ಬಹರೇನ್ನಲ್ಲಿ ಉದ್ಘಾಟನೆಗೊಂಡ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ
ಕನರ್ಾಟಕ ಸರಕಾರದ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಸ್ಥೆಗಳ ಸಹಯೋಗದಿಂದ ಕನ್ನಡ ಸಂಘ ಬಹರೇನ್ ಸಾರಥ್ಯದಲ್ಲಿ ಹೃದಯವಾಹಿನಿ ಕನ್ನಡ ಮಾಸಿಕ ಸಂಯೋಜನೆಯಲ್ಲಿ ಎಂಟನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಇಂದಿಲ್ಲಿ ಗುರುವಾರ ಸಂಜೆ ಬಹರೇನ್ ಇಲ್ಲಿನ ಮನಾಮದಲ್ಲಿನ ಅಲ್ ರಾಜ ಶಾಲಾ ಸಭಾಗಂಣದಲ್ಲಿನ ದಿ| ಸಿ.ಅಶ್ವಥ್ ವೇದಿಕೆಯಲ್ಲಿ ಉದ್ಘಾಟಿಸಲ್ಟಟ್ಟಿತು.
ಖ್ಯಾತ ಸಾಹಿತಿ ಡಾ| ದೊಡ್ಡರಂಗೇ ಗೌಡ ಇವರ ಸಮ್ಮೇಳನಧ್ಯಕ್ಷತೆಯಲ್ಲಿ ನಡೆಸಲಾಗುತ್ತಿರುವ ಎರಡು ದಿನಗಳ ಸಮ್ಮೇಳನದ ಉದ್ಘಾಟನೆ ಇಂದಿಲ್ಲಿ ಸಂಜೆ ನಡೆದಿದ್ದು, ಕನರ್ಾಟಕ ಸರಕಾರದ ಅನಿವಾಸಿ ಭಾರತೀಯ ಕನ್ನಡಿಗರ ಸಮಿತಿಯ ಉಪಾಧ್ಯಕ್ಷ ಕ್ಯಾ| ಗಣೇಶ್ ಕಾಣರ್ಿಕ್ ಅವರು ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾಗಿ ಯು.ಕೆ ಕನ್ನಡ ಬಳಗದ ಅಧ್ಯಕ್ಷೆ ಶ್ರೀಮತಿ ಸುರೇಣು ಜಯರಾಂ ಮತ್ತು ಗೌರವಾಧ್ಯಕ್ಷ ಡಾ| ಕೆ.ಬಿ ನಾಗೂರು ಬಿಜಾಪುರ ಉಪಸ್ಥಿತರಿದ್ದು, ರಾಜ್ಯದ ಪ್ರಸಿದ್ಧ ಸಮಾಜ ಸೇವಕರುಗಳಾದ ಡಾ| ರಾಮ ರೆಡ್ಡಿ ಬೆಂಗಳೂರು ಹಾಗೂ ಶಿವಾನಂದ ಹೊಂಡದಕೇರಿ ಇವರುಗಳಿಗೆ ಅಭಿನಂದನಾ ಗೌರವ ಮತ್ತು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇದರ ಅಧ್ಯಕ್ಷ ಗಂಗಾಧರ್ ಮೊದಲಿಮಾರ್ ಹಾಗೂ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕ ಗೌರವ ಕಾರ್ಯದಶರ್ಿ ರೋನ್ಸ್ ಬಂಟ್ವಾಳ್ ಇವರುಗಳಿಗೆ ವಿಶ್ವ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿ ಮೈಸೂರು ಪೇಟ ಧರಿಸಿ ಶಾಳು ಹೊದಿಸಿ ಫಲಪುಷ್ಫ, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನಿತ್ತು ಸನ್ಮಾನಿಸಿದರು. ಬಳಿಕ ಖ್ಯಾತ ಭರತನಾಟ್ಯ ಕಲಾವಿದ ಸಾಗರ್ ಪ್ರಸಾದ್ ಟಿ.ಎಸ್ ಇವರನ್ನೂ ಸನ್ಮಾನಿಸಿದರು.
ಕನ್ನಡದ ಸಂಸ್ಕೃತಿ ಪ್ರಿಯ ನಿಮ್ಮ ಅಭಿಮಾನ ಅನನ್ಯವಾಗಿದೆ. ಕನ್ನಡದ ಒಲವು ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವಂತದ್ದಾಗಿದೆ. ಕನ್ನಡಂಭೆಯನ್ನು ಓಲೈಸುವ ಸೇವೆಗೆ ಸರಕಾರ ಮತ್ತು ಕನರ್ಾಟಕದ ಆರು ಕೋಟಿ ಜನತೆಯ ಪರವಾಗಿ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಇಂದು ಕನರ್ಾಟಕದ ರಾಜಧಾನಿ ಬೆಂಗಳೂರುನಲ್ಲೇ ಕನ್ನಡ ಭಾಷೆಯನ್ನು ಹುಡುಕುವಂತಹ ಪರಿಸ್ಥಿತಿ ಆಗಿದ್ದರೂ ಅನಿವಾಸಿ ಭಾರತೀಯರು, ಹೊರನಾಡ ಕನ್ನಡಿಗರು ಮಾತ್ರ ನಾಡು-ನುಡಿ-ನೆಲದ ಅಭಿಮಾನವನ್ನು ಹುಟ್ಟಿಸಿ ಬೆಳೆಸಿದ ಹಿರಿಮೆ ನಿಮ್ಮದಾಗಿದೆ. ನಿಮ್ಮೆಲ್ಲರ ಕನ್ನಡದ ನಿಷ್ಠೆ ಇಡೀ ಜಗತ್ತಿಗೆ ಆದರಣೀಯ ಎಂದು ಗಣೇಶ್ ಕಾಣರ್ಿಕ್ ನುಡಿದರು.
ಡಾ| ದೊಡ್ಡರಂಗೇ ಗೌಡ ಅವರ `ಕಾಡು-ಕಣಿವೆ-ಕಡಲು’ ಕೃತಿಯನ್ನು ಸುರೇಣು ಜಯರಾಂ ಮತ್ತು ಕನರ್ಾಟಕ ರಾಜ್ಯದ ಮಧ್ಯಮ ಬೃಹತ್ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಅವರ ಸಂದೇಶವನ್ನು ನಾಗರಾಜ್ ಬಿ.ಜಮಖಂಡಿ ವಾಚಿಸಿದರು. ಬಳಿಕ ಸಚಿವರ ಉದ್ಯಮ ಮಾಧ್ಯಮ ಪುಸ್ತಕೆಯನ್ನು ಗಣೇಶ್ ಕಾಣರ್ಿಕ್ ಬಿಡುಗಡೆಗೊಳಿಸಿದರು.
ಕನ್ನಡಕ್ಕೆ ಅಖಂಡ ಭವಿಷ್ಯ ಮತ್ತು ಪರಂಪರೆ ಇದೆ. ಮಗೆದರೂ ಮುಗಿಯದ ಭಾಷೆ ಕನ್ನಡ ಆಗಿದ್ದು, ಕನ್ನಡಕ್ಕೆ ಧೀಶಕ್ತಿ ಇದೆ ಎನ್ನುವುದಕ್ಕೆ ಇಂತಹ ಹೊರದೇಶದಲ್ಲಿನ ಸಾಂಸ್ಕೃತಿಕ ಸಮ್ಮೇಳನವೇ ಸಾಕ್ಷಿಯಾಗಿದೆ. ಕನ್ನಡದಲ್ಲಿ ಅಕ್ಷಯ ಸಾಹಿತ್ಯ ಭಂಡಾರವಿದ್ದು ಇದರ ಇತಿಹಾಸಕ್ಕೆ ಚೌಕಟ್ಟು ಇಲ್ಲದಿದೆ. ಭಾವನಾತ್ಮಕ ಸಂಸ್ಕೃತಿಯುಳ್ಳ ಕನ್ನಡದ ಭವಿಷಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲು ತಮ್ಮ ಹಸ್ತಾಕ್ಷರ (ಸಹಿ)ಯನ್ನೂ ಕನ್ನಡದಲ್ಲೇ ಮಾಡಿ ಸರಸ್ವತಿ-ಲಕ್ಷ್ಮೀಯ ಸೇವೆಗೂ ಪಾತ್ರರಾಗಿರಿ ಎಂದು ಸಮ್ಮೇಳನಧ್ಯಕ್ಷತೆಯನ್ನುದ್ದೇಶಿಸಿ ಡಾ| ದೊಡ್ಡರಂಗೇ ಗೌಡ ಕರೆಯಿತ್ತರು.ನಾಗರಾಜ ಕೋಟೆ ಇವರ ಅಧ್ಯಕ್ಷತೆಯಲ್ಲಿ ಹಾಸ್ಯ ಗೋಷ್ಠಿ ನಡೆದಿದ್ದು, ಗೊ.ನಾ. ಸ್ವಾಮಿ ಬೆಂಗಳುರು, ಎಲ್.ಗಿರೀಶ್ ಬಹರೇನ್ ಮತ್ತು ಮಂಜುನಾಥ್ ಪಾಂಡವರಪುರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಿರಮನ್ ನೃತ್ಯ ಕೇಂದ್ರ ತುಮಕೂರು ಇವರು ವಿಶ್ವ ವಿನಾಯಕ ನೃತ್ಯ ರೂಪಕವನ್ನು ಹಾಗೂ ಕನ್ನಡ ಸಂಘ ಬಹರೇನ್ ಅದರ ಕಲಾವಿದರು ಅತಿಕಾಯ ಮೋಕ್ಷ ಯಕ್ಷಗಾನ ಪ್ರದರ್ಶನ ಪಡಿಸಿದರು.
ಭರತ್ ಶ್ರೀ ರಾಧಾಕೃಷ್ಣನ್ ತಂಡದ ಸದಸ್ಯರುಗಳ ಗಣಪತಿ ವಂದನೆಯೊಂದಿಗೆ ಸಮಾರಂಭ ಆದಿ ಕಂಡಿತು. ಕನ್ನಡ ಸಂಘ ಬಹರೇನ್ ಇದರ ಅಧ್ಯಕ್ಷ ರಾಜ್ ಕುಮಾರ್ ಸ್ವಾಗತಿಸಿದರು. ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಸಂಘ ಬಹರೇನ್ನ ಕಲಾವಿದರು ಸ್ವಾಗತ ನೃತ್ಯಗೈದರು. ಮಹಿಳಾ ಸದಸ್ಯೆಯರು ಜನಪದ ನೃತ್ಯ ಸಾದರಪಡಿಸಿದರು. ಸಾಂಸ್ಕೃತಿಕ ಕಾರ್ಯದಶರ್ಿ ಕಿರಣ್ ಉಪಾಧ್ಯಾಯ ಮತ್ತು ಶ್ರೀಮತಿ ಅಪರ್ಣ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದಶರ್ಿ ರಮೇಶ್ ರಾಮಚಂದ್ರನ್ ಧನ್ಯವಾದ ಸಮಪರ್ಿಸಿದರು.
ಚಿತ್ರ/ವರದಿ: ರೋನ್ಸ್ ಬಂಟ್ವಾಳ್






0 Comments