ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ಸತ್ಯನಾರಾಯಣಗೆ ‘ಹಾಮಾನಾ ಪ್ರಶಸ್ತಿʼ

ಕನ್ನಡನಾಡು, ನುಡಿ, ಸಂಸ್ಕೃತಿಗಳನ್ನು ಕುರಿತ ಪುಸ್ತಕಕ್ಕೆ ಕನ್ನಡ ಗೆಳೆಯರ ಬಳಗವು ಕೊಡುಮಾಡುವ ೨೦೨೧ನೆ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವನ್ನು ಘೋಷಿಸಲಾಗಿದೆ.

ವಿಮರ್ಶಕ ಡಾ. ಎಚ್.ಎಸ್. ಸತ್ಯನಾರಾಯಣ ಅವರ ಅಂಕಣ ಬರಹ ಸಂಕಲನ ‘ಅಪೂರ್ವ ಒಡನಾಟ’ ಪ್ರಶಸ್ತಿಗೆ ಪಾತ್ರವಾಗಿದ್ದು ರೂ ೩ ಸಾವಿರ ನಗದು, ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

ಹಾಸನದ ಕಾಲೇಜು ಉಪನ್ಯಾಸಕಿ ಸುಮಾ ವೀಣಾ ಅವರ ‘ನಲಿವಿನ ನಾಲಗೆ’ ಪ್ರಬಂಧ ಸಂಕಲನಕ್ಕೆ ಸಮಾಧಾನಕರ ಬಹುಮಾನ ದೊರೆತಿದೆ. ಸಮಾಧಾನಕರ ಬಹುಮಾನವು ರೂ ೧೫೦೦/- ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಈ ತಿಂಗಳ ೩೦ರಂದು ಬೆಂಗಳೂರಿನ ಬಿ.ಎಂ.ಶ್ರೀ. ಪ್ರತಿಷ್ಠಾನದ ಸಭಾಂಗಣದಲ್ಲಿ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿ, ಪ್ರದಾನ, ಕನ್ನಡ ಮಾಧ್ಯಮದ ಮಕ್ಕಳಿಗೆ ಪುರಸ್ಕಾರ ನೀಡುವ ಸಮಾರಂಭ ಇದೆ. ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವನ್ನೂ ಅದೇ ಸಮಾರಂಭದಲ್ಲಿ ಕೊಡಮಾಡಲಾಗುವುದು.

‍ಲೇಖಕರು Admin

19 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading