ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಚ್ ಎಸ್ ವಿ ಮಕ್ಕಳಿಗಾಗಿ ಬರೆದ ಪಂಪ

 
ಎಳೆಯ ಮನಸ್ಸುಗಳಿಗೆ ಕನ್ನಡ ಪರಂಪರೆಯ ಪರಿಚಯ ಇಂದಿನ ಸಾಂಸ್ಕೃತಿಕ ಅಗತ್ಯ. ಪಶ್ಚಿಮಕ್ಕಿಂತ ಭಿನ್ನವಾದ . ಸಮೃದ್ಧವಾದ, ವೈವಿಧ್ಯಮಯವಾದ ಪರಮ್ಪರೆಯೊಂದಕ್ಕೆ ನಾವು ವಾರಸುದಾರರೆಂಬ ಅರಿವನ್ನು ಅವರಲ್ಲಿ ಮೂಡಿಸಬೇಕಿದೆ. ಎಚ್. ಎಸ್. ವಿ ಅವರ ಈ ಪುಸ್ತಕ ಅಂತಹ ಒಂದು ಮಹತ್ವದ ಪ್ರಯತ್ನ.
ಹತ್ತನೆಯ ಶತಮಾನದ ಶ್ರೇಷ್ಠಕವಿ ಪಂಪನನ್ನು ನಮ್ಮ ಕಾಲದ ಮಹತ್ವದ ಕವಿಗಳಲೊಬ್ಬರು ಪುನರ್ಲೇಖಿಸಿ ಪರಿಚಯಿಸುತ್ತಿರುವ ಈ ಮಾದರಿ ಅಭಿನಂದನೀಯ. ಇದೊಂದು ಹೊಸ ಬಗೆಯ ಪರಿಕ್ರಮ.
– ನರಹಳ್ಳಿ ಬಾಲಸುಬ್ರಹ್ಮಣ್ಯ
 

‍ಲೇಖಕರು avadhi

10 December, 2013

1 Comment

  1. ಟಿ.ಕೆ.ಗಂಗಾಧರ ಪತ್ತಾರ

    ಮಿತ್ರರ ಮನೆಗೆ ಬಂದ ಒಬ್ಬ ಕನ್ನಡ ಕವಿ, ಮಿತ್ರರ ಮಕ್ಕಳನ್ನು ಕೇಳಿದರು.
    ಹಾಯ್, ಪುಟಾಣಿಗಳೇ, ಕನ್ನಡ ಕವಿಗಳ ಬಗ್ಗೆ ನಿಮಗೇನು ಗೊತ್ತು?
    “………………………………………………..”
    ಕಡೇ ಪಕ್ಷ ಇಬ್ಬರು ಕವಿಗಳ ಹೆಸರಾದ್ರೂ ಹೇಳ್ರಿ?
    ಮಕ್ಕಳು ತೊದಲುತ್ತಾ ಪಂಪ ಮತ್ತು ರನ್ನ….ಎಂದು ತೊದಲುತ್ತಿದ್ದರೆ….
    ಇಂಗ್ಲೀಷ ಪ್ರೇಮಿ ಮಿತ್ರ ಹೇಳಿದ,
    No No you say in English.
    ಪಾಪ! ಮಕ್ಕಳು ತಾನೇ ಏನು ಮಾಡಿಯಾರು?
    Yes, Daddy, Pump & Run.
    ಕನ್ನಡ ಕವಿಗಳು ಮೂರ್ಛೆ ಹೋಗೋದೊಂದೇ ಬಾಕಿ!.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading