಮಾಡಿದವರು ಸ್ವರ್ಣ ಎನ್ ಪಿ.

ಶೋಧ

– ಸ್ವರ್ಣ ಎನ್ ಪಿ

ಕ್ಷಣಗಳಲ್ಲಿ ಸಿಕ್ಕ ಬದುಕ ಹನಿಗಳಲ್ಲಿ ಬದುಕ ಬಿಡು ನನ್ನ ನಾ ಹುಡುಕುತ್ತಿದ್ದೇನೆ, ಹುಡುಕ ಬಿಡು   ಕಳೆದ ರಾತ್ರಿಯೂ ಹೀಗೆ ಆಗಿತ್ತು, ಮಂಪರಿನಲ್ಲಿ , ನೀ ನನ್ನ ಕೈ ಹಿಡಿದಂತಾಗಿತ್ತು. ಎಡವಿ ಬೀಳುವುದರಲ್ಲಿ, ನಿನ್ನ ತೋಳು ಸಿಕ್ಕಂತಾಗಿತ್ತು ಕನಸಿನಲೆಗಳ ಮೇಲೆ, ನನ್ನ ಹೆಜ್ಜೆ ಇಟ್ಟಾಗಿತ್ತು. ಕನಸಲ್ಲೇ ತೇಲಿ ಸಾಗಲು ಬಿಡು ನನ್ನ ನಾ ಹುಡುಕುತ್ತಿದ್ದೇನೆ , ಹುಡುಕ ಬಿಡು     ನೀನೇನೋ ಮುಗಿಲ ಬಿಡಿಸಿಟ್ಟಿದ್ದೆ ನಾ, ಬರಿಗಾಲಲ್ಲಿ ಭುವಿಯ ಮೇಲಿದ್ದೆ . ನೀನಿದ್ದೂ ನಿನ್ನ ಹಂಬಲವಿರಬೇಕು, ಆ ಬದುಕು ಬಹು ಸುಂದರವಿರಬೇಕು ? ನಿನ್ನಾಸೆಯಲ್ಲೇ ತೇಲಿ ಸಾಗಲು ಬಿಡು ನನ್ನ ನಾ ಹುಡುಕುತ್ತಿದ್ದೇನೆ , ಹುಡುಕ ಬಿಡು   ಮಂಜ ಹನಿಗಳಲ್ಲಿ ನಡೆದಿದೆ ಪಯಣ , ಸುಂದರವಾಗಿದೆ ನನ್ನ ಸ್ವಪ್ನಾಕಾಶಯಾನ . ನಿನ್ನೊಂದು ನೋಟವೇ ಬಲವಾಗಿರಲು, ಸಾಗುವೆ ನಾ ಮೇಘಮಾಲೆಯೊಲು ಇಬ್ಬನಿಯಲ್ಲೇ ತೇಲಿ ಸಾಗಲು ಬಿಡು ನನ್ನ ನಾ ಹುಡುಕುತ್ತಿದ್ದೇನೆ , ಹುಡುಕ ಬಿಡು   ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ]]>

‍ಲೇಖಕರು G

19 July, 2012

2 Comments

  1. Nataraju S M

    ನನಗೆ ನನ್ನಿಷ್ಟ ಹಾಗೆ ಇರಲು ಬಿಡು ಎಂಬ ಸಾಲುಗಳಿರುವ ಬೆಂಗಾಳಿ ಹಾಡೊಂದು ನೆನಪಾಯಿತು. ಸ್ವರ್ಣಕ್ಕ, ಚೆನ್ನಾಗಿದೆ ಅನುವಾದ 🙂

  2. D.RAVI VARMA

    ನೀನೇನೋ ಮುಗಿಲ ಬಿಡಿಸಿಟ್ಟಿದ್ದೆ
    ನಾ, ಬರಿಗಾಲಲ್ಲಿ ಭುವಿಯ ಮೇಲಿದ್ದೆ .
    ನೀನಿದ್ದೂ ನಿನ್ನ ಹಂಬಲವಿರಬೇಕು,
    ಆ ಬದುಕು ಬಹು ಸುಂದರವಿರಬೇಕು ?
    ನಿನ್ನಾಸೆಯಲ್ಲೇ ತೇಲಿ ಸಾಗಲು ಬಿಡು
    ನನ್ನ ನಾ ಹುಡುಕುತ್ತಿದ್ದೇನೆ , ಹುಡುಕ ಬಿಡು
    nimma anuvaada tumbaa chennagide, haage hindiyalli mukesh haadugalannu kelutta hodare nammanne naavu maretubidutteve. anuvaada munduvaresi shubhashayagalu .
    ravi varma hosapete

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading