ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಕ್ಸಲೆಂಟ್ ಮಗಾ !


subramani
etv.subbu@gmail.com |
ಪ್ರಜಾವಾಣಿ ಆಫೀಸಿಗೆ ಹಾಗಾಗ ಹೋಗುತ್ತಿದ್ದ ನನಗೆ ಮತ್ತು ರಾಘವೇಂದ್ರಗೌಡನಿಗೆ
ಬರೆಯುವ ಅಭ್ಯಾಸ ಇದ್ದರೆ ಈ ಕಡೆ ಬನ್ನಿ ಎಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದರು.ಅವರು ಹೇಳಿದ್ದನ್ನು
ಸಿರಿಸ್ಸೆ ಆಗಿ ಮಾಡಲು ಪ್ರಯತ್ನಿಸುತ್ತಿದ್ದೆವು.ಅವರ ಹೇಳಿದ ಮಡ್ ಬಾತ್ ಕಥೆ ಕೇಳಿ
ನಾನು ಮಣ್ಣು ಮೆತ್ತಿಕೊಂಡು,ರಾಘ ತೆಗೆದ ಫೋಟೋ ಅವರಿಗೆ ತೋರಿಸಿದ್ದೇವು.ನೋಡಿ
ಪ್ರಯನ್ನ ಚನ್ನಾಗಿದೆ ಎಂದು ನಕ್ಕರು.ಫೋಟೋಗ್ರಾಫಿ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರು.
ಹೀಗೆ ಒಂದು ದಿನ ಅವರ ಮೈತ್ರಿ ಫಾರಂಗೆ ಹೋಗಿದ್ದೇವು.ಪರಿಸರ,ನಗರೀಕರಣದ ಬಗ್ಗೆ
ಅವರ ಮಾತಿನ ಲಹರಿ ಹರಿದಿತ್ತು.ಮಕ್ಕಳಂತೆ ಕುಳಿತು ಆಲಿಸಿದೇ ಒಂದು ಖುಷಿ.
+++

sidrapal 
sidrapal@rediffmail.com
hi, ganadhalu, its really good photos. namma ‘gurugal’ photo nodi khushi aaythu.
-ramakrishna sidrapal
+++

shreedevi kalasad |
shreedevi_kalasad@rediffmail.com
ನಿಜ ಶ್ರೀಕಂಠ. ‘ಕಟ್ಟೆ’ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ನನಗೆ ಒಂದು ಘಟನೆ ನೆನಪಿಗೆ ಬರ್‍ತಿದೆ. ಐದು ವರ್ಷದ ಹಿಂದೆ ನಾನು ಆಗಷ್ಟೇ ಪ್ರಜಾವಾಣಿಯಲ್ಲಿ ಇಂಟರ್ನ‌ಶಿಪ್ ಗೆ ಸೇರಿದ್ದೆ. ನಾಗೇಶ್ ಹೆಗಡೆಯವ್ರು ಒಮ್ಮೆ ನನಗೊಂದು ಲೇಖನ ಬರೆಯೋದಕ್ಕೆ ಹೇಳಿದ್ರು. ಅವರು ಹೇಳಿದ್ದಿಷ್ಟೇ. ಮೈಸೂರು ರೋಡಿನಲ್ಲಿ ಒಂದು ಬೋರ್ಡಿದೆ. ಮಹಿಳಾ ಪೊಲೀಸ್ ಠಾಣೆ ಅಂತ. ಅದನ್ನು ನೋಡಿಕೊಂಡು ಬಾ. ಅಷ್ಟೇ. ನಾನು ಅಲ್ಲಿಗೆ ಹೋಗಿ ವಿಚಾರಿಸಿದೆ ಇಲ್ಲಿ ಮಹಿಳಾ ಪೊಲೀಸ್ ಠಾಣೆ ಎಲ್ಲಿದೆ ಅಂತ. ಸುಮ್ಮನೆ ಹಾಗೇ ಬೋರ್ಡ್‌ ಮಾತ್ರ ಇದೆ ಮೇಡಮ್‌ ಎಂದು (ಪುರುಷ) ಪೊಲೀಸ್ ಸಿಬ್ಬಂದಿ ಹೇಳಿ ಕಳುಹಿಸಿತು. ಬೆಂಗಳೂರಿನಲ್ಲಿ ಬಸವನಗುಡಿ ಮತ್ತು ಅಲಸೂರು ಪೊಲೀಸ್ ಸ್ಟೇಶನ್ ಮಾತ್ರ ಎಂದೂ ಆ ಸಿಬ್ಬಂದಿ ಹೇಳಿತು. ನಂತರ ನಾಗೇಶ್ ಹೆಗಡೆಯವರ ಹತ್ತಿರ ಹೋಗಿ, ಹೀಗಂತೆ ಸರ್‍ ಎಂದು ವರದಿ ಒಪ್ಪಿಸಿದೆ. ಅವರು ಸರಿ ಅಲಸೂರು, ಬಸವನಗುಡಿ ಪೊಲೀಸ್ ಸ್ಟೇಶನ್ ಗೆ ಹೋಗಿ ವಿಚಾರಿಸು. ಅಲ್ಲಿ ಬರೀ ಬೋರ್ಡ್‌ ಅಷ್ಟೇ ಯಾಕಿದೆ ಅಂತ ಅಂದ್ರು. ನಾನು ಮರುದಿನ ಅಲ್ಲಿಗೂ ಹೋಗಿ ವಿಚಾರಿಸಿದೆ. ‘ಹೌದು ಅಲ್ಲಿ ಬೋರ್ಡ್‌ ಇದೆ ಅದನ್ನ ತೆಗೆಸಬೇಕು‘ ಎಂದಷ್ಟೇ ಹೇಳಿದರು. ಮತ್ತೆ ನಾನು ಹೆಗಡೆಯವರಿಗೆ ಹೀಗಂತಂತಂತೆ. . . ಅಂತ ವರದಿ ಒಪ್ಪಿಸಿದೆ. ಅದಕ್ಕೆ ಅವರು ಬನ್ನಿ ಕೂತ್ಕೊಳ್ಳಿ. ಎರಡು ಮೂರು ದಿನಗಳಿಂದ ಅಲೆದು ಅಲೆದು ಸುಸ್ತಾಗಿದ್ದೀರ. ನಿಮಗೆ ಕತೆ ಬರೆಯೋದಕ್ಕೆ ಬರತ್ತಾ? ಕಾದಂಬರಿ ಓದ್ತೀರಾ? ಅಂತೆಲ್ಲ ಕೇಳಿದ್ರು. ನಾನು ಓದೋದಕ್ಕೆ ತುಂಬಾ ಇಷ್ಟ. ಬರೀಬೇಕೂಂತ ಆಸೆ ಇದೆ ಅಂದೆ.
ನಂತರ ಅವರು, ‘ಈಗ ನಾನು ನಿಮಗೆ ಒಂದು ಕತೆ ಹೇಳುತ್ತೇನೆ ಕೇಳ್ತೀ’ ಎಂದರು. ಆಗ ನಾನು ಹೂಂ ಅಂದೆ. ಅವರು ಒಬ್ಬ ರಾಜ ಹಾಗೂ ಮಂತ್ರಿಯ ಕತೆ ಹೇಳಿದರು. ಅದು ನನಗೆ ಮಸಕು ಮಸಕು ನೆನಪಿದೆ. ಒಂದು ದಿನ ರಾಜ ಮಂತ್ರಿಗೆ ತನ್ನ ಆಸ್ಥಾನದಲ್ಲಿ ಎಷ್ಟು ಕುದುರೆಗಳಿವೆ ಎಂದು ಕೇಳಿದನಂತೆ. ಮಂತ್ರಿ ಇಡೀ ದಿನ ಓಡಾಡಿ ಲೆಕ್ಕ ಒಪ್ಪಿಸಿದನಂತೆ. ಮಾರನೇ ದಿನ ಎಷ್ಟು ದನ-ಕರುಗಳಿವೆ ಅಂತ ಕೇಳಿದನಂತೆ. ಮಂತ್ರಿ ಅದನ್ನೂ ಇಡೀ ದಿನ ವರದಿ ಒಪ್ಪಿಸಿದನಂತೆ. ಅದರ ಮಾರನೇದಿನ ಕುರಿಗಳೆಷ್ಟಿವೆ ಲೆಕ್ಕ ಹಾಕಿದ್ದಿಯೋ ನಮ್ಮ ರಾಜ್ಯದಲ್ಲಿ ಎಂದನಂತೆ. ಇಲ್ಲ ಪ್ರಭು ಅದನ್ನೂ ನೋಡಿಕೊಂಡು ಬರುತ್ತೇನೆ ಎಂದನಂತೆ. ಕೊನೆಗೆ ರಾಜ ಮಂತ್ರಿಯಿಂದ ಏನು ನಿರೀಕ್ಷಿಸಿದ್ದ ಎಂಬುದನ್ನು ನೀವು ಈಗಾಗಲೇ ಊಹೆ ಮಾಡಿಕೊಂಡಿರುತ್ತೀರ. ಹಾಗೆಯೇ ನಾಗೇಶ್ ಹೆಗಡೆಯವರು ನನಗೀ ಕತೆಯನ್ನು ಆಗ ಯಾಕೆ ಹೇಳಿದ್ದರು ಎಂಬುದೂ ನಿಮಗೀಗಾಗಲೇ ಅರ್ಥವಾಗಿರಬಹುದು.
ತಕ್ಷಣಕ್ಕೆ ನೆನಪಿಗೆ ಬಂದ ಒಂದು ಘಟನೆಯ ಎಳೆಯನ್ನಷ್ಟೇ ಇಲ್ಲಿ ಹೊಸೆದಿದ್ದೇನೆ. ಹೀಗೇ ಬರೆಯಬೇಕು. ಅದನ್ನ ಹೀಗೇ ಫೋಕಸ್ ಮಾಡಬೇಕು ಎಂದು ಚೌಕಟ್ಟು ಹಾಕಿಕೊಡದೇ, ನಮ್ಮ ಸೀಮಿತ ಯೋಚನಾ ಮಟ್ಟವನ್ನು ವಿಸ್ತರಿಸುವ, ಸೃಜನಶೀಲತೆಯನ್ನು ಹರಿಬಿಡಲು ದಾರಿ ತೋರುವ ಗುರು ಮನಸ್ಸು ಹೆಗಡೆಯವರದು. ಹೀಗೆ ನಿಮ್ಮೆಲ್ಲರ ಜೊತೆ ಹಂಚಿಕೊಳ್ಳಲು ಖುಷಿ ಎನಿಸುತ್ತಿದೆ.
ಪ್ರಸ್ತುತ ಮೈತ್ರಿಫಾರ್ಮ್‌ ಬದುಕಿಗೂ, ಆ ಹಿಂದಿನ ಈ ಮುಂದಿನ ಬದುಕಿಗೂ ಬೆಸೆದುಕೊಂಡ ಎರಡೇ ಶಬ್ದಗಳು ನನಗೀಗ ಹೊಳೆಯುತ್ತಿವೆ. ‘ಬೆಳೆಯುತ್ತ ಬೆಳೆ’
+++

hi,
ನಾಗೇಶ್ ಹೆಗಡೆ ಕುರಿತ ಲೇಖನ ಓದಿದೆ ಚೆನ್ನಾಗಿದೆ….-ರಾಜೇಂದ್ರ ಚಿಂತಾಮಣಿ


Rajendra Kumar K.R
http://thatskannada.oneindia.in
+++

ಏಕ್ಸಲೆಂಟ್ ಮಗಾ !
ಆದ್ರೆ ಮೊಬೈಲ್ ಬದ್ಲು ನಿನ್ನ ಹೊಸ ಕ್ಯಾಮೆರಾದಿಂದ ಅವರ ಇನ್ನೂ ಕೆಲವು ಪೊಟೋ
ತೆಗೆದಿದ್ರೆ ಎಕ್ಸಲೆಂಟ್ ಆಗಿ ಇರ್ತಿತ್ತು. ಒಟ್ನಲ್ಲಿ ಹೊಸ ಗೆಟಪ್ ನಲ್ಲಿ ಹೆಗಡೆ ಸರ್
ತೋರ್ಸಿದ್ದಕ್ಕೆ ಥ್ಯಾಂಕ್ಸ್ ! ಹಂಗೆ ದೂರದ ದಿಲ್ಲಿಯಲ್ಲಿ ಕುಳಿತೇ ಅವರ ಫಾಮಱ ಹೌಸ್
ಸುತ್ತಾಡ್ದಿದ್ದಕ್ಕೂ ಥ್ಯಾಂಕ್ಸ್.
ಆದ್ರೆ ನಿಂದು ಯಾವ ಕ್ಯಾಮೆರಾ ಅಂತ ಸ್ವಲ್ಪ ಡೀಟೇಲ್ಸ್ ಕೊಡು ಮಾರಾಯಾ. ನಾನೂ ಒಂದು
ತಗೋಬೇಕು ಅಂತಿದೀನಿ….

‍ಲೇಖಕರು avadhi

20 August, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading