ಕರ್ನಾಟಕ ಲೇಖಕಿಯರ ಸಂಘವು 2025 ನೆಯ ಸಾಲಿನ ಎಚ್. ವಿ. ಸಾವಿತ್ರಮ್ಮ ಪ್ರಶಸ್ತಿಗೆ ಲೇಖಕಿಯರಿಂದ ಅನುವಾದ ಸಾಹಿತ್ಯದ ಕೃತಿಗಳನ್ನು ಆಹ್ವಾನಿಸಿದೆ. ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ಕೃತಿಯಾಗಿರಬೇಕು. ಮೂರು ವರ್ಷದಲ್ಲಿ ಅಂದರೆ 2023, 2024 ಅಥವಾ 2025 ನೆಯ ಸಾಲಿನಲ್ಲಿ ಪ್ರಕಟಗೊಂಡ ಕೃತಿಗಳನ್ನು ಕಳುಹಿಸಬಹುದಾಗಿದೆ.
ನವೋದಯ ಕಾಲಘಟ್ಟದ ಮಹತ್ವದ ಲೇಖಕಿಯಾದ ಎಚ್.ವಿ. ಸಾವಿತ್ರಮ್ಮ ತೀಕ್ಷ್ಣ ವೈಚಾರಿಕ ಬರಹಗಳಿಂದ ಗುರುತಿಸಿಕೊಂಡವರು. ಇವರ ಕುಟುಂಬ ವರ್ಗ ಕರ್ನಾಟಕ ಲೇಖಕಿಯರ ಸಂಘದಲ್ಲಿ ದತ್ತಿ ಇಟ್ಟಿದ್ದು, ಪ್ರತಿವರ್ಷ ಇವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು 25000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ ಎಂದು ಕಲೇಸಂ ಅಧ್ಯಕ್ಷರಾದ ಡಾ. ಸುನಂದಮ್ಮ ಅವರು ತಿಳಿಸಿದ್ದಾರೆ.
ಲೇಖಕಿಯರು ತಮ್ಮ ನಾಲ್ಕು ಕೃತಿಗಳನ್ನು ಮೇ 20 ರ ಒಳಗಾಗಿ ಕಲೇಸಂಗೆ ಕಳುಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಕರ್ನಾಟಕ ಲೇಖಕಿಯರ ಸಂಘ(ರಿ), ನಂ. 206, 2 ನೆಯ ಮಹಡಿ, ವಿಜಯ ಮ್ಯಾನ್ಷನ್, 2 ನೆಯ ತಿರುವು, 2 ನೆಯ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸರ್ವಮಂಗಳಾ 9448818900
ಸುಮಾ ಸತೀಶ್ 9481480220






0 Comments