ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಂ ಎ ಸುಬ್ರಮಣ್ಯ ಜೊತೆ ‘ಫಟಾ ಫಟ್’

ಪ್ರತೀ ವರ್ಷ ಅತ್ಯುತ್ತಮ ಪ್ರಕಾಶನಕ್ಕೆ ‘ಅಂಕಿತ’ ದತ್ತಿ ನಿಧಿ ಪ್ರಶಸ್ತಿ ಈ ಬಾರಿ ಹುಬ್ಬಳ್ಳಿಯ ‘ಸಾಹಿತ್ಯ ಪ್ರಕಾಶನ’ಕ್ಕೆ ಸಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಈ ಪ್ರಶಸ್ತಿ ನೀಡುತ್ತದೆ.

ಈ ಹಿನ್ನೆಲೆಯಲ್ಲಿ ಸಾಹಿತ್ಯ ಪ್ರಕಾಶನದ ಮಾಲೀಕರಾದ ಎಂ ಎ ಸುಬ್ರಮಣ್ಯ ಅವರನ್ನು ʼಅವಧಿʼ ನಡೆಸಿದ ಫಟಾ ಫಟ್ ಸಂದರ್ಶನ ಇಲ್ಲಿದೆ.

ಸಾಹಿತ್ಯ ಪ್ರಕಾಶನಕ್ಕೆ ʼಅಂಕಿತ ಪುಸ್ತಕ ದತ್ತಿ ಪ್ರಶಸ್ತಿʼ, ಹೇಗನ್ನಿಸುತ್ತಿದೆ.
 ಯಾವುದೇ ಅರ್ಜಿ ಸಲ್ಲಿಸದೆ, ಲಾಭಿ ಮಾಡದೆ ಅವರಾಗಿಯೇ ಪ್ರಶಸ್ತಿ ನೀಡುತ್ತಿರುವುದು ಸಹಜವಾಗಿಯೇ ತುಂಬಾ ಖುಷಿಯಾಗುತ್ತೆ.

ಈ ಬಾರಿಯ ರಾಜ್ಯೋತ್ಸವಕ್ಕೆ ಸಾಹಿತ್ಯ ಪ್ರಕಾಶನದಿಂದ ಯಾವ ಯೋಜನೆ ಸಿದ್ದವಾಗಿದೆ?
 ಪ್ರತಿ ರಾಜ್ಯೋತ್ಸವಕ್ಕೂ ಪುಸ್ತಕಗಳಿಗೆ ರಿಯಾಯಿತಿ ನೀಡುತ್ತ ಬಂದಿದ್ದೇವೆ. ಅದು ಈ ವರ್ಷವೂ ಮುಂದುವರೆಯುತ್ತೆ.

ಸಾಹಿತ್ಯ ಪ್ರಕಾಶನದ ಮುಂದಿನ ಗುರಿ ಏನು ?
 ಸಾಹಿತ್ಯ ಪ್ರಕಾಶನ ಆರಂಭ ಮಾಡಿದಾಗಲೂ ಯಾವುದೇ ಗುರಿ ಇರಲಿಲ್ಲ. ಈಗಲೂ ಯಾವುದೇ ಗುರಿ ಇಟ್ಟುಕೊಂಡಿಲ್ಲ.

ಜನರು ಸಾಹಿತ್ಯ ಪ್ರಕಾಶನದಿಂದ ಪುಸ್ತಕಗಳನ್ನು ಏಕೆ ಕೊಂಡುಕೊಳ್ಳಬೇಕು?
 ಜನರು ಕೊಡುವ ಹಣಕ್ಕೆ ಮೌಲ್ಯ ಹೆಚ್ಚುತ್ತೆ, ಸಾಹಿತ್ಯ ಪ್ರಕಾಶನದಿಂದ ಯಾವುದೇ ಪುಸ್ತಕ ಕೊಂಡುಕೊಂಡರು ಜನರಲ್ಲಿ ಒಂದು ಸಂಸ್ಕಾರ ಬೆಳೆಯುತ್ತೆ ಅಂತಾ ನಾನು ನಂಬಿದ್ದೀನಿ.

ಸಾಹಿತ್ಯ ಪ್ರಕಾಶನ ಶುರು ಮಾಡಿದ ಉದ್ದೇಶವು ಈಡೇರಿದೆಯೇ?
 ಹೊಟ್ಟೆಪಾಡಿಗಾಗಿ ಸಾಹಿತ್ಯ ಪ್ರಕಾಶನವನ್ನ ಆರಂಭ ಮಾಡಿದ್ದೆ. ಉದ್ದೇಶ ಅಂತಾ ಏನೂ ಇಲ್ಲ.

ಪ್ರಕಾಶನ ಕ್ಷೇತ್ರಕ್ಕೆ ನೀವು ಬಂದದ್ದು ಹೇಗೆ ?
 ಸಾಹಿತ್ಯ ಭಂಡಾರದ ಹಿನ್ನೆಲೆ ಇದ್ದ ಕಾರಣ ಹೊಸದಾಗಿ ಏನಾದರು ಮಾಡಬೇಕು ಎನ್ನುವ ಕಾರಣಕ್ಕೆ ಪ್ರಕಾಶನ ಕ್ಷೇತ್ರಕ್ಕೆ ಕಾಲಿಟ್ಟೆ.

ನಿಮ್ಮ ಹಿರಿಯರ ಹಿರಿಮೆಯನ್ನು ಹೇಗೆ ಮುಂದುವರೆಸಿದ್ದೀರಿ ?
 ನನ್ನ ಅಪ್ಪ, ದೊಡ್ಡಪ್ಪರಿಂದ ಪ್ರಕಾಶನ ವೃತ್ತಿಯನ್ನು ಕಲಿತದ್ದು. ನಮ್ಮ ಹಿರಿಯರ ಹೆಸರಲ್ಲಿ ಪ್ರಕಾಶಕರನ್ನು ಗುರುತಿಸಿ ಗೌರವ ಸಲ್ಲಿಸುತ್ತ ಬಂದಿದ್ದೇನೆ.

‍ಲೇಖಕರು Avadhi

21 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading